ದರ್ಶನ್‌-ಸುದೀಪ್‌ ವಾರ್ ಬಗ್ಗೆ ನಟ ಆದಿತ್ಯ ಕೊಟ್ಟ ಪ್ರತಿಕ್ರಿಯೆ ಇದು!

Suvarna News   | Asianet News
Published : Feb 01, 2020, 09:13 AM IST
ದರ್ಶನ್‌-ಸುದೀಪ್‌ ವಾರ್ ಬಗ್ಗೆ ನಟ ಆದಿತ್ಯ ಕೊಟ್ಟ ಪ್ರತಿಕ್ರಿಯೆ ಇದು!

ಸಾರಾಂಶ

ಆದಿತ್ಯ ನಾಯಕನಾಗಿ ನಟಿಸಿರುವ ‘ಮುಂದುವರಿದ ಅಧ್ಯಾಯ’ ಚಿತ್ರದ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕರ ಕುರಿತ ಒಂದು ವಿಡಿಯೋ ರೂಪಿಸಲಾಗಿತ್ತು. ನಿರ್ದೇಶಕರಾದ ವೈ ವಿ ರಾವ್‌ ಅವರಿಂದ ಶುರುವಾಗಿ ಈ ತಲೆಮಾರಿನ ನಿರ್ದೇಶಕರಾದ ಪ್ರಶಾಂತ್‌ ನೀಲ್‌ ವರೆಗೂ ಬಹುತೇಕ ಎಲ್ಲ ನಿರ್ದೇಶಕರ ಫೋಟೋ ಸಮೇತ ಅವರನ್ನು ವಿಡಿಯೋದಲ್ಲಿ ತೋರಿಸಲಾಗಿತ್ತು. ನಂತರ ಆದಿತ್ಯ ಅವರೊಂದಿಗೆ ಸಿನಿಮಾ ಮಾಡಿದ ನಿರ್ದೇಶಕರದ್ದೇ ಪ್ರತ್ಯೇಕ ವಿಡಿಯೋ ಕೂಡ ವೇದಿಕೆಯಲ್ಲಿ ಪ್ರಸಾರವಾಯಿತು. ಆ ಮೂಲಕ ಅಂದಿನ ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿರ್ದೇಶಕರಿಗೆ ಅರ್ಪಿಸಿದ್ದರು ಆದಿತ್ಯ.

ವಿವಾದ ಯಾಕೆ ಬಂತು?

ಚಿತ್ರದ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಸಾರಗೊಂಡ ಕನ್ನಡ ಚಿತ್ರರಂಗದ ನಿರ್ದೇಶಕರ ಸಾಲಿನಲ್ಲಿ ನಟ ಸುದೀಪ್‌ ಅವರ ಫೋಟೋ ಇಲ್ಲದೆ ಹೋಗಿದ್ದು. ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಸುದೀಪ್‌ ಅವರನ್ನು ವಿಡಿಯೋದಲ್ಲಿ ಯಾಕೆ ತೋರಿಸಿಲಿಲ್ಲ ಎಂಬುದು ಸುದೀಪ್‌ ಅವರ ಅಭಿಮಾನಿಗಳ ಪ್ರಶ್ನೆ ಮತ್ತು ಅಕ್ರೋಶ. ಸಾಲದಕ್ಕೆ ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಟ ದರ್ಶನ್‌ ಅವರು ಆಗಮಿಸಿದ್ದರು.

ಐ ಆ್ಯಮ್ Back: ಅದಿತ್ಯ ಅಧ್ಯಾಯ ಮುಂದುವರೆದಿದೆ!

ಇದೇ ಸಿಟ್ಟು ವಿವಾದವಾಗಿ ಸೋಷಿಯಲ್‌ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿರುವಾಗಲೇ ಮಾಧ್ಯಮಗಳಲ್ಲಿ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿ ಆಯ್ತು. ದರ್ಶನ್‌ ಅತಿಥಿಯಾಗಿ ಬಂದಿದ್ದು, ಆದಿತ್ಯ ಅವರು ಚಾಲೆಂಜಿಂಗ್‌ ಸ್ಟಾರ್‌ ಆತ್ಮೀಯ ಗೆಳೆಯ ಆಗಿದ್ದರಿಂದಲೇ ಸುದೀಪ್‌ ಅವರನ್ನು ನೆನಪಿಸಿಕೊಂಡಿಲ್ಲ ಎಂಬುದು ಸೋಷಿಯಲ್‌ ಮೀಡಿಯಾಗಳಲ್ಲಿ ನಡೆಯುತ್ತಿರುವ ವಾದ- ಪ್ರತಿವಾದ. ಈ ಗಲಾಟೆಯಲ್ಲಿ ಆದಿತ್ಯ ಪರವಾಗಿ ದರ್ಶನ್‌ ಅಭಿಮಾನಿಗಳು ನಿಂತಿದ್ದಾರೆ.

ದರ್ಶನ್ ವೇದಿಕೆ ಮೇಲಿದ್ದಾರೆ ಅಂತ ಕಿಚ್ಚನ ಹೆಸರು ಕೈ ಬಿಡಲಾಯ್ತಾ?

ಆದಿತ್ಯ ಹೇಳಿದ್ದೇನು?

ನಿರ್ದೇಶಕರನ್ನು ನೆನೆಯುವ ವಿಡಿಯೋ ಮಾಡಿಸಿದ್ದು ನಾನು ಅಲ್ಲ. ಚಿತ್ರತಂಡ. ಯಾಕೆ ಸುದೀಪ್‌ ಅವರ ಹೆಸರು ಮತ್ತು ಫೋಟೋ ಮಿಸ್‌ ಆಯ್ತು ಎಂಬುದು ಅವರೇ ಹೇಳಬೇಕು. ಆದರೆ, ಇದನ್ನ ದೊಡ್ಡದು ಮಾಡಿ ವಿವಾದ ಮಾಡುತ್ತಿರುವುದು ಸರಿಯಲ್ಲ. ಇದೊಂದು ರೀತಿಯಲ್ಲಿ ಮೀಡಿಯಾ ಮಾಫಿಯಾ. ಅನಗತ್ಯ ವಿಷಯಗಳನ್ನು ದೊಡ್ಡದು ಮಾಡಿ ಕೀಳು ಮಟ್ಟದಲ್ಲಿ ವಿವಾದ ಸೃಷ್ಟಿಸುವುದನ್ನು ನಿಲ್ಲಿಸಿ. ನಾವೆಲ್ಲ ಒಂದೇ ಎನ್ನುವ ಅರ್ಥದಲ್ಲಿ ಆದಿತ್ಯ ಟ್ವೀಟ್‌ ಮಾಡಿದ್ದಾರೆ. ಸದರಿ ಟ್ವೀಟ್‌ಗೂ ಸುದೀಪ್‌ ಅಭಿಮಾನಿಗಳು ಖಾರವಾಗಿಯೇ ಉತ್ತರಿಸಿದ್ದಾರೆ. ಮುಂದೆ ಇದು ಎಲ್ಲಿಗೆ ತಲುಪಲಿದೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?