ಅರ್ಧ ದೇಹ ಬಿಟ್ಕುಕೊಳ್ಳುವ ಹುಡ್ಗೀರಿಗೆ ಅಣ್ಣಾವ್ರು ಹೇಳಿದ ಕಿವಿ ಮಾತಿದು!

By Shriram Bhat  |  First Published Jan 13, 2025, 12:00 PM IST

ಡಾ ರಾಜ್‌ಕುಮಾರ್ ಅವರು ಅಭಿನಯಿಸಿರುವ ಹಳೆಯ, ಕಪ್ಪು-ಬಿಳುಪು ಚಿತ್ರವೊಂದರ ಸಂಭಾಷಣೆ ಇದೀಗ 'ಕನ್ನಡ ಡೈಲಿ ಡೋಸ್' ಇನ್‌ಸ್ಟಾಗ್ರಾಂ ಪೇಜ್ ಮೂಲಕ ವೈರಲ್ ಅಗುತ್ತಿದೆ. ಹೆಣ್ಣುಮಕ್ಕಳು ಹೇಗಿರಬೇಕು ಎಂಬುದನ್ನು ಡಾ ರಾಜ್‌ಕುಮಾರ್ ಪಾತ್ರದ ಮೂಲಕ ಅಲ್ಲಿ ಹೇಳಿಸಲಾಗಿದೆ. ಅರ್ಧ ದೇಹ ಕಾಣುವಂತೆ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದ ಹುಡುಗಿಯರು ಅಲ್ಲಿ ಡಾ ರಾಜ್‌..


ಕನ್ನಡದ ಅಣ್ಣಾವ್ರು ಖ್ಯಾತಿಯ ನಟ ಡಾ ರಾಜ್‌ಕುಮಾರ್ (Dr Rajkumar) ಅವರು ಕಪ್ಪು-ಬಿಳುಪು ಚಿತ್ರಗಳ ಕಾಲದಿಂದಲೂ ಸಿನಿಮಾರಂಗದಲ್ಲಿ ಇದ್ದವರು. 50ರ ದಶಕದಲ್ಲಿ, 1954ರಲ್ಲಿ ಬಿಡುಗಡೆ ಕಂಡು ಸೂಪರ್ ಹಿಟ್ ಆದ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಮುಖ್ಯ ಪಾತ್ರದಲ್ಲಿ ನಟಿಸಲು ಆರಂಭಿಸಿದ ಡಾ ರಾಜ್‌ಕುಮಾರ್ ಅವರು ಬಳಿಕ 2000ನೇ ಇಸ್ವಿಯಲ್ಲಿ 'ಶಬ್ದವೇದಿ' ಚಿತ್ರದ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಕೊನೆಗೊಳಿಸಿದರು. ಅಷ್ಟು ಸುದೀರ್ಘ ಅವಧಿಯಲ್ಲಿ ಅವರು ಬರೋಬ್ಬರಿ 207 ಸಿನಿಮಾಗಳಲ್ಲಿ ನಟಿಸಿ ಮನೆಮಾತಾದರು. 

ಇಂಥ ಡಾ ರಾಜ್‌ಕುಮಾರ್ ಅವರು ತಾವು ನಟಸಿದ ಎಲ್ಲಾ ಚಿತ್ರಗಳಲ್ಲಿ ಸಮಾಜದ ಹಾಗೂ ಜೀವನದ ಮೌಲ್ಯಗಳು ಇರುವಂಥ ಪಾತ್ರಗಳಲ್ಲೇ ಕಾಣಿಸಿಕೊಂಡರು. ಸಿನಿಮಾ ಮಾಡುವುದು ಅಂದರೆ, ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವುದು ನಟರಲ್ಲ. ಆದರೆ ಅಂಥ ಚಿತ್ರಗಳನ್ನೇ ಅಯ್ಕೆ ಮಾಡಿಕೊಂಡು ನಟಿಸುವುದು ನಟರೇ ಆಗಿರುತ್ತಾರೆ. ಹೀಗಾಗಿ ಸಮಾಜಕ್ಕೆ ಅಗತ್ಯವಿರುವ ಮೌಲ್ಯಗಳನ್ನು ಪ್ರತಿಪಾದಿಸುವ ಚಿತ್ರಗಳಲ್ಲಿ ಕಾಣಿಸಿಕೊಂಡಾಗ ಅಂಥ ನಟರಿಗೆ ಹೆಚ್ಚು ಅಭಿಮಾನಿಗಳು ಆಗುತ್ತಾರೆ. ಅದೇ ಆಗಿದ್ದು ಡಾ ರಾಜ್‌ಕುಮಾರ್ ಅವರಿಗೂ ಸಹ. 

Tap to resize

Latest Videos

ಮೈಸೂರಿನ ಜೋಡಿ ತೆಂಗಿನಮರದ ಬಳಿ ಅಣ್ಣಾವ್ರು ಯಾಕೆ ಬೆಳಿಗ್ಗೆ 4 ಗಂಟಗೆ ಹೋಗ್ತಾ ಇದ್ರು?

ನಟ ಡಾ ರಾಜ್‌ಕುಮಾರ್ ಅವರು ಅಭಿನಯಿಸಿರುವ ಹಳೆಯ, ಕಪ್ಪು-ಬಿಳುಪು ಚಿತ್ರವೊಂದರ ಸಂಭಾಷಣೆ ಇದೀಗ 'ಕನ್ನಡ ಡೈಲಿ ಡೋಸ್' ಇನ್‌ಸ್ಟಾಗ್ರಾಂ ಪೇಜ್ ಮೂಲಕ ವೈರಲ್ ಅಗುತ್ತಿದೆ. ಹೆಣ್ಣುಮಕ್ಕಳು ಹೇಗಿರಬೇಕು ಎಂಬುದನ್ನು ಡಾ ರಾಜ್‌ಕುಮಾರ್ ಪಾತ್ರದ ಮೂಲಕ ಅಲ್ಲಿ ಹೇಳಿಸಲಾಗಿದೆ. ಅರ್ಧ ದೇಹ ಕಾಣುವಂತೆ ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದ ಹುಡುಗಿಯರು ಅಲ್ಲಿ ಡಾ ರಾಜ್‌ಕುಮಾರ್ ಅವರು ತಮ್ಮ ಡೈಲಾಗ್ ಮೂಲಕ ಕಿವಿ ಮಾತು ಹೇಳಿದ್ದಾರೆ. ಹಾಗಿದ್ದರೆ ಅಣ್ಣಾವ್ರು ಅದೇನು ಹೇಳಿದ್ದಾರೆ? ಇಲ್ಲಿದೆ ನೋಡಿ..

'ನೀವು ಒಬ್ಬೊಬ್ಬರೂ ಈ ಅವತಾರದಲ್ಲಿ ಹೀಗೆ ಓಡಾಡ್ತಾ ಇದ್ರೆ, ನೀವೆಲ್ಲಾ ಹೀಗೆ ಅರ್ಧ ದೇಹವನ್ನು ಬಿಟ್ಕೊಂಡಿರೋದು ನೋಡಿದ್ರೆ, 80 ವರ್ಷದ ಮುದುಕನೂ ಕೂಡ ನಿಮ್ ಹಿಂದೆಹಿಂದೆನೇ ಬರ್ಬೇಕು ಅಂತ ಆಸೆ ಪಡ್ತಾನೆ. ಹೀಗಿರುವಾಗ ಪಾಪ ಅವ್ರುಗಳ ಗತಿಯೇನು ಹೇಳಿ? ನೊಡಿ, ಹೀಗ್ ಹೇಳ್ತೀನಿ ಅಂತ ಯಾರೂ ಕೋಪ ಮಾಡ್ಕೋಬೇಡಿ.. ಗೃಹಿಣಿಯರಾಗಿ, ನಮ್ ಭಾವೀ ಭಾರತದ ಪ್ರಜೆಗಳ ತಾಯೊಂದಿರಾಗಿ, ನಮ್ಮ ದೇಶನ, ದೇಶದ ಸಂಸ್ಕ್ರತಿನ ಕಾಪಾಡುವಂಥ ಮಹಾಮಾತೆಯರು ಆಗ್ಬೇಕಾದವ್ರು ನೀವು.. ಈ ವೇಶ ಎಲ್ಲಾ ನಮ್ಮ ದೇಶದ್ದಲ್ಲ, ಬೇರೆ ದೇಶದ್ದು..' ಎಂಬ ಡೈಲಾಗ್‌ ಅನ್ನು ನಟಸಾರ್ವಭೌಮ, ಕನ್ನಡದ ಅಣ್ಣಾವ್ರು ಡಾ ರಾಜ್‌ಕುಮಾರ್ ಹೇಳಿದ್ದಾರೆ. 

ಅಣ್ಣಾವ್ರ ಬಗ್ಗೆ ಸುದೀಪ್ ಅಂದು ಹೇಳಿದ್ದ ಮಾತು ಇಂದು ವೈರಲ್, ಕಾಮೆಂಟ್ಸ್ ಸುರಿಮಳೆ!

ಅಣ್ಣಾವ್ರ ಈ ಸಿನಿಮಾ ಡೈಲಾಗ್‌ಗೆ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಮೆಚ್ಚುಗೆಯ ಕಾಮೆಂಟ್‌ಗಳು ಹರಿದು ಬಂದಿವೆ. ಒಬ್ಬರು 'ಈಗಿನ ಹುಡುಗಿಯರಿಗೆ ಈ ಮಾತು' ಎಂದಿದ್ದರೆ ಇನ್ನೊಬ್ಬರು 'ಈ ರೀತಿ ಸ್ಪಷ್ಟವಾದ ಉಚ್ಛಾರಣೆ ಈಗಿನ ನಾಯಕ ನಟರಲ್ಲಿ ಒಬ್ಬರು ಹೇಳಲಿ ನೋಡೋಣ' ಎಂದಿದ್ದಾರೆ. ಮತ್ತೊಬ್ಬರು 'ಇದಕ್ಕೆ ಕಣ್ರೋ ಈ ಕನ್ನಡದ ಜನ ಅವರನ್ನು ಅಣ್ಣಾವ್ರು ಅನ್ನೋದು' ಎಂದಿದ್ದರೆ ಮಗದೊಬ್ಬರು 'ಸೃಜನಶೀಲ ನಯ ವಿನಯ ಅಭಿನಯ, ಅಣ್ಣಾವರಿಗೆ ಅಣ್ಣಾವರೇ ಸಾಟಿ' ಎಂದಿದ್ದಾರೆ. 

 

 

click me!