ನನಗೆ 4 ಮಕ್ಕಳು ಬೇಕು ಹೀಗಾಗಿ ಸರೋಗೆಸಿ ಮೂಲಕ ಪಡೆಯುತ್ತಿದ್ದೀನಿ: ರೂಪಾ ಅಯ್ಯರ್

Published : Jan 28, 2025, 11:58 AM IST
ನನಗೆ 4 ಮಕ್ಕಳು ಬೇಕು ಹೀಗಾಗಿ ಸರೋಗೆಸಿ ಮೂಲಕ ಪಡೆಯುತ್ತಿದ್ದೀನಿ: ರೂಪಾ ಅಯ್ಯರ್

ಸಾರಾಂಶ

ನಿರ್ದೇಶಕಿ, ನಟಿ ರೂಪಾ ಅಯ್ಯರ್ ಸರೋಗಸಿ ಮೂಲಕ ಮಕ್ಕಳನ್ನು ಪಡೆಯುತ್ತಿದ್ದಾರೆ. ಸಂಬಂಧಿಕರಾದ ಗೌತಮ್ ಅವರನ್ನು ವಿವಾಹವಾಗಿದ್ದು, ಕುಟುಂಬದ ಒಪ್ಪಿಗೆಯ ಮೇರೆಗೆ ಈ ನಿರ್ಧಾರಕ್ಕೆ ಬಂದಿದ್ದಾರೆ. ತಾಯಿಯನ್ನು ಮಾದರಿಯಾಗಿಟ್ಟುಕೊಂಡು ನಾಲ್ಕು ಮಕ್ಕಳನ್ನು ಬಯಸುತ್ತಿದ್ದಾರೆ.

ಕನ್ನಡ ಚಿತ್ರರಂಗದ ನಿರ್ದೇಶಕಿ, ನಟಿ ಹಾಗೂ ಉದ್ಯಮಿ ಆಗಿರುವ ರೂಪಾ ಅಯ್ಯರ್ ಹಲವು ವರ್ಷಗಳ ಹಿಂದೆ ಗೌತಮ್ ಎಂಬುವವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಮಾಜ ಸೇವೆಯಲ್ಲಿ ಹೆಚ್ಚಿಗೆ ಗುರುತಿಸಿಕೊಂಡಿರುವ ನಿರ್ದೇಶಕಿ ಈಗ ಮಕ್ಕಳನ್ನು ಸರೋಗೆಸಿ ಮೂಲಕ ಪಡೆಯುವ ನಿರ್ಧಾರ ಮಾಡಿದ್ದಾರೆ. ಮೂರ್ನಾಲ್ಕು ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ರೂಪಾ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು? ಯಾಕೆ ಇಷ್ಟು ದಿನ ಮಕ್ಕಳು ಮಾಡಿಕೊಂಡಿರಲಿಲ್ಲ? ಎಷ್ಟು ಮಕ್ಕಳು ಬೇಕು ಎಂದು ಆಸೆ ಪಡುತ್ತಿದ್ದಾರೆ ಎಂದು ಮನಸ್ಸು ಬಿಚ್ಚಿ ಹಂಚಿಕೊಂಡಿದ್ದಾರೆ ರೂಪಾ.  

'ನಾನು ಮದುವೆಯಾಗಿರುವ ವ್ಯಕ್ತಿ ಹೆಸರು ಗೌತಮ್‌ ಎಂದು. ಅವರು ನನ್ನ ಸಂಬಂಧಿಕರು. ಚಿಕ್ಕ ವಯಸ್ಸಿನಿಂದ ನಾನು ಹೇಗಿದ್ದೀನಿ ಎಂದು ನೋಡಿದ್ದಾರೆ. ಹೀಗಾಗಿ ನನ್ನ ಕೆಲಸದ ನನ್ನ ದಾರಿ ಬಗ್ಗೆ ಮೊದಲೇ ಗೊತ್ತಿತ್ತು. ಮಕ್ಕಳನ್ನು ಈಗ ನಾನು ಸೆರೋಗೆಸಿ ಮೂಲಕ ಮಾಡಿಕೊಳ್ಳುತ್ತಿದ್ದಿನಿ...ನನ್ನ ತಾಯಿನೇ 3 ಜನ ಮಕ್ಕಳನ್ನು ಸಾಕಿದ್ದಾರೆ ನನಗೆ ನಾಲ್ಕು ಮಕ್ಕಳು ಬೇಕು ಅಂತ ಹೇಳಿದ್ದೀನಿ. ಡಾಕ್ಟರ್‌ಗೆ ಹೇಳಿದ್ದೀನಿ ನನಗೆ ನಾಲ್ಕು ಮಕ್ಕಳು ಬೇಕು ಅಂತ. ಮದುವೆ ಆದ ಮೇಲೆ ಮಕ್ಕಳನ್ನು ಮಾಡಿಕೊಳ್ಳಬೇಕು ಅಂತ ನಾನು ಅಂದುಕೊಂಡೆ ಆದರೆ ಗಂಡ ಮನೆಯಲ್ಲಿ ತಡವಾಗಿ ಮಕ್ಕಳನ್ನು ಮಾಡಿಕೊಳ್ಳಬೇಕು ಅನ್ನೋ ನಿರ್ಧಾರ ತೆಗೆದುಕೊಳ್ಳುತ್ತಿದ್ದರು...ಅದಾದ ಮೇಲೆ ಈಗ ಅತ್ತೆ ಮನೆಯಲ್ಲಿ ನಮ್ಮ ಮನೆಯಲ್ಲಿ ಮಾತನಾಡಿಕೊಂಡು ಸೆರೋಗೆಸಿ ಮೂಲಕ ಮಕ್ಕಳನ್ನು ಮಾಡಿಕೊಳ್ಳಬೇಕು ನಿರ್ಧಾರ ಮಾಡಿದ್ದೀನಿ. ನನ್ನ ತಾಯಿಯನ್ನು ನೋಡಿ ನಾನು ನಾಲ್ಕು ಮಕ್ಕಳನ್ನು ಪಡೆಯಬೇಕು ಅಂತ ನಿರ್ಧರಿಸಿದ್ದೀನಿ' ಎಂದು ಕಲಾಮಾಧ್ಯಮ ಯೂಟೂಬ್ ಸಂದರ್ಶನದಲ್ಲಿ ರೂಪಾ ಅಯ್ಯರ್ ಮಾತನಾಡಿದ್ದಾರೆ. 

ನಮ್ಗೆ ಅದನ್ನು 5 ಮಾತ್ರ ಕೊಡ್ತಿದ್ರು...ಒಂದೇ ಒಂದು ಕೊಡಿ ಅಂತ ಭಿಕ್ಷೆ ಬೇಡಿದ್ದೀವಿ; ಸೀಕ್ರೆಟ್‌ ರಿವೀಲ್ ಮಾಡಿದ ರಜತ್

2010ರಲ್ಲಿ ಕವರ್ ಪೇಜ್‌ ಸಿನಿಮಾವನ್ನು ನಿರ್ದೇಶಿಸುತ್ತಾರೆ ಅದಾದ ಮೇಲೆ 2013ರಲ್ಲಿ ಚಂದ್ರ ಸಿನಿಮಾವನ್ನು ರೂಪಾ ನಿರ್ದೇಶನ ಹಾಗೂ ನಿರ್ಮಾಣ ಮಾಡುತ್ತಾರೆ. 2011ರಲ್ಲಿ ಯಂಗ್ ಲೀಡರ್ ಪ್ರಶಸ್ತಿ, ಬ್ರೈನ್ ಸೆಂಟರ್‌ನಿಂದ 2011ರಲ್ಲಿ ನಾಟ್ಯ ಕಲಾಭಿನೇತ್ರಿ ಪ್ರಶಸ್ತಿ, 2006ರಲ್ಲಿ ಆದರ್ಶ ರತ್ನ, 2004ರಲ್ಲಿ ಪದ್ಮ ಕಲಾಶ್ರೀ, 1999ರಲ್ಲಿ ಬೆಂಗಳೂರು ಸೂಪರ್ ಮಾಡಲ್ ಪ್ರಶಸ್ತಿ ಹಾಗೂ ಇಂದ್ರ ಪ್ರಿಯದರ್ಶಿನಿ ಪ್ರಶಸ್ತಿ ಪಡೆದಿದ್ದಾರೆ. ಮುಖ ಪುಟ ಚಿತ್ರಕತೆ ಹಾಗೂ ಸಂಭಾಷನೆ ಬರೆದು ನಿರ್ದೇಶನ ಮಾಡಿರುವ ರೂಪಾ ದತ್ತು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಹನುಮಂತುಗೆ 3 ಸಲ ಬಿಗ್ ಬಾಸ್ ಆಫರ್‌ ಬಂದಿತ್ತು, 5 ಕೋಟಿ ವೋಟ್‌ ಹಾಕಿರೋದು ಕಡಿಮೆನೇ: ತ್ರಿವಿಕ್ರಮ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್