ನಿರ್ದೇಶಕ ಗುರುಪ್ರಸಾದ್ ಅವರ ಸಾವಿನ ಬಗ್ಗೆ ಇನ್ನೂ ತನಿಖೆ ನಡೆಯುತ್ತಿರುವ ನಡುವೆಯೇ, ಅವರ ಗಡ್ಡದ ಕುರಿತ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಏನಿದು?
ಇಂದು ಬೆಂಗಳೂರಿನಲ್ಲಿ ಸಾವನ್ನಪ್ಪಿರುವ ಸ್ಯಾಂಡಲ್ವುಡ್ ನಿರ್ದೇಶಕ ಗುರುಪ್ರಸಾದ್ ಅವರ ಸಾವು ಇನ್ನೂ ನಿಗೂಢವಾಗಿದೆ. ಕ್ಷಣ ಕ್ಷಣಕ್ಕೂ ಅವರ ಸಾವಿನ ಕುರಿತು ಹಲವಾರು ವರದಿಗಳು ಬರುತ್ತಿವೆ. ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಇವರ ಸಾವಿನ ಬಗ್ಗೆ ಎಲ್ಲಾ ನಿಟ್ಟಿನಿಂದಲೂ ತನಿಖೆ ನಡೆಸಲಾಗುತ್ತಿದೆ. ಸಾಯುವ ಮುನ್ನ ಅವರು ರಕ್ತವಾಂತಿ ಮಾಡಿಕೊಂಡಿದ್ದಾರೆ ಎಂಬುದು ಪತ್ತೆಯಾಗಿದ್ದು, ನಿಜವಾಗಿ ನಡೆದದ್ದು ಏನು ಎಂಬ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಗುರುಪ್ರಸಾದ್ ಅವರು ನೇಣಿಗೆ ಶರಣಾಗುವ ಮುನ್ನ ಮದ್ಯದಲ್ಲಿ ವಿಷ ಬೆರೆಸಿಕೊಂಡು ಕುಡಿದಿರುವ ಸಾಧ್ಯತೆಯಿದೆ. ಇನ್ನು ವಿಷ ದೇಹದಲ್ಲಿ ಕೆಲಸ ಮಾಡುತ್ತಿದ್ದಂತೆಯೇ ಸಂಕಟದಿಂದ ಒದ್ದಾಗಿ ರಕ್ತವಾಂತಿಯನ್ನು ಮಾಡಿಕೊಂಡಿರಬಹುದು. ನಂತರ ಸಂಕಟ ತಾಳಲಾರದೇ ನೇಣಿಗೆ ಶರಣಾಗಿರಬಹುದು ಎಂದು ಶಕ್ತೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಇವರು ಸಾವನ್ನಪ್ಪಿ ಮೂರ್ನಾಲ್ಕು ದಿನಗಳಾಗಿದ್ದು, ಅವರ ಮೃತದೇಹ ಕೊಳೆತು ದುರ್ವಾಸಬೆ ಬೀರುವ ಹಂತಕ್ಕೆ ತಲುಪಿದೆ. ಹೀಗಿರುವಾಗ, ಅವರ ಪತ್ನಿ ಸುಮಿತ್ರಾ ಅವರಿಗಾಗಿ ಕಾಯುತ್ತಿದ್ದ ಪೊಲೀಸರು, ಹೆಂಡತಿ ಸುಮಿತ್ರಾ ಅವರ ಹಾಜರಿಯಲ್ಲಿಯೇ ಅಪಾರ್ಟ್‌ಮೆಂಟ್ ಮನೆಯ ಬಾಗಿಲು ಒಡೆದು ಮೃತದೇಹವನ್ನು ಪರಿಶೀಲನೆ ಮಾಡಿದ್ದಾರೆ.
ಇದರ ಬೆನ್ನಲ್ಲೇ ಗುರುಪ್ರಸಾದ್ ಅವರು ಈ ಹಿಂದೆ ನೀಡಿದ್ದ ಸಂದರ್ಶನವೊಂದು ಇದೀಗ ವೈರಲ್ ಆಗುತ್ತಿದೆ. ಕೀರ್ತಿ ಎಂಟರ್ಟೇನ್ಮೆಂಟ್ ಕ್ಲೀನಿಕ್ ಇನ್ಸ್ಟಾಗ್ರಾಮ್ನಲ್ಲಿ ಗುರುಪ್ರಸಾದ್ ಅವರು ತಮಾಷೆಯ ಸಂದರ್ಶನ ನೀಡಿದ್ದರು. ಅದನ್ನು ಈಗ ಕೀರ್ತಿ ಅವರು ಪುನಃ ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ಗುರುಪ್ರಸಾದ್ ಅವರು ಗಡ್ಡವನ್ನು ಯಾಕೆ ಬಿಟ್ಟಿದ್ದಾರೆ, ಶೇವ್ ಯಾಕೆ ಮಾಡಿಲ್ಲ ಎನ್ನುವ ಕಾರಣವನ್ನು ಅವರು ನೀಡಿದ್ದಾರೆ. ಇದಕ್ಕೆ ಡಾ.ರಾಜ್ಕುಮಾರ್ ಕಾರಣವಂತೆ! ಅದರ ಬಗ್ಗೆ ಹೇಳಿದ ಅವರು ಡಾ. ರಾಜ್ಕುಮಾರ್ ಅವರು ನನ್ನ ಗಡ್ಡವನ್ನು ಮುಟ್ಟಿ ಎಷ್ಟು ಚೆನ್ನಾಗಿದೆ ಎಂದು ಹೇಳಿದ್ರು. ಅವರು ಮುಟ್ಟಿದ ಗಡ್ಡವನ್ನು ಮುಟ್ಟಿ ಅಲ್ಲಿದ್ದ ಅಭಿಮಾನಿಗಳು ಅದೆಷ್ಟು ಖುಷಿ ಪಟ್ಟಿದ್ದರು. ಡಾ.ರಾಜ್ಕುಮಾರ್ ಅವರು ಈ ಗಡ್ಡವನ್ನು ಮುಟ್ಟಿದ್ದರು ಎನ್ನುವ ಕಾರಣಕ್ಕೆ ಅದನ್ನು ಅವತ್ತಿನಿಂದಲೂ ಶೇವ್ ಮಾಡಿಲ್ಲ ಎಂದಿದ್ದರು ಗುರುಪ್ರಸಾದ್.
undefined
ಗುರುಪ್ರಸಾದ್ ಮೀ ಟೂ ಹೇಳಿಕೆ ಬಗ್ಗೆ ತಿರುಗೇಟು ನೀಡಿದ್ದರು ಹಲವರು; ಏನೆಲ್ಲಾ ಆಗಿತ್ತು ಆಗ?
ಒಂದು ವೇಳೆ ನಿಮಗೆ ಯಾರಾದ್ರೂ ಇಷ್ಟವಾದವರು ಹಗ್ ಮಾಡಿಬಿಟ್ರೆ ಸ್ನಾನವನ್ನೂ ಬಿಟ್ಟು ಬಿಡ್ತೀರಾ ಎಂದು ಕೀರ್ತಿ ತಮಾಷೆ ಮಾಡಿದರೆ, ನಿಜ. ಹಾಗೆ ನೋಡಿದ್ರೆ ಯಾವಾಗ್ಲೂ ಸ್ನಾನನೇ ಮಾಡಬಾರ್ದು ನಾನು ಎಂದು ತಮಾಷೆ ಮಾಡಿದ್ದರು. ಇಷ್ಟೆಲ್ಲಾ ತಮಾಷೆ ಮಾಡುತ್ತಿದ್ದ ಗುರುಪ್ರಸಾದ್ ಅವರು ಏಕಾಏಕಿ ಸಾವಿನ ಹಾದಿ ತುಳಿದದ್ದು ಯಾಕೆ ಎನ್ನುವ ಬಗ್ಗೆ ಹಲವಾರು ರೀತಿಯ ಅನುಮಾನಗಳು ಕಾಡುತ್ತಿವೆ. ಸದ್ಯ, ಇದನ್ನು ಆತ್ಮಹತ್ಯೆಯಿಂದ ಹೇಳಲಾಗುತ್ತಿದೆ. ಪ್ರಕರಣದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾವಿನ ಹಿನ್ನೆಲೆಯಲ್ಲಿ ಹುಡುಕುವ ನಿಟ್ಟಿನಲ್ಲಿ ಪ್ರಾಥಮಿಕ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ. ಹೀಗಾಗಿ, ಸದ್ಯಕ್ಕೆ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿರುವ ಅಪಾರ್ಟ್ಮೆಂಟ್‌ನ ಫ್ಲಾಟ್ ಅನ್ನು ಸೀಜ್ ಮಾಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರಿಂದ ನ್ಯೂ ಹೆವೆನ್ ಅಪಾರ್ಟ್ಮೆಂಟ್ ಫ್ಲಾಟ್ ಸೀಜ್ ಮಾಡಲಾಗಿದೆ. ಕುಟುಂಬಸ್ಥರು ಮೃತದೇಹ ಗುರುತಿಸುತ್ತಿದ್ದಂತೆ ಫ್ಲ್ಯಾಟ್ ಸೀಜ್ ಮಾಡಿ ಯಾರನ್ನೂ ಒಳಗೆ ಬಿಟ್ಟುಕೊಳ್ಳದೇ ಸಾಕ್ಷಿಗಳಿಗಾಗಿ ಶೋಧನೆ ಮಾಡುತ್ತಿದ್ದಾರೆ. ಇನ್ನು ರಕ್ತವಾಂತಿ ಆಗಿರುವುದಕ್ಕೆ ಕಾರಣವೇನೆಂದು ಹುಡುಕುತ್ತಿದ್ದಾರೆ.
ಇನ್ನು ನೇಣು ಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್ ಅವರ ದೇಹ ಮೂರ್ನಾಲ್ಕು ದಿನಗಳು ಕಳೆದಿರುವ ಹಿನ್ನೆಲೆಯಲ್ಲಿ ಮೃತದೇಹ ಕೊಳೆಯಲು ಆರಂಭಿಸಿದೆ. ಇದರಿಂದಾಗ ಹಗ್ಗದಲ್ಲಿ ನೇತಾಡುತ್ತಿರುವ ದೇಹದಲ್ಲಿ ಗಾಳಿ ತುಂಬಿಕೊಂಡು ಭಾರವಾಗಿ ಕೊಳೆಯಲು ಆರಂಭವಾಗಿದ್ದರಿಂದ ದೇಹದಿಂದ ದ್ರವ ಸೋರಿರಬಹುದು ಎಂದೂ ಹೇಳಲಾಗುತ್ತಿದೆ. ಆದ್ದರಿಂದ ಇದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಖಚಿತವಾಗಿದ್ದರೂ ವಿಷ ಸೇವನೆ ಮಾಡಿದ್ದರೇ ಇಲ್ಲವೇ ಎಂಬುದು ಮರಣೋತ್ತರ ಪರೀಕ್ಷೆ ಬಳಿಕ ತಿಳಿದುಬರಲಿದೆ.
ಜಗ್ಗೇಶ್ 'ರಂಗನಾಯಕ' ರಿಲೀಸ್ ವೇಳೆ ಆಡಿದ್ದ ಗುರುಪ್ರಸಾದ್ ಮಾತು ನಿಜವಾಗಿದ್ದು ದುರಾದೃಷ್ಟ!