ತಾಯಿಯಾಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡ ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ. ನಮ್ಮಲ್ಲಿ ಸೀಮಂತ ಇಲ್ಲ ಎಂದ ನಟಿ....
ಸ್ಯಾಂಡಲ್‌ವುಡ್ ಕ್ಯೂಟ್ ಸೆಲೆಬ್ರಿಟಿ ಕಪಲ್ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಕೊಡವ ಸಂಪ್ರದಾಯದಂತೆ ಫೋಟೋಶೂಟ್ ಮಾಡಿಸಿ ಕುಟುಂಬ ವಿಶೇಷ ಅತಿಥಿ ಎಂಟ್ರಿ ಅಗುತ್ತಿರುವುದರ ಬಗ್ಗೆ ರಿವೀಲ್ ಮಾಡಿದ್ದಾರೆ.
'ಈಗ ನನಗೆ 5 ತಿಂಗಳು, ನನ್ನ ಸಹೋದರ-ಸಹೋದರಿಯರು ಹೇಳಿರುವ ಪ್ರಕಾರ ಇದು ಬೆಸ್ಟ್ ತಿಂಗಳು. ಈ ಸಮಯದಲ್ಲಿ ತುಂಬಾ ಕಂಫರ್ಟ್ ಆಗಿರುತ್ತದೆ ಹಾಗೂ ಸೆಟಲ್ ಫೀಲ್ ಇರುತ್ತದೆ..ಈಗ ಮಗುವಿನ ಚಲನವಲನ ಗೊತ್ತಾಗುತ್ತದೆ ಎಂದಿದ್ದಾರೆ. ಅದರಲ್ಲೂ ನಾನು ನಮ್ಮ ಇಷ್ಟದ ಊಟ ತಿಂದಾಗ ಹೆಚ್ಚಿಗೆ ಮಗು ಮೂವ್ ಮಾಡುತ್ತದೆ' ಎಂದು ಹರ್ಷಿಕಾ ಪೂಣಚ್ಚ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನಾನು ಪ್ರೆಗ್ನೆಂಟ್ ಎಂದು ತಿಳಿದಾಗ ಭುವನ್ ಹೊರಗಡೆ ಶೂಟಿಂಗ್ ಮಾಡುತ್ತಿದ್ದರು. ಆಗ ನಾನು ವಿಡಿಯೋ ಕಾಲ್ ಮಾಡಿ ಅಳುತ್ತಿದ್ದೆ. ಅದು ನನ್ನ ಖುಷಿಯ ಕಣ್ಣೀರು ಏಕೆಂದರೆ ನಾವು ಮದುವೆಯಾದ ಕ್ಷಣದಿಂದ ಮಗು ಮಾಡಿಕೊಳ್ಳಲು ರೆಡಿಯಾಗಿದ್ದೆವು. ನಮ್ಮಿಬ್ಬರಿಗೂ ಮಕ್ಕಳು ಅಂದ್ರೆ ತುಂಬಾನೇ ಇಷ್ಟ ಎಲ್ಲಿಲ್ಲದ ಖುಷಿ. ನಮ್ಮಿಬ್ಬರದ್ದು ತುಂಬಾ ಹಳೆ ಪರಿಚಯ ಈಗ ನಾವು ಪೋಷಕರಾಗುತ್ತಿರುವುದು ಖುಷಿ ಕೊಟ್ಟಿದೆ' ಎಂದು ಹರ್ಷಿಕಾ ಹೇಳಿದ್ದಾರೆ.
ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಹರ್ಷಿಕಾ ಪೂಣಚ್ಚ; ಅಕ್ಟೋಬರ್‌ಗೆ ಕಾಯುತ್ತಿರುವ ಎಂದ ಪತಿ ಭುವನ್!
'ನಮ್ಮ ಪೂರ್ವಜ್ಜರ ಮನೆಯಲ್ಲಿ ಫೋಟೋ ಮತ್ತು ವಿಡಿಯೋ ಶೂಟ್ ಮಾಡಬೇಕು ಅನ್ನೋದು ಭುವನ್ ಐಡಿಯಾ ಆಗಿತ್ತು. ಕೊಡವ ಸಂಪ್ರದಾಯದಲ್ಲಿ ಈ ರೀತಿ ಸಿಹಿ ಸುದ್ದಿ ಹಂಚಿಕೊಂಡಾಗ ಹೇಗೆ ಸಂಭ್ರಮಿಸುತ್ತಾರೆ ಎಂದು ತೋರಿಸುವ ಆಸೆ ಆಗಿತ್ತು. ನಮ್ಮ ಉಡುಪುಗಳನ್ನು ಆಗಿನ ಕಾಲಕ್ಕೆ ಮ್ಯಾಚ್ ಮಾಡಿಕೊಂಡೆವು. ಈ ಸಮಯದಲ್ಲಿ ಪ್ರಕೃತಿಯ ನಡುವೆ ಇರಬೇಕು ಎಂದು ಹೆಚ್ಚಿನ ಸಮಯವನ್ನು ಕೂರ್ಗ್‌ನಲ್ಲಿ ಕಳೆಯುತ್ತಿರುವೆ. ನಮ್ಮ ಸಂಪ್ರದಾಯದಲ್ಲಿ ಸೀಮಂತ ಇರುವುದಿಲ್ಲ ಆದರೆ ನಮ್ಮಲ್ಲಿ Koopathi Kool ಎಂದ ಆಚರಣೆ ಇದೆ. ಈ ಆಚರಣೆಯಲ್ಲಿ ಗಂಡ ಮನೆಯವರು ವಿವಿಧ ಖಾದ್ಯಗಳನ್ನು ಮಾಡಿ ತಾಯಿಯಾಗುತ್ತಿರುವವರಿಗೆ 7 ತಿಂಗಳು ತುಂಬುವವರೆಗೂ ಕೊಡಬೇಕು.ಈ ಕ್ಷಣವನ್ನು ನಾನು ತುಂಬಾನೇ ಎಂಜಾಯ್ ಮಾಡುತ್ತೀನಿ' ಎಂದಿದ್ದಾರೆ ಹರ್ಷಿಕಾ.