'ಪುನೀತ್‌ಗೆ ಪದ್ಮಶ್ರೀ ಗೌರವ ನೀಡಿ' ಸಿದ್ದರಾಮಯ್ಯ ಒತ್ತಾಯ

Published : Nov 01, 2021, 06:58 PM ISTUpdated : Nov 01, 2021, 07:08 PM IST
'ಪುನೀತ್‌ಗೆ ಪದ್ಮಶ್ರೀ ಗೌರವ ನೀಡಿ' ಸಿದ್ದರಾಮಯ್ಯ ಒತ್ತಾಯ

ಸಾರಾಂಶ

* ಪುನೀತ್ ರಾಜ್ ಕುಮಾರ್ ಗೆ ಪದ್ಮ ಗೌರವ ನೀಡಿ * ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ * ಪ್ರಧಾನಿ ಮೋದಿಗೆ ಒತ್ತಾಯಿಸಿದ ಸಿದ್ದರಾಮಯ್ಯ * ಪುನೀತ್ ರಾಜ್ ಕುಮಾರ್ ನಿಧನ ಶೋಕ ಮರೆಯಾಗುವುದಲ್ಲ

ಬೆಂಗಳೂರು(ನ. 01)  ಯಾವ ಪ್ರಶಸ್ತಿ ಗೌರವಗಳಿಗಿಂತಲೂ  ಪುನೀತ್ ರಾಜಕುಮಾರ್(Puneeth Rajkumar)  ಜನತೆಯಿಂದ ಗಳಿಸಿರುವ  ಪ್ರೀತಿ-ಅಭಿಮಾನ ದೊಡ್ಡದು. ಹೀಗಿದ್ದರೂ, ಪುನೀತ್  ಬದುಕಿದ್ದರೆ ತನ್ನ ನಟನೆ ಮತ್ತು ಸಾಮಾಜಿಕ ಕಾಳಜಿಯಿಂದಾಗಿ ಖಂಡಿತ ಪಡೆಯುತ್ತಿದ್ದ ಪದ್ಮಶ್ರೀ ಪ್ರಶಸ್ತಿಯನ್ನು  ಅವರಿಗೆ ಮರಣೋತ್ತರವಾಗಿ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಟ್ವಿಟ್ ಮೂಲಕ ಒತ್ತಾಯ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ(Padma Awards) ಪ್ರಶಸ್ತಿಗೆ ಪುರಸ್ಕಾರಕ್ಕಾಗಿ ಅಭಿಯಾನ ಆರಂಭವಾಗಿದೆ. ಮಂಗಳೂರು‌ ಪೊಲೀಸ್ ಕಮಿಷನರ್ ಅಭಿಯಾನ ಆರಂಭಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಮಂಗಳೂರು ಕಮಿಷನರ್ ಶಶಿಕುಮಾರ್ ಅಭಿಯಾನ ಶುರು ಮಾಡಿದ್ದಾರೆ.

ಅಪ್ಪು ಅಲ್ಪಾಯುಷಿ ಅನ್ನೋದು ಅಣ್ಣಾವ್ರಿಗೆ ಮೊದಲೇ ಗೊತ್ತಿತ್ತಾ!

ಪುನೀತ್ ರಾಜ್ ಕುಮಾರ್  (Puneeth Rajkumar) ಅಗಲಿಕೆಯ ನೋವನ್ನು ಅನಿವಾರ್ಯವಾಗಿ (Sandalwood) ಸಹಿಸಿಕೊಳ್ಳಬೇಕಾಗಿದೆ. ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದು ಕಠಿಣ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಶಿವರಾಜ್ ಕುಮಾರ್(Shiva Rajkumar) ಮನವಿ ಮಾಡಿಕೊಂಡಿದ್ದಾರೆ.

ಪುನೀತ್‌ ಅವರ ಕಣ್ಣುಗಳಿಂದ ನಾಲ್ಕು ಮಂದಿಗೆ ದೃಷ್ಟಿ ನೀಡಲಾಗಿದೆ.   ಒಂದೇ ಕಣ್ಣನ್ನು ಇಬ್ಬರಿಗೆ ಅಳವಡಿಕೆ ಮಾಡಬಹುದಾದ ಅತ್ಯಾಧುನಿಕ ತಂತ್ರಜ್ಞಾನ ಬಂದಿದೆ. ಇದರ ಸಹಕಾರದಿಂದ ಕಣ್ಣಿನ ಮುಂಭಾಗ ಹಾನಿಗೊಳಗಾದವರಿಗೆ ಮುಂಭಾಗ ಹಾಗೂ ಹಿಂಭಾಗ ಹಾನಿಗೊಳಗಾದವರಿಗೆ ಹಿಂಭಾಗ ಅಳವಡಿಕೆ ಮಾಡಲು ಚಿಂತನೆ ನಡೆಸಿದ್ದೇವೆ. ಈ ಮೂಲಕ ಮೂರ್ನಾಲ್ಕು ಮಂದಿಗೆ ದೃಷ್ಟಿ ನೀಡಲು ಯೋಚಿಸಿದ್ದೇವೆ ಎಂದು ನಾರಾಯಣ ನೇತ್ರಾಲಯದ ವೈದ್ಯರು  ತಿಳಿಸಿದ್ದರು.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂದು ಸಿನಿ ಗಣ್ಯರು ಮತ್ತು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಆದರೆ ಕೋರ್ಟ್‌ ಆದೇಶದಂತೆ ಅನುಮತಿ ಇಲ್ಲದ ಕಾರಣ ಪುನೀತ್ ಸಮಾಜ ಸೇವೆಯನ್ನು ಪರಿಗಣಿಸಿ ಗೌರವ ಸಲ್ಲಿಸುತ್ತೇವೆಚಎಂದು ಸಚಿವ ಸುನೀಲ್ ಕುಮಾರ್ ಹೇಳಿದ್ದರು.

ಪುನೀತ್ ರಾಜ್ ಕುಮಾರ್ ನಿರಂತರವಾಗಿ ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬಂದವರು. ಅವರು ಮನ್ನಡೆಸುತ್ತಿದ್ದ ಅನಾಥ ಆಶ್ರಮ ಮತ್ತು ಮಕ್ಕಳ ವಿದ್ಯಾಭ್ಯಾಸದ ಹೊಂಣೆಯನ್ನು  ತಾನು ತೆಗೆದುಕೊಳ್ಳುತ್ತೇನೆ ಎಂದು ತಮಿಳು ನಟ ವಿಶಾಲ್ ತಿಳಿಸಿದ್ದಾರೆ. 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್