ನನ್ನ ಗಂಡ ಒಬ್ರು ಡ್ಯಾನ್ಸ್‌ ಟೀಚರ್‌ನ ಡೇಟ್ ಮಾಡ್ತಿದ್ರು; ಶ್ರುತಿ ಹರಿಹರನ್ ಲವ್ ಸ್ಟೋರಿ ಕೇಳಿ ನೆಟ್ಟಿಗರು ಶಾಕ್!

Published : Jan 04, 2024, 10:03 AM IST
 ನನ್ನ ಗಂಡ ಒಬ್ರು ಡ್ಯಾನ್ಸ್‌ ಟೀಚರ್‌ನ ಡೇಟ್ ಮಾಡ್ತಿದ್ರು; ಶ್ರುತಿ ಹರಿಹರನ್ ಲವ್ ಸ್ಟೋರಿ ಕೇಳಿ ನೆಟ್ಟಿಗರು ಶಾಕ್!

ಸಾರಾಂಶ

ಸಂಬಂಧದಲ್ಲಿ ನಂಬಿಕೆ ಮತ್ತು ವಿಶ್ವಾಸ ತುಂಬಾ ಮುಖ್ಯ. ನಮ್ಮ ಸಂಗಾತಿ ಸಿಕ್ಕಿದ್ದು ಹೇಗೆಂದು ರಿವೀಲ್ ಮಾಡಿದ ಶ್ರುತಿ ಹರಿಹರನ್. 

ಕನ್ನಡ ಚಿತ್ರರಂಗದ ಬೋಲ್ಡ್ ನಟಿ ಶ್ರುತಿ ಹರಿಹರನ್. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಟಾಪ್ ನಟರ ಜೊತೆ ಕಾಣಿಸಿಕೊಳ್ಳುತ್ತಿದ್ದ ಶ್ರುತಿ ಮದರ್‌ಹುಡ್‌ಗೆ ಕಾಲಿಟ್ಟ ಮೇಲೆ ಲೈಮ್‌ ಲೈಟ್‌ನಿಂದ ದೂರ ಉಳಿದುಬಿಟ್ಟರು. ಹೆಡ್‌ಬುಷ್‌ ಚಿತ್ರದಿಂದ ಕಮ್ ಬ್ಯಾಕ್ ಮಾಡಿರುವ ನಟಿ ಈಗ ಫಿಟ್ನೆಸ್‌ ಫ್ರೀಕ್ ಆಗಿದ್ದಾರೆ. ಸಿಕ್ಕಾಪಟ್ಟೆ ಸಣ್ಣಗಾಗಿದ್ದಾರೆ. ಸಖತ್ ಸುದ್ದಿಯಲ್ಲಿರುವ ಶ್ರುತಿ ತಮ್ಮ ಲವ್ ಸ್ಟೋರಿ ರಿವೀಲ್ ಮಾಡಿದ್ದಾರೆ.

'ನಾನು ಮದುವೆ ಆಗಿರುವ ರಾಮ್ ಡ್ಯಾನ್ಸ್‌ ಟೀಚರ್ ಆಗಿದ್ದರು. ಒಂದು ಸಂಸ್ಥೆಯಲ್ಲಿ ನಾನು ಅಟ್ಟಕ್ಕಳರಿ  ಕಲಿಯುತ್ತಿದ್ದೆ, ಅಲ್ಲಿ ರಾಮ್ ಡೇಟ್ ಮಾಡುತ್ತಿದ್ದ ವ್ಯಕ್ತಿ ನನ್ನ ಡ್ಯಾನ್ಸ್ ಟೀಚರ್ ಆಗಿದ್ದರು. ಮೊದಲು ಸ್ನೇಹಿತರಾಗಿದ್ವಿ. ಡ್ಯಾನ್ಸ್ ಮುಗಿಸಿಕೊಂಡು ಕಾಫಿ ತಿಂಡಿ ಅಂತ ಎಲ್ಲರೂ ಒಟ್ಟಿಗೆ ಹೊರ ಹೋಗುತ್ತಿದ್ವಿ. ಫಿಲ್ಮಂ ಕಂಪನಿ ಅಂತ ಮೊದಲು ಮಲಯಾಳಂ ಸಿನಿಮಾ ಚಿತ್ರ ಶುರು ಮಾಡಿದ್ದು ಅದು ಕೇರಳದಲ್ಲಿತ್ತು. ಕೇರಳದಲ್ಲಿ ಇರುವೆ ಅಂತ ರಾಮ್‌ಗೆ ಮೆಸೇಜ್ ಮಾಡಿದೆ. ಅಲ್ಲಿಂದ ಮಾತುಕತೆ ಶುರು ಆಗಿತ್ತು. ನನ್ನ ತಾಯಿಯನ್ನು ಮೊದಲು ಭೇಟಿ ಮಾಡಿ ಇಷ್ಟ ಆದ್ಮೇಲೆ ಮುಂದುವರೆಯಬಹುದು ಎಂದು ಹೇಳಿದರು. ಸಾಮಾನ್ಯವಾಗಿ ಎಲ್ಲರ ತಾಯಿಯಂದಿರು ನನ್ನನ್ನು ಇಷ್ಟ ಪಡುತ್ತಾರೆ ಏಕೆಂದರೆ ನಾನು ಒಳ್ಳೆಯ ಹುಡುಗಿ' ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಶ್ರುತಿ ಹರಿಹರನ್ ಮಾತನಾಡಿದ್ದಾರೆ.

ಇದು... ಇದು ಚೆನ್ನಾಗಿರೋದು; ಇದ್ದಕ್ಕಿದ್ದಂತೆ ಸಣ್ಣಗಾದ ಶ್ರುತಿ ಹರಿಹರನ್‌ನ ನೋಡಿ ಬೆಂಕಿ ಎಂದ ನೆಟ್ಟಿಗರು!

'ರಾಮ್ ಆರಾಮ್ ಆಗಿ ಮನೆಗೆ ಕರೆದುಕೊಂಡು ಹೋದರು. ಆಂಟಿ ಜೊತೆ ಮಾತನಾಡಿ ಅಲ್ಲಿಂದ ನಮ್ಮ ನಡುವೆ ಒಳ್ಳೆ ಬಾಂಡ್ ಬೆಳೆಯಿತ್ತು. ನಮ್ಮ ನಡುವೆ ವಿಶ್ವಾಸ ಬೆಳೆಸಿಕೊಳ್ಳುವ ಅಗತ್ಯ ಇರುತ್ತದೆ ಏಕೆಂದರೆ ರಾಮ್‌ ಕೂಡ ಇರುವುದು ಆರ್ಟಿಸ್ಟ್‌ ಇಂಡಸ್ಟ್ರಿಯಲ್ಲಿ which is quite physical ಇಂಡಸ್ಟ್ರಿ..ನಂದು ಕೂಡ. ನಮ್ಮ ನಡುವೆ ನಂಬಿಕೆ ಬಿಲ್ಡ್‌ ಆಗಿದ್ದು ಒಂದು ಜರ್ನಿ. ಮೊದಲು ಎಲ್ಲಿದ್ಯಾ? ಶೂಟಿಂಗ್ ಅಂತ ಹೇಳಿದಾಗ ತಲೆ ಕೆಡಿಸಿಕೊಳ್ಳುತ್ತಿದ್ದರು...ಆದರೆ ಇದೇ ಇಂಡಸ್ಟ್ರಿಯಲ್ಲಿ ಇರುವ ಕಾರಣ ರಾಮ್ ಅರ್ಥ ಮಾಡಿಕೊಳ್ಳುತ್ತಾರೆ. ನನಗೆ ನಿನ್ನ ಮೇಲೆ ನಂಬಿಕೆ ಇದೆ ಹುಷಾರ್ ಆಗಿ ಕೆಲಸ ಮುಗಿಸಿಕೊಂಡು ಬಾ ಅಂತ ಹೇಳಬೇಕು...ಆ ನಂಬಿಕೆ ರಾಮ್‌ಗೆ ಇದೆ' ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.

 

ನಟಿ ಶುತಿ ಹರಿಹರನ್ ಮತ್ತೆ ಪ್ರೆಗ್ನೆಂಟ್?; ಸರೋಗೆಸಿ ಬಗ್ಗೆ ನಟಿ ಹೇಳಿಕೆ ವೈರಲ್

'ನನ್ನ ಜೀವನದ ಕೆಟ್ಟ ಕನಸು ಅಂದ್ರೆ ತಂದೆ ತೀರಿಕೊಂಡ ಕ್ಷಣ. ಅವರಿಗೆ ಬ್ರೈನ್ ಟ್ಯೂಮರ್ ಇತ್ತು. ಎರಡು ವರ್ಷಗಳ ಕಾಲ ಕಷ್ಟ ಪಟ್ಟಿದ್ದಾರೆ. ಆದರೆ ಅವರು ಸತ್ತಿದ್ದು ಅವರು ಬ್ರೈನ್ ಫೀವರ್‌ನಿಂದ. ಅಪ್ಪ ಸೇಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹೆಣ್ಣು ಮಕ್ಕಳಿಗೆ ತಂದೆ ತುಂಬಾ ಕ್ಲೋಸ್. ನಾನು ಆಕ್ಟ್‌ ಮಾಡ್ಬೋದು ಅನ್ನೋ ಹುಳ ನನ್ನ ತಲೆಯಲ್ಲಿ ಹಾಕಿದ್ದು ನನ್ನ ತಂದೆನೇ' ಎಂದಿದ್ದಾರೆ ಶ್ರುತಿ ಹರಿಹರನ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?