ನಟ ರವಿಚಂದ್ರನ್ ಕಿರುತೆರೆ ಶೋವೊಂದರಲ್ಲಿ ಈ ಬಗ್ಗೆ ಮಾತನ್ನಾಡಿದ್ದಾರೆ. ತಮ್ಮ ಸಿನಿಮಾ ಬಗ್ಗೆ, ಫ್ಯಾಮಿಲಿ ಬಗ್ಗೆ ಮಾತನ್ನಾಡಿದ್ದಾರೆ. ಹಾಗಿದ್ದರೆ ನಟ ರವಿಚಂದ್ರನ್ ಹೇಳೀದ್ದೇನು? ಇಲ್ಲಿದೆ ನೋಡಿ ಕ್ರೇಜಿ ಸ್ಟಾರ್ ಮಾತುಗಳು..
ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ (V Ravichandran)ಬಗ್ಗೆ ಹೇಳಹೊರಟರೆ ಅದಕ್ಕೇ ಒಂದು ದಿನ ಪೂರ್ತಿ ಬೇಕು. ಅವರ ಅಪ್ಪ ವೀರಾಸ್ವಾಮಿಯವರೂ ನಿರ್ಮಾಪಕರೇ ಆಗಿದ್ದವರು. ಇನ್ನು ರವಿಚಂದ್ರನ್ ಅವರಂತೂ ನಟ, ನಿರ್ಮಾಪಕ ಹಾಗೂ ನಿರ್ದೇಶಕರೂ ಕೂಡ ಹೌದು. ಆದರೆ, ಹಿಂದೊಮ್ಮೆ ಕನ್ನಡ ಚಿತ್ರರಂಗಕ್ಕೆ ಕೋಟಿ ಕೋಟಿ ಬಂಡವಾಳ ಹಾಕಿ ಸಿನಿಮಾ ಕೊಟ್ಟ ರವಿಚಂದ್ರನ್ ಅವರು ಇಂದು ಬಡತನದ ನೋವಿನಲ್ಲಿ ಬದುಕುತ್ತಿದ್ದಾರೆ ಎಂಬುದು ದುರಂತವೇ ಸರಿ. ಆದರೆ, ಮಾಡೋದೇನು? ಅವರೇ ಹೇಳಿದ ಹಾಗೆ ಅದು ಹಣೆಬರಹವೇ ಇರಬಹುದು.
ನಟ ರವಿಚಂದ್ರನ್ ಅವರು ಕಿರುತೆರೆ ಶೋವೊಂದರ ವೇದಿಕೆಯಲ್ಲಿ ಈ ಬಗ್ಗೆ ಮಾತನ್ನಾಡಿದ್ದಾರೆ. ತಮ್ಮ ಸಿನಿಮಾ ಬಗ್ಗೆ, ಫ್ಯಾಮಿಲಿ ಬಗ್ಗೆ ಮಾತನ್ನಾಡಿದ್ದಾರೆ. ಹಾಗಿದ್ದರೆ ನಟ ರವಿಚಂದ್ರನ್ ಹೇಳೀದ್ದೇನು? ಇಲ್ಲಿದೆ ನೋಡಿ ಕ್ರೇಜಿ ಸ್ಟಾರ್ ಮಾತುಗಳು.. 'ನಾನು ಯಾರೊಬ್ಬನಿಗೆ ನ್ಯೂಸ್‌ಗೆ ಸಂಬಳ ಕೊಟ್ಟು ಇಟ್ಕೊಂಡಿದ್ನೋ ಅವ್ನು ಇವತ್ತು ನಂಗೆ ಒಂದೂವರೆ ಕೋಟಿ ರೂಪಾಯಿ ಕೊಟ್ಟು, ನನ್ನ ಸಿನಿಮಾಗೆ ಆಕ್ಟ್ ಮಾಡೋಕೆ ಕರಿತಾನೆ ಅನ್ನೋ ಲೆವಲ್‌ಗೆ ನನ್ ಜೊತೆ ಇರೋ ಹುಡುಗ್ರು ಬೆಳೆದಿದಾರೆ ಇವತ್ತು..
ಸೂರ್ಯ-ತ್ರಿಷಾ ಜೋಡಿಗೆ ಮಹಾನ್ ಕಷ್ಟ..! 500 ಜನರ ಮಧ್ಯೆ ಅದೇನೋ ಮಾಡ್ಬೇಕಂತೆ..!
ನಂಗೆ ಎಷ್ಟೋ ಜನ ಹೇಳ್ತಾ ಇರ್ತಾರೆ, ಇವ್ರು ಮಾತೆತ್ತಿದ್ರೆ ಪ್ರೇಮಲೋಕ, ರಣಧೀರ ಅಂತ ಇರ್ತಾರೆ.. ಅಯ್ಯೋ ಹುಟ್ಸಿರೋ ಅಪ್ಪ-ಅಮ್ಮನ ಯಾರಾದ್ರೂ ಬದಲಾಯಿಸೋಕೆ ಆಗುತ್ತೇನ್ರೀ..? ಯಾರು ಬದಲಾಯಸೋಕೆ ಆಗುತ್ತೆ? ಅದು ನಮ್ಮನ್ನ ಇಲ್ಲಿಯವರೆಗೂ ಕರ್ಕೊಂಡು ಬಂದು ಬಿಟ್ಟಿದೆ..ಇವತ್ತಿಗೂ ಆ ಸಿನಿಮಾದ ಹಾಡನ್ನು ನೀವು ಸ್ಟೇಜ್ ಮೇಲೆ ಹಾಡ್ತೀರಾ ಅಂದ್ರೆ, ಆ ಚಿತ್ರ ಅಷ್ಟು ಕೆಲಸ ಮಾಡಿದೆ.
ಇವತ್ತು ಯಾರೆಲ್ಲಾ ಕಾಮೆಂಟ್ ಮಾಡಿ ಮಾತಾಡ್ತೀರೋ ಅವ್ರೆಲ್ಲಾ ಆ ಸಿನಿಮಾದಿಂದಾನೋ ಹುಟ್ಟಿರೋದು.. ಥಿಯೇಟರ್‌ನಲ್ಲಿ ಆ ಸಿನಿಮಾ ನೋಡಿ ನಮ್ ಅಪ್ಪ-ಅಮ್ಮ ಪ್ರೀತಿಸೋದ ಕಲಿತ್ರು.. ನಂಗೆ ಜೀವನದಲ್ಲಿ ಭಯ ಅನ್ನೋದೇ ಗೊತ್ತಿಲ್ಲ.. ಭಯ ಅನ್ನೋದು ಹುಟ್ಕೊಂಡಿದ್ರೆ ನನ್ ಮಕ್ಕಳು ಜೀವನದಲ್ಲಿ ಬಂದಾಗ ಅಷ್ಟೇ..
ಮೊಣಕಾಲು ಮುರಿದರೂ Veer Savarkar ಪಾತ್ರಕ್ಕೆ ಜೀವ ತುಂಬಿದ ರಣದೀಪ್ ಹೂಡಾ, ಗ್ರೇಟ್!
ನಾವೇನೋ ಬದುಕಿಬಿಡ್ತೀವಿ, ಮಕ್ಕಳಿಗೋಸ್ಕರ ಏನು ಮಾಡೋದು? ಅವ್ರಿಗೇನಾದ್ರೂ ಮಾಡಿಡ್ಬೇಕಲ್ಲಾ, ಅವ್ರಿಗೇನು ಮಾಡಿಡೋದು? ಇದೊಂದೇ.. ನಾನು ಯೋಚೆನೆನೇ ಮಾಡಿರ್ಲಿಲ್ಲ.. ನಾನು ಹಾಗೇನಾದ್ರೂ ಯೋಚ್ನೆ ಮಾಡಿದ್ದಿದ್ರೆ, 1988 ರಲ್ಲಿ 58 ಎಕರೆ ಸ್ಟೂಡಿಯೋ ಕಟ್ಬೇಕು ಅಂತ ಡಿಸೈನ್ ಕೊಟ್ಟಿದ್ದು ನಾನು 1988 ರಲ್ಲೇ.. ಆವತ್ತು ನಮ್ಮಪ್ಪ ಮನಸ್ಸು ಮಾಡಿದ್ರೆ ಆಗಿರೋದು.. ನಮಗೆ ಮಣ್ಣಿನ ಋಣನೇ ಇಲ್ಲ ಜೀವನದಲ್ಲಿ..ಕಂಠೀರವ ಸ್ಟೂಡಿಯೋ ಹತ್ರ ಆಗ ಹತ್ತು ಸಾವಿರಕ್ಕೆ ಒಂದು ಎಕರೆ ಬರೋದು. ಆದ್ರೆ, ನಮ್ಮ ಫ್ಯಾಮಿಲಿಗೆ ವ್ಯಾಪಾರದ ಬುದ್ಧಿನೇ ಇರ್ಲಿಲ್ಲ.