ಅಪರೂಪದ ಸಾಹಸ ನಿರ್ದೇಶಕ ಜಾಲಿ ಮಾಸ್ಟರ್ ಹೃದಯಾಘಾತದಿಂದ ಅಗಲಿದ್ದಾರೆ. 900ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಫೈಟರ್.....
ಕನ್ನಡ, ಮಲಯಾಳಂ, ಹಿಂದೆ, ತಮಿಳು, ತೆಲುಗು ಸೇರಿದಂತೆ ಹಲವಾರು ಭಾಷೆಯ ಸಿನಿಮಾಗಳಲ್ಲಿ ಸಾಹಸ ನಿರ್ದೇಶಕರಾ ಜಾಲಿ ಬಾಸ್ಟಿನ್ ಕೆಲಸ ಮಾಡಿದ್ದಾರೆ. ಡಿಸೆಂಬರ್ 26ರಂದು ಹೃದಯಾಘಾತದಿಂದ ನಿಧನರಾಗಿದ್ದು ಡಿಸೆಂಬರ್ 27ರಂದು ಅಂತ್ಯಕ್ರಿಯೆ ನಡೆಯಲಿದೆ. ಮೂಲತಃ ಅಲ್ಲಪಿ ಕೇರಳದವರಾಗಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಆರಂಭದಲ್ಲಿ ಬೈಕ್ ಚೇಸ್ ಮಾಡುವ ಸನ್ನಿವೇಶಗಳಲ್ಲಿ ನಾಯಕರಿಗೆ ಡ್ಯೂಪ್ ಆಗಿ ಕೆಲಸ ಮಾಡುತ್ತಿದ್ದ ಮಾಸ್ಟರ್ ಈಗ ಫೈಟ್ ಕೋರಿಯೋಗ್ರಾಫರ್ ಆಗಿ ಗುರುತಿಸಿಕೊಂಡಿರು.
17ನೇ ವಯಸ್ಸಿನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆಯ ಪ್ರೇಮಲೋಕದ ಮೂಲಕ ಎಂಟ್ರಿ ಕೊಡುವ ಜಾಲಿ ಬಾಸ್ಟಿನ್ ಸುಮಾರು 900ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಜಾಲಿ ಬಾಸ್ಟಿನ್‌ರನ್ನು ಗುರುತಿಸಿ ಹೆಚ್ಚು ಅವಕಾಶ ಕೊಟ್ಟಿದ್ದು ರವಿಚಂದ್ರನ್ ಎನ್ನಲಾಗಿದೆ. ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಜಾಲಿ ಮಾಸ್ಟರ್ ಪ್ರೇಮಲೋಕ ನಂತರ ಶಾಂತಿ ಕ್ರಾಂತಿ, ಅಣ್ಣಯ್ಯ, ಪುಟ್ನಂಜ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಫೈಟ್ ಮಾಸ್ಟರ್ ಆಗಿ ಚಿತ್ರ ನಿರ್ದೇಶಕರಾಗುತ್ತಾರೆ. ಪೂಜಾ ಗಾಂಧಿ, ದಿಲೀಪ್ ರಾಜ್ ಮತ್ತು ವಿಶಾಲ್ ಹೆಗಡೆ ನಟಿಸಿರುವ ನಿನಗಾಗಿ ಕಾದಿರುವೆ ಸಿನಿಮಾವನ್ನು ಜಾಲಿ ನಿರ್ದೇಶನ ಕೂಡ ಮಾಡಿದ್ದರು.
ಚಿಕ್ಕಮಗಳೂರು: ಹೃದಯಾಘಾತದಿಂದ 7ನೇ ತರಗತಿ ವಿದ್ಯಾರ್ಥಿನಿ ಸಾವು
ಸದ್ಯ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾದಲ್ಲಿ ಜಾಲಿ ನಟಿಸುತ್ತಿದ್ದರು. ಭೀಮ ಚಿತ್ರಕ್ಕೆ ಒಂದು ಚೇಸಿಂಗ್ ಆಕ್ಷನ್ ಸನ್ನಿವೇಶಕ್ಕೆ ದುನಿಯಾ ವಿಜಯ್ ಮಾತುಕತೆ ಮಾಡಿದಾಗ ಆ ಸನ್ನಿವೇಶವನ್ನು ಅಚ್ಚುಕಟ್ಟಾಗಿ ಯಾವುದೇ ರೀತಿ ತೊಂದರೆ ಇಲ್ಲದೆ ಮಾಡುವುದು ಯಾರು ಅಂತ ತಲೆ ಕೆಡಿಸಿಕೊಂಡು ಯೋಚನೆ ಮಾಡಿದಾಗ ಎಲ್ಲರ ಕಣ್ಣು ಮುಂದೆ ಬಂದಿದ್ದು ಜಾಲಿ ಮಾಸ್ಟರ್. ರಾಮನಗರದ ಸರ್ಕಲ್‌ನಲ್ಲಿ ರಾತ್ರಿ ಪೂರ್ತಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಿಂತು ಭೀಮ ಚಿತ್ರದ ವಾಹನಗಳ ಡಿಕ್ಕಿ ಸನ್ನಿವೇಶವನ್ನು ಅತಿ ದಟ್ಟಣೆ ಇರುವ ಬೆಂಗಳೂರು ಮೈಸೂರು ರಸ್ತೆಯ ರಾಮನಗರ ಸರ್ಕಲ್‌ನಲ್ಲಿ ಕಂಪೋಸ್ ಮಾಡಿಕೊಟ್ಟ ನಿಮ್ಮಂತಹ ಮಾಸ್ಟರ್ ಅನ್ನು ಚಿತ್ರರಂಗ ಕಳೆದುಕೊಳ್ಳುತ್ತಿದೆ ಎಂದು ನಂಬಲು ಸಹ ಸಾಧ್ಯವಾದ ಮಾತು ಎಂದು ಭೀಮ ಚಿತ್ರತಂಡ ಸಂತಾಪ ಸೂಚಿಸಿದೆ.