Badava Rascal Movie:ಡಾಲಿ ಧನಂಜಯ್‌ಗೆ ಜನಪದ ಕಲಾವಿದರಿಂದ ಅದ್ಧೂರಿ ಸ್ವಾಗತ

By Suvarna News  |  First Published Jan 4, 2022, 9:20 AM IST

'ಬಡವ ರಾಸ್ಕಲ್‌' ಸಿನಿಮಾ ಪ್ರಮೋಶನ್‌ಗಾಗಿ ನಗರಕ್ಕೆ ಆಗಮಿಸಿದ ಡಾಲಿ ಧನಂಜಯ್‌ ಸುಧಾ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳ ಜತೆಗೆ ಕೆಲ ಕ್ಷಣ ಸಿನಿಮಾ ವೀಕ್ಷಿಸಿದರು. ಧನಂಜಯ್‌ ಬರುವಿಕೆ ಸುದ್ದಿ ಅರಿತು ನೂರಾರು ಅಭಿಮಾನಿಗಳು ಚಿತ್ರಮಂದಿರ ಎದುರು ಸೇರಿದ್ದರು. 


ಹುಬ್ಬಳ್ಳಿ (ಜ.04): 'ಬಡವ ರಾಸ್ಕಲ್‌' (Badava Rascal) ಸಿನಿಮಾ ಪ್ರಮೋಶನ್‌ಗಾಗಿ ನಗರಕ್ಕೆ ಆಗಮಿಸಿದ ಡಾಲಿ ಧನಂಜಯ್‌ (Dolly Dhananjay) ಸುಧಾ ಚಿತ್ರಮಂದಿರಕ್ಕೆ (Sudha Theater) ಭೇಟಿ ನೀಡಿ ಅಭಿಮಾನಿಗಳ ಜತೆಗೆ ಕೆಲ ಕ್ಷಣ ಸಿನಿಮಾ ವೀಕ್ಷಿಸಿದರು. ಧನಂಜಯ್‌ ಬರುವಿಕೆ ಸುದ್ದಿ ಅರಿತು ನೂರಾರು ಅಭಿಮಾನಿಗಳು ಚಿತ್ರಮಂದಿರ ಎದುರು ಸೇರಿದ್ದರು. ವಾದ್ಯಮೇಳ ಮತ್ತು ಉತ್ತರ ಕರ್ನಾಟಕದ ಜನಪದ ಕಲಾವಿದರಿಂದ ಧನಂಜಯ್‌ ಅವರನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು. ಅಭಿಮಾನಿಗಳು (Fans) ಶಾಲು ಹೊದೆಸಿ, ರುಮಾಲು ತೋಡಿಸಿ ಸನ್ಮಾನಿಸಿದರು.

ಬಳಿಕ ಚಿತ್ರಮಂದಿರದ ಪ್ರವೇಶ ಮಾಡಿದ ಡಾಲಿ ಕೆಲ ಹೊತ್ತು ಸಿನಿಮಾ ನೋಡಿ ಅಭಿಮಾನಿಗಳ ಜತೆಗೆ ಮಾತನಾಡಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿ, ರಾಜ್ಯಾದ್ಯಂತ 'ಬಡವ ರಾಸ್ಕಲ್‌' ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿವೆ. ಅಭಿಮಾನಿಗಳು ನಿಜವಾಗಲೂ ದೇವರ ಸಮಾನ. ಅವರಿಂದಲೇ ನಾವು ಇದ್ದೇವೆ. ಬಡವ ರಾಸ್ಕಲ್‌ ಎಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಎಂದರು. ಅಭಿಮಾನಿಗಳು ಅವರೊಂದಿಗೆ ಸೆಲ್ಫಿ (Selfie) ತೆಗೆಸಿಕೊಂಡು ಸಂಭ್ರಮಿಸಿದರು. ಈ ವೇಳೆ ಶಿವಾನಂದ ಮುತ್ತಣ್ಣವರ, ಅಯ್ಯಪ್ಪ ಶಿರಕೋಳ, ಚಿತ್ರಮಂದಿರದ ಮ್ಯಾನೇಜರ್‌ ಮಂಜುನಾಥ ನೂಲ್ವಿ ಇದ್ದರು.

Tap to resize

Latest Videos

Badava Raskal: ಧನಂಜಯ್‌ಗೆ ಯಶಸ್ಸು ಕೊಡೋ ಸಿನಿಮಾ ಇದು ಎಂದ ಶಿವಣ್ಣ

'ಬಡವ ರಾಸ್ಕಲ್' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಬರೆದಿದೆ ಅಂತ ಗಾಂಧಿನಗರ ಹೇಳುತ್ತಿದೆ. ಇದು ನಿಜ ಕೂಡ. 'ಬಡವ ರಾಸ್ಕಲ್' ಸಿನಿಮಾ ಇರೋ ಯಾವುದೇ ಚಿತ್ರಮಂದಿರಕ್ಕೆ ಹೋಗಿ ನೋಡಿದರೆ ಆ ಚಿತ್ರಮಂದಿರ ಜನರಿಂದ ತುಳುಕುತ್ತಿದೆ. ಹೀಗಾಗಿ 'ಬಡವ ರಾಸ್ಕಲ್' ಸಿನಿಮಾ ಬಿಡುಗಡೆ ಆಗಿ 10 ದಿನದಲ್ಲಿ 16 ಕೋಟಿ ಕಲೆಕ್ಷನ್ (Box Office Collection) ಮಾಡಿದೆ ಅಂತ ಹೇಳಲಾಗ್ತಿದೆ. ಡಾಲಿ ಧನಂಜಯ್ ಅವರನ್ನ ವಿಲನ್ ಆಗಿ ಗೆಲ್ಲಿಸಿದ್ದ ಪ್ರೇಕಕ್ಷರು ಹಾಗೂ ಅಭಿಮಾನಿಗಳು ಈಗ 'ಬಡವ ರಾಸ್ಕಲ್' ಸಿನಿಮಾದಿಂದ ಧನಂಜಯ್ ಅವರನ್ನು ಹೀರೋ ಆಗಿಯೂ ಗೆಲ್ಲಿಸಿದ್ದಾರೆ. 

ಹೀಗಾಗಿ ನಟ ರಾಕ್ಷಸ ಧನಂಜಯ್ ತಮ್ಮ ಸಿನಿಮಾದ ಗೆಲುವಿನ ಸಂಭ್ರವನ್ನು ರಾಜ್ಯದ ಎಲ್ಲಾ ಚಿತ್ರಮಂದಿರಗಳಿಗೂ ಸುತ್ತಿ ಸಂಭ್ರಮಿಸುತ್ತಿದ್ದಾರೆ. ಡಾಲಿ ಹೋದಲ್ಲೆಲ್ಲಾ ಆರತಿ ಎತ್ತಿ, ಹೂ ಮಳೆ ಸುರಿಸಿ ಅಭಿಮಾನಿಗಳು ಜೈಕಾರ ಕೂಗುತ್ತಿದ್ದಾರೆ. ಹಾಗಾಗು 'ಟಗರು' ಸಿನಿಮಾದಿಂದ ಇಷ್ಟು ದಿನ ವಿಲನ್ ಆಗಿ ಗೆದ್ದಿದ್ದ ಧನಂಜಯ್ ಈಗ ಹೀರೋ ಆಗಿಯೋ ದೊಡ್ಡ ಸಕ್ಸಸ್ ಪಡೆದಿದ್ದಾರೆ. 'ಬಡವ ರಾಸ್ಕಲ್‌' ಚಿತ್ರಕ್ಕೆ ಶಂಕರ್‌ ಗುರು (Shankar Guru) ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಧನಂಜಯ್ ಸ್ನೇಹಿತರಿಗಾಗಿ ಪ್ರಾಣ ಬೇಕಾದರೂ ಕೊಡೋಕೆ ಸಿದ್ಧನಿರುವ ಮಧ್ಯಮ ವರ್ಗದ ಯುವಕನಾಗಿ ಕಾಣಿಸಿಕೊಂಡಿದ್ದು, ಆಟೋ ಓಡಿಸುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ತನ್ನ ಗೆಳೆಯರಿಗಾಗಿ ಏನು ಮಾಡೋಕೂ ಧನಂಜಯ್ ರೆಡಿ ಇರುತ್ತಾನೆ. 

Kannada Film Review: ಬಡವ ರಾಸ್ಕಲ್‌

'ಡಾಲಿ ಪಿಕ್ಚರ್' (Dolly Picture) ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ 'ಬಡವ ರಾಸ್ಕಲ್‌' ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ 'ಮಠ' ಗುರುಪ್ರಸಾದ್‌ (Guruprasad) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್‌ (Vasuki Vaibhav) ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

click me!