
ಸ್ಯಾಂಡಲ್‌ವುಡ್‌ನ ರಾಬರ್ಟ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನಲ್ಲಿಯೂ ಸಖತ್ ಪ್ರತಿಕ್ರಿಯೆ ಪಡೆಯುವಲ್ಲಿ ಯಶಸ್ವಿಯಾಗಿದೆ.
"
ಮೊದಲ ದಿನವೇ 17ಕೋಟಿ 24ಲಕ್ಷ ಗಳಿಸಿದ ರಾಬರ್ಟ್ ಕರ್ನಾಟಕದಲ್ಲಿ ಮೊದಲ ದಿನವೇ ಅಬ್ಬರ ಓಟದಿಂದ ಸುದ್ದಿಯಾಗಿದೆ. ಆಂಧ್ರ -ತೆಲಂಗಾಣದಲ್ಲಿ 3ಕೋಟಿ ,12ಲಕ್ಷ ಗಳಿಸಿದೆ ರಾಬರ್ಟ್ ಸಿನಿಮಾ.ಇದನ್ನು ಅಧಿಕೃತವಾಗಿ ಸಿನಿಮಾತಂಡವೇ ಅನೌನ್ಸ್ ಮಾಡಿದೆ.
ರಾಬರ್ಟ್ ‘ದರ್ಶನ’ಕ್ಕೆ ಸಿನಿಪ್ರಿಯರ ದಂಡು!
ಎರಡು ವರ್ಷಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಬಿಡುಗಡೆಯಾಗಿದ್ದು, ಬರೋಬ್ಬರಿ 1200 ಸ್ಕ್ರೀನ್‌ಗಳಲ್ಲಿ ರಾಬರ್ಟ್ ಪ್ರದರ್ಶನ ಶುರುವಾಗಿದೆ.
ರಾಬರ್ಟ್ ಸಿನಿಮಾ ಹಾಡುಗಳೂ ಸಹ ಸೂಪರ್ ಹಿಟ್ ಆಗಿದೆ. ತೆಲುಗು ವರ್ಷನ್ ಮತ್ತು ಕನ್ನಡ ವರ್ಷನ್ ಹಾಡುಗಳೂ ಎಲ್ಲೆಡೆ ವೈರಲ್ ಆಗಿ ಸದ್ದು ಮಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.