
ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿ ಮಾಡಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಪವಿತ್ರಾ ಗೌಡ ಸುಮಾರು 7 ತಿಂಗಳ ನಂತರ ಜಾಮೀನು ಪಡೆದು ಪರಪ್ಪನ ಅಗ್ರಹಾರದಿಂದ ಹೊರ ಬರುತ್ತಿದ್ದಾರೆ. ಪವಿತ್ರಾ ಹೊರ ಬರುತ್ತಿರುವ ಖುಷಿಯಲ್ಲಿ ಇರುವ ಪುತ್ರಿ ಖುಷಿ ಸಾಮಾಜಿಕ ಜಾಲತಾಣದಲ್ಲಿ ತಾಯಿಯನ್ನು ಅಪ್ಪಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ.
ಖುಷಿ ಪೋಸ್ಟ್:
'ನಮಗೆಲ್ಲಾ ಗೊತ್ತಿದೆ, ದೇವರಿದ್ದಾನೆ ನಮ್ಮನ್ನು ನೋಡಿಕೊಳ್ಳುತ್ತಿದ್ದಾನೆ ಎಂದು. ಕಷ್ಟ ಎದುರಿಸಲು ಆ ದೇವರೇ ಶಕ್ತಿ ಕೊಡುತ್ತಾನೆ, ನಮಗೆ ಅಗತ್ಯವಿದ್ದಾಗ ಅವನೇ ಸಹಾಯ ಮಾಡುತ್ತಾನೆ. ಓಂ ನಮಃ ಶಿವಾಯ' ಎಂದು ಖುಷಿ ಬರೆದುಕೊಂಡಿದ್ದಾಳೆ.
ಗಂಡ ಹೆಸರು ಯಶ್ ಬದಲು ನವೀನ್ ಎಂದು ಕರೆದಿದ್ದಕ್ಕೆ ಗರಂ ಆದ ರಾಧಿಕಾ ಪಂಡಿತ್;ವಿಡಿಯೋ ವೈರಲ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಏ1 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ ನಟಿ ಪವಿತ್ರಾ ಗೌಡ ಬೇಲ್‌ಗಾಗಿ ಸಿಕ್ಕಾಪಟ್ಟೆ ಹೋರಾಟ ಮಾಡಿದ್ದಾರೆ. ಈ ಸಮಯದಲ್ಲಿ ಪವಿತ್ರಾಳಿಗೆ ಧೈರ್ಯವಾಗಿ ನಿಂತಿದ್ದು ತಾಯಿ, ಮಗಳು ಮತ್ತು ಸಹೋದರ. ಪವಿತ್ರಾ ಗೌಡ ಪುತ್ರಿ ಖುಷಿ ಇನ್ನೂ ಕಾಲೇಜ್‌ಗೆ ಹೋಗುತ್ತಿರುವ ಹುಡುಗಿ..ಹೀಗಿರುವಾಗ ತಾಯಿ ನಡೆಸಿಕೊಂಡು ಬಂದಿರುವ ಬೋಟಿಕ್/ ಬಟ್ಟೆ ಡಿಸೈನರ್ ಸ್ಟುಡಿಯೋವನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದಾಳೆ. ಸೇಲ್ ಇರುವ ಸಮಯದಲ್ಲಿ ಸೇಲ್ ಎಂದು ಪ್ರಚಾರ ಮಾಡುತ್ತಾ, ಅಮ್ಮ ಡಿಸೈನ್ ಮಾಡಿರುವ ವಸ್ತ್ರಗಳಿಗೆ ತಾನೇ ಮಾಡಲ್ ಆಗಿ ಬ್ಯುಸಿನೆಸ್‌ಗೆ ಇಳಿದಿದ್ದಾಳೆ.
ಮೂಲ ನಕ್ಷತ್ರದ ಹುಡ್ಗೀರು ಯಾಕೆ ಪಳಪಳ ಅಂತಾರೆ; 'ಲಕ್ಷ್ಮಿ ನಿವಾಸ' ಭಾವನ ಲುಕ್ ನೋಡಿ
'ಪರಿಸ್ಥಿತಿ ಏನೇ ಇರಲಿ ನನ್ನ ಸಹಾಯಕ್ಕೆ ಬಂದೇ ಬರುತ್ತಾರೆ ಎಂದು ನಾನು ಕಣ್ಣು ಮುಚ್ಚಿಕೊಂಡು ನಂಬಿದ್ದರೂ ಅದು ನೀನೇ ಅಮ್ಮ.ನನಗೆ ಗೊತ್ತು ದಿನದಲ್ಲಿ ನನಗೆ ಏನೇ ಬೇಕಿದ್ದರೂ ಆಕೆ ಇದ್ದಾಳೆ ಎಂದು ಹೀಗಾಗಿನೇ ಆಕೆಯನ್ನು ಬೆಸ್ಟ್ ಅಮ್ಮ ಎಂದು ಕರೆಯುವುದು ಅಲ್ಲದೆ ಆಕೆಯನ್ನು ತಾಯಿಯಾಗಿ ಪಡೆಯುವುದಕ್ಕೆ ಪುಣ್ಯ ಮಾಡಿದ್ದೀನಿ' ಎಂದು ಈ ಹಿಂದೆ ಖುಷಿ ಬರೆದುಕೊಂಡಿದ್ದಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.