
ಡಾ ರಾಜ್‌ಕುಮಾರ್ ಅವರು ಕನ್ನಡದ ವರನಟ ಮಾತ್ರವಲ್ಲ, ಸರಳ ಹಾಗೂ ಮಾನವೀಯತೆ ಮೈವೆತ್ತ ಅಪರೂಪದ ವ್ಯಕ್ತಿ. ಅಣ್ಣಾವ್ರು ಎಂದೇ ಖ್ಯಾತಿ ಪಡೆದಿರುವ ಡಾ ರಾಜ್‌ಕುಮಾರ್ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಡಾ ರಾಜ್‌ಕುಮಾರ್ ಅವರು ನಟನೆಯಲ್ಲಿ ಮಾತ್ರವಲ್ಲ, ತಮ್ಮ ಗಾಯನದ ಮೂಲಕ ಕೂಡ ಕನ್ನಡಿಗರು ಮನ ಗೆದ್ದಿದ್ದಾರೆ.
ಇಂಥ ಡಾ ರಾಜ್ ಅವರು ಹಲವಾರು ಭಕ್ತಿ ಪ್ರಧಾನ ಹಾಗೂ ಐತಿಹಾಸಿಕ ಪಾತ್ರಗಳ ಸಿನಿಮಾಗಳಲ್ಲಿ ನಟಿಸಿ ಆದಶ್ ಪುರುಷ ಎನ್ನಿಸಿಕೊಂಡಿದ್ದಾರೆ. ಅದರಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರ ಮಾಡಿರುವ 'ಮಂತ್ರಾಲಯ ಮಹಾತ್ಮೆ' ಕೂಡ ಒಂದು. ಹೌದು, ಡಾ ರಾಜ್‌ಕುಮಾರ್ ಅವರು ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಸಿನಿಮಾಗಳ ಪಾತ್ರ ಮಾಡುವಲ್ಲಿ ಎತ್ತಿದ ಕೈ ಎನ್ನಲೇಬೇಕು. ಬೇಡರ ಕಣ್ಣಪ್ಪ ಸಿನಿಮಾ ಮೂಲಕ ಶುರುವಾದ ಅವರ ಸಿನಿಮಾ ಯಾನದಲ್ಲಿ ಬಹಳಷ್ಟು ಭಕ್ತಿ ಪ್ರಧಾನ ಸಿನಿಮಾಗಳನ್ನು ಮಾಡುವ ಮೂಲಕ ಮೇರನಟ ಎನ್ನಿಸಿಕೊಂಡಿದ್ದಾರೆ.
ಕಾಲು ಮುಟ್ಟಿ ನಮಸ್ಕರಿಸಲು ಸುಧಾರಾಣಿಗೆ ಬಿಡಲೇ ಇಲ್ಲ ಅಣ್ಣಾವ್ರು; ಅಷ್ಟೊಂದು ಕೋಪವಿತ್ತಾ?
ಭಕ್ತ ಕನಸಕದಾಸ, ಭಕ್ತ ಕುಂಬಾರ, ಮಯೂರ ಸೇರಿದಂತೆ ಸಾಲು ಸಾಲು ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಡಾ ರಾಜ್‌ಕುಮಾರ್. ಅದೇ ರೀತಿ ಡಾ ರಾಜ್ಅವರು 'ಮಂತ್ರಾಲಯ ಮಹಾತ್ಮೆ' ಎಂಬ ಸಿನಿಮಾದಲ್ಲಿ ಸಹ ನಟಿಸಿ ಖ್ಯಾತಿ ಗಳಿಸಿದ್ದಾರೆ. ಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ನಟಿಸುವ ಮೊದಲು, ಪೂರ್ವಭಾವಿಯಾಗಿ ಅಣ್ಣಾವ್ರು ಅದೊಂದು ಕೆಲಸ ಮಾಡಿದ್ದರು. ಅದನ್ನು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ.
ಆದರೆ, ಆ ಕೆಲಸವನ್ನು ಡಾ ರಾಜ್‌ಕುಮಾರ್ ಅವರು ಯಾಕಾಗಿ ಮಾಡಿದ್ದರು? ಅದರ ಹಿಂದಿನ ಉದ್ದೇಶೇನಿರಬಹುದು? ಅದಕ್ಕೆ ಉತ್ತರ ಅವರೇ ಹೇಳಬೇಕಷ್ಟೇ. ಆದರೆ, ಅವರೀಗ ನಮ್ಮೊಂದಿಗಿಲ್ಲ. ಹೀಗಾಗಿ ಅಣ್ಣಾವ್ರು ಯಾರಿಗಾದರೂ ಹೇಳಿದ್ದರೆ, ಅವರು ಈಗ ಹೇಳಿದರೆ ಜಗತ್ತಿಗೆ ಗೊತ್ತಾಗಬೇಕಷ್ಟೇ. ಹಾಗಿದ್ದರೆ, ಡಾ ರಾಜ್ ಅವರು ಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ನಟಿಸುವ ಮೊದಲು ಅದೇನು ಮಾಡಿದ್ದರು ಗೊತ್ತಾ? ಇಲ್ಲಿದೆ ನೋಡಿ ಆ ಸ್ಟೋರಿ..
Dr Rajkumar Birthday: ಬಯಸಿದ್ದರೂ ಮಾಡಲಾಗದ ಸಿನಿಮಾಗಳು; ಅಭಿಮಾನಿಗಳಿಗೆ ಇಂದಿಗೂ ಕೊರಗು!
ಡಾ ರಾಜ್‌ಕುಮಾರ್ ಅವರ ಒಮ್ಮೆ ಮಂತ್ರಾಲಯಕ್ಕೆ ಹೋಗಿದ್ದರು. ಅಲ್ಲಿ ಅವರು ಆಡಳಿತ ಮಂಡಳಿ ಜೊತೆ ಮಾತನ್ನಾಡುತ್ತ ತಮಗೆ ಅಲ್ಲಿ ಅವಕಾಶ ನೀಡಬೇಕೆಂದು ಕೋರಿಕೆ ಇಟ್ಟರು. ಡಾ ರಾಜ್‌ಕುಮಾರ್ ವನಂತಿ ಮನ್ನಿಸಿ ಅವರಿಗೆ ಗರ್ಭಗುಡಿಯಲ್ಲೇ ಮಲಗಲು ಅವಕಾಶ ನೀಡಲಾಯಿತು. ಮರುದಿನ ಮುಂಜಾನೆ ಎದ್ದವರೇ ಅವರು ನೇರವಾಗಿ ಮನೆಗೆ ಬಂದರು. ಅಷ್ಟೇ ಅಲ್ಲ, ನಿರ್ದೇಶಕರಾದ ದೊರೈ-ಭಗವಾನ್ ಬಳಿ ಹೋಗಿ 'ನೀವು ರಾಘವೇಂದ್ರ ಸ್ವಾಮಿಗಳ ಸಿನಿಮಾದಲ್ಲಿ ನಟಿಸ್ಥಿನಿ, ನೀವು ಸಿನಿಮಾ ಮಾಡಿ' ಎಂದರು. ಅದಾದ ಬಳಿಕ ಈ ಮಂತ್ರಾಲಯ ಮಹಾತ್ಮೆ ಸಿನಿಮಾ ಅಗಿ ತೆರೆಗೆ ಬಂದಿದೆ.
ಮಂತ್ರಾಲಯ ಮಹಾತ್ಮೆ ಸಿನಿಮಾದಲ್ಲಿ ಡಾ ರಾಜ್‌ಕುಮಾರ್ ಅವರು ಪಾತ್ರ ಮಾಡಿದ್ದಾರೆ ಎನ್ನುವುದಕ್ಕಿಂತ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ಜೀವಿಸದ್ದಾರೆ ಎನ್ನುವಷ್ಟು ಅಮೋಘವಾಗಿ ನಟಿಸಿದ್ದಾರೆ. ಆ ಪಾತ್ರ ಮಾಡಲು ಮನಸ್ಸು ಮಾಡಿದ ಡಾ ರಾಜ್ ಅವರು ಮೊಟ್ಟಮೊದಲು ನಾನ್‌ವೆಜ್ ಸೇವಿಸುವುದನ್ನು ಬಿಟ್ಟಿದ್ದರು ಎನ್ನಲಾಗಿದೆ. ಆ ಸಿನಿಮಾ ಮುಗಿಯುವವರೆಗೂ ಅಣ್ಣಾವ್ರು ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿದ್ದರು ಎನ್ನಲಾಗಿದೆ. ಜೊತೆಗೆ, ಆ ಸಿನಿಮಾದ ಬಳಿಕ ಡಾ ರಾಜ್‌ಕುಮಾರ್ ಅವರ ವ್ಯಕ್ತಿತ್ವದಲ್ಲಿ ಇನ್ನೂ ಹೆಚ್ಚಿನ ಸಾತ್ವಿಕತೆ ಮೂಡಿದೆ ಎನ್ನಲಾಗುತ್ತದೆ.
ಸಿನಿಮಾವನ್ನೇ ನೋಡದ ಆಂಧ್ರದ ಅಭಿಮಾನಿಯೊಬ್ಬ ಪುನೀತ್ ಹೆಸರಲ್ಲಿ ಮಾಡ್ತಿರೋದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.