
ನಿರ್ಮಾಪಕಿ, ನಟಿ ಹಾಗೂ ನಿರ್ದೇಶಕಿ ರೂಪಾ ಅಯ್ಯರ್ (Roopa Iyer) ಕರ್ನಾಟಕ ರಾಜ್ಯಪಾಲರಿಗೆ ಪ್ರ ಬರೆದಿದ್ದಾರೆ. ಸಬ್ಸಿಡಿ ಹಣ ಹಾಗೂ ರಾಜ್ಯ ಪ್ರಶಸ್ತಿಗಾಗಿ ಇದೀಗ ರೂಪಾ ಅಯ್ಯರ್ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. 'ಕಳೆದ 6 ವರ್ಷಗಳಿಂದ ರಾಜ್ಯ ಸರ್ಕಾರ ಸಬ್ಸಿಡಿ ಹಣ ಹಾಗೂ ರಾಜ್ಯ ಪ್ರಶಸ್ತಿ ಘೋಷಣೆ ಮಾಡಿಲ್ಲ' ಎಂಬುದು ಈ ಹೋರಾಟಕ್ಕೆ ಕಾರಣವಾದ ಅಂಶವಾಗಿದೆ. ಸದ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ರೂಪ ಅಯ್ಯರ್ ಅನೇಕ ಬೆಂಬಲಿಗರೊಂದಿಗೆ ಹೋರಾಟಕ್ಕೆ ಇಳಿದಿದ್ದಾರೆ.
ಹಾಗಾದ್ರೆ ಅವರು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಅದೇನು ಹೇಳಿದ್ದಾರೆ? ಇಲ್ಲಿದೆ ನೋಡಿ..
ದಿನಾಂಕ : 10.12.2024
ಗೆ,
ಘನವೆತ್ತ ಸನ್ಮಾನ್ಯ ರಾಜ್ಯಪಾಲರು
ಕರ್ನಾಟಕ ರಾಜ್ಯ
ವಿಷಯ: ಚಲನಚಿತ್ರ ಸಬ್ಸಿಡಿ ಮತ್ತು ರಾಜ್ಯ ಪ್ರಶಸ್ತಿಗಳ ವಿಳಂಬ ಕುರಿತು.
ಮಾನ್ಯ ಕರ್ನಾಟಕದ ರಾಜ್ಯಪಾಲರಿಗೆ,
ನೀವು ಚೆನ್ನಾಗಿದ್ದೀರಿ ಎಂದು ಆಶಿಸುತ್ತೇವೆ.
ಕಲೆ ಮತ್ತು ಸಂಸ್ಕೃತಿಕ ಪ್ರಕೋಷ್ಠ-ಬಿಜೆಪಿ ವತಿಯಿಂದ, ಚಲನಚಿತ್ರ ಉದ್ಯಮದ ನಿರ್ಮಾಪಕರು, ನಿರ್ದೇಶಕರು ಮತ್ತು ಕಲಾವಿದರುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ಅವರಿಗೆ ನ್ಯಾಯ ದೊರಕಿಸುವ ಸಲುವಾಗಿ ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ.
ಕಳೆದ ಐದು ವರ್ಷಗಳಿಂದ ವರ್ಷಾಯಿತ ಚಲನಚಿತ್ರ ಸಬ್ಸಿಡಿ ಮತ್ತು ರಾಜ್ಯ ಪ್ರಶಸ್ತಿಗಳ ವಿಳಂಬದ ಕುರಿತು ನಿಮ್ಮ ಗಮನವನ್ನು ಸೆಳೆಯಲು ಬರೆಯುತ್ತಿದ್ದೇವೆ.
ನಮ್ಮ ಉದ್ಯಮವು ಕರ್ನಾಟಕದ ಸಾಂಸ್ಕೃತಿಕ ಸಂಪತ್ತಿಗೆ ಬಹಳ ಮಹತ್ವದ್ದಾಗಿದೆ. ಆದರೆ, ಪ್ರತಿ ವರ್ಷ 125 ಚಲನಚಿತ್ರಗಳಿಗೆ ನೀಡಬೇಕಾದ ₹10 ಲಕ್ಷದ ಸಬ್ಸಿಡಿ ಇನ್ನೂ ಬಿಡುಗಡೆ ಆಗಿಲ್ಲ. ಈ ವಿಳಂಬವು ಉತ್ತಮ ಗುಣಮಟ್ಟದ ಚಲನಚಿತ್ರಗಳನ್ನು ನಿರ್ಮಿಸಲು ಮತ್ತು ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವರ ಜೀವನಕ್ಕೆ ತೀವ್ರವಾಗಿ ಪರಿಣಾಮ ಬೀರುತ್ತದೆ.
ಸಬ್ಸಿಡಿ ಹಣ, ರಾಜ್ಯ ಪ್ರಶಸ್ತಿಗಾಗಿ ರೂಪಾ ಅಯ್ಯರ್ ಹೋರಾಟ; ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ದಯವಿಟ್ಟು, ಈ ವಿಷಯದಲ್ಲಿ ಸರ್ಕಾರವನ್ನು ಆದೇಶಿಸಲು ನಿಮ್ಮ ಗೌರವಾನ್ವಿತ ಕಚೇರಿಯಿಂದ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ. ಜೊತೆಗೆ, ಚಲನಚಿತ್ರಗಳು ಸೆನ್ಸಾರ್ ಆದ ವರ್ಷದಲ್ಲೇ ಚಲನಚಿತ್ರ ರಾಜ್ಯ ಪ್ರಶಸ್ತಿಗಳನ್ನು ನೀಡುವಂತೆ ನಿಮ್ಮನ್ನು ವಿನಂತಿಸುತ್ತೇವೆ, ಇದರಿಂದ ನಿರ್ಮಾಪಕರ ಶ್ರಮಕ್ಕೆ ಸೂಕ್ತ ಮಾನ್ಯತೆ ದೊರಕಲು ಸಾಧ್ಯವಾಗುತ್ತದೆ.
ನಿಮ್ಮ ಬೆಂಬಲವು ಕರ್ನಾಟಕ ಚಲನಚಿತ್ರ ಉದ್ಯಮಕ್ಕೆ ಮತ್ತು ಎಲ್ಲಾ ನಿರ್ಮಾಪಕರಿಗೆ ಬಹಳ ಉಪಕಾರಿಯಾಗುತ್ತದೆ, ಇದರಿಂದ ನಾವು ಹೊಸ ಉತ್ಸಾಹದಲ್ಲಿ ನಮ್ಮ ಕೆಲಸವನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
ಈ ಮಹತ್ವದ ವಿಷಯಕ್ಕೆ ನೀವು ನೀಡಿರುವ ಗಮನಕ್ಕಾಗಿ ಧನ್ಯವಾದಗಳು.
ರೂಪ ಅಯ್ಯರ್
ರಾಜ್ಯ ಸಂಚಾಲಕಿ - ಕಲೆ ಮತ್ತು ಸಂಸ್ಕೃತಿಕ ಪ್ರಕೋಷ್ಠ
ಚಲನಚಿತ್ರ ನಿರ್ಮಾಪಕಿ, ನಿರ್ದೇಶಕಿ ಮತ್ತು ನಟಿ
***
ನಟಿ-ನಿರ್ದೇಶಕಿ ಹಾಗೂ ನಿರ್ಮಾಪಕಿ ರೂಪಾ ಅಯ್ಯರ್ ಅವರು 'ಸಬ್ಸಿಡಿ ಹಣ ಕೊಡದೆ ಇರೋದು ಚಿಕ್ಕಪುಟ್ಟ ನಿರ್ಮಾಪಕರಿಗೆ ತೊಂದರೆ ಆಗ್ತಿದೆ. ಈ ಕಾರಣಕ್ಕಾಗಿ ನಾವೆಲ್ಲರೂ ಹಲವರು ಸೇರಿ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡ್ತಿದ್ದೇವೆ. ಚಿತ್ರರಂಗವನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡ್ತಿದೆ. ಇವರಿಗೆ ಪ್ರತಿವರ್ಷ ಇಂಟರ್‌ರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಮಾಡೊಕೆ ಹಣ ಇದೆ, ಆದರೆ ಬಡ ನಿರ್ಮಾಪಕರಿಗೆ ಸಬ್ಸಿಡಿ ಕೊಡೋಕೆ ಸರ್ಕಾರದ ಬಳಿ ಹಣವಿಲ್ಲ..'ಎಂದಿದ್ದಾರೆ.
ರಾಜ್ ಕಪೂರ್ ಶತಕ ಸಂಭ್ರಮ, ಮೋದಿಗೆ ಆಹ್ವಾನ ಕೊಟ್ಟ ಕಪೂರ್ ಫ್ಯಾಮಿಲಿ!
ವಾಣಿಜ್ಯ ಮಂಡಳಿ ಕೂಡ ಇದರ ವಿರುದ್ದ ಮಾತನಾಡ್ತಿಲ್ಲ. ಫಿಲ್ಮ್ ಚೇಂಬರ್‌ನಲ್ಲಿ ಕುಳಿತು ಈಸಿ ಮೀಟಿಂಗ್ ಮಾಡ್ಕೊಂಎಉ, ಮಸಾಲೆ ದೋಸೆ ತಿನ್ಕೊಂಡ್ ಕಾಲ ಕಳೀತಿದ್ದಾರೆ. ರಾಜ್ಯಪಾಲರಿಗೆ ಮನವಿ ಮಾಡಿ ನಾವು ಈಗ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡ್ತಿದ್ದೀವಿ. 6 ವರ್ಷಗಳಿಂದ ಸುಮಾರು 600 ಸಿನಿಮಾಗಳಿಗೆ ಸಬ್ಸಿಡಿ ಹಣ ಕೊಟ್ಟಿಲ್ಲ. ಸರ್ಕಾರ ಕೂಡಲೇ ಸಬ್ಸಿಡಿ ಹಣ ಬಿಡುಗಡೆ ಮಾಡಬೇಕು.
ನ್ಯಾಯವಾಗಿ ಸಿನಿಮಾಗಳಿಗೆ ಬರಬೇಕಾದ ಸಬ್ಸಿಡಿ ಹಣ ಬಿಡುಗಡೆ ಮಾಡದಿದ್ದರೆ ನಾವು ಉಪವಾಸ ಸತ್ಯಾಗ್ರಹ ಮಾಡ್ತೇವೆ. ಸಬ್ಸಿಡಿ ವಿಚಾರವಾಗಿ ರಾಜ್ಯ ಪಾಲರಿಗೂ ಮನವಿ ಮಾಡಿದ್ದೇವೆ. ನಮ್ಮದು ನ್ಯಾಯಯುತವಾದ, ನ್ಯಾಯ ಪರವಾದ ಹೋರಾಟ. ಕಳೆದ 6 ವರ್ಷಗಳಿಂದ ಸಬ್ಸಿಡಿ ಹಣ ಬಂದಿಲ್ಲ ಅಂದರೆ ಅದನ್ನೇ ನಂಬಿಕೊಂಡು ಸಮಾಜಕ್ಕೆ ಸಿನಿಮಾ ಮೂಲಕ ಕೊಡುಗೆ ಕೊಟ್ಟ ನಿರ್ಮಾಪಕರ ಗತಿ ಏನಾಗಬೇಕು? ಈ ಬಗ್ಗೆ ರಾಜ್ಯ ಸರ್ಕಾರ ಯೋಚಿಸಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು' ಎಂದಿದ್ದಾರೆ.
ಬೆಂಗಳೂರಿಗೆ ಬಂದ್ರೆ ಈಗಲೂ ಲವರ್ ಹುಡುಕುವ ರಜನಿಕಾಂತ್; ನಿರ್ಮಲಾ ಸಿಗ್ತಾರಾ?
ರೂಪಾ ಅಯ್ಯರ್ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶಾಂತಿಯುತ ಹೋರಾಟಕ್ಕೆ ಚಿತ್ರರಂಗದ ಹಿರಿಕಿರಿಯ ಕಲಾವಿದರು, ನಿರ್ಮಾಪಕರು ಹಾಗು ನಿರ್ದೇಶಕರು ಭಾಗಿಯಾಗಿದ್ದಾರೆ. 'ರಾಜ್ಯಪಾಲರ ಅನುಮತಿ ಪಡೆದು ನಡೆಸಲಾಗುತ್ತಿರುವ ಈ ಹೋರಾಟವನ್ನು ನ್ಯಾಯ ನೀಡುವ ಅಭಯ ಸಿಗುವ ತನಕವೂ ಮುಂದುವರಿಸಲಾಗುವುದು' ಎಂದಿದ್ದಾರೆ ರೂಪಾ ಅಯ್ಯರ್. ಸುರಿಯುತ್ತಿರುವ ಮಳೆ-ಚಳಿಯನ್ನೂ ಲೆಕ್ಕಿಸದೇ ಕನ್ನಡ ಚಿತ್ರರಂಗದ ಅನೇಕರು ಅಲ್ಲಿ ಭಾಗಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.