ನೋಡಲು ಥೇಟ್‌ ಬಾಲ್ಯದ ಅಪ್ಪು ಈ ಬಾಲಕ! ದನಿ ಕೂಡ ಸೇಮ್‌ ಟು ಸೇಮ್‌... ಅವನ ಮಾತು ಕೇಳಿ...

By Suchethana D  |  First Published Nov 23, 2024, 9:04 AM IST

ಬಾಲ್ಯದ ಪುನೀತ್‌ ರಾಜ್‌ಕುಮಾರ್ ಅವರನ್ನೇ ಹೋಲುವ ಬಾಲಕನೊಬ್ಬ ಕುಂದಾಪುರದಲ್ಲಿ ಇದ್ದು, ಆತ ಈಗ ಸೋಷಿಯಲ್‌ ಮೀಡಿಯಾದ ಹೀರೊ. ಆತನ ಮಾತು ಕೇಳಿ...
 


ಜಗತ್ತಿನಲ್ಲಿ ಒಂದೇ ರೀತಿಯ ಏಳು ಮಂದಿ ಇರುತ್ತಾರೆ. ಕೆಲವೊಮ್ಮೆ ಇದು ನಿಜ ಕೂಡ ಅನ್ನಿಸಿಬಿಡುತ್ತದೆ. ಯಾರನ್ನೋ ನೋಡಿದಾಗ ಅವರು, ಇವರು ಹೌದಾ, ಅಲ್ವಾ ಎಂದು ಎನ್ನಿಸುವುದು ಉಂಟು. ಇಂಥ ಹಲವು ಸನ್ನಿವೇಶಗಳು   ಎದುರಾಗುವುದು ಉಂಟು. ಇನ್ನು ಚಿತ್ರ ನಟರ ವಿಷಯಕ್ಕೆ ಬರುವುದಾದರೆ, ಕೆಲವರ ಮುಖಚಹರೆ ಕೆಲವು ಚಿತ್ರನಟರನ್ನು ಹೋಲುವುದು ಇದೆ. ಅಂಥ ಸಂದರ್ಭದಲ್ಲಿ ಆ ನಟ-ನಟಿಯರು ಚಿತ್ರ ತಾರೆಯರಂತೆ, ವೇಷ-ಭೂಷಣ, ಹಾವ-ಭಾವ, ಮಾತು, ಹೇರ್‍‌ಸ್ಟೈಲ್‌, ಅವರ ವಿಶೇಷ ಪೋಸ್‌ಗಳು... ಹೀಗೆ ಎಲ್ಲವನ್ನೂ ಅನುಕರಿಸಿ ಅವರಂತೆಯೇ ಕಾಣಿಸತೊಡಗುತ್ತಾರೆ. ಕೆಲವೊಮ್ಮೆ ಅಸಲಿ ನಕಲಿ ನಡುವೆ ಕನ್‌ಫ್ಯೂಸ್‌ ಆಗುವಷ್ಟರ ಮಟ್ಟಿಗೆ ಈ ನಕಲಿ ತಾರೆಗಳ ಹಾವ ಭಾವಗಳು ಇರುತ್ತವೆ. ಆದರೆ ಅವರು ಅದನ್ನು ಕೃತಕವಾಗಿ ಸೃಷ್ಟಿಸಿಕೊಂಡಿರುತ್ತಾರೆ.

ಆದರೆ ಇಲ್ಲೊಬ್ಬ ಬಾಲಕ, ಸೇಮ್‌ ಟು ಸೇಮ್ ಪುನೀತ್‌ ರಾಜ್‌ಕುಮಾರ್ ಅವರನ್ನೇ ಹೋಲುತ್ತಿದ್ದಾನೆ. ಅಂದರೆ, ಬಾಲ್ಯದಲ್ಲಿ ಲೋಹಿತ್‌ ಹೆಸರಿನಲ್ಲಿ ಕೆಲವು ಚಿತ್ರಗಳಲ್ಲಿ ಬಾಲ ನಟನಾಗಿ ನಟಿಸಿದ್ದ ಪುನೀತ್‌ ರಾಜ್‌ ಎಲ್ಲರಿಗೂ ನೆನಪಿರಬಹುದು. ಆರು ತಿಂಗಳ ಶಿಶುವಾಗಿ, ಅವರು ವಿ. ಸೋಮಶೇಖರ್ ಅವರ ಪ್ರೇಮದ ಕಾಣಿಕೆಯಲ್ಲಿಯೂ ಕಾಣಿಸಿಕೊಂಡಿದ್ದ ಪುನೀತ್‌ ಅವರು,  ಒಂದು ವರ್ಷದವರಾಗಿದ್ದಾಗ ಸನಾದಿ ಅಪ್ಪಣ್ಣ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು.  ಆದರೆ ಅವರಿಗೆ ಹೆಸರು, ಪ್ರಶಸ್ತಿ ಜೊತೆಗೆ ಅಪಾರ ಅಭಿಮಾನಿಗಳನ್ನು ಗಳಿಸಿಕೊಟ್ಟ ಚಿತ್ರಗಳು ಬೆಟ್ಟದ ಹೂವು, ಭಕ್ತ ಪ್ರಹ್ಲಾದ, ಎರಡು ನಕ್ಷತ್ರ ಹೀಗೆ ಕೆಲವು ಚಿತ್ರಗಳು. ಇದರಲ್ಲಿ  ಬಾಲಕ ಲೋಹಿತ್‌ ನಟನೆ ಇಂದಿಗೂ ಕಣ್ಣುಕಟ್ಟುವಂತಿದೆ. ಇದೀಗ ಥೇಟ್‌ ಅದೇ ಬಾಲಕ ಲೋಹಿತ್‌ನನ್ನೇ ಹೋಲುತ್ತಿದ್ದಾನೆ ಕುಂದಾಪುರದ ರಟ್ಟಾಡಿಯ ಮಣಿಕಂಠ ಎನ್ನುವ ಬಾಲಕ!

Tap to resize

Latest Videos

ಚಿನ್ನದ ವಿಷ್ಯದಲ್ಲಿ ಶಿವಣ್ಣ-ಅಪ್ಪು ಸೇರಿ ಜನರನ್ನು ಕನ್‌ಫ್ಯೂಸ್‌ ಮಾಡ್ತಿದ್ದಾರಾ? ಶಾಕಿಂಗ್‌ ಪ್ರಶ್ನೆಗೆ ನಟ ಹೇಳಿದ್ದೇನು?

ಇವನ ಹಾವ-ಭಾವ, ಇವನ ಸ್ಟೈಲು, ಅಷ್ಟೇ ಏಕೆ ಇವನ ಹಲ್ಲು ಮಾತ್ರವಲ್ಲದೇ ಇವನ ದನಿ ಕೂಡ ಬಾಲಕ ಅಪ್ಪುನಂತೇ ಇದೆ! ಅಭಿಷೇಕ್ ತೀರ್ಥಹಳ್ಳಿ ಎನ್ನುವವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈತನ ವಿಡಿಯೋ ಶೇರ್‍‌ ಮಾಡಿದ್ದಾರೆ. ವನಗಿರಿ ರಂಗು ಎನ್ನುವ ಪ್ರಾಜೆಕ್ಟ್‌ ಮೇರೆಗೆ ರಡ್ಡಾಡಿ ಶಾಲೆಗೆ ಬಂದಿದ್ವಿ. ಗ್ರಾಮೀಣ ವಿದ್ಯಾರ್ಥಿಗಳಿಗೆ ಕಲೆಯನ್ನು ಕಲಿಸುವ ಕಾರ್ಯಕ್ರಮ ಇದು. ಇಲ್ಲಿ ಈ ಬಾಲಕ ಸಿಕ್ಕಿದ. ಇವನನ್ನು ನೋಡಿದಾಗ ಸೇಮ್‌ ಅಪ್ಪು ಸರ್‍‌ ನೋಡಿದ ಹಾಗೆ ಕಾಣಿಸಿದ. ಅದಕ್ಕಾಗಿ ಮಾತನಾಡಿಸಿದೆ ಎಂದು ಅಭಿಷೇಕ್‌ ಅವರು ಈವಿಡಿಯೋದಲ್ಲಿ ಹೇಳಿದ್ದಾರೆ.

ಬಳಿಕ ಬಾಲಕನನ್ನು ಮಾತನಾಡಿಸಿದ್ದಾರೆ. ನೀನು ಸೇಮ್‌ ಅಪ್ಪು ಸರ್‍‌ ಥರ ಇದ್ಯಾ, ನಿನಗೆ ಯಾರೂ ಇದನ್ನು ಹೇಳಲಿಲ್ವಾ ಎಂದು ಕೇಳಿದಾಗ, ಬಾಲಕ ಗುಂಡಣ್ಣ ಹೇಳಿದ್ದ ಎಂದಿದ್ದಾನೆ. ಕೊನೆಗೆ ನಿನಗೆ ದೊಡ್ಡವನಾದ ಮೇಲೆ ಏನು ಆಗಲು ಇಷ್ಟ ಎಂದು ಕೇಳಿದಾಗ, ಸರ್‍‌ ಆಗಬೇಕು ಎಂದು ಹೇಳಿದ್ದಾನೆ.  ಒಟ್ಟಿನಲ್ಲಿ ಬಾಲ್ಯದ ಅಪ್ಪು ತದ್ರೂಪಿ ಸದ್ಯ ಸೋಷಿಯಲ್‌ ಮೀಡಿಯಾದ ಹೈಲೈಟ್‌ ಆಗಿದ್ದಾನೆ. ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದು, ಬಾಲ್ಯದ ಅಪ್ಪುವನ್ನೇ ಕಣ್ತುಂಬಿಸಿಕೊಂಡ ಹಾಗಾಯ್ತು ಎನ್ನುತ್ತಿದ್ದಾರೆ. ಇವನ ದನಿ ಕೂಡ ಪುನೀತ್‌ ಥರನೇ ಇದೆ ಎಂದು ಹೇಳುತ್ತಿದ್ದಾರೆ. 

ಪುನೀತ್ ರಾಜ್​​ರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ ನೋವಿನ ನುಡಿ... ಕೈ ಮೇಲೆ ಅಪ್ಪು ಹಚ್ಚೆ...

click me!