
ಸ್ಯಾಂಡಲ್‌ವುಡ್ ಚಿತ್ರರಂಗದಲ್ಲಿ ಹೊಸ ಹೊಸ ಪ್ರತಿಭೆಗಳು ಅಳತೊಡಗಿವೆ. ಹಲವು ಹಳೆಯ ಪ್ರತಿಭೆಗಳೂ ಕೂಡ ಹೊಸ ದಾರಿ ಹಿಡಿದು ಹೊಸ ಹೊಸ ಪ್ರಯೋಗಕ್ಕೆ ಮುಂದಾಗುತ್ತಿದ್ದಾರೆ. ಈ ಮಾತಿಗೆ ಸಾಕಷ್ಟು ಉದಾಹರಣೆಗಳು ಸಿಗುತ್ತಿವೆ. ಇದೀಗ ಸದ್ಯದ ಉದಾಹರಣೆ ಎಂದರೆ, ಅದು ಬಹುಮುಖ ಪ್ರತಿಭೆ ಚಂದ್ರಚೂಡ್ (Chakravarthy Chandrachud) ಹಾಗೂ ನಟ ರಾಜವರ್ಧನ್ (Rajavardhan) ಜೋಡಿ. ಹೌದು, ಡಿಂಗ್ರಿ ನಾಗರಾಜ್ ಮಗ ನಟ ರಾಜವರ್ಧನ್ ಹಾಗೂ ಚಕ್ರವರ್ತಿ ಚಂದ್ರಚೂಡ್ ಜೋಡಿ ಬಿಗ್ ಬಜೆಟ್ ಸಿನಿಮಾವೊಂದನ್ನು ಬಿಗ್ ಪ್ರೊಡಕ್ಷನ್ ಹೌಸ್ ಮೂಲಕ ಶುರು ಮಾಡಲಿದ್ದಾರೆ.
ದೊಡ್ಡ ಆಟಕ್ಕೆ ಜೊತೆಯಾದ ರಾಜವರ್ಧನ್ & ಚಂದ್ರಚೂಡ್.. ರಾಜವರ್ಧನ್ ಹೊಸ ಚಿತ್ರಕ್ಕೆ ಚಕ್ರವರ್ತಿ ಚಂದ್ರಚೂಡ್ ಆ್ಯಕ್ಷನ್ ಕಟ್..
ಮೇ ತಿಂಗಳಲ್ಲಿ ಸೆಟ್ಟೇರ್ತಿದೆ ಅಚ್ಚರಿ ಕಾಂಬಿನೇಷನ್ ನ ಅದ್ಧೂರಿ ಸಿನಿಮಾ.. ಉದ್ಯಮದ ಇಬ್ಬರು ದಿಗ್ಗರಿಂದ ಈ ಚಿತ್ರ ಲಾಂಚ್ ಆಗಲಿದೆ..ಈ ಕಾಂಬಿನೇಷನ್ ಹಲವು ಮೊದಲುಗಳಿಗೆ ಸಾಕ್ಷಿಯಾಗೋ ಸೂಚನೆ ಕೊಟ್ಟಿದೆ..
ಸಿನಿಮಾವನ್ನೇ ನೋಡದ ಆಂಧ್ರದ ಅಭಿಮಾನಿಯೊಬ್ಬ ಪುನೀತ್ ಹೆಸರಲ್ಲಿ ಮಾಡ್ತಿರೋದೇನು?
ರಾಜವರ್ಧನ್ ಉದ್ಯಮದಲ್ಲಿ ದೊಡ್ಡ ಆಶಯದೊಂದಿಗೆ ಸತತ ಪರಿಶ್ರಮ ಪಡ್ತಿರೋ 200% ಹೀರೋ ಮೆಟಿರಿಯಲ್... ಒಂದಷ್ಟು ಏಳು ಬೀಳುಗಳ ಆದ್ಮೇಲೆ ಇದೀಗ 'ಪಕ್ಕಾ ಈ ಸಲ ಗೆಲುವು ನಮ್ದೇ' ಅನ್ನೋ ನಂಬಿಕೆ ಹುಟ್ಟಿಸಿರೋ ಕಥೆ ಮತ್ತು ತಂಡ ರಾಜವರ್ಧನ್ ಪಾಲಿಗೆ ಸಿಕ್ಕಿದೆ. ಅದ್ರಂತೆ ಬಹುಮುಖ ಪ್ರತಿಭೆ ಚಕ್ರವರ್ತಿ ಚಂದ್ರಚೂಡ್ ಔಟ್ ಅಂಡ್ ಔಟ್ ನಮ್ಮದೇ ಸೊಗಡಿನ ಮಾಸ್ ಎಂಟರ್ಟೈನ್ಮೆಂಟ್ ಆಗೋ ಕಥೆಯೊಂದನ್ನ ರಾಜವರ್ಧನ್ ಗಾಗಿಯೇ ಹೊತ್ತು ತಂದಿದ್ದಾರೆ...
ಹಲವು ತಿಂಗಳು ಗಳಿಂದ ಚರ್ಚೆಯಲ್ಲಿದ್ದ ಇವರಿಬ್ಬರು ದೊಡ್ಡ ಪ್ರೊಡಕ್ಷನ್ ಹೌಸ್ ಜೊತೆಗೆ ಮೇ ತಿಂಗಳಲ್ಲಿ ಚಿತ್ರದ ಸಂಪೂರ್ಣ ವಿವರಗಳನ್ನ ಕೊಡಲಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ ಉದ್ಯಮದ ದಿಗ್ಗಜರಿಬ್ಬರು ಈ ಚಿತ್ರವನ್ನ ಲಾಂಚ್ ಮಾಡಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ನಟ ರಾಜವರ್ಧನ್ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡೇ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಆದರೆ, ಇಲ್ಲಿಯವರೆಗೆ ಅವರನ್ನು ಕೇವಲ ಪರಿಶ್ರಮ ಕೈಹಿಡಿದಿದೆ, ಆದ್ರೆ ಇನ್ನೂ ಕೂಡ ಅದೃಷ್ಟ ಕೈ ಹಿಡಿದು ಮುನ್ನಡೆಸಿಲ್ಲ ಎನ್ನಬಹುದು. ದೊಡ್ಡಮಟ್ಟದ ಹಿಟ್ ಇನ್ನೂ ಅವರಿಗೆ ದಕ್ಕಿಲ್ಲ.
ಬಾಹುಬಲಿ ನಟಿ ಜೊತೆಗೂ ತೆರೆ ಹಂಚಿಕೊಂಡಿದ್ದ ಅಪ್ಪು; ಸರ್‌ಪ್ರೈಸ್ ಆದ್ರೂ ಸತ್ಯ ಕಣ್ರೀ!
ಆದರೆ, ನಟ ರಾಜವರ್ಧನ್ ತಮ್ಮ ಸತತ ಪರಿಶ್ರಮ ಬಿಟ್ಟಿಲ್ಲ. ಕಾರಣ, ಪರಿಶ್ರಮ ಮಾತ್ರ ನಮ್ಮ ಕೈನಲ್ಲಿದೆ, ಅದೃಷ್ಟ ಅನ್ನೋದು ನಮ್ಮ ಕಂಟ್ರೋಲ್‌ನಲ್ಲಿ ಇಲ್ಲ. ಸೋ, ನಿರಂತರ ಪ್ರಯತ್ನದಲ್ಲೇ ಅವರು ಚಿತ್ರರಂಗದಲ್ಲಿ ಸಾಗುತ್ತಿದ್ದಾರೆ. ಹ್ಯಾಂಡ್‌ಸಮ್ ಆಗಿರೋ ರಾಜವರ್ಧನ್ ಅವರು ಭಾರೀ ಕಟ್ಟುಮಸ್ತಾಗಿ ಕೂಡ ಇರೋ ರೇರ್ ಹೀರೋ. ಆದ್ರೆ, ಅದೃಷ್ಟದ ಆಟ ಇನ್ನೂ ಅವರ ಬಾಳಲ್ಲಿ ಶುರುವಾಗಿಲ್ಲ ಅಷ್ಟೇ ಅನ್ನೋದು ಹಲವರ ಅನಿಸಿಕೆ. ಮುಂಬರುವ ಸಿನಿಮಾಗಳಲ್ಲಿ ನಟ ರಾಜವರ್ಧನ್ ಅವರಿಗೆ ಕೆಲಸದಲ್ಲಿನ ಶ್ರದ್ಧೆ ಜೊತೆ ಅದೃಷ್ಟವೂ ಕೈ ಹಿಡಿದರೆ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಆಗಲಿರುವುದು ಖಚಿತ ಎಂಬ ಮಾತು ಕೇಳಿ ಬರುತ್ತಿದೆ.
ಇನ್ನು ಚಕ್ರವರ್ತಿ ಚಂದ್ರಚೂಡ್ ಅವರು ಬಹುಮುಖ ಪ್ರತಿಭೆ ಎಂಬುದನ್ನು ಯಾರಿಗೂ ಹೇಳಬೇಕಾಗಿಯೇ ಇಲ್ಲ. ಏಕೆಂದರೆ, ಅವರು ಸಕಲ ಕಲಾವಲ್ಲಭ ಎಂಬ ಬಿರುದು ಕೂಡ ಪಡೆದಿದ್ದಾರೆ. ಸಿನಿಮಾ ನಿರ್ದೇಶನ ಮಾತ್ರವಲ್ಲ, ಸಾಕಷ್ಟು ಕ್ಷೇತ್ರಗಳಲ್ಲಿ ಅವರು ಕೈ ಆಡಿಸಿ ತಕ್ಕಮಟ್ಟಿಗೆ ಯಶಸ್ಸು ತಮ್ಮದಾಗಿಸಿಕೊಂಡಿದ್ದಾರೆ, ಹೆಸರು ಮಾಡಿದ್ದಾರೆ. ಇದೀಗ ನಟ ರಾಜವರ್ಧನ್ ಹಾಗೂ ಚಕ್ರವರ್ತಿ ಚಂದ್ರಚೂಡ್ ಜೋಡಿ ಕನ್ನಡ ಚಿತ್ರರಂಗದಲ್ಲಿ ಖಂಡಿತವಾಗಿಯೂ ಮೋಡಿ ಮಾಡಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಆಕಾಲಕ್ಕಾಗಿ ಕಾಯಲಾಗುತ್ತಿದೆ..!
ಕಿಚ್ಚ ಸುದೀಪ್ ಪುತ್ರಿ ಸಾನ್ವಿಗೆ ಮಾರುಹೋಗಿದ್ದು ಯಾರು? ಟಾಲಿವುಡ್‌ನಲ್ಲಿ ಕನ್ನಡತಿ ಹವಾ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.