ದಯವಿಟ್ಟು ಚಿಕ್ಕಪುಟ್ಟ ಕನಸು ಕಾಣುವ ಬದಲು ದೊಡ್ಡದೊಡ್ಡ ಕನಸು ಕಾಣಿರಿ. ಚಿಕ್ಕ ಕನಸು ಕಂಡಿದ್ದ ನನಗೆ ಅಷ್ಟೋ ಇಷ್ಟೋ ಸಾಧಿಸಲು ಸಾಧ್ಯವಾಯಿತು. ನಾನು ಕಂಡಿದ್ದ ಪುಟ್ಟ ಮನೆಯ ಬದಲು ನನ್ನ ಸ್ವಂತದ..
ನಟಿ ಸಮಂತಾ ಅವರಿಗೆ ಅನಾರೋಗ್ಯ ಕಾಡಿರುವುದು ಗೊತ್ತೇ ಇದೆ. ಆದರೆ ಅದಕ್ಕೂ ಮೊದಲು ಸಮಂತಾ (Samantha Ruth Prabhu)ಸೌತ್ ಇಂಡಿಯಾದ ಬಹುಬೇಡಿಕೆ ನಟಿಯಾಗಿದ್ದರು ಎಂಬುದು ಬಹತೇಕರಿಗೆ ಗೊತ್ತಿದೆ. ಅಂಥ ನಟಿ ಸಮಂತಾ ಅವರಿಗೆ ಈಗ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಎಂಬುದು ದೊಡ್ಡ ದುರಂಥವೇ ಸರಿ. ಆದರೆ, ಸಮಂತಾ ತಮ್ಮ ಮೆಯೋಸಿಟಿಸ್ ಖಾಯಿಲೆಗೆ ಅಮೆರಿಕಾದಲ್ಲಿ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿರುವ ಜೊತೆಗೆ, ಸಾಕಷ್ಟು ಟೂರಿಸ್ಟ್ ಜಾಗಗಳಿಗೆ ತೆರಳಿ ಅಲ್ಲಿ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುತ್ತಿದ್ದಾರೆ. ಅನಾರೋಗ್ಯ ವಾಸಿಯಾದ ಬಳಿಕ ಮತ್ತೆ ನಟನೆಗೆ ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದಾರಂತೆ.
ನಟಿ ಸಮಂತಾ ತಮ್ಮ ಕಾಲೇಜು ದಿನಗಳ ಕನಸಿನ ಬಗ್ಗೆ ಹೇಳಕೊಂಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಸಮಂತಾ ರುತ್ ಪ್ರಭು 'ನಾನು ಕಾಲೇಜಿಗೆ ಹೋಗುತ್ತಿರುವ ದಿನಗಳಲ್ಲಿ ನನಗೆ ಒಂದು ಕನಸಿತ್ತು. ಅದು ನಾನು ಪುಟ್ಟದಾದ ಮನೆಯೊಂದನ್ನು ಅಂದರೆ, ನನ್ನದೇ ಆದ ಸ್ವಂತ ಮನೆಯೊಂದನ್ನು ಹೊಂದರಬೇಕು. ಅದಕ್ಕಿಂತ ದೊಡ್ಡದಾದ ಕನಸನ್ನು ನಾನು ಕಾಣುವುದಕ್ಕೂ ಸಾಧ್ಯವಿರಲಿಲ್ಲ. ಅಂದಿನ ನನ್ನ ಪರಿಸ್ಥಿತಿ ಹಾಗು ಮನಸ್ಥಿತಿಯಲ್ಲಿ ಅದಕ್ಕಿಂತ ದೊಡ್ಡದಾದ ಕನಸನ್ನು ನಾನು ಕಾಣಲು ಸಾಧ್ಯವೇ ಇರಲಿಲ್ಲ.
ಲವ್ ಸ್ಟೋರಿ ನನಗಿಷ್ಟ ಎಂದಿರುವ ಸಾಯಿ ಪಲ್ಲವಿ ರಿಯಲ್ ಲೈಫ್‌ನಲ್ಲಿ 'ಲವರ್' ರಿಜೆಕ್ಟ್ ಮಾಡಿದ್ದು ಯಾಕೆ?
ಇಂದಿನ ಚಿಕ್ಕ ಹುಡುಗಿಯರಿಗೆ ನಾನು ಹೇಳುವುದಿಷ್ಟೇ. ದಯವಿಟ್ಟು ಚಿಕ್ಕಪುಟ್ಟ ಕನಸು ಕಾಣುವ ಬದಲು ದೊಡ್ಡದೊಡ್ಡ ಕನಸು ಕಾಣಿರಿ. ಚಿಕ್ಕ ಕನಸು ಕಂಡಿದ್ದ ನನಗೆ ಅಷ್ಟೋ ಇಷ್ಟೋ ಸಾಧಿಸಲು ಸಾಧ್ಯವಾಯಿತು. ನಾನು ಕಂಡಿದ್ದ ಪುಟ್ಟ ಮನೆಯ ಬದಲು ನನ್ನ ಸ್ವಂತದ ದೊಡ್ಡ ಮನೆಯೊಂದನ್ನು ಮಾಡಿಕೊಳ್ಳಲು ಸಾಧ್ಯವಾಯಿತು. ಆದರೆ, ನಾನು ಅಂದು ತುಂಬಾ ದೊಡ್ಡ ಕನಸೇನಾದರೂ ಕಂಡಿದ್ದರೆ ಇದಕ್ಕಿಂತ ತುಂಬಾ ಹೆಚ್ಚನ್ನು ಸಾಧಿಸಲು ಸಾಧ್ಯವಾಗುತ್ತಿತ್ತೇನೋ! ಹೀಗಾಗಿ ಇಂದಿನ ಜನರೇಶನ್ ಹುಡುಗಿಯರೇ, ನೀವು ಓದುವ ಕಾಲದಲ್ಲೇ ದೊಡ್ಡ ದೊಡ್ಡ ಕನಸನ್ನು ಕಂಡು ಅದನ್ನು ಸಾಧಿಸಿ, ನಿಮ್ಮ ಗುರಿ ತಲುಪಿ' ಎಂದಿದ್ದಾರೆ ಯಶೋದಾ ಖ್ಯಾತಿಯ ಸಮಂತಾ.
ಯಂಗ್‌ಸ್ಟರ್ಸ್‌ಗೆ ದೀಪಿಕಾ ಪಡುಕೋಣೆ ಲೈಫ್ ಟಿಪ್ಸ್; ಕೇಳಿ ತಲೆದೂಗಿದ ಯುವಜನರು ಹೇಳಿದ್ದೇನು?
ಅಂದಹಾಗೆ, ವಿಜಯ್ ದೇವರಕೊಂಡ (Vijay Deavarakonda)ಜತೆ ಖುಷಿ ಸಿನಿಮಾದಲ್ಲಿ ನಟಿಸಿದ ಬಳಿಕ ನಟಿ ಸಮಂತಾ, ಅನಾರೋಗ್ಯದ ಕಾರಣಕ್ಕೆ ಬೇರೆ ಯಾವುದೇ ಸಿನಿಮಾಕ್ಕೆ ಸಹಿ ಹಾಕಿಲ್ಲ. ಈಗ, ಆದಷ್ಟು ಬೇಗ ಅನಾರೋಗ್ಯದಿಂದ ಮುಕ್ತಿ ಹೊಂದಿ ಮತ್ತೆ ಸಿನಿಮಾ ನಟನೆಯನ್ನು ಮುಂದುವರಿಸುವ ಕನಸು ಕಾಣುತ್ತಿದ್ದಾರೆ ನಟಿ ಸಮಂತಾ. ನಟ ನಾಗ ಚೈತನ್ಯ (Naga Chaitanya)ಅವರನ್ನು ಮದುವೆಯಾಗಿದ್ದ ಸಮಂತಾ ಅವರಿಂದ ಡಿವೋರ್ಸ್ ಪಡೆದು ಸದ್ಯ ಒಂಟಿಯಾಗಿದ್ದಾರೆ. ಅವರ ಮುಂದಿನ ನಡೆಯ ಬಗ್ಗೆ ಅವರ ಫ್ಯಾನ್ಸ್‌ಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಸಾಯುವ ಮೊದಲು ಅದೆಂಥಾ ಲೈಪ್ ಲೆಸನ್ ಟಿಪ್ಸ್ ಕೊಟ್ಟು ಹೋಗಿದ್ದಾರೆ ನೋಡಿ ಸುಶಾಂತ್ ಸಿಂಗ್ ರಜಪೂತ್!