ಕುರಿ ಮೇಯಿಸೋರಿಗೆ 50 ಲಕ್ಷ ಪರಿಹಾರ: ಸ್ಥಳದಲ್ಲೇ ಸಹಾಯ ಮಾಡಿದ ದರ್ಶನ್

Published : Dec 26, 2023, 10:34 AM ISTUpdated : Dec 28, 2023, 12:32 PM IST
 ಕುರಿ ಮೇಯಿಸೋರಿಗೆ 50 ಲಕ್ಷ ಪರಿಹಾರ: ಸ್ಥಳದಲ್ಲೇ ಸಹಾಯ ಮಾಡಿದ ದರ್ಶನ್

ಸಾರಾಂಶ

ಸುಮ್ಮನೆ ಕುರಿ ಮೇಯಿಸುತ್ತಿದ್ದವನನ್ನು ಕರೆದು ಸರ್ಕಾರದಿಂದ ಬರುವ ಸೌಲಭ್ಯಗಳ ಬಗ್ಗೆ ತಿಳಿಸಿದ ದರ್ಶನ್ ಆಶ್ಚರ್ಯದಲ್ಲಿ ನೋಡಿ ಜನ...

ದರ್ಶನ್ ಮತ್ತು ಕನಸಿನ ರಾಣಿ ಮಾಲಾಶ್ರೀ ಪುತ್ರಿ ನಟಿಸಿರುವ ಕಾಟೇರ ಸಿನಿಮಾ ಡಿಸೆಂಬರ್ 29ರಂದು ರಿಲೀಸ್‌ಗೆ ಸಜ್ಜಾಗಿದೆ. ಸಿನಿಮಾ ಪ್ರಚಾರ ಅದ್ಧೂರಿಯಾಗಿ ನಡೆಯುತ್ತಿದೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕುಮಾರ್ ಗೋವಿಂದ್ ದರ್ಶನ್ ಸರಳತೆ ಒಂದು ಉದಾಹರಣೆ ನೀಡಿದ್ದಾರೆ. 

ಕಾಟೇರ ಚಿತ್ರದ ಕೊನೆ ಭಾಗವನ್ನು ಪಾಂಡವಪುರದಲ್ಲಿ ಚಿತ್ರೀಕರಣ ಮಾಡುವಾಗ ಅಲ್ಲಿ ಒಬ್ಬ 250 ಕುರಿಗಳನ್ನು ಮೇಯಿಸಿಕೊಂಡು ಬಂದ್ರು. ದರ್ಶನ್ ಮತ್ತು ನಾನು ರೈತರಿಗೆ ಕನೆಕ್ಟ್‌ ಆಗುವ ವಿಚಾರಗಳು ಎನಾದರೂ ಇದ್ರೆ ಚರ್ಚೆ ಮಾಡುತ್ತೀವಿ ಹೀಗಾಗಿ ಬಾಸ್ ನೀವು ಇದೇ ತರ ಕುರಿ ಸಾಕಿರುವುದಾ ಎಂದು ಕೇಳಿದೆ. ಇಲ್ಲ ಅಣ್ಣ ನಂದು ಬೇರೆ ಬ್ರೀಡ್‌ ಕುರಿ (ಬೇರೆ ತಳಿ) ಎಂದು ಕ್ಷಣವೇ ಕುರಿ ಮೇಯಿಸುವವರನ್ನು ಕರೆದರು. ಸಣ್ಣ ಪುಟ್ಟ ಮಾತುಕತೆ ಶುರುವಾಯ್ತು...ಇಷ್ಟು ಕುರಿ ಇಟ್ಟುಕೊಂಡಿರುವುದಕ್ಕೆ ಅದೆಲ್ಲಾ ಪಡೆದುಕೊಂಡಿದ್ದೀರಾ ಅಂತ ದರ್ಶನ್ ಕೇಳುತ್ತಾರೆ. ಪಾಪ ಕುರಿಕಾಯುವ ಹುಡುಗ ಅಣ್ಣ ಏನೂ ಗೊತ್ತಿಲ್ಲ ಅಣ್ಣ ಅಂತಾನೆ. ಆಗ ದರ್ಶನ್ ಏನ್ ಅಣ್ಣ ನೀವು ಇಷ್ಟು ಕುರಿ ಇರುವುದಕ್ಕೆ ಸರ್ಕಾರದಿಂದ ನಿಮಗೆ ಕಮ್ಮಿ ಅಂದ್ರು 50 ಲಕ್ಷ ಹಣ ಬರಬೇಕು ಅಂತ ಹೇಳುತ್ತಾರೆ ಎಂದು ಕುಮಾರ್ ಗೋವಿಂದ್ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಆಗ ಒಂದು ಮನೆ ಮಾರಿದ್ದೆ, ಈಗ 10 ಮನೆ ಮಾಡಿದ್ದೀನಿ; ಕಷ್ಟದಲ್ಲಿ ಪ್ರಶಾಂತ್‌ ನೀಲ್ ಕೈ ಹಿಡಿದ ಡಿ-ಬಾಸ್

ಅಲ್ಲಿ ಶೂಟಿಂಗ್‌ಗೆ ರೆಡಿಯಾಗಿ ಎಲ್ಲ ಕೆಲಸಗಳು ನಡೆಯುತ್ತಿದೆ...ಒಂದು ನಿಮಿಷಕ್ಕೆ ದರ್ಶನ್ ಅದನ್ನು ಮರೆತು ಅಲ್ಲಿದ ಸ್ನೇಹಿತರನ್ನು ಕರೆದು ಕುರಿಕಾಯುವ ಹುಡುಗ ಮೊಬೈಲ್‌ಗೆ ವಾಟ್ಸಪ್‌ ಓಪನ್ ಮಾಡಿ ಬ್ಯಾಂಕ್ ಅಕೌಂಟ್ ಓಪನ್ ಮಾಡಲು ತಕ್ಷಣ ತಕ್ಷಣ ಸಹಾಯ ಮಾಡಿದರು.  ನಿಮ್ಮ ಊರಿನಲ್ಲಿ ವೆಟರ್ನರಿ ಡಾಕ್ಟರ್ ಇರ್ತಾರೆ ಅವರಿಗೆ ಸರ್ಟಿಫಿಕೇಟ್ ಮಾಡಲು ಹೇಳಿ. ದರ್ಶನ್ ಬಳಿ ಎಷ್ಟು ಮಾಹಿತಿ ಇದೆ. ಒಬ್ಬ ಸಾಮಾನ್ಯ ಮನುಷ್ಯನ ಮೇಲೆ ಸೂಪರ್ ಸ್ಟಾರ್ ಅಷ್ಟು ಕೇರ್ ಮಾಡಿ ಸಹಾಯ ಮಾಡುವ ಗುಣ ಅವರು ತುಂಬಾ ರಿಯಲ್ ಅನಿಸುತ್ತದೆ. ದಿನ ಯೋಚನೆ ಮಾಡಿಕೊಂಡು ಕುರಿ ಮೇಯಿಸುವವನ್ನು ಕರೆದು 50 ಲಕ್ಷ ಸಿಗುತ್ತೆ ಅಂದ್ರೆ ಅವನ ಸ್ಥಿತಿ ಯೋಚನೆ ಮಾಡಿದೆ. ನೀವು ನಿಜಕ್ಕೂ ಗ್ರೇಟ್ ಎಂದು ಬಾಸ್‌ಗೆ ಅಲ್ಲೇ ಹೇಳಿದರಂತೆ ಕುಮಾರ್ ಗೋವಿಂದ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?
ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar