ರೀಲ್‌ನಲ್ಲಿ 'ರಿಯಲೀ ಸೋ ಸ್ವೀಟ್' ಎಂದಿದ್ದ ಜೋಡಿ ರಿಯಲ್‌ನಲ್ಲಿ ಹೇಗಾಗ್ಬಿಟ್ರು ನೋಡಿ!

Published : Nov 23, 2024, 12:08 PM ISTUpdated : Nov 23, 2024, 12:09 PM IST
ರೀಲ್‌ನಲ್ಲಿ 'ರಿಯಲೀ ಸೋ ಸ್ವೀಟ್' ಎಂದಿದ್ದ ಜೋಡಿ ರಿಯಲ್‌ನಲ್ಲಿ ಹೇಗಾಗ್ಬಿಟ್ರು ನೋಡಿ!

ಸಾರಾಂಶ

ನಯನತಾರಾ ಕುಳಿತ ಸೋಫಾ ಪಕ್ಕದಲ್ಲಿ ಇನ್ನೊಂದು ಸೋಫಾ. ಅಲ್ಲಿ ರಜನಿ ಅಳಿಯ ವಿರಾಜಮಾನ. ಇಬ್ಬರೂ ಕೈ ಚಾಚಿದರೆ ನಿಲುಕುವಷ್ಟು ಹತ್ತಿರ. ಆದರೆ ಮನಸು ಹಳವಂಡವಾದ ಮೇಲೆ ಮುಖ ನೋಡಲು ಆಗುತ್ತಾ? ಪರಿಣಾಮ...ಇಬ್ಬರೂ ಹಲ್ಲು ತೆಗೆಯಲಿಲ್ಲ...ಇನ್ನು ಮಾತಂತೂ ದೂರದ ಮಾತು!..

ನಟ ಧನುಶ್ ಹಾಗೂ ನಟಿ ನಯನತಾರಾ ಅಕ್ಕ ಪಕ್ಕ ಕುಳಿತಿದ್ದಾರೆ. ಆದರೆ ಮುಖ ನೋಡಲಿಲ್ಲ. ಇನ್ನು ಮಾತಂತೂ ದೂರ ದೂರ. ಇದಕ್ಕೆಲ್ಲ ಧನುಶ್ ಹಾಕಿದ ಹತ್ತು ಕೋಟಿ ಕೇಸು ಕಾರಣ. ಹಾಗೆಯೇ 'ಧನುಶ್ ಬಡಾ ನೌಟಂಕಿ' ಎಂದು ನಯನತಾರಾ ಉತ್ತರಿಸಿದ್ದು ಇನ್ನೊಂದು ಹಗರಣ. ಮುಖ ಸಿಂಡರಿಸಿಕೊಂಡು ಕುಂತಿದ್ದೆಲ್ಲಿ ಮಾಜಿ ಜೋಡಿಗಳು ? ಏನಂದರು ಜನರು ? ಅದಿಲ್ಲಿದೆ ನೋಡಿ...

ನಯನತಾರಾ ಗಂಡನ ಜೊತೆ ನಿರ್ಮಾಪಕ ಆಕಾಶ್ ಭಾಸ್ಕರನ್ ಮದುವೆಗೆ ಕಾಲಿಟ್ಟರು. ವೇದಿಕೆ ಮುಂಭಾಗದ ಸೋಫಾದಲ್ಲಿ ಕುಳಿತರು. ಸೇಮ್ ಟೈಮ್ ನಟ ಧನುಶ್ ಕೂಡ ಎಂಟ್ರಿ ಕೊಡಬೇಕೆ ? ನಯನತಾರಾ ಕುಳಿತ ಸೋಫಾ ಪಕ್ಕದಲ್ಲಿ ಇನ್ನೊಂದು ಸೋಫಾ. ಅಲ್ಲಿ ರಜನಿ ಅಳಿಯ ವಿರಾಜಮಾನ. ಇಬ್ಬರೂ ಕೈ ಚಾಚಿದರೆ ನಿಲುಕುವಷ್ಟು ಹತ್ತಿರ. ಆದರೆ ಮನಸು ಹಳವಂಡವಾದ ಮೇಲೆ ಮುಖ ನೋಡಲು ಆಗುತ್ತಾ ? ಪರಿಣಾಮ...ಇಬ್ಬರೂ ಹಲ್ಲು ತೆಗೆಯಲಿಲ್ಲ...ಇನ್ನು ಮಾತಂತೂ ಬಹುತ್ ದೂರ್ ಕೀ ಬಾತ್... ಸ್ಕ್ರೀನ್ ಮೇಲೆ ಚೋ ಚ್ವೀಟ್ ಎಂದಿದ್ದ ಜೋಡಿ ಈಗ ಎಣ್ಣೆ ಸೀಗೇಕಾಯಿ...ಭಪ್ಪರೇ...

ಸದಾಶಿವನಗರ ಮನೆ ಒಡೆಸಿದ ಪುನೀತ್: ಜನರ ಆರೋಪಕ್ಕೆ ಕೊಟ್ಟ ಉತ್ತರಕ್ಕೆ ಜೈ ಎಂದ ಫ್ಯಾನ್ಸ್!

ಇದಕ್ಕೆಲ್ಲ ಮೂಲ ಕಾರಣ ಇಬ್ಬರ ಅಹಮ್ಮು. ನಯನತಾರಾ ಬಿಯಾಂಡ್ ದಿ ಫೇರಿ ಟೇಲ್ ಸಾಕ್ಷಚಿತ್ರದಲ್ಲಿ 'ನಾನುಂ ರೌಡಿಥಾನ್' ಸಿನಿಮಾದ ಮೇಕಿಂಗ್ ದೃಶ್ಯ ಬಳಸಿಕೊಂಡಿದ್ದಾರೆ. ಅದಕ್ಕೆ ಅನುಮತಿ ಕೊಡಿ ಎಂದು ಧನುಶ್‌ಗೆ ಪತ್ರ ಬರೆದಿದ್ದರು. ಧನುಶ್ ಇನ್ ಸೈಲೆಂಟ್ ಮೋಡ್. ಹೀಗಾಗಿ ನಯನ ಹೇಳದೇ ಕೇಳದೇ ದೃಶ್ಯ ಬಳಸಿದ್ದಾರೆ. ಒಂದೇ ಗಂಟೆಯಲ್ಲಿ ಧನುಶ್ ವಕೀಲರಿಂದ ನಯನಾಗೆ ಪತ್ರ ಬಂದಿದೆ.

'ಅನುಮತಿ ಪಡೆಯದ ಕಾರಣ ಹತ್ತು ಕೋಟಿ ದಂಡ ಕಟ್ಟಿ...' ಲೇಡಿ ಸೂಪರ್‌ಸ್ಟಾರ್ ಕೊತಕೊತ. ಆಗಲೇ ಇಷ್ಟುದ್ದ ಪತ್ರ ಹರಿಬಿಟ್ಟರು. ಧನುಶ್ ಮಾನ ಹರಾಜು ಹಾಕಿದರು. ಧನುಶ್ ಬರೀ ತೆರೆ ಮೇಲಷ್ಟೇ ಹೀರೊ. ದೊಡ್ಡ ಡೈಲಾಗ್ ಹೊಡೆಯುತ್ತಾರೆ. ಆದರೆ ನಿಜ ಜೀವನದಲ್ಲಿ ಅರ್ಧದಷ್ಟೂ ಒಳ್ಳೆಯವರಲ್ಲ...' ಹೀಗೆ ನಾಲ್ಕು ಪುಟದಲ್ಲಿ ರಜನಿ ಅಳಿಯನನ್ನು ಅಂಗಾತ ಮಲಗಿಸಿದ್ದಾರೆ.

'ಊಟ ಇಲ್ಲ ಹೋಗು' ಅಂತ ತಳ್ಳಿದಾಗ ಉಪೇಂದ್ರ ಏನ್ ಮಾಡಿದ್ರು, ಬಳಿಕ ಏನಾಯ್ತು? 

ಒಟ್ಟಿನಲ್ಲಿ ನಯನ ಡೇರ್ ಡೆವಿಲ್ ವಾದಕ್ಕೆ ಬಹುಪರಾಕ್ ಹಾಕಿದ್ದಾರೆ. ಹಾಗೆಯೇ ರಜನಿ ಮಗಳಿಗೆ ಡಿವೋರ್ಸ್ ಕೊಟ್ಟ ಮೇಲೆ ಧನುಶ್‌ನನ್ನು ಜನರು ದರ್ಬೇಸಿ ಥರಾ ನೋಡುತ್ತಿದ್ದಾರೆ. ಶ್ರತಿ ಹಾಸನ್ ಜೊತೆ ಕುಂಟಾಬಿಲ್ಲೆ ಆಡಿದ್ದಕ್ಕೆ ಮಹಾ ಮಂಗಳಾರತಿ ಎತ್ತಿದ್ದರು. ಫೈನಲಿ...ನಯನಾ ಹತ್ತು ಕೋಟಿ ಕೊಡ್ತಾರಾ ಅಥವಾ ಇನ್ನೊಂದು ಟ್ರೇಲರ್ ತೋರಿಸಿ ತಿದ್ದಿ ಗುಂಡಿ ತೋಡುತ್ತಾರಾ ? ಕಾದುನೋಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ