ಗುರುಪ್ರಸಾದ್ ಹೆಣ್ಣು ಮಗುವಿನ ಭವಿಷ್ಯಕ್ಕೆ ನಾನು ಸಹಾಯ ಮಾಡ್ತೀನಿ; ನಟ ಜಗ್ಗೇಶ್

By Sathish Kumar KH  |  First Published Nov 3, 2024, 4:14 PM IST

ನಟ ಗುರುಪ್ರಸಾದ್ ಅವರ ದುರಂತ ಅಂತ್ಯದ ಬಗ್ಗೆ ನಟ ಜಗ್ಗೇಶ್ ಮಾತನಾಡುತ್ತಾ, ಕುಡಿತದ ಚಟದಿಂದ ತನ್ನ ಜೀವನವನ್ನು ಹಾಳುಮಾಡಿಕೊಂಡರು. ಅವರ ಗರ್ಭಿಣಿ ಪತ್ನಿ ಮತ್ತು ಮಗಳ ಭವಿಷ್ಯಕ್ಕೆ ಸಹಾಯ ಮಾಡುವುದಾಗಿ ಜಗ್ಗೇಶ್ ತಿಳಿಸಿದ್ದಾರೆ.


ಬೆಂಗಳೂರು (ನ.03): ಗುರುಪ್ರಸಾದ್‌ಗೆ ಸಿನಿಮಾದಿಂದ ಬಂದ ಹಣದಿಂದ ಉತ್ತಮ ಜೀವನ ಕಟ್ಟಿಕೊಳ್ಳಬಹುದಿತ್ತು. ಆದರೆ, ಕುಡಿತದ ಚಟದಿಂದ ಜೀವನವನ್ನೇ ಹಾಳು ಮಾಡಿಕೊಂಡ. ಇದೀಗ ಆತನ ಗರ್ಭಿಣಿ ಹೆಂಡತಿ ಹಾಗೂ ಹೆಣ್ಣು ಮಗುವನ್ನು ನೋಡಿದರೆ ಬೇಜಾರಾಗುತ್ತದೆ. ನಾನು ಆ ಹೆಣ್ಣು ಮಗುವಿನ ಭವಿಷ್ಯಕ್ಕೆ ಸಹಾಯ ಮಾಡುತ್ತೇನೆ ಎಂದು ನಟ ಹಾಗೂ ರಾಜ್ಯ ಸಭಾ ಸದಸ್ಯ ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಭಾರಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದ ಸಿನಿಮಾಗಳಾದ ಮಠ ಹಾಗೂ ಎದ್ದೇಳು ಮಂಜುನಾಥ ಚಿತ್ರಗಳ ನಂತರ ತೆಗೆದ ರಂಗನಾಯಕ ಸಿನಿಮಾದ ತೆರೆದ ನಂತರ ನನ್ನ ಮತ್ತು ಗುರುಪ್ರಸಾದ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದಾದ ನಂತರ ಮಾತು ಅಷ್ಟಕ್ಕಷ್ಟೇ ಆಗಿತ್ತು. ಯಾವುದಾದರೂ ಕಾರ್ಯಕ್ರಮದಲ್ಲಿ ಕಂಡರೆ ಮಾತನಾಡಿಸುತ್ತಿದ್ದೆವು. ಇನ್ನು ಅವರ ಎರಡನೇ ಮದುವೆ ಸಂದರ್ಭದಲ್ಲಿಯೂ ನಾನು ಅವರಿಗೆ ಬುದದ್ಧಿವಾದ ಹೇಳಿದ್ದೆನು. ಸಿನಿಮಾದಲ್ಲಿ ನಟಿಸಲು ಬಂದ ಹುಡುಗಿಯೊಂದಿಗೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಇದ್ದನು. ಅದಾದ ಮೇಲೆ ಅವರನ್ನು ಮದುವೆ ಮಾಡಿಕೊಂಡರು. ಆದರೆ, ಇದೀಗ ಆತನ ಗರ್ಭಿಣಿ ಹೆಂಡತಿ ಹಾಗೂ ಹೆಣ್ಣು ಮಗುವನ್ನು ನೋಡಿದರೆ ಬೇಜಾರಾಗುತ್ತದೆ. ನಾನು ಆ ಹೆಣ್ಣು ಮಗುವಿನ ಭವಿಷ್ಯಕ್ಕೆ ಸಹಾಯ ಮಾಡುತ್ತೇನೆ ಎಂದು ಹೇಳಿದರು.

Tap to resize

Latest Videos

undefined

ಇದನ್ನೂ ಓದಿ: ಗುರುಪ್ರಸಾದ್ 2ನೇ ಹೆಂಡತಿ ಸುಮಿತ್ರಾ ಗರ್ಭಿಣಿ; ಮಗುವಿನ ಭವಿಷ್ಯವೇನು?

ಯಾವುದೇ ಒಬ್ಬ ಮನುಷ್ಯನಿಗೆ ತನ್ನ ಮಾತಿನಲ್ಲಿ ನಿಗಾ ಇರಬೇಕು. ಕೆಲಸದಲ್ಲಿ ‌ಬದ್ದತೆ ಇರಬೇಕು. ಈ ಎರಡೂ ಇಲ್ಲದಿದ್ದಾಗ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಅವನ ಅತಿಯಾದ ಕುಡಿತದ ಚಟ ಅವನನ್ನ ಸಾಲಗಾರನ್ನಾಗಿ ಮಾಡಿತ್ತು. ಅವನಿಗೆ ಬಂದ ಸಿನಿಮಾ ಹಣದಲ್ಲಿ  ಒಳ್ಳೆಯ ಅದ್ಭುತ ಜೀವನ ಕಟ್ಟಿಕೊಳ್ಳಬಹುದಿತ್ತು. ಅದರೆ ಅವನೇ ತನ್ನ ಬದುಕನ್ನ ತನ್ನ ಕೈಯಾರೆ ಹಾಳು ಮಾಡಿಕೊಂಡಿದ್ದಾನೆ. ಸಿನಿಮಾ ರಂಗಕ್ಕೆ ಅಧ್ಬುತವಾದ ಎರಡು‌ ಸಿನಿಮಾ ಕೊಟ್ಟಿದ್ದಾರೆ. ಅದರ ಬಗ್ಗೆ ಗುರುಪ್ರಸಾದ್ ಬಗ್ಗೆ ನನಗೆ ದೊಡ್ಡ ಹೆಮ್ಮೆಯಿದೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಿಳಿಸಿದರು.

ಮೊದಲ ಹೆಂಡತಿಯನ್ನು ಬಿಟ್ಟು, ಡಿವೋರ್ಸ್ ಆಗುವ ಮುನ್ನವೇ ಎರಡನೇ ಮದುವೆ ಆಗಿದ್ದನು. ಎರಡನೇ ಮದುವೆಯಾದ ನಂತರವೂ ಮೊದಲ  ಹೆಂಡತಿಯೊಂದಿಗೆ ನೀನು ಚೆನ್ನಾಗಿ ಇರು ಎಂದು ನಾನೇ ಖುದ್ದಾಗಿ ಹೇಳಿದ್ದೆ. ಮೊದಲನೇ ಹೆಂಡತಿ ಬೈಯ್ದರೂ ಸರಿ, ಆಕೆಯ ಕಾಲಿಗೆ ಬಿದ್ದಾದರೂ ಅವಳ ಜೊತೆ ಮಾತಾಡು. ಒಂದು ವೇಳೆ ಚಪ್ಪಲಿಯಿಂದ ಹೊಡೆದರೂ ಕೂಡ ಸಹಿಸಿಕೊಳ್ಳು ಎಂದು ಹೇಳಿದ್ದೆ. ಆದರೆ, ಅವನು ತನ್ನ ಮೊದಲ ಹೆಂಡತಿ ಜೊತೆ ಮಾತೇ ಆಡಿಲ್ಲ. ಈಗ ಎರಡನೇ ಪರಿಸ್ಥಿತಿ ನೋಡಿದರೆ ಬೇಜಾರಾಗುತ್ತದೆ ಎಂದು ಭಾವುಕರಾದರು.

ಇದನ್ನೂ ಓದಿ: ಡೈರೆಕ್ಟರ್ ಗುರುಪ್ರಸಾದ್ ಸೂಸೈಡ್ ಕೇಸಲ್ಲಿ ಭಯಾನಕ ಟ್ವಿಸ್ಟ್; ರಕ್ತ ವಾಂತಿ ಆಗಿರುವುದು ಪತ್ತೆ!

ಗುರುವಿಗೆ ಕೆಟ್ಟದಾಗಿ ಬೈದಿದ್ದ: ಜೀವನದಲ್ಲಿ ಒಬ್ಬ ವ್ಯಕ್ತಿಗೆ ಗುರು ಇರಬೇಕು. ಸಿನಿಮಾ ಚಿತ್ರರಂಗದಲ್ಲಿ ಯಾರನ್ನೂ ಗುರುವಾಗಿ ಸ್ವೀಕರಿಸಿದ ಗುರುಪ್ರಸಾದ್ ಅವನ ಅಮ್ಮನನ್ನೇ ಗುರು ಅಂತ ನಂಬಿಕೊಂಡಿದ್ದನು. ಆದರೆ, ಗುರುವಿನ ಸ್ಥಾನದಲ್ಲಿ ನೋಡಿದ ಅಮ್ಮನನ್ನೇ ಕೆಟ್ಟ ಮಾತುಗಳಿಂದ ಬೈಯುತ್ತಿದ್ದನು. ಅದನ್ನ ನೋಡಿದಾಗಲೇ ನಮಗೆ ಬೇಜಾರಾಗುತ್ತಿತ್ತು. ಮನೆ ತುಂಬಾ ಡ್ರಿಂಕ್ಸ್ ಬ್ಲಾಟ್ಲಿಗಳೇ ಇರುತ್ತಿದ್ದವು. ಕುಡಿತದ ಚಟದಿಂದ ಮಾತಿನಲ್ಲಿ ನಿಗಾ ಇರುತ್ತಿರಲಿಲ್ಲ. ನಮ್ಮ ಜೊತೆಗೆ ಏನೆನೋ ಮಾತಾಡಿ... ನಂತರ ನಮ್ಮ ಬಳಿ ಬಂದು ಕ್ಷಮಿಸಿ ಅಂತಿದ್ದನು ಎಂಬ ನೆನಪನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ನಟ ಜಗ್ಗೇಶ್ ಹಂಚಿಕೊಂಡರು.

click me!