ದೊಡ್ಮನೆಯ ಮೊದಲ ಲವ್ ಸ್ಟೋರಿ ರಿವೀಲ್; ಶಿವಣ್ಣನ ಮದುವೆಯಲ್ಲೇ ನಡೆದಿತ್ತು ಕಣ್ಣಾಮುಚ್ಚಾಲೆ!

By Shriram Bhat  |  First Published Nov 23, 2024, 1:48 PM IST

ರಾಘವೇಂದ್ರ ರಾಜ್‌ಕುಮಾರ್ ಅವರು ಸಿನಿಮಾಗೆ ಎಂಟ್ರಿ ಕೊಡುವ ಸಮಯ ಬಂದಾಗಿತ್ತು. ಡಾ ರಾಜ್‌ ಅವರು ತಮ್ಮ ಮಕ್ಕಳು ಸಿನಿಮಾಗೆ ಬರುವ ಮೊದಲು ಮದುವೆ ಆಗಿರಬೇಕು ಎಂದು ಫರ್ಮಾನು ಹೊರಡಿಸಿದ್ದರಂತೆ. ಅದರಂತೆ, ತಮ್ಮ ಎರಡನೇ ಮಗ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಹೆಣ್ಣು ಹುಡುಕಬೇಕು, ಆದರೆ ಅವಳು..


ಡಾ ರಾಜ್‌ಕುಮಾರ್ (Dr Rajkumar) ಹಿರಿಯ ಮಗ ಶಿವರಾಜ್‌ಕುಮಾರ್ (Shivarajkumar)ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ (Bangarappa) ಮಗಳು ಗೀತಾ ಮದುವೆಯಲ್ಲಿ ಒಬ್ಬರು ಲಕ್ಷಣವಾಗಿದ್ದ ಹುಡುಗಿ ಓಡಾಡುತ್ತಿದ್ದರು. ಆ ಹುಡುಗಿ ನೋಡಿ ಶಿವರಾಜ್‌ಕುಮಾರ್ ತಮ್ಮ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಅವರಿಗೆ ಮೊದಲ ನೋಟದಲ್ಲೇ ಮನಸ್ಸಾಯಿತು. ಅವರನ್ನೇ ಮದುವೆಯಾಗಬೇಕು ಎಂದು ಆಗಲೇ ಲೆಕ್ಕಾಚಾರ ಹಾಕಿದ್ದರು ರಾಘವೇಂದ್ರ ರಾಜ್‌ಕುಮಾರ್. ಆದರೆ, ಅದಕ್ಕೂ ಮೊದಲು ಮಾಡಬೇಕಾದ ಬಹಳಷ್ಟು ಕೆಲಸಗಳಿದ್ದವು. 

ಮೊದಲು ಆ ಹುಡುಗಿಯನ್ನು ಒಪ್ಪಿಸಬೇಕಲ್ಲ! ಹೌದು, ಶಿವಣ್ಣನ ಮದುವೆ ಮುಗಿಯುವಷ್ಟರಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರು ಆ ಹುಡುಗಿಯ ಸ್ನೇಹ ಸಂಪಾದಿಸಿಸಿದ್ದರು. ಕೆಲವು ಕಾಲದ ಬಳಿಕ, ಆ ಹುಡುಗಿ ಬಳಿ ರಾಘವೇಂದ್ರ ರಾಜ್‌ಕುಮಾರ್ ಅವರು ಪ್ರೇಮ ನಿವೇದನೆ ಮಾಡಿಕೊಂಡಾಗ ಆ ಮುಗ್ಧ ಹುಡುಗಿಯ ಮನದಲ್ಲಿ ಅನೇಕ ಪ್ರಶ್ನೆಗಳಿದ್ದುದು ತಿಳಿಯಿತು. ಆ ಹುಡುಗಿಯೇ ಅದನ್ನು ರಾಘವೇಂದ್ರ ರಾಜ್‌ಕುಮಾರ್ ಬಳಿ ಹೇಳಿಕೊಂಡರು. ಹಾಗಿದ್ದರೆ ಅದೆಂಥಹ ಪ್ರಶ್ನೆ?

Tap to resize

Latest Videos

undefined

ರೀಲ್‌ನಲ್ಲಿ 'ರಿಯಲೀ ಸೋ ಸ್ವೀಟ್' ಎಂದಿದ್ದ ಜೋಡಿ ರಿಯಲ್‌ನಲ್ಲಿ ಹೇಗಾಗ್ಬಿಟ್ರು ನೋಡಿ!

ಮೊದಲನೆಯದಾಗಿ, ಶಿವರಾಜ್‌ಕುಮಾರ್ ಮದುವೆಯಾಗಿದ್ದು ಸೊರಬದ ಶ್ರೀಮಂತ ಕುಟುಂಬದ, ಮಾಜಿ ಮುಖ್ಯಮಂತ್ರಿ ಮಗಳು ಗೀತಾರನ್ನು. ಆದರೆ, ತಾನು ಮಧ್ಯಮ ವರ್ಗದ ಹುಡುಗಿ. ಡಾ ರಾಜ್‌ಕುಮಾರ್ ಕುಟುಂಬ ತಮ್ಮಂತಹ ಸಾಮಾನ್ಯರ ಸಂಬಂಧ ಬೆಳೆಸುತ್ತಾ ಅನ್ನೋದು ಆ ಹುಡುಗಿ ಕೇಳಿದ್ದ ಮುಖ್ಯ ಪ್ರಶ್ನೆ. ಅದಕ್ಕೆ ರಾಘವೇಂದ್ರ ರಾಜ್‌ಕುಮಾರ್ 'ಅದೆಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ, ನನ್ನ ಅಪ್ಪ-ಅಮ್ಮನನ್ನು ಒಪ್ಪಿಸುವ ಜವಾಬ್ದಾರಿ ನನ್ನದು. ಆದರೆ ನಿನಗೆ ಒಪ್ಪಿಗೆ ಇದೆಯಾ ಎಂದು ಕೇಳಲು ಆ ಹುಡುಗಿ 'ನಾನು ಒಪ್ಪಿದ್ದೇನೆ' ಎಂದಿದ್ದಾರೆ. 

ಅಷ್ಟರಲ್ಲಿ, ರಾಘವೇಂದ್ರ ರಾಜ್‌ಕುಮಾರ್ ಅವರು ಸಿನಿಮಾಗೆ ಎಂಟ್ರಿ ಕೊಡುವ ಸಮಯ ಬಂದಾಗಿತ್ತು. ಡಾ ರಾಜ್‌ ಅವರು ತಮ್ಮ ಮಕ್ಕಳು ಸಿನಿಮಾಗೆ ಬರುವ ಮೊದಲು ಮದುವೆ ಆಗಿರಬೇಕು ಎಂದು ಫರ್ಮಾನು ಹೊರಡಿಸಿದ್ದರಂತೆ. ಅದರಂತೆ, ತಮ್ಮ ಎರಡನೇ ಮಗ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಹೆಣ್ಣು ಹುಡುಕಬೇಕು, ಆದರೆ ಅವಳು ಮಧ್ಯಮ ವರ್ಗದ ಮನೆಯ ಹುಡುಗಿಯಾಗಿರಬೇಕು ಎಂದಾಗ, ಇದೇ ಸಮಯವೆಂದು ರಾಘವೇಂದ್ರ ಅವರು ಹೋಗಿ ತಮ್ಮ ಅಪ್ಪಾಜಿಗೆ ತಮ್ಮ ಲವ್ ಸ್ಟೋರಿ ತಿಳಿಸಿದ್ದಾರೆ. 

ಸದಾಶಿವನಗರ ಮನೆ ಒಡೆಸಿದ ಪುನೀತ್: ಜನರ ಆರೋಪಕ್ಕೆ ಕೊಟ್ಟ ಉತ್ತರಕ್ಕೆ ಜೈ ಎಂದ ಫ್ಯಾನ್ಸ್!

ಡಾ ರಾಜ್‌ ಹಾಗೂ ಪಾರ್ವತಮ್ಮ ಅದಕ್ಕೊಪ್ಪಿದ್ದಾರೆ. ಈ ಮೂಲಕ ರಾಘವೇಂದ್ರ ರಾಜ್‌ಕುಮಾರ್ ಮದುವೆ ತಾವು ಮೆಚ್ಚಿದ ಹುಡುಗಿ ಜೊತೆಗೇ ಆಗಿದೆ. ಆ ಹುಡುಗಿ ಬೇರಾರೂ ಅಲ್ಲ, ಈಗ ರಾಘಣ್ಣನ ಪತ್ನಿಯಾಗಿರುವ ಮಂಗಳಾ ಅವರೇ ಆಗಿದ್ದಾರೆ. ಆದರೆ, ಈ ಮಂಗಳಾ ಯಾರು ಎಂಬುದು ಬಹುತೇಕರಿಗೆ ಗೊತ್ತಿಲ್ಲ, ಅವರು ಬೇರಾರು ಅಲ್ಲ, ಶಿವರಾಜ್‌ಕುಮಾರ್ ಪತ್ನಿ ಗೀತಾರ ತಂಗಿ. ಅಂದರೆ, ಕಸಿನ್, ಸ್ವಂತ ಚಿಕ್ಕಮ್ಮನ ಮಗಳು! ಸಿದ್ದಾಪುರದ ಮಧ್ಯಮದ ವರ್ಗದ ಹುಡುಗಿ ದೊಡ್ಮನೆ ಸೊಸೆ!

ರಾಘವೇಂದ್ರ ರಾಜ್‌ಕುಮಾರ್ ಹಾಗೂ ಮಂಗಳಾ ಅವರಿಬ್ಬರ ಕ್ಯೂಟ್ ಲವ್ ಸ್ಟೋರಿ ಬಗ್ಗೆ ನಿಮಗೇನಾದ್ರೂ ಗೊತ್ತಿತ್ತಾ? ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಹುಡುಗಿ ಮಂಗಳಾ ಅವರು ಡಾ ರಾಜ್‌ಕುಮಾರ್ ಅವರ ಎರಡನೆಯ ಸೊಸೆಯಾಗಿದ್ದು ಹೀಗೆ! ಮಧ್ಯಮವರ್ಗದ ಮಂಗಳಾ ಅಣ್ಣಾವ್ರು ಎರಡನೇ ಮಗ ರಾಘವೇಂದ್ರ ರಾಜ್‌ಕುಮಾರ್ ಕೈ ಹಿಡಿದಿದ್ದು ಹೀಗೆ..!  ಅಂದಹಾಗೆ, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಮಂಗಳಾ ಅವರಿಗೆ ಇಬ್ಬರು ಗಂಡು ಮಕ್ಕಳು. ಒಬ್ಬರು ವಿನಯ್ ರಾಘವೇಂದ್ರ ಹಾಗೂ ಇನ್ನೊಬ್ಬರು ಗುರು ರಾಘವೇಂದ್ರ. 

'ಊಟ ಇಲ್ಲ ಹೋಗು' ಅಂತ ತಳ್ಳಿದಾಗ ಉಪೇಂದ್ರ ಏನ್ ಮಾಡಿದ್ರು, ಬಳಿಕ ಏನಾಯ್ತು? 

ಸಿನಿಮಾ ಎಂಟ್ರಿಯ ವೇಳೆ ರಾಘವೇಂದ್ರ ರಾಜ್‌ಕುಮಾರ್-ಮಂಗಳಾ ದಂಪತಿಯ ಈ ಇಬ್ಬರೂ ಮಕ್ಕಳು ತಮ್ಮ ಹೆಸರನ್ನು ತಾತನ ಹೆಸರಿನೊಂದಿಗೆ ಜೋಡಿಸಿಕೊಂಡಿದ್ದಾರೆ. ಅದರಲ್ಲಿ ಗುರು ಅವರು ತಮ್ಮ ಹೆಸರನ್ನು ಯುವ ಎಂದು ಬದಲಾಯಿಸಿಕೊಂಡಿದ್ದಾರೆ. ಈಗ ಅವರು ವಿನಯ್ ರಾಜ್‌ಕುಮಾರ್ ಹಾಗೂ ಯುವ ರಾಜ್‌ಕುಮಾರ್! ಪುನೀತ್ ಲವ್ ಸ್ಟೋರಿಗಿಂತ ಮೊದಲು ದೊಡ್ಮನೆಯಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರ ಲವ್ ಸ್ಟೋರಿ ನಡೆದಿತ್ತು ಎಂಬುದು ಬಹುತೇರಿಗೆ ಗೊತ್ತಿರಲಿಲ್ಲ ಅನ್ನಿಸುತ್ತೆ, ಬಿಡಿ ಈಗ ಗೊತ್ತಾಯ್ತಲ್ಲ!

click me!