ವಿನಯ್‌ ರಾಜ್‌ಕುಮಾರ್‌ನ ಪವರ್‌ಫುಲ್‌ ಗಂಡಸಾಗಿ ತೋರಿಸಿದ ಸಿನಿಮಾ ಪೆಪೆ: ಕಿಚ್ಚ ಸುದೀಪ್

By Govindaraj S  |  First Published Aug 23, 2024, 6:01 PM IST

ಇಲ್ಲೀವರೆಗೆ ಲವರ್‌ ಬಾಯ್‌, ಚಾಕೊಲೇಟ್‌ ಹೀರೋ ಎನಿಸಿಕೊಂಡಿದ್ದ ವಿನಯ್‌ನ ಪವರ್‌ಫುಲ್‌ ಗಂಡಸಾಗಿ ತೋರಿಸಿದ ಸಿನಿಮಾ ಪೆಪೆ. ಕಲಾವಿದರನ್ನು ಪ್ರೀತಿಸುವ ನಿರ್ದೇಶಕರಷ್ಟೇ ಇಂಥಾ ಸಿನಿಮಾ ಮಾಡುತ್ತಾರೆ’ ಎಂದು ಸುದೀಪ್‌ ಮೆಚ್ಚುಗೆಯ ಮಾತನ್ನಾಡಿದ್ದಾರೆ.


‘ಪೆಪೆ ಸಿನಿಮಾ ಟ್ರೇಲರ್‌ ನೋಡಿ, ಆಹ್‌ ಏನ್‌ ಚೆನ್ನಾಗಿದೆ ಅನಿಸಿತ್ತಲ್ವಾ.. ಇದೇ ಸಿನಿಮಾ ಗೆಲುವಿನ ಲಕ್ಷಣ. ಈ ಸಿನಿಮಾವನ್ನು ಕರ್ನಾಟಕದ ಜನತೆ ಅದ್ಭುತವಾಗಿ ಸ್ವಾಗತಿಸುವ ನಿರೀಕ್ಷೆ ಇದೆ. ಇಲ್ಲಿ ನಮ್ಮ ಸಿನಿಮಾ ಗೆಲ್ಲಿಸಿ ಅಂತ ಕೇಳೋದೇ ದೊಡ್ಡ ತಪ್ಪು. ನಮ್ಮ ಭಾಷೆಯನ್ನು ನಂಬಿ, ಜನರನ್ನು ನಂಬಿ ಕೆಲಸ ಮಾಡಿ. ಸಿನಿಮಾ ನೋಡಲ್ಲ ಅನ್ನೋರನ್ನು ಬಿಟ್ಟುಬಿಡಿ, ನೋಡ್ತೀವಿ ಅನ್ನುವವರಿಗಾಗಿ ಸಿನಿಮಾ ಮಾಡಿ’.- ಕಿಚ್ಚ ಸುದೀಪ್ ಕಂಚಿನ ಕಂಠದಲ್ಲಿ ಹೇಳುತ್ತಿದ್ದರೆ ಜನ ಮರುಳಾಗಿ ಕೇಳುತ್ತಿದ್ದರು. 

ಆಗತಾನೇ ವಿನಯ್‌ ರಾಜ್‌ಕುಮಾರ್‌ ನಟನೆಯ ‘ಪೆಪೆ’ ಟ್ರೇಲರ್‌ ನೋಡಿ ಜನ ದಂಗಾಗಿದ್ದರು. ಆ ಕ್ಷಣದಲ್ಲಿ ಮಾತನಾಡಿದ ಸುದೀಪ್, ‘ಸಣ್ಣ ಕುಡಿಯಂತಿದ್ದ ಕನ್ನಡ ಸಿನಿಮಾರಂಗ ಈಗ ಬೃಹತ್‌ ಆಲದ ಮರವಾಗಿ ಬೆಳೆದು ದೃಢವಾಗಿ ನಿಂತಿದೆ. ಚಿತ್ರಗಳ ಸೋಲು, ಗೆಲುವು, ಹೊಯ್ದಾಟಗಳೆಲ್ಲ ಈ ದೃಢತೆಯನ್ನು ಅಲುಗಾಡಿಸಲಾಗದು’ ಎಂದರು. ‘ಪೆಪೆ’ ಸಿನಿಮಾದ ಟ್ರೇಲರ್‌ ಸೂಪರ್‌ ಹಿಟ್‌ ಆಗಿದೆ. ಈಗಾಗಲೇ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ವಿನಯ್‌ ರಾಜ್‌ಕುಮಾರ್‌ ಅವರ ಹೊಸ ಅವತಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Tap to resize

Latest Videos

ಹೊಸ ಸರ್​ಪ್ರೈಸ್​ ಹೊತ್ತು ಬಂದ ಬಾದ್​ ಷಾ ಸುದೀಪ್: ಕಿಚ್ಚನ ಸರ್​ಪ್ರೈಸ್​ಗಾಗಿ ಸ್ನೇಹಿತ ಬಳಗ ಫುಲ್ ಅಲರ್ಟ್!

‘ವಿನಯ್‌ ಮನೆಗೆ ಬಂದು ಟ್ರೇಲರ್ ತೋರಿಸಿದಾಗ, ಅಕ್ಷರಶಃ ಎದ್ದು ನಿಂತು ಟ್ರೇಲರ್‌ಗೆ ಚಪ್ಪಾಳೆ ತಟ್ಟಿದ್ದೀನಿ. ಟ್ರೇಲರ್‌ ಬಿಡುಗಡೆ ಮಾಡಿದಾಗ ಪ್ರೇಕ್ಷಕನಾಗಿ ಕೂತು ಮತ್ತೊಮ್ಮೆ ನೋಡಿದೆ. ಬಹಳ ಇಷ್ಟವಾಯ್ತು. ಇಲ್ಲೀವರೆಗೆ ಲವರ್‌ ಬಾಯ್‌, ಚಾಕೊಲೇಟ್‌ ಹೀರೋ ಎನಿಸಿಕೊಂಡಿದ್ದ ವಿನಯ್‌ನ ಪವರ್‌ಫುಲ್‌ ಗಂಡಸಾಗಿ ತೋರಿಸಿದ ಸಿನಿಮಾ ಪೆಪೆ. ಕಲಾವಿದರನ್ನು ಪ್ರೀತಿಸುವ ನಿರ್ದೇಶಕರಷ್ಟೇ ಇಂಥಾ ಸಿನಿಮಾ ಮಾಡುತ್ತಾರೆ’ ಎಂದು ಸುದೀಪ್‌ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ವಿನಯ್‌ ರಾಜ್‌ಕುಮಾರ್‌, ‘ಪೆಪೆಯ ಪಾತ್ರದಲ್ಲಿ ಎರಡು ವರ್ಷ ಜರ್ನಿ ಮಾಡಿದ್ದೇನೆ. ನನಗೆ ಕೊಡಗು, ಕಾಡು ಅಂದರೆ ಪ್ರಾಣ. ಕೊಡಗಿನಲ್ಲಿ ಶೂಟಿಂಗ್ ಎಂದರು. ಚಿತ್ರ ಒಪ್ಪಿಕೊಳ್ಳಲು ಇದು ಮೊದಲ ಕಾರಣ. ಚಿತ್ರದ ಕಥೆ ಮತ್ತೊಂದು ಕಾರಣ. ಇದರಲ್ಲಿ ಸ್ಟ್ರಾಂಗ್ ಪಾತ್ರಗಳಿವೆ. ಸಿನಿಮಾ ನೋಡಿ ಹೊರ ಬರುವ ಪ್ರತಿಯೊಬ್ಬರೂ ಈ ಪಾತ್ರಗಳ ಬಗ್ಗೆ ಯೋಚನೆ ಮಾಡುತ್ತಾರೆ’ ಎಂದರು.

ಕಾಂತಾರ ಚಾಪ್ಟರ್​ 1 ಸೀಕ್ರೆಟ್ ಬಿಚ್ಚಿಟ್ಟ ರಿಷಬ್ ಶೆಟ್ಟಿ: ಸಮರ ವೀರನಾಗಿ ಹೊಸ ಅವತಾರ ಎತ್ತಿದ ಡಿವೈನ್ ಸ್ಟಾರ್!

ಶ್ರೀಲೇಶ್ ಎಸ್ ನಾಯರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಕಾಜಲ್‌ ಕುಂದರ್‌ ನಾಯಕಿಯಾಗಿ ನಟಿಸಿದ್ದಾರೆ. ಮಯೂರ್‌ ಪಟೇಲ್‌, ಯಶ್‌ ಶೆಟ್ಟಿ, ಬಲ ರಾಜವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್‌, ನವೀನ್‌ ಡಿ. ಪಡೀಲ್‌ ಅಭಿನಯಿಸಿದ್ದಾರೆ. ಉದಯ್ ಶಂಕರ್ ಎಸ್, ಬಿ ಎಮ್ ಶ್ರೀರಾಮ್ ನಿರ್ಮಾಣದ ಈ ಸಿನಿಮಾ ಆ.30ಕ್ಕೆ ಬಿಡುಗಡೆ ಆಗುತ್ತಿದೆ.

click me!