ಕೋಟ್ಯಂತರ ರೂಪಾಯಿ ಬೆಲೆಯ ವಾಚ್ ಧರಿಸ್ತಾರಾ ಕಿಚ್ಚ ಸುದೀಪ್!

Suvarna News   | Asianet News
Published : Mar 12, 2021, 01:53 PM IST
ಕೋಟ್ಯಂತರ ರೂಪಾಯಿ ಬೆಲೆಯ ವಾಚ್ ಧರಿಸ್ತಾರಾ ಕಿಚ್ಚ ಸುದೀಪ್!

ಸಾರಾಂಶ

ಕಿಚ್ಚ ಸುದೀಪ್ ತಮ್ಮ ಕೈಯಲ್ಲಿ ಧರಿಸಿದ ದುಬಾರಿ ಬೆಲೆಯ ವಾಚ್‌ನ ಇತ್ಯೋಪರಿಗಳನ್ನು ತಿಳಿದರೆ ನೀವು ದಂಗಾಗಲೇಬೇಕು!

ಕಿಚ್ಚ ಸುದೀಪ್ ಶೋಕಿ ಮನುಷ್ಯ ಅಲ್ಲ. ಆದರೆ ಅವರಿಗೆ ಒಳ್ಳೆಯ ಅಭಿರುಚಿಗಳಿವೆ. ದುಬಾರಿ ವಾಚ್ ಧರಿಸುವುದನ್ನು ಇಷ್ಟಪಡುತ್ತಾರೆ. ಒಳ್ಳೆಯ ಶೂಸ್ ಧರಿಸುವುದು, ಸೂಟ್ ಹಾಕಿಕೊಳ್ಳುವುದು ಇಷ್ಟ. ಹಾಗೇ ಅವರಲ್ಲಿ ನಾನಾ ನಮೂನೆಯ ಕಾರುಗಳಿವೆ. ಮಾರುಕಟ್ಟೆಗೆ ಯಾವುದೇ ಹೊಸ ಕಾರು ಬಂದರೂ ಅವರ ಡೀಟೇಲ್ಸ್ ಅವರಿಗೆ ಗೊತ್ತಾಗುತ್ತದೆ. ಎಸ್‌ಯುವಿಗಳು ಇಷ್ಟ. ಹೀಗಾಗಿ ಸುದೀಪ್ ಸದಾ ಟ್ರೆಂಡಿಯಾಗಿಯೇ ಇರುತ್ತಾರೆ. 

ಹೀಗಾಗಿಯೇ ಸುದೀಪ್ ಅವರು ಧರಿಸುವ ಬಟ್ಟೆಯಿಂದ ಹಿಡಿದು ಕೈಗೆ ಕಟ್ಟಿಕೊಳ್ಳೋ ವಾಚ್ ವರೆಗೂ ಎಲ್ಲವೂ ಸುದ್ದಿಯಾಗುತ್ತವೆ. ಅದರಲ್ಲೂ ಬಿಗ್‌ಬಾಸ್ ಶುರುವಾದಾಗಿನಿಂದ ಕಿಚ್ಚ ಸುದೀಪ್ ಕಾಸ್ಟ್ಯೂಮ್ ಬಗೆಗೂ ಸಖತ್ ಮಾತು ಕೇಳಿಬರುತ್ತಿದೆ. ಅವರ ಈ ಅಪೀಯರೆನ್ಸ್, ವಿಶಿಷ್ಟ ಮ್ಯಾನರಿಸಂ, ಸ್ಪರ್ಧಿಗಳನ್ನು ಕಾಲೆಳೆಯುತ್ತಾ ಎಲ್ಲರನ್ನೂ ನಗಿಸೋ ರೀತಿಗೆ ಅವರ ಫ್ಯಾನ್ ಗಳು ಫಿದಾ ಆಗಿದ್ದಾರೆ. 

'ವಾಲ್ಮೀಕಿ ಜಾತ್ರೆ' ಕಾರ್ಯಕ್ರಮದಲ್ಲಿ ಸುದೀಪ್; ಅಬ್ಬಬ್ಬಾ ಜನ ಸಾಗರ! ...

ಹಾಗೆ ನೋಡಿದರೆ ಈಚೀಚೆಗೆ ಸೆಲೆಬ್ರಿಟಿಗಳ ಬಟ್ಟೆ, ಆಕ್ಸೆಸರೀಸ್ ಬೆಲೆ ಎಷ್ಟು ಅನ್ನೋದು ಆಗಾಗ ರಿವೀಲ್ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ಫ್ಯಾನ್‌ಗಳೇ ಈ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿ ಮಾಹಿತಿ ಪಡೆಯೋದೂ ಇದೆ. ಕೆಲವೊಮ್ಮೆ ಸೆಲೆಬ್ರಿಟಿಗಳೇ ಅವುಗಳ ಬೆಲೆಯನ್ನೂ ಹಾಕಿ ಆ ವಸ್ತುಗಳನ್ನು ಪ್ರಮೋಟ್ ಮಾಡೋದೂ ಇದೆ. ಇದೀಗ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಅವರ ಧರಿಸಿರೋ ವಾಚ್ ಬಗ್ಗೆ ಸರ್ಚ್ ಮಾಡಿ ಅದರ ಬೆಲೆ ನೋಡಿ ಹೌಹಾರಿದ್ದಾರೆ. 
 


 ಸುದೀಪ್ ಕೈಯಲ್ಲಿ ಈ ವಾಚ್ ಸದಾ ಇರುವ ಕಾರಣ ನೀವಿದನ್ನು ಗಮನಿಸಿರಬಹುದು. ಅವರ ಕೈ ವ್ಯಕ್ತಿತ್ವಕ್ಕೆ ಬಹಳ ಚೆನ್ನಾಗಿ ಸೂಟ್‌ ಆಗುವ ಥರ ಇದೆ ಈ ಡಿಗ್ನಿಫೈಡ್ ವಾಚ್‌. ಈ ವಾಚ್ ಇದೀಗ ಹಲವರ ಕುತೂಹಲಕ್ಕೆ ಕಾರಣವಾಗಿದೆ. ಈವರೆಗೆ ಕಿಚ್ಚ ಸುದೀಪ್ ಆಗಿ ಫೇಮಸ್ ಆಗಿದ್ದವರು ಇದೀಗ ಅಭಿನಯ ಚಕ್ರವರ್ತಿ ಅನ್ನುವ ಬಿರುದಿಗೂ ಪಾತ್ರರಾಗಿದ್ದು ನಿಮ್ಮ ಗಮನಕ್ಕೂ ಬಂದಿರಬಹುದು. ಅವರು ಚಂದನವನಕ್ಕೆ ಕಾಲಿಟ್ಟು ಆಗಲೇ ೨೫ ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳು ಅವರಿಗೊಂದು ಸನ್ಮಾನ ಏರ್ಪಡಿಸಿದ್ದವು. ಈ ಸಂದರ್ಭದಲ್ಲೂ ಕಿಚ್ಚ ತಮ್ಮ ಎಂದಿನ ಫೇವರಿಟ್ ವಾಚ್ ಕಟ್ಟಿಕೊಂಡು ಬಂದಿದ್ದಾರೆ. ಆಗ ಒಂದಿಷ್ಟು ಜನರಿಗೆ ಅವರ ವಾಚ್ ಬಗ್ಗೆ ಕುತೂಹಲ ಹೆಚ್ಚಿದೆ. ಅವರ ಅಭಿಮಾನಿಗಳು ಅವರ ವಾಚ್‌ ಬಗ್ಗೆ ಮೊಬೈಲ್‌ನಲ್ಲಿ ಸರ್ಚ್ ಮಾಡಿ ನೋಡಿದ್ದಾರೆ. ಅದರ ಬೆಲೆ ಕಂಡು ಅವರು ಮೂರ್ಛೆ ಹೋಗದ್ದು ಪುಣ್ಯ. 

ಪಠಾನ್ ಸಿನಿಮಾದ ಶಾರೂಖ್ ಆಕ್ಷನ್ ಲುಕ್ ವೈರಲ್ ...

ಅಷ್ಟಕ್ಕೂ ಸುದೀಪ್ ಅವರ ವಾಚ್ ರಿಚರ್ಡ್ ಮಿಲ್ಲೆ ಕಂಪೆನಿಗೆ ಸೇರಿದ ವಾಚ್‌. ಈ ಸ್ವಿಸ್ ವಾಚ್ ವಿಶ್ವಾದ್ಯಂತ ಬಹಳ ಫೇಮಸ್. ಅನೇಕ ಹಾಲಿವುಡ್ ಸೆಲೆಬ್ರಿಟಿಗಳೂ ಈ ವಾಚ್ ಧರಿಸೋದಿದೆ. ಬಾಲಿವುಡ್ ಸೆಲೆಬ್ರಿಟಿಗಳ ಕೈಯಲ್ಲೂ ಈ ವಾಚ್ ಇದೆ. ಸುಮಾರು ೨೦ ವರ್ಷಗಳ ಹಿಂದೆ ಸ್ಥಾಪನೆಯಾದ ರಿಚರ್ಡ್ ಮಿಲ್ಲೆ ಕಂಪೆನಿಯ ವಾಚ್ ಗಳು ಅವುಗಳ ಅದ್ದೂರಿತನಕ್ಕೆ, ಸ್ಟೈಲಿಶ್‌ನೆಸ್ ಗೆ, ಯುನಿಕ್ ಡಿಸೈನ್‌ಗೆ ಫೇಮಸ್. ಇವು ಬಹಳ ದುಬಾರಿ ಅಂತ ಬೇರೆ ಹೇಳ್ಬೇಕಾಗಿಲ್ಲ. 
 ಸದ್ಯ ಸುದೀಪ್ ಕೈಯಲ್ಲಿರುವ ರಿಚರ್ಡ್ ಮಿಲ್ಲೆ ವಾಚ್‌ನ ಬೆಲೆ ಕೇವಲ ಒಂದೂವರೆ ಕೋಟಿ ರುಪಾಯಿ. ಈ ವಾಚ್‌ಗಳ ರೇಟ್ ಶುರುವಾಗೋದೇ ಕೋಟಿಯಿಂದ. ವರ್ಷ ವರ್ಷ ಹೊಸ ಹೊಸ ಸ್ಟೈಲ್, ಡಿಸೈನ್‌ನ ವಾಚ್‌ಗಳನ್ನು ಹೊರಬಿಡುವ ಕಂಪೆನಿ ಲಿಮಿಟೆಡ್ ಸ್ಟಾಕ್‌ನಲ್ಲಿ ವಾಚ್ ತಯಾರಿಸಿ ಜಗತ್ತಿನ ಶ್ರೀಮಂತರಿಗೆ ಮಾರಾಟ ಮಾಡುತ್ತಿದೆ. ಸದ್ಯ ನಮ್ಮ ಕನ್ನಡದ ಶ್ರೀಮಂತ ಸ್ಟಾರ್ ನಟ ಕಿಚ್ಚ ಸುದೀಪ್‌ ಈ ವಾಚ್‌ನ ಅಭಿಮಾನಿಯಾಗಿದ್ದಾರೆ. ಅವರಿಗೆ ಈ ಡೀಸೆಂಟ್ ಡಿಸೈನ್ ಸಖತ್ ಇಷ್ಟವಾಗಿದೆ. ಸುದೀಪ್‌ಗಿರುವ ಕಾರು, ಬೈಕ್‌ಗಳ ಕ್ರೇಜ್ ಗೆ ಇದೀಗ ವಾಚ್ ಕ್ರೇಸ್ ಸಹ ಜೊತೆಯಾದಂತಾಗಿದೆ. 

ಲಾಕ್‌ಡೌನ್‌ನಲ್ಲಿ ಅಡುಗೆ ಕಲಿತಿದ್ದಾರೆ ಪುನೀತ್.! ...

 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್