ರಾಮಮಂದಿರ ಉದ್ಘಾಟನೆಗೆ 'ಕೆಜಿಎಫ್‌'ಖ್ಯಾತಿಯ ರಾಕಿಂಗ್ ಸ್ಟಾರ್‌ ಯಶ್‌ಗೆ ಆಹ್ವಾನ

By Shriram Bhat  |  First Published Dec 25, 2023, 5:53 PM IST

ಆಧ್ಯಾತ್ಮಿಕ ಗುರುಗಳಾದ ಸದ್ಗುರು ಜಗ್ಗಿ ವಾಸುದೇವ್, ರವಿಶಂಕರ್ ಗುರೂಜಿ ಮೊದಲಾದವರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎನ್ನಲಾಗಿದೆ. ಜನವರಿ 22, 2024ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಆಗುತ್ತಿದೆ.


ಭಾರತದಲ್ಲಿ ಮುಂದಿನ ವರ್ಷದಲ್ಲಿ ಭಾರೀ ಅದ್ದೂರಿ ಸಮಾರಂಭವೊಂದು ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಮುಂಬರುವ ಜನವರಿಯಲ್ಲಿ ಅದ್ದೂರಿಯಾಗಿ ಜರುಗಲಿದೆ. ಈಗಾಗಲೇ ಜಗತ್ತಿನ 50 ದೇಶಗಳಿಗೆ ಈ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ. ರಾಮ್ ಲೀಲಾ ವಿಗ್ರಹದ ಪ್ರತಿಷ್ಠಾಪನೆ ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿದೆ. ಈ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಆಹ್ವಾನ ನೀಡಲಾಗಿದೆಯಂತೆ. 

ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಬಿಟ್ಟರೆ ರಿಷಬ್ ಶೆಟ್ಟಿ (Rishab Shetty) ಅವರಿಗೆ ಆಹ್ವಾನ ಬಂದಿರುವ ಸುದ್ದಿ ಇದೆ. ರಜನಿಕಾಂತ್, ಮೋಹನ್‌ ಲಾಲ್, ಚಿರಂಜೀವಿ, ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ಲೆಜೆಂಡ್ ನಟರಿಗೆ ಈಗಾಗಲೇ ಆಹ್ವಾನ ಹೋಗಿದೆಯಂತೆ. ಜತೆಗೆ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಶೃಂಗೇರಿಯ ವಿಭುಶೇಖರ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ಸಿದ್ಧಗಂಗಾ, ಪುತ್ತೂರು, ಅದಮಾರು, ಶ್ರವಣ ಬೆಳಗೋಳ, ಬೇಲಿಮಠ, ರಂಭಾ ಪುರಿ ಹೀಗೆ ಹಲವು ಮಠಗಳ ಸ್ವಾಮೀಜಿಗಳಿಗೆ ಆಹ್ವಾನ ಹೋಗಿದೆಯಂತೆ. 

Latest Videos

undefined

ಎಲಿಮಿನೇಟ್ ಆಗಿದ್ದ ಮೈಕೇಲ್ ಮತ್ತೆ ಬಂದ್ರು, ಅವಿನಾಶ್ ಕಥೆ ಏನು; ಅಂದ್ರೆ ಫೇಕ್ ಡಬಲ್ ಎಲಿಮಿನೇಶನ್ನಾ?!

ಆಧ್ಯಾತ್ಮಿಕ ಗುರುಗಳಾದ ಸದ್ಗುರು ಜಗ್ಗಿ ವಾಸುದೇವ್, ರವಿಶಂಕರ್ ಗುರೂಜಿ ಮೊದಲಾದವರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎನ್ನಲಾಗಿದೆ. ಜನವರಿ 22, 2024ರಂದು ಅಯೋಧ್ಯೆ (Ayodhya Ram Mandir Inauguration) ರಾಮಮಂದಿರ ಲೋಕಾರ್ಪಣೆ ಆಗುತ್ತಿದ್ದು, ಗ್ರಾಮಗ್ರಾಮಗಳಲ್ಲಿ ಪೂಜೆ ಪುನಸ್ಕಾರಗಳು ಆಯೋಜನೆ ಆಗಿವೆ. ಇದರ ಅಂಗವಾಗಿ ಬನಶಂಕರಿ ಮೊದಲ ಹಂತದಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಘಂಟಾದಾನ ಸಮರ್ಪಣೆ ಮಾಡಲಾಗಿದೆ. 

ಹೀನಾಯ ಕಳಪೆ ಪಟ್ಟ ಪಡೆದ ಭಾರತದ ಟಿವಿ ಶೋ; ಅಮೆರಿಕಾ ನಂಟಿನಿಂದ ಇಂಡಿಯಾದಲ್ಲಿ ಗಂಟುಮೂಟೆ ಕಟ್ಟಿತಾ?

ಇನ್ನು ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಪ್ರಯುಕ್ತ, ಉತ್ತರಪ್ರದೇಶದ ಪ್ರತಿ ಹಳ್ಳಿಗಳಲ್ಲಿ ಪೂಜೆ ನಡೆಯಲಿದ್ದು, ಅಯೋಧ್ಯೆ ರಾಮಮಂದಿರಕ್ಕೆ ಬಹಳಷ್ಟು ಕಾಣಿಕೆ ನೀಡಲಾಗುವುದು ಎನ್ನಲಾಗಿದೆ. ದೇಶ ಹಾಗೂ ವಿದೇಶಗಳಿಂದ ಅಯೋಧ್ಯೆಯಲ್ಲಿ ರಾಮ್ ಲೀಲಾ ಪ್ರಾಣ ಪ್ರತಿಷ್ಠೆ ಸಂಬಂಧ, ಹಲವು ಜನರು ದೇಣಿಗೆ ನೀಡಲಿದ್ದಾರೆ ಎನ್ನಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರ ಉದ್ಘಾಟನೆಯಾಗಿ ಅಲ್ಲಿ ರಾಮ್‌ಲೀಲಾ ಮೂರ್ತಿಗೆ ಪ್ರಾಣ ಪ್ರತಿಷ್ಠೆ ಮಾಡಿ ಲೋಕಾರ್ಪಣೆ ಕೈಗೊಳ್ಳಲಾಗುವುದು. 

ಶಾರುಖ್ ಖಾನ್ 'ಡಂಕಿ' ಫ್ಲಾಪ್ ಆಗಿದ್ದೇಕೆ; ಸೋಲು ನಿರೀಕ್ಷಿಸದ ಶಾರುಖ್ ಕಥೆ ಮುಂದೇನು?

click me!