ವೈನ್‌ ಆರೋಗ್ಯಕ್ಕೆ ಒಳ್ಳೆಯದು, 1 ಲೀಟರ್‌ ನೀರು ಕುಡಿಯಬೇಕು; ರಶ್ಮಿಕಾ ಮಂದಣ್ಣ ಡಯಟ್‌ ಸೀಕ್ರೆಟ್ ರಿವೀಲ್

Published : Jan 17, 2023, 10:11 AM ISTUpdated : Jan 17, 2023, 10:15 AM IST
ವೈನ್‌ ಆರೋಗ್ಯಕ್ಕೆ ಒಳ್ಳೆಯದು, 1 ಲೀಟರ್‌ ನೀರು ಕುಡಿಯಬೇಕು; ರಶ್ಮಿಕಾ ಮಂದಣ್ಣ ಡಯಟ್‌ ಸೀಕ್ರೆಟ್ ರಿವೀಲ್

ಸಾರಾಂಶ

ನ್ಯಾಷನಲ್ ಕ್ರಶ್‌ ಫಿಟ್ನೆಸ್‌ ಸೀಕ್ರೆಟ್‌ ಏನು ಎಂದು ಪದೇ ಪದೇ ಪ್ರಶ್ನೆ ಮಾಡುವವರಿಗೆ ಉತ್ತರ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಡಯಟ್‌ ಲಿಸ್ಟ್‌....  

ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ದಿನಕ್ಕೊಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಫೊಟೋ ಅಪ್ಲೋಡ್ ಮಾಡಿದರೂ ಟ್ರೋಲ್, ಕಾಮೆಂಟ್ ಮಾಡಿದರೂ ಟ್ರೋಲ್, ಕಾರ್ಯಕ್ರಮಕ್ಕೆ ಆಗಮಿಸಿದರೂ ಟ್ರೋಲ್...ಒಟ್ಟಿನಲ್ಲಿ ಅಭಿಮಾನಿಗಳಿಗಿಂತ ಟ್ರೋಲಿಗರು ರಶ್ಮಿಕಾ ಯಶಸ್ಸಿಗೆ ದೊಡ್ಡ ಕಾರಣ. ಪ್ರಾಜೆಕ್ಟ್‌ಗಳು ಹೆಚ್ಚಾಗುತ್ತಿದ್ದಂತೆ ಸ್ಕಿನ್- ಹೇರ್ - ಫಿಟ್ನೆಸ್‌ ಬಗ್ಗೆ ಹೆಚ್ಚಿಗೆ ಗಮನ ನೀಡಬೇಕು. ಹೀಗಾಗಿ ರಶ್ಮಿಕಾ ಯಾವ ಡಯಟ್ ಫಾಲೋ ಮಾಡುತ್ತಾರೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಿಗಿದೆ...

ಎಷ್ಟೇ ತಿಂದರೂ ಕೆಲವರು ದಪ್ಪ ಆಗುವುದಿಲ್ಲ ಈ ಸಾಲಿಗೆ ರಶ್ಮಿಕಾ ಮಂದಣ್ಣ ಸೇರುತ್ತಾರಾ ಎಂದು ಪ್ರಶ್ನೆ ಮಾಡಿದಾಗ ನನ್ನ ಸ್ನೇಹಿತರು ಹಾಗೆ ತಿಳಿದುಕೊಳ್ಳುತ್ತಾರೆ ಆದರೆ ಆರೋಗ್ಯಕ್ಕೆ ಅದು ಒಳ್ಳೆಯದಲ್ಲ. ನನ್ನ ಅಗಲವಾದ ಭುಜಗಳು ಇರುವುದರಿಂದ ಏನೇ ತಿಂದರೂ ಜನರಿಗೆ ಗೊತ್ತಾಗುವುದಿಲ್ಲ. 'ಬೆಳಗ್ಗೆ ಎದ್ದ  ತಕ್ಷಣ ನಾನು ತುಂಬಾ ನೀರು ಕುಡಿಯುವೆ. ನಾನು ಲೆಕ್ಕ ಮಾಡಿರುವ ಪ್ರಕಾರ ಖಾಲಿ ಹೊಟ್ಟೆಯಲ್ಲಿ 1 ಲೀಟರ್ ನೀರು ಕುಡಿಯುವೆ. ಈಗ ನನ್ನ ಆಹಾರತಜ್ಞ ನೀರಿಗೆ ಆಪಲ್ ಸೈಡರ್ ವಿನೇಗರ್ ಹಾಕಿಕೊಂಡು ಕುಡಿಯಲು ಹೇಳಿದ್ದಾರೆ' ಎಂದು ರಶ್ಮಿಕಾ ಪಿಂಕ್‌ವಿಲ್ಲ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು. 

ಕೆಲವು ತಿಂಗಳುಗಳ ಹಿಂದೆ ರಶ್ಮಿಕಾ ವೀಗನ್‌ ಆಗಿ ಬದಲಾದರು. ಈ ಸಮಯದಲ್ಲಿ ಕೆಲವೊಂದು ತರಕಾರಿಗಳಿಂದ ಅಲರ್ಜಿ ಅಗುತ್ತಿರುವುದುನ್ನು ಗಮನಕ್ಕೆ ಬಂದಿದೆ. ಟೊಮ್ಯಾಟೋ, ಆಲೂ ಗಡ್ಡೆ, ಸೌತೆಕಾಯಿ ಮತ್ತು ದೊಡ್ಡ ಮೆಣಸಿನಕಾಯಿ ತಿಂದ್ರೆ ಬೇಗ ಅಲರ್ಜಿ ಆಗುತ್ತಂತೆ. ಈ ಸಮಸ್ಯೆ ಇರುವುದರಿಂದ ಇಟಲಿ ಪ್ರವಾಸ ಮಾಡಿದಾಗ ಕೇವಲ ಕೇಕ್‌ ಮತ್ತು ಸ್ವೀಟ್‌ಗಳನ್ನು ತಿಂದು ದಿನಗಳನ್ನು ಕಳೆದಿದ್ದಾರೆ. 

ಎಷ್ಟೇ ಬಕೆಟ್ ಹಿಡಿದ್ರೂ ನೀನ್ ಮಾಡಿದ್ದು ಮರೆಯಲ್ಲ; ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿ ರಶ್ಮಿಕಾ ಮಂದಣ್ಣ ಟ್ರೋಲ್

ಎಲ್ಲೇ ಇರಲಿ ಏನೇ ಮಾಡುತ್ತಿರಲಿ ಮಧ್ಯಾಹ್ನ ಊಟಕ್ಕೆ ಮಾತ್ರ ಪಕ್ಕಾ ಸೌತ್ ಮೀಲ್ಸ್‌ ಬೇಕು ಎನ್ನುತ್ತಾರೆ ನ್ಯಾಷನಲ್ ಕ್ರಶ್. ಅನ್ನ ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾರಂತೆ. ರಾತ್ರಿ ತುಂಬಾ ಕಡಿಮೆ ತಿನ್ನುವೆ ಎಂದಿದ್ದಾರೆ. ಇನ್ನು ತಪ್ಪದೆ ವರ್ಕೌಟ್ ಮಾಡುವ ರಾಶ್ ದಿನ ಬೆಳಗ್ಗೆ ವರ್ಕೌಟ್ ಮಾಡಬೇಕು ನನಗೆ ಸಂಜೆ ಅಥವಾ ಮಧ್ಯಾಹ್ನ ಆಗುವುದಿಲ್ಲ ಒಂದೊಂದು ದಿನ ಒಂದೊಂದು ಸಮಯಕ್ಕೆ ಕೆಲಸ ಮುಗಿಯುತ್ತದೆ. ವರ್ಕೌಟ್ ಆದಮೇಲೆ ತಪ್ಪದೆ ಮೊಟ್ಟೆ ಸೇವಿಸುತ್ತೇನೆ ಎಂದಿದ್ದಾರೆ. 

'ನಾನು ಸರಿಯಾದ ಸಮಯಕ್ಕೆ ಊಟ ಮಾಡುವುದಿಲ್ಲ ಆದರೆ ನೀವುಗಳು ಈ ತಪ್ಪು ಮಾಡಬೇಡಿ. ರಾತ್ರಿ ತಡವಾಗಿ ಮಲಗುವೆ..ಪುಸ್ತಕ ಓದುವುದು ಅಥವಾ ಕೆಲಸ ಇದೆ ಅಂತಲ್ಲ ನಾನು ಸಿನಿಮಾ ನೋಡಿಕೊಂಡು ಟೈಮ್ ಪಾಸ್ ಮಾಡುವೆ. ಡಯಟ್ ಮಾಡಲು ಆರಂಭಿಸಿದಾಗ ಅದು ನಮ್ಮ ಲೈಫ್‌ ಸ್ಟೈಲ್ ಆಗಬೇಕು ಆಗ ಒಂದು ದಿನವೂ ಚೀಟ್‌ ಮೀಲ್‌ ತಿನ್ನಬೇಕು ಅನಿಸುವುದಿಲ್ಲ ಆದರೆ ಹೆಚ್ಚಿಗೆ ಸ್ವೀಟ್ ಇಷ್ಟ ಪಡುವ ವ್ಯಕ್ತಿ ಆಗಿರುವುದರಿಂದ ನಾನು ಸಮಯ ಸಿಕ್ಕರೆ ಅಥವಾ ಡಯಟ್ ಮಾಡದ ದಿನ ಕೇಕ್ ಅಥವಾ ಚಾಕೋಲೇಟ್ ತಿನ್ನುವೆ. ವೈನ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ. ಹೃದಯ ಮತ್ತು ಸ್ಕಿನ್‌ಗೆ ತುಂಬಾನೇ ಒಳ್ಳೆಯದು' ಎಂದು ಹೇಳಿದ್ದಾರೆ.

ಅಬ್ಬಬ್ಬಾ! ಈ ವರ್ಷ ರಶ್ಮಿಕಾ ಮಂದಣ್ಣ ಹಾಕೊಂಡಿದ್ದ ಹಾಟ್‌ ಡ್ರೆಸ್‌ಗಳಿವು...

'ತ್ವಚೆ ಕಾಪಾಡಿಕೊಳ್ಳಲು ನಾನು ಯಾವುದೇ ಮನೆ ಮದ್ದು ಪ್ರಯೋಗ ಮಾಡುವುದಿಲ್ಲ. ಬೆಳಗ್ಗೆ ಎದ್ದು ಮುಖ ತೊಳೆದುಕೊಂಡು ಸುಮ್ಮನಿರುತ್ತೀನಿ. ಸನ್ಸ್ಕ್ರೀನ್ ತಪ್ಪದೆ ಬಳಸಬೇಕು. ಹೆಚ್ಚಿಗೆ ವಿಟಮಿನ್ ಸಿ ತೆಗೆದುಕೊಳ್ಳುವೆ' ಎನ್ನುತ್ತಾರೆ ರಶ್ಮಿಕಾ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?