ಎಲ್ಲೆಲ್ಲೋ.. ದರ್ಶನ್ ಮೇಲಿನ ಅಭಿಮಾನ; ಕೈ, ಕುತ್ತಿಗೆ, ಎದೆ ಆಯ್ತು, ಈಗ ಪುಷ್ಠ ಭಾಗದ ಮೇಲೂ ಕೈದಿ ನಂಬರ್ 6106..!

By Sathish Kumar KH  |  First Published Jul 2, 2024, 2:00 PM IST

ಎಲ್ಲೆಲ್ಲೋ..  ಕೊಲೆ ಆರೋಪಿ ನಟ ದರ್ಶನ್ ತೂಗುದೀಪ ಮೇಲಿನ ಅಭಿಮಾನ ಪ್ರದರ್ಶನ. ಕೈ, ಭುಜ, ಎದೆ, ಕುತ್ತಿಗೆ ಆಯ್ತು, ಈಗ ಪುಷ್ಠ ಭಾಗದಲ್ಲಿಯೂ ಕೈದಿ ನಂಬರ್ 6106 ಟ್ಯಾಟೂ ಬಂತು..


ಬೆಂಗಳೂರು (ಜು.02): ನಟ ದರ್ಶನ್ ತೂಗುದೀಪ ಅಂಡ್ ಗ್ಯಾಂಗ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದೆ. ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್‌ಗೆ 6106 ಕೈದಿ ನಂಬರ್ ಕೊಟ್ಟಿದ್ದಾರೆ. ಆದರೆ, ಆತನ ಅಭಿಮಾನಿಗಳು ಇದೇ ಕೈದಿ ನಂಬರ್ ಅನ್ನು ವಾಹನಗಳ ಮೇಲೆ ಅಂಟಿಸಿಕೊಂಡಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಂದಾಭಿಮಾನಿಗಳು ಕೈ, ಎದೆ, ಕುತ್ತಿಗೆ ಸೇರಿದಂತೆ ಪುಷ್ಠ ಭಾಗದ ಮೇಲೂ ಕೈದಿ ನಂಬರ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮತ್ತೊಂದೆಡೆ ಪುಟ್ಟ ಮಗುವಿಗೆ ಕೈದಿ ನಂಬರ್ 6106 ಎಂದು ಸಿದ್ಧಪಡಿಸಿ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದರ್ಶನ್ ತೂಗುದೀಪ ಅವರ 2ನೇ ಪತ್ನಿ ನಟಿ ಪವಿತ್ರಾಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆಂದು ಆತನ್ನು ಕಿಡ್ನಾಪ್ ಮಾಡಿಸಿ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಈ ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿ ಒಟ್ಟು 17 ಜನರ ಗ್ಯಾಂಗ್ ಭಾಗಿಯಾಗಿದ್ದು ಎಲ್ಲರೂ ಈಗ ಜೈಲು ಸೇರಿದ್ದಾರೆ. ಆದರೆ, ನಟ ದರ್ಶನ್ ಸೆಂಟರ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಹೋಗುತ್ತಿದ್ದಂತೆ 6106 ಕೈದಿ ನಂಬರ್ ಕೊಡಲಾಗಿದೆ. ಇದರ ಬೆನ್ನಲ್ಲಿಯೇ ಕೆಲವು ಅಭಿಮಾನಿಗಳು ದರ್ಶನ್ ಮೇಲಿನ ಅಭಿಮಾನಕ್ಕಾಗಿ ಹಾಕಿಸಿಕೊಂಡಿದ್ದ 'ಡಿ' ಬಾಸ್ ಎಂಬ ಸ್ಟಿಕ್ಕರ್ ಮತ್ತು ಟ್ಯಾಟೋವನ್ನು ತೆರವು ಮಾಡಿಸಿದ್ದರು. ಆದರೆ ಈಗ ಮತ್ತೊಂದು ರೀತಿಯಲ್ಲಿ ಅಂಧಾಭಿಮಾನ ಪ್ರದರ್ಶನ ಆಗುತ್ತಿದೆ.

Tap to resize

Latest Videos

ನಾವು ದರ್ಶನ್ ನೋಡಬೇಕು ಜೈಲಿನೊಳಗೆ ಬಿಡಿ ಎಂದ ಅಭಿಮಾನಿಗಳು; ಬಾಯ್ತುಂಬಾ ಬೈದು ಕಳಿಸಿದ ಪೊಲೀಸರು

ಪುಷ್ಠ ಭಾಗದ ಮೇಲೆ ಕೈದಿ ನಂಬರ್ 6106: ಇನ್ನು ಈಗಾಗಲೇ ಹಲವು ದರ್ಶನ್ ಅಭಿಮಾನಿಗಳು ಬೈಕ್‌ಗಳು, ಬಸ್‌ಗಳು, ಆಟೋಗಳು, ಗೂಡ್ಸ್ ವಾಹನಗಳು ಸೇರಿ ವಿವಿಧೆಡೆ ಡಿ ಬಾಸ್ ಸ್ಟಿಕ್ಕರ್ ತೆರವುಗೊಳಿಸಿ 'ಕೈದಿ ನಂಬರ್ 6106 ಹಾಗೂ ಕೈ ಕೋಳ' ಸ್ಟಿಕ್ಕರ್ ಅಂಟಿಸಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಇದೇ ಕೈದಿ ನಂಬರ್ 6106 ಅನ್ನು ಕೈ, ಎದೆ, ಭುಜ, ಕುತ್ತಿಗೆ ಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಯುವತಿಯೊಬ್ಬಳು ತನ್ನ ಪುಷ್ಠಭಾಗದ ಮೇಲೆ ಖೈದಿ ನಂ 6106 ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ, ಇದು ನಿಜವೋ ಅಥವಾ ಯಾರಾದರೂ ಕಿಡಿಗೇಡಿಗಳು ನಕಲಿಯಾಗಿ ಸೃಷ್ಟಿ ಮಾಡಿದ್ದಾರೋ ಎಂಬುದು ತಿಳಿದುಬಂದಿಲ್ಲ.

ಸದ್ಯಕ್ಕೆ ಪ್ರಜ್ವಲ್ ಭೇಟಿಯಾಗಲು ಹೋಗಲ್ಲ, ದೇವರು ಬಿಟ್ಟರೆ ನಮಗ್ಯಾರು ಇಲ್ಲ; ಹೆಚ್.ಡಿ. ರೇವಣ್ಣ

ದರ್ಶನ್ ಮೇಲಿನ ಅಭಿಮಾನಕ್ಕೆ ಪುಟ್ಟ ಕಂದಮ್ಮನ್ನು ಖೈದಿ ಮಾಡಿದ ಅಭಿಮಾನಿ:
ನಟ ದರ್ಶನ್ ಜೈಲು ಸೇರಿದ ನಂತರ ಕೆಲವು ಅಭಿಮಾನಿಗಳು ಅವರು ಏನೇ ಮಾಡಿದರೂ ನಮ್ಮ ಬಾಸ್ ಎಂದು ಅಂಧಾಭಿಮಾನ ಪ್ರದರ್ಶ್ ಮಾಡುತ್ತಿದ್ದಾರೆ. ಈ ಪೈಕಿ ಇಲ್ಲೊಬ್ಬ ಅಭಿಮಾನಿ ತನ್ನ ಪುಟ್ಟ ಕಂದಮ್ಮನಿಗೆ ಫೋಟೋ ಶೂಟ್ ಮಾಡಿಸುವಾಗ ಜೈಲು ಕೈದಿಗಳಿಗೆ ನೀಡುವಂತಹ ಬಿಳಿಯ ಬಟ್ಟೆಯನ್ನು ಹಾಕಿ, ಅದರ ಮೇಲೆ 6106 ಎಂದು ಸ್ಟಿಕ್ಕರ್ ಅಂಟಿಸಿ ಕೈದಿ ಸಂಖ್ಯೆಯನ್ನು ಕೊಟ್ಟಿದ್ದಾರೆ. ಕೊಲೆ, ಅತ್ಯಾಚಾರ, ಕಳ್ಳತನ, ದರೋಡೆ ಹಾಗೂ ಬಾಂಬ್ ಹಾಕಿದಂತಹ ಕ್ರಿಮಿನಲ್‌ಗಳು ಇರುವಂತಹ ಪರಪ್ಪನ ಅಗ್ರಹಾರ ಜೈಲು ಸೇರಿದ ಕೊಲೆ ಆರೋಪಿ ದರ್ಶನ್ ಮೇಲಿನ ಅಂಧಾಭಿಮಾನಕ್ಕೆ ಮಗುವಿಗೆ ಕೈದಿ ನಂಬರ್ ಕೊಟ್ಟಿರುವುದಕ್ಕೆ ಮಗುವಿನ ತಂದೆ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ನೀನು ಆತನ ಅಭಿಮಾನಿ ಆಗಿದ್ದರೆ ನೀನು ತೋರಿಸು, ಬಲವಂತವಾಗಿ ಮಗುವಿಗೆ ಹೀಗೆ ಕೈದಿ ನಂಬರ್ ಕೊಟ್ಟು ಆತನನ್ನು ಜೈಲಿಗೆ ಕಳಿಸಲು ಮುಂದಾಗಿದ್ದೀಯ ಎಂಟು ಕಾಮೆಂಟ್ ಮಾಡಿದ್ದಾರೆ.

click me!