ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು ಎಂದ ಮರಿ ಬುಲೆಟ್‌: ಮೊದಲ ಚಿತ್ರದಲ್ಲೇ ಮಚ್ಚು ಹಿಡಿಯಲಿದ್ದಾರೆ ರಕ್ಷಕ್‌!

By Govindaraj S  |  First Published Apr 3, 2024, 12:17 PM IST

ಗುರು ಶಿಷ್ಯರು, ಬಿಗ್ ಬಾಸ್ ಸೀಸನ್ 10ರ ಮೂಲಕ ಮೋಡಿ ಮಾಡಿದ ರಕ್ಷಕ್ ಬುಲೆಟ್ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಶುರು ಮಾಡಲು ಸಜ್ಜಾಗಿದ್ದಾರೆ. ಬುಲೆಟ್ ಪ್ರಕಾಶ್ ಪುತ್ರ ಹೀರೋ ಆಗಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. 


ಗುರು ಶಿಷ್ಯರು, ಬಿಗ್ ಬಾಸ್ ಸೀಸನ್ 10ರ ಮೂಲಕ ಮೋಡಿ ಮಾಡಿದ ರಕ್ಷಕ್ ಬುಲೆಟ್ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಶುರು ಮಾಡಲು ಸಜ್ಜಾಗಿದ್ದಾರೆ. ಬುಲೆಟ್ ಪ್ರಕಾಶ್ ಪುತ್ರ ಹೀರೋ ಆಗಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಬುಲೆಟ್ ಪ್ರಕಾಶ್ 47ನೇ ವರ್ಷದ ಹುಟ್ಟುಹಬ್ಬದ ದಿನವೇ ರಕ್ಷಕ್ ತಮ್ಮ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಎಲ್ಲಾ ನನ್ನ ಆತ್ಮೀಯರೇ, (ಏ.2) ನನ್ನ ಪೂಜ್ಯ ತಂದೆ ದಿವಂಗತ ‘ಬುಲೆಟ್’ ಪ್ರಕಾಶ್ ಅವರ 47ನೇ ಜನ್ಮದಿನ. ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು. ನಿಜಕ್ಕೂ ನನಗೆ ಸಂತಸ ತಂದಿದೆ. 

ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರತಂಡಕ್ಕೂ ಹರಸಿ, ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ರಕ್ಷಕ್ ಬರೆದುಕೊಂಡಿದ್ದಾರೆ. ತಮ್ಮ ಮೊದಲ ಸಿನಿಮಾ ರಕ್ಷಕ್ ಮಾಸ್ ಆಗಿ ಎಂಟ್ರಿ ಕೊಡಲಿದ್ದಾರೆ. ಶೇರ್ ಮಾಡಿರುವ ಪೋಸ್ಟರ್‌ನಲ್ಲಿ ಲಾಂಗ್ ಕಾಣಿಸಿದೆ. ಹೀಗಾಗಿ, ಇದೊಂದು ರೌಡಿಸಂ ಕಥೆ ಇರಬಹುದು ಎಂದು ಅವರ ಫ್ಯಾನ್ಸ್ ಊಹಿಸುತ್ತಿದ್ದಾರೆ. ಗಣಪತಿ ವಿಸರ್ಜನೆಯ ದೃಶ್ಯವೂ ಇದೆ. ಈ ಎಲ್ಲಾ ಕಾರಣದಿಂದ ಸಿನಿಮಾದ ಪೋಸ್ಟರ್ ಕುತೂಹಲ ಮೂಡಿಸಿದೆ. 
 

 
 
 
 
 
 
 
 
 
 
 
 
 
 
 

Tap to resize

Latest Videos

A post shared by rakshak sena (@rakshak_bullet)


ಡೈಲಾಗ್‌ಗಳು ಪಂಚಿಂಗ್ ಆಗಿವೆ. ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜಾನ್ ಗಾಡಿಗಳು ಸೌಂಡ್ ಮಾಡ್ತಾವೆ. ಆದರೆ ಸೌಂಡ್ ಕೇಳ್ತಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದುನ್ನೆ. ‘ಬುಲೆಟ್’… ಇನ್ನುಂದೆ ನಂದೆ ರೌಂಡು, ನನ್ನದೇ ಸೌಂಡು ಎಂಬ ಡೈಲಾಗ್ ಹೈಲೆಟ್ ಆಗಿದೆ.  ‘RB 01’ ಚಿತ್ರಕ್ಕೆ ಶ್ರೀಹರಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಕ್ರಿಶ್ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಶ್ರೀಧರ್ ಕಶ್ಯಪ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.  ಶಿವು ನೃತ್ಯ ನಿರ್ದೇಶನ ಹಾಗೂ ಮಹೇಶ್ ಗಂಗಾವತಿ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. ಇನ್ನೂ ಬುಲೆಟ್ ಪ್ರಕಾಶ್ ಅವರು ಬದುಕಿದ್ದಷ್ಟು ದಿನ 'ರಾಯಲ್' ಆಗಿ ಬದುಕಿದ್ದವರು. ಹೀಗಾಗಿ ರಕ್ಷಕ್ ತಮ್ಮ ಚಿತ್ರಕ್ಕೆ ರಾಯಲ್ ಎನ್ ಫೀಲ್ಡ್ ಎಂದು ನಾಮಕರಣವನ್ನ ಮಾಡಿದರು ಮಾಡಬಹುದು ಅನ್ನುವ ಅನುಮಾನ ಕೂಡ ಅನೇಕರಲ್ಲಿದೆ. 

ಅನಿಮಲ್ ಚಿತ್ರದ ಹಾಡಿಗೆ ಕಿಶನ್-ಚೈತ್ರಾ ಆಚಾರ್ ರೊಮ್ಯಾಂಟಿಕ್​​​ ಡ್ಯಾನ್ಸ್: ವಾವ್.. ಸೂಪರ್​ ಕೆಮಿಸ್ಟ್ರಿ ಎಂದ ಫ್ಯಾನ್ಸ್!

ಇದೆಲ್ಲದರ ಜೊತೆಯಲ್ಲಿ ಬುಲೆಟ್ ಪ್ರಕಾಶ್ ಅವರ ಪುತ್ರನ ಮೊದಲ ಚಿತ್ರಕ್ಕೆ ನಾಯಕಿಯಾರಾಗಬಹುದು ಎಂಬ ಕುತೂಹಲವೂ ಇದೆ. ಉಳಿದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಒಟ್ಟಿನಲ್ಲಿ ಸದ್ಯಕ್ಕೆ ರಕ್ಷಕ್ ಬುಲೆಟ್ ಹೇಳಿದ್ದನ್ನ ಮಾಡಿ ತೋರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನ ಇಟ್ಟಿದ್ದಾರೆ. ತಮ್ಮ ಮೊದಲ ಚಿತ್ರದ ಘೋಷಣೆಯನ್ನ ಮಾಡಿದ್ದಾರೆ. ಉಳಿದಿರುವ ಎಲ್ಲ ವಿವರಗಳನ್ನೂ ಸವಿಸ್ತಾರವಾಗಿ ಸದ್ಯದಲ್ಲಿಯೇ ಹಂಚಿಕೊಳ್ಳಲಿದ್ದಾರೆ. ಸದ್ಯ ರಕ್ಷಕ್ ಲುಕ್, ಪಾತ್ರ ಸಿನಿಮಾದಲ್ಲಿ ಹೇಗಿರಲಿದೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ.

click me!