ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಭಾವನಾ ಶ್ರೀನಿವಾಸ್ ಪಾತ್ರದಲ್ಲಿ ಮಿಂಚುತ್ತಿರುವುದು ಸೋಷಿಯಲ್ ಮೀಡಿಯಾ ಸ್ಟಾರ್ ದಿಶಾ ಮದನ್.
Image credits: Disha Madan Instagram account
9 ಲಕ್ಷ ಫಾಲೋವರ್ಸ್
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ದಿಶಾ ನಟನೆ ಜೊತೆಯಲ್ಲಿ ಬ್ರ್ಯಾಂಡ್ ಪ್ರಮೋಷನ್ ಮಾಡುತ್ತಾರೆ. ಸುಮಾರು 9 ಲಕ್ಷ 51 ಸಾವಿರ ಫಾಲೋವರ್ಸ್‌ನ ಹೊಂದಿದ್ದಾರೆ. ಹೀಗಾಗಿ ಸೀರಿಯಲ್ ನೋಡುವವರ ಸಂಖ್ಯೆ ಕೂಡ ಹೆಚ್ಚಿದೆ.
Image credits: Disha Madan Instagram account
ಭಾವನಾ- ಸಿದ್ಧೇಗೌಡ್ರು
ಭಾವನಾ ಮತ್ತು ಸಿದ್ಧೇಗೌಡ್ರು ಮದುವೆ ಪ್ರಸಂಗವನ್ನು ಸಿಕ್ಕಾಪಟ್ಟೆ ಸರಳವಾಗಿ ತೋರಿಸಿಬಿಟ್ಟರು ಹೀಗಾಗಿ ಭಾವನಾ ಮೊದಲ ಮದುವೆಗೆ ರೆಡಿ ಆಗಿದ್ದ ರೀತಿಯಲ್ಲಿ ಮತ್ತೆ ಕಾಣಿಸಿಕೊಳ್ಳಬೇಕು ಎಂದು ಫ್ಯಾನ್ಸ್ ಆಸೆ ಪಡುತ್ತಿದ್ದಾರೆ.
Image credits: Disha Madan Instagram account
ಮೂಲ ನಕ್ಷತ್ರ
ಮೂಲ ನಕ್ಷತ್ರ ಆಗಿದ್ದ ಕಾರಣ ಭಾವನಾ ಮದುವೆ ಸೆಟ್ ಆಗುವುದು ತಡವಾಗಿತ್ತು. ಆದರೆ ಯಾವುದಕ್ಕೂ ಲೆಕ್ಕಿಸದ ಸಿದ್ಧೇಗೌಡ್ರು ಭಾವನಾ ಮನಸ್ಸು ನೋಡಿ ಪ್ರೀತಿ ಮಾಡಿದ್ದಾರೆ.
Image credits: Disha Madan Instagram account
ಸಮಸ್ಯೆ ಏನು?
ಸಾಮಾನ್ಯವಾಗಿ ಮೂಲ ನಕ್ಷತ್ರದವರಿಗೆ ಮದುವೆ ಸೆಟ್ ಆಗುವುದು ತಡವಾಗುತ್ತದೆ. ಅತ್ತೆ-ಮಾವ ಇದ್ದಾರಾ ಇಲ್ವಾ ಎಂದು ನೋಡುತ್ತಾರೆ. ಇನ್ನೂ ಕೆಲವರು ಹೆಸರು ಬದಲಾಯಿಸಿ ಅದಕ್ಕೆ ತಕ್ಕಂತೆ ನಕ್ಷತ್ರ ಬದಲಾಯಿಸುತ್ತಾರೆ.
Image credits: Disha Madan Instagram account
ಹುಡುಗಿ ಮುಖ್ಯ!
ಮೂಲ ನಕ್ಷತ್ರದ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಸುಂದರವಾಗಿರುತ್ತಾರೆ. ಹೀಗಾಗಿ ಯಾವ ನಕ್ಷತ್ರ ಆದರೆ ನಮಗೆ ಏನು ಆಕೆ ಮನೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕು ನಮ್ಮೊಟ್ಟಿಗೆ ಖುಷಿಯಾಗಿ ಇರಬೇಕು ಅಂತ ಕಾಮೆಂಟ್ ಬಂದಿದೆ.