ಪುನೀತ್‌ ರಾಜ್‌ಕುಮಾರ್‌ ಸಮಾಧಿ ವೀಕ್ಷಣೆಗೆ ಅಭಿಮಾನಿಗಳ ಬಿಗಿಪಟ್ಟು

By Kannadaprabha NewsFirst Published Nov 2, 2021, 7:36 AM IST
Highlights

*  ಅಂತಿಮ ದರ್ಶನವಂತೂ ಸಮಾಧಿ ದರ್ಶನವಾದ್ರೂ ಮಾಡ್ತೀವಿ
*  ರಾಜ್ಯದ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳ ಆಗ್ರಹ
*  ಸಿಎಂ ಬೊಮ್ಮಾಯಿಗೆ ರಮೇಶ್‌ ಅಭಿನಂದನೆ
 

ಬೆಂಗಳೂರು(ನ.02):  ನಟ ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅಗಲಿ ಐದು ದಿನ ಕಳೆದಿದೆ. ಆದರೆ ಅವರ ದರ್ಶನಕ್ಕಾಗಿ ಅಭಿಮಾನಿಗಳು(Fans) ಇನ್ನೂ ಕಾಯುತ್ತಲೇ ಇದ್ದಾರೆ. ದರ್ಶನಕ್ಕೆ ಅವಕಾಶ ನೀಡಬೇಕೆಂದು ಬಿಗಿಪಟ್ಟು ಹಿಡಿದಿದ್ದಾರೆ.

ಪುನೀತ್‌ ಅಂತ್ಯಕ್ರಿಯೆಯನ್ನು(Funeral) ಭಾನುವಾರ ಮುಂಜಾನೆಯೇ ನೆರವೇರಿಸಲಾಗಿತ್ತು. ಇದರಿಂದ ರಾಜ್ಯದ(Karnataka) ನಾನಾ ಕಡೆಗಳಿಂದ ಬಂದ ಹಲವಾರು ಅಭಿಮಾನಿಗಳಿಗೆ ಪುನೀತ್‌ ಅಂತಿಮ ದರ್ಶನದ ಅವಕಾಶ ಸಿಗಲಿಲ್ಲ. ಪುನೀತ್‌ ಸಮಾಧಿಯ ದರ್ಶನವನ್ನಾದರೂ ಮಾಡಿ ಹೋಗೋಣ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸರ್ಕಾರ(Government of Karnataka) ಹಾಗೂ ಪುನೀತ್‌ ಕುಟುಂಬವರು ಹಾಲು ತುಪ್ಪ ಕಾರ್ಯಕ್ರಮದ ಬಳಿಕವೇ ಸಾರ್ವಜನಿಕರಿಗೆ ಪುನೀತ್‌ ಸಮಾಧಿ ವೀಕ್ಷಣೆಗೆ ಅವಕಾಶ ನೀಡುವುದಾಗಿ ತಿಳಿಸಿದ್ದರು. ಆದರೆ ಪುನೀತ್‌ ನಿಧನದ(Death) ದಿನದಿಂದ ಸಮಾಧಿಯ ದರ್ಶನಕ್ಕೆ ಕಾಯುತ್ತಿರುವ ಅಭಿಮಾನಿಗಳು ಸ್ಥಳದಿಂದ ಕದಲುತ್ತಿಲ್ಲ.

ನಾಲ್ವರಿಗೆ ಪುನೀತ್ ದೃಷ್ಟಿ.. ಅಭಿಮಾನಿಗಳಲ್ಲಿ ಶಿವಣ್ಣ ಮನವಿ

ಬುಧವಾರದಿಂದ ಸಮಾಧಿ ವೀಕ್ಷಣೆಗೆ ಅವಕಾಶ ನೀಡುತ್ತೇವೆ ಎಂದರೂ, ಪುನೀತ್‌ ತೀರಿಕೊಂಡ ದಿನದಿಂದ ಅವರ ದರ್ಶನಕ್ಕಾಗಿ ಕಾಯುತ್ತಿದ್ದೇವೆ, ಅವರ ದರ್ಶನ ಮಾಡಿ ಊರಿಗೆ ವಾಪಾಸು ಹೋಗುತ್ತೇವೆ ಎಂದು ಪೊಲೀಸರ(Police) ಬಳಿ ಪರಿ ಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ. ಗುಲ್ಬರ್ಗಾ, ಹುಬ್ಬಳ್ಳಿ ಮೊದಲಾದೆಡೆಗಳಿಂದ ಬಂದ ಅಭಿಮಾನಿಗಳು ಸದ್ಯ ಪುನೀತ್‌ ಸಮಾಧಿ(Samadhi) ಬಳಿಯೇ ಬೀಡು ಬಿಟ್ಟಿದ್ದಾರೆ. ಹೆಂಗಸರು, ಪುಟ್ಟಮಕ್ಕಳೂ ಈ ಗುಂಪಿನಲ್ಲಿದ್ದಾರೆ. ಪೊಲೀಸರು ಹಾಗೂ ಅಭಿಮಾನಿಗಳ ನಡುವೆ ತಿಕ್ಕಾಟಗಳು ನಡೆಯುತ್ತಲೇ ಇವೆ.

ಶಿವರಾಜ್‌ ಕುಮಾರ್‌(Shivarajkumar) ಅವರು, ಕುಟುಂಬದವರು ಹಾಲು ತುಪ್ಪ ಬಿಟ್ಟ ಬಳಿಕ ದರ್ಶನಕ್ಕೆ ಅವಕಾಶ ನೀಡುವುದಾಗಿ ಹೇಳಿದ್ದರು. ಬುಧವಾರ ಪುನೀತ್‌ ಸಮಾಧಿ ದರ್ಶನಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ.

ಸಿಎಂ ಬೊಮ್ಮಾಯಿಗೆ ರಮೇಶ್‌ ಅಭಿನಂದನೆ

ನಟ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ಮರಣದ ಸಂದರ್ಭದಲ್ಲಿ ತಾವು ನಡೆದುಕೊಂಡ ರೀತಿ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ(BJP) ಘಟಕದ ಅಧ್ಯಕ್ಷ ಎನ್‌.ಆರ್‌.ರಮೇಶ್‌(NR Ramesh) ಅಭಿನಂದಿಸಿದ್ದಾರೆ.

'ಪುನೀತ್‌ಗೆ ಪದ್ಮಶ್ರೀ ಗೌರವ ನೀಡಿ' ಸಿದ್ದರಾಮಯ್ಯ ಒತ್ತಾಯ

ಅ.29ರಂದು ಪುನೀತ್‌ ರಾಜ್‌ಕುಮಾರ್‌ ಅವರು ಹಠಾತ್ತಾಗಿ ಅಗಲಿದರು. ಸರಳ ಸಜ್ಜನಿಕೆಯ ನಟನ ನಿಧನದ ಸಂದರ್ಭದಲ್ಲಿ ತಾವು ಪರಿಸ್ಥಿತಿ ನಿಭಾಯಿಸಿದ ರೀತಿ ಅಭಿನಂದನಾರ್ಹವಾಗಿದೆ. ಸುಮಾರು 25 ಲಕ್ಷಕ್ಕೂ ಅಧಿಕ ಜನರು ಅಂತಿಮ ದರ್ಶನಕ್ಕೆ ಬಂದರೂ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದಂತೆ ಶಾಂತಿಯುತವಾಗಿ ಪರಿಸ್ಥಿತಿ ನಿಭಾಯಿಸಿದ ರೀತಿ ಎಂದೆಂದಿಗೂ ಇತಿಹಾಸದ(History) ನೆನಪಿನಲ್ಲಿ ಉಳಿಯುತ್ತದೆ ಎಂದು ಶ್ಲಾಘಿಸಿದ್ದಾರೆ.

ಡಾ.ರಾಜ್‌ಕುಮಾರ್‌(Dr Rajkumar) ನಿಧನದ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆದ ಅಹಿತರಕ ಘಟನೆಗಳ ರೀತಿ ಯಾವುದೇ ದುರ್ಘಟನೆಗಳು ಜರುಗದಂತೆ ಮಾದರಿಯಾಗಿ ಪರಿಸ್ಥಿತಿ ನಿಭಾಯಿಸಿದ್ದೀರಿ. ಮುಖ್ಯಮಂತ್ರಿಯಾಗಿ(Chief Minister) ಸಾಮಾಜಿಕ ಕಳಕಳಿ ಮತ್ತು ಮಾನವೀಯತೆಯಿಂದ ಪುನೀತ್‌ ರಾಜ್‌ಕುಮಾರ್‌ ಅವರ ನಿಧನದ ಸಂದರ್ಭದಲ್ಲಿ ನಡೆದುಕೊಂಡು ರಾಜ್ಯ ಸರ್ಕಾರದ ಘನತೆ ಹೆಚ್ಚಿಸಿರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

click me!