Vinod Prabhakar Varada: ವರದ ಚಿತ್ರದ ವಿಶೇಷ ಹಾಡು ರಿಲೀಸ್ ಮಾಡಿದ ಗಣೇಶ್

By Suvarna NewsFirst Published Jan 3, 2022, 8:40 PM IST
Highlights

* ವಿನೋದ್ ಪ್ರಭಾಕರ ಅಭಿನಯದ ವರದ ಚಿತ್ರ
* ಸುಮಧುರ ಹಾಡನ್ನು ಬಿಡುಗಡೆ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್
* ವಿನೋದ್ ಪ್ರಭಾಕರ್ ಅವರ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್

ಬೆಂಗಳೂರು(ಜ. 03) ಗೋಲ್ಡನ್‌ ಸ್ಟಾರ್ ಗಣೇಶ್  ವಿನೋದ್ ಪ್ರಭಾಕರ್ ಅಭಿನಯದ 'ವರದ' ಚಿತ್ರದ ಹಾಡನ್ನು ಬಿಡುಗಡೆ ಮಾಡಿದರು. ಚಿತ್ರ ಜನವರಿ 28 ರಂದು ತೆರೆಗೆ ಬರಲಿದೆ.  ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ "ವರದ" ಚಿತ್ರಕ್ಕಾಗಿ ಕೆ.ಕಲ್ಯಾಣ್ ಬರೆದಿರುವ "ಯಾರೇ ನೀನು" ಎಂಬ ಹಾಡನ್ನು  ನೀಡಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿ, ಶುಭ ಕೋರಿದರು.  ಬಿಡುಗಡೆ ಆದ ಕೆಲವೇ ಕ್ಷಣಗಳಲ್ಲಿ ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ.

ಉದಯ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸುನಿತಾ ಪ್ರಕಾಶ್. ಕೆ.ಕಲ್ಯಾಣ್ ಹಾಗೂ ಚೇತನ್ ಕುಮಾರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದು, ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವಿನಾಯಕರಾಮ್ ಸಂಭಾಷಣೆ ಬರೆದಿದ್ದಾರೆ.  ಭಜರಂಗಿ ಆನಂದ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ, ವಿಕ್ರಂ ಮೋರ್(ಕೆ ಜಿ ಎಫ್), ಅಶ್ರಫ್ ಗುರ್ಕಲ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. 

ವಿನೋದ್ ಪ್ರಭಾಕರ್ ಅವರ ತಂದೆ ಪಾತ್ರದಲ್ಲಿ ಹಿರಿಯ ನಟ ಚರಣ್ ರಾಜ್ ನಟಿಸಿದ್ದಾರೆ. ಅಮಿತ ಈ ಚಿತ್ರದ ನಾಯಕಿ. ಅನಿಲ್ ಸಿದ್ದು, ಎಂ.ಕೆ.ಮಠ, ಅಶ್ವಿನಿ ಗೌಡ, ಗಿರೀಶ್ ಜತ್ತಿ, ಪ್ರಶಾಂತ್ ಸಿದ್ದಿ, ರಾಧ ರಂಗನಾಥ್, ರಾಜೇಶ್ವರಿ, ದುರ್ಗ, ಮಾನಸ, ಅರವಿಂದ್, ರೋಬೊ ಗಣೇಶ್, ಲೋಕೇಶ್, ನಮನ, ರಾಮಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Chiranjeevi Sarja Rajamarthanda : ಮತ್ತೊಂದು ಸುದ್ದಿ ಕೊಟ್ಟ ರಾಜಮಾರ್ತಾಂಡ

ನೋವು ತೋಡಿಕೊಂಡಿದ್ದ ವಿನೋದ್:  ವರದ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ ಕುರಿತಾಗಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿನೋದ್ ಪ್ರಭಾಕರ್ ನೋವು ತೋಡಿಕೊಂಡಿದ್ದರು.

‘ಕೋವಿಡ್ ಕಾರಣಕ್ಕೆ ನಿರ್ಮಾಪಕರು ಸಿನಿಮಾ ಮಾಡಲು ಅಂಜುವ ಸನ್ನಿವೇಶ ಇದೆ. ನಾನು ಮೊದಲಿಂದಲೂ ನಿರ್ಮಾಪಕ ನಟ. ನನಗೆ ಕತೆ ಹೇಳಲು ಬರುವ ಹೊಸ ನಿರ್ಮಾಪಕರಲ್ಲಿ ಮೊದಲು ಕೇಳೋದೇ ಬಜೆಟ್ ಎಷ್ಟು ಅಂತ. 25 ಲಕ್ಷ ರು. ನಿಂದ 50 ಲಕ್ಷ ರು.ವರೆಗಿನ ಬಜೆಟ್‌ನಲ್ಲಿ ಸಿನಿಮಾ ಮಾಡಿ ಅಂತಲೇ ಹೇಳುತ್ತೇನೆ. ನನ್ನನ್ನು ಹಾಕಿಕೊಂಡು ಮಾಡಿದ ಸಿನಿಮಾ ಎಷ್ಟು ರಿಟರ್ನ್‌ಸ್ ಕೊಡಬಲ್ಲದು ಅನ್ನೋದು ನನಗೆ ಗೊತ್ತು. ನಾನ್ಯಾವತ್ತೂ ನಿರ್ಮಾಪಕರಿಗೆ ಹೊರೆಯಾಗಲ್ಲ. ಈ ವರದಾ ಚಿತ್ರದಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ’ ಎಂದಿದ್ದರು.

ನಿರ್ದೇಶಕ ಉದಯ ಪ್ರಕಾಶ್ ಮಾತನಾಡಿ, ‘ಈ ಸಿನಿಮಾ ತಂದೆ ಮಕ್ಕಳ ದ್ವೇಷದ ಕತೆಯ ಮೇಲೆ ನಿಂತಿದೆ. ಮೋಶನ್ ಪೋಸ್ಟರ್‌ನಲ್ಲಿರುವ ಫೋರ್ಸ್ ಇಡೀ ಸಿನಿಮಾದಲ್ಲಿ ಕ್ಯಾರಿ ಆಗಿದೆ. 60 ದಿನಗಳ ಕಾಲ ಮೈಸೂರು, ಕುಂದಾಪುರ ಮೊದಲಾದೆಡೆ ಶೂಟಿಂಗ್ ನಡೆದಿದೆ ಎಂದು ತಿಳಿಸಿದ್ದರು.

 

click me!