ನಾನು ಯಾವತ್ತೂ ಸೋಲನ್ನು ಸೋಲೆಂದುಕೊಂಡಿಲ್ಲ: ಕಿಚ್ಚ ಸುದೀಪ್

Suvarna News   | Asianet News
Published : Oct 16, 2021, 05:18 PM ISTUpdated : Oct 16, 2021, 06:04 PM IST
ನಾನು ಯಾವತ್ತೂ ಸೋಲನ್ನು ಸೋಲೆಂದುಕೊಂಡಿಲ್ಲ: ಕಿಚ್ಚ ಸುದೀಪ್

ಸಾರಾಂಶ

ಸಿನಿಮಾ ರಿಲೀಸ್ ಆಗದೇ ಇರೋದಕ್ಕೆ ಮೂರು ಜನ‌ ಕಾರಣರಾಗಿದ್ದು, ಇದಕ್ಕೆಲ್ಲಾ ನಮ್ಮ‌ನಿರ್ಮಾಪಕರದ್ದೇ ತಪ್ಪು ಎಂದು ಹೇಳಬಾರದು.  ಸಿನಿಮಾ ರಿಲೀಸ್ ಆಗದೇ ಇದ್ದಿದ್ದು, ನನಗೆ ಅವಮಾನ ಅಂತ ಅನ್ನಿಸಲಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.  

ಸ್ಯಾಂಡಲ್‌ವುಡ್‌ನ (Sandalwood) ಬಾದ್‌ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅಭಿನಯದ 'ಕೋಟಿಗೊಬ್ಬ 3'   (Kottigobba 3) ಚಿತ್ರ ಶುಕ್ರವಾರ ಬಿಡುಗಡೆಯಾಗಿ, ರಾಜ್ಯಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದ  ನಟ  ಕಿಚ್ಚ ಸುದೀಪ 'ಕೋಟಿಗೊಬ್ಬ 3' ಬಿಡುಗಡೆಗೆ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ನಿರ್ಮಾಪಕ ಸೂರಪ್ಪ ಬಾಬು (Soorappa Babu) ಅವರಿಗೆ ಆದ ಮೋಸದ (Cheating) ಬಗ್ಗೆ ಮಾತನಾಡಿದ್ದಾರೆ.

"

ಚಿತ್ರ ವಿಮರ್ಶೆ: ಕೋಟಿಗೊಬ್ಬ 3

ಸುವರ್ಣ ನ್ಯೂಸ್ ಜೊತೆ ಈ ಬಗ್ಗೆ  ಮಾತನಾಡಿದ ಸುದೀಪ್, ಕೆಲವು ವಿತರಕರಿಂದ (Distributors) ಚಿತ್ರ ಬಿಡುಗಡೆ ತಡವಾಗಿದ್ದು, ಇದರಿಂದ ನಿರ್ಮಾಪಕರಿಗೆ ಮೋಸವಾಗಿದೆ. ಮೊದಲು ನಮ್ಮ ದಡ ಸೇರೋಣ, ಕೋಪ ತಾಪ ಎಲ್ಲವೂ ಆಮೇಲೆ, ಮೊದಲ ದಿನ ಚಿತ್ರ ರಿಲೀಸ್ ಆಗಲಿಲ್ಲ ಎಂದು ಬೇಜಾರಿಲ್ಲ. ನನ್ನ ಕೆಲವು ಸ್ನೇಹಿತರು ಸಿನಿಮಾ ಬಿಡುಗಡೆಯಾಗಲ್ಲ ಅಂತ ಗಾಳಿ ಸುದ್ದಿ ಹಬ್ಬಿಸಿದ್ದಲ್ಲದೇ,  ಸಿನಿಮಾ ರಿಲೀಸ್ ಮಾಡೋದಕ್ಕೆ ತಾಕತ್ತಿಲ್ಲ ಅಂತ ಹೇಳಿದರು. ಆದರೆ ನಾವು ಮಾರನೇ ದಿನ ಫ್ರೆಶ್ ಆಗಿ ಜನಗಳ ಮುಂದೆ ಬಂದೆವು, ನಾವು ಈಗ ಸಿನಿಮಾ ಮಾಡಿ ಗೆದ್ದಿದ್ದೇವೆ, ಇದರಿಂದ ನನಗೆ ಒಂದೊಳ್ಳೆ ಅನುಭವ ಆಯ್ತು ಎಂದು ತಿಳಿಸಿದರು. 

ನನ್ನ  ಸಿನಿಮಾ ರಿಲೀಸ್ ಆಗದೇ ಇರೋದಕ್ಕೆ ಮೂರು ಜನ‌ ಕಾರಣರಾಗಿದ್ದು, ಇದಕ್ಕೆಲ್ಲಾ ನಮ್ಮ‌ನಿರ್ಮಾಪಕರದ್ದೇ ತಪ್ಪು ಎಂದು ಹೇಳಬಾರದು.  ಹಾಗಾಗಿ ನಿರ್ಮಾಪಕರನ್ನು ನಾವು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಸಿನಿಮಾ ರಿಲೀಸ್ ಆಗದೇ ಇದ್ದಿದ್ದು ನನಗೆ ಅವಮಾನ ಅಂತ ಅನ್ನಿಸಲಿಲ್ಲ. ಇದೊಂದು ಚಾಲೆಂಜ್‌ ಅಂತ ಸ್ವೀಕರಿಸಿದೆ. ಆಗ ನನ್ನ ಬೆಂಬಲಕ್ಕೆ ಮಾಧ್ಯಮದವರು (Media) ನಿಂತರು. ಹಾಗೂ ಅಭಿಮಾನಿ ಸ್ನೇಹಿತರು (Fans) ನನ್ನ ಜೊತೆ ನಿಂತು ಸಿನಿಮಾವನ್ನು ಗೆಲ್ಲಿಸಿದರು. ನಾನು ಸಂಪಾದಿಸಿದ್ದು ನಿಮ್ಮನ್ನು, ನನ್ನ ಅಭಿಮಾನಿ ಸ್ನೇಹಿತರನ್ನು ಇಲ್ಲಿ ಎಲ್ಲ ತರದ ಅವಮಾನ ಆಗುತ್ತಿರುತ್ತೆ. ನಾವು ನಮ್ಮ ಕೆಲಸ ಮಾಡಬೇಕು ಅಷ್ಟೆ ಎಂದರು. 

ಕೋಟಿಗೊಬ್ಬ 3' ಬಿಡುಗಡೆಗೆ ತೊಂದರೆ: ದೂರು ದಾಖಲಿಸಿದ ನಿರ್ಮಾಪಕ ಸೂರಪ್ಪ ಬಾಬು

ಸಿನಿಮಾ ರಿಲೀಸ್ ಆದಾಗ ಮಳೆ ಬಂತು. ಆದರೂ ಮಹಿಳೆಯರು ನನ್ನ ಸಿನಿಮಾ ವೀಕ್ಷಣೆಗೆ ಮಳೆಯಲ್ಲೇ ಚಿತ್ರಮಂದಿರಕ್ಕೆ ಬಂದರು. ಎಲ್ಲಾ ಕಡೆ ಸಿನಿಮಾ ಥಿಯೇಟರ್ ಪ್ರೇಕ್ಷಕರಿಂದ ಫುಲ್ ಆಯ್ತು. ಈ ಎಲ್ಲವನ್ನು ನಾನು ದೊಡ್ಡ ಪಾಠ ಅಂತ ಸ್ವೀಕರಿಸುತ್ತೇನೆ ಎಂದು ಸುದೀಪ್ ತಿಳಿಸಿದರು. ಈಗಾಗಲೇ  'ಕೋಟಿಗೊಬ್ಬ 3' ಚಿತ್ರದ  ಕೆಲವು ವಿತರಕರು ಹಣ ನೀಡದೇ, ನನ್ನ ಹಾಗೂ ಸುದೀಪ್ ಅವರ ಹೆಸರಿಗೆ ಅಪಖ್ಯಾತಿ ತರಲು ಸಂಚು ರೂಪಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮವಾಗಿ, ಪ್ರಕರಣವನ್ನು ದಾಖಲಿಸಿದ್ದಾಗಿ ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?