ಕೋಟಿಗೊಬ್ಬ 3 ನಿರ್ಮಾಪಕರ ವಿರುದ್ಧ FIR ದಾಖಲು

By Suvarna News  |  First Published Oct 17, 2021, 10:53 AM IST
  • ವಿತರಕ ಖಾಝಾಪೀರ್‌ನಿಂದ ದೂರು
  • ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ
  • ಸಂಕಷ್ಟದಲ್ಲಿರುವ ನಮಗೆ ನ್ಯಾಯ ಒದಗಿಸಿ

ಚಿತ್ರದುರ್ಗ(ಅ.16): ತಾಂತ್ರಿಕ ದೋಷದಿಂದ ಬಿಡುಗಡೆಗೂ ಮುನ್ನವೇ ಭಾರೀ ಸುದ್ದಿಯಾಗಿದ್ದ 'ಕೋಟಿಗೊಬ್ಬ 3' (Kottigobba 3) ಚಿತ್ರದ ವಿವಾದ ದಿನೆ ದಿನೇ ಗಂಭೀರ ಸ್ವರೂಪ ಪಡೆಯುತ್ತಿದ್ದು ಇದೀಗ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು (Soorappa Babu) (ರಾಂ ಬಾಬು ಪ್ರೋಡಕ್ಷನ್ಸ್) (Ram Babu Productions) ವಿರುದ್ಧ ನಗರ ಪೋಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

"

Latest Videos

undefined

2.90 ಲಕ್ಷ ಹಣಕ್ಕೆ ಚಿತ್ರದ ನಿರ್ಮಾಪಕರು ಮತ್ತು ನಮ್ಮ ನಡುವೆ ಅಗ್ರಿಮೆಂಟ್ ಆಗಿತ್ತು. ಮುಂಗಡವಾಗಿ  ರಾಂ ಬಾಬು ಪ್ರೋಡಕ್ಷನ್ಸ್ ಗೆ 60 ಲಕ್ಷ ಹಣ ನೀಡಿದ್ದೆ. ಆದರೆ ನಮಗೆ ಅವರು ಚಿತ್ರವೂ ನೀಡಲಿಲ್ಲ. ಇತ್ತ ಕೊಟ್ಟ ಅಗ್ರಿಮೆಂಟ್ ಹಣ ವಾಪಸ್ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದಲ್ಲದೇ ನಟ ಸುದೀಪ್ (Sudeep) ಅವರ ಅಭಿಮಾನಿಗಳನ್ನು (Fans) ನನ್ನ ವಿರುದ್ಧ ಎತ್ತಿಕಟ್ಟಿ ದಮ್ಕಿ ಹಾಕುತ್ತಿದ್ದಾರೆ. ಹಾಗಾಗಿ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ದೂರನ್ನು ವಿತರಕ ಖಾಝಾಪೀರ್ (Khajapeer)  ದಾಖಲಿಸಿದ್ದಾರೆ.

ನಾನು ಯಾವತ್ತೂ ಸೋಲನ್ನು ಸೋಲೆಂದುಕೊಂಡಿಲ್ಲ: ಕಿಚ್ಚ ಸುದೀಪ್

ಇನ್ನು ನಿನ್ನೆಯಷ್ಟೇ  'ಕೋಟಿಗೊಬ್ಬ 3' ನಿರ್ಮಾಪಕ ಸೂರಪ್ಪ ಬಾಬು ಚಿತ್ರ ಬಿಡುಗಡೆಗೆ ತೊಂದರೆ‌ ಕೊಟ್ಟವರ ಮೇಲೆ ಪ್ರಕರಣವನ್ನು (Case) ದಾಖಲಿಸಿದ್ದರು.  ಚಿತ್ರದ ವಿತರಣೆ ಹಕ್ಕನ್ನು ಮೆಹಲ್ ಫಿಲ್ಮ್ಸ್ ಮಾಲೀಕರಾದ ಗೌತಮ್ ಚಂದ್, ಎಂ.ಡಿ. ಖಾಜಾಪೀರ್ ಮತ್ತು ಕುಮಾರ್ ಫಿಲ್ಮ್ಸ್ ಮಾಲೀಕರಾದ ಕುಮಾರ್ ಅವರು ಪಡೆದಿದ್ದರು. ವಿತರಣೆ ಕರಾರಿನ ಒಪ್ಪಂದದಂತೆ ಮುಂಗಡ ಹಣವಾಗಿ ಕೇವಲ 15% ಹಣವನ್ನು ಮಾತ್ರ ನಾನು ಪಡೆದಿದ್ದೆ. ಚಿತ್ರ ಬಿಡುಗಡೆಯ ಒಂದು ದಿನ ಮೊದಲು 13-10-2021 ರಂದು ಚಿತ್ರದ ನಿರ್ಮಾಪಕನಾದ ನನಗೆ ಬಾಕಿ ಹಣ ನೀಡಬೇಕೆಂದು ಒಪ್ಪಂದವಾಗಿತ್ತು.

 ಆದರೆ ಎಂ.ಡಿ ಜಾಫರ್ (M.D.Jafer) ಮತ್ತು ಕುಮಾರ್ ಫಿಲ್ಮ್ ಮಾಲೀಕ ಕುಮಾರ್ (Kumar) ಅವರು ಕೊನೆ ಕ್ಷಣದವರೆಗೂ ಹಣ ಕೊಡದೇ ನಮ್ಮ ಸಿನಿಮಾ ಬಿಡುಗಡೆಗೆ ತೊಂದರೆ ಮಾಡಿದ್ದು, ಫೋನ್ ಕರೆ ಮೂಲಕ ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಕೊಡದೇ ತೊಂದರೆ ಮಾಡಿದ್ದಾರೆ. ಇದರಿಂದ ನಮ್ಮ ಚಿತ್ರವನ್ನು ಅಂದುಕೊಂಡ ದಿನದಂದು ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ.

"

ಈ ವಿತರಕರ ತಪ್ಪಿನಿಂದ ನಮ್ಮ ಸಂಸ್ಥೆಗೆ ಸರಿ ಸುಮಾರು 8 ರಿಂದ 10 ಕೋಟಿ ರೂ. ನಷ್ಟವಾಯಿತಲ್ಲದೇ, ಮಾರನೇ ದಿನ ಚಿತ್ರವನ್ನು ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ಒದಗಿ ಬಂತು. ನನ್ನ ಹಾಗೂ ಚಿತ್ರದ ನಟ ಸುದೀಪ್ ಅವರಿಗೆ ಅಪಖ್ಯಾತಿ ತರಲು ಈ ವಿತರಕರು ಸಂಚು ಮಾಡಿದ್ದಾರೆ ಎಂದು ನಿರ್ಮಾಪಕ ಸೂರಪ್ಪ ಬಾಬು ಆರೋಪಿಸಿದ್ದರು.

ಕೋಟಿಗೊಬ್ಬ 3' ಬಿಡುಗಡೆಗೆ ತೊಂದರೆ: ದೂರು ದಾಖಲಿಸಿದ ನಿರ್ಮಾಪಕ ಸೂರಪ್ಪ ಬಾಬು

ಇನ್ನು, ದೂರಿನಲ್ಲಿ ನಮ್ಮ ಜೀವಕ್ಕೆ ಪ್ರಾಣಭಯವಿದ್ದು, ನಮಗೆ ರಕ್ಷಣೆ ಒದಗಿಸಬೇಕು ಹಾಗೂ ಸಂಕಷ್ಟದಲ್ಲಿರುವ ನಮಗೆ ನ್ಯಾಯ ಒದಗಿಸಬೇಕೆಂದು ವಿತರಕ ಖಾಝಾಪೀರ್  ತಿಳಿಸಿದ್ದಾರೆ. ನಗರ ಪೊಲೀಸರು ಚಿತ್ರದ ನಿರ್ಮಾಪಕರ ವಿರುದ್ಧ  ಐಪಿಸಿ ಕಲಂ 506, 504 ಅಡಿಯಲ್ಲಿ ಪ್ರಕರಣ (Case) ದಾಖಲು ಮಾಡಿಕೊಂಡಿದ್ದಾರೆ.

click me!