ಚಲನಚಿತ್ರೋತ್ಸವದ ದುಂದುವೆಚ್ಚಕ್ಕೆ ಕಡಿವಾಣ: ಸಿಎಂಗೆ ಮನವಿ

By Suvarna NewsFirst Published Mar 12, 2021, 11:29 AM IST
Highlights

ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಜವಬ್ದಾರಿ ಪ್ರೈವೇಟ್ ಇವೆಂಟ್ ಕಂಪನಿಗೆ | ಇಷ್ಟೊಂದು ದುಂದುವೆಚ್ಚ ಬೇಕಾ..? ಸಿಎಂಗೆ ಸಿನಿ ಪ್ರಮುಖರದ ಮನವಿ

ಬೆಂಗಳೂರು(ಮಾ.12): ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದುಂದು ವೆಚ್ಚಕ್ಕೆ ಕಡವಾಣ ಹಾಕಲು ಮನವಿ ಮಾಡಲಾಗಿದೆ.

ಈ ಬಾರಿ ನಡೆಯುತ್ತಿರೋ ಚಿತ್ರೋತ್ಸವದ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಕ್ಕೆ ಮೂರು ಕೋಟಿ ಖರ್ಚು ಮಾಡಲಾಗುತ್ತಿದ್ದು, ಅಕಾಡೆಮಿಯ ವತಿಯಿಂದ ಕಾರ್ಯಕ್ರಮದ ಉಸ್ತುವಾರಿ ಖಾಸಗಿ ಸಂಸ್ಥೆಗೆ ನೀಡಲಾಗಿದೆ.

ರಾಬರ್ಟ್ ಅಬ್ಬರ: ಮೊದಲ ದಿನವೇ 17ಕೋಟಿಗೂ ಹೆಚ್ಚು ಗಳಿಕೆ

ಈ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಸ್ಯಾಂಡಲ್ ವುಡ್ ನಿರ್ದೇಶಕರು ಈ ಕಾರ್ಯಕ್ರಮ ಅಕಾಡೆಮಿಯೇ ನಡೆಸಬೇಕು ಅಥವಾ ಚಿತ್ರೋದ್ಯಮದವರಿಗೆ ನೀಡಬೇಕು ಎಂದು ಕೇಳಿದೆ.

ಖಾಸಗಿ ಇವೆಂಟ್ ಸಂಸ್ಥೆಗೆ ನೀಡಿರೋದು ಬೇಸರದ ಸಂಗತಿ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಎಂದು ಮನವಿ ಮಾಡಲಾಗಿದೆ.

ಲಾಕ್‌ಡೌನ್‌ನಲ್ಲಿ ಅಡುಗೆ ಕಲಿತಿದ್ದಾರೆ ಪುನೀತ್.!

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ . ಗಿರೀಶ್ ಕಾಸರವಳ್ಳಿ .ಪಿ ಶೇಷಾದ್ರಿ. ಬಿ ಸುರೇಶ್ ಸೇರಿದಂತೆ ಇನ್ನು ಅನೇಕರು ಈ ಸಂಬಂಧ ಸಿಎಂಗೆ ಮನವಿ ಮಾಡಿದ್ದಾರೆ.

click me!