ರಜನಿಕಾಂತ್ ಅವರಿಗೆ ಸಿನಿಮಾ ಮಾಡೋ ಅಗತ್ಯವಿಲ್ಲ ಅಂತ ಹೇಳ್ಬೇಡಿ: ಕಿಚ್ಚ ಸುದೀಪ್

Published : Jan 27, 2025, 06:52 PM ISTUpdated : Jan 27, 2025, 07:02 PM IST
ರಜನಿಕಾಂತ್ ಅವರಿಗೆ ಸಿನಿಮಾ ಮಾಡೋ ಅಗತ್ಯವಿಲ್ಲ ಅಂತ ಹೇಳ್ಬೇಡಿ: ಕಿಚ್ಚ ಸುದೀಪ್

ಸಾರಾಂಶ

ರಜನಿಕಾಂತ್ ಸಿನಿಮಾ ಮಾಡುವುದು ಹಣಕ್ಕಾಗಿ ಅಲ್ಲ, ಸಿನಿಮಾ ಅವರ ಜೀವ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಸಿನಿಮಾವೇ ರಜನಿಗೆ ಜೀವನ, ಪ್ರೀತಿ, ಅದಕ್ಕೇ ಇನ್ನೂ ಸಿನಿಮಾ ಮಾಡುತ್ತಿದ್ದಾರೆ. ವಯಸ್ಸಾದರೂ ಅವರ ಸ್ಟಾರ್‌ಡಮ್, ಅಭಿಮಾನಿ ಬಳಗ ಅದ್ಭುತ ಎಂದಿದ್ದಾರೆ ಸುದೀಪ್.

ಕಿಚ್ಚ ಸುದೀಪ್ (Kichcha Sudeep) ಅವರು ಭಾರತದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನ್ನಾಡಿದ್ದಾರೆ. ಖಾಸಗಿ ಚಾನೆಲ್ಲೊಂದರ ಸಂದರ್ಶನದಲ್ಲಿ ನಟ ಕಿಚ್ಚ ಸುದೀಪ್ ಅವರು ನಟ ರಜನಿಕಾಂತ್ ಅವರ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹಲವು ಸಂಗತಿಗಳನ್ನು ಹೇಳಿದ್ದಾರೆ. ಅಚ್ಚರಿ ಎಂಬಂತೆ, ನಟ ಸುದೀಪ್ ಅವರು ನಟ ರಜನಿಕಾಂತ್ ಅವರ ಮನಸ್ಸನ್ನು ಅರಿತವರಂತೆ ಮಾತನ್ನಾಡಿದ್ದಾರೆ. 

ಅಷ್ಟು ಚೆಂದವಾಗಿ, ರಜನಿಕಾಂತ್ ಅವರು ಇನ್ನೂ ಯಾಕೆ ಸಿನಿಮಾ ಮಾಡ್ತಿದಾರೆ ಅನ್ನೋದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಹಾಗಿದ್ದರೆ ನಟ ಸುದೀಪ್ ಅವರು ಕೇಳಿದ ಪ್ರಶ್ನೆಗೆ ಅದೇನು ಹೇಳಿದ್ದಾರೆ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.. 'ರಜನಿಕಾಂತ್ ಅವರಿಗೆ ಸಿನಿಮಾ ಮಾಡೋ ಅಗತ್ಯವಿಲ್ಲ ಅಂತ ಹೇಳ್ಬೇಡಿ. ಅವ್ರಿಗೆ ಅಗತ್ಯ ಇದೆ. ಯಾಕಂದ್ರೆ, ರಜನಿಕಾಂತ್ ಅವರಿಗೆ ಸಿನಿಮಾನೇ ಜೀವ, ಅವ್ರು ಅದನ್ನು ತುಂಬಾ ಪ್ರೀತಿಸ್ತಾರೆ. 

ಕಲರ್ಸ್ ಕನ್ನಡ ಶೋ ವಿನ್ನರ್ ಬಗ್ಗೆ ಜೀ ಕನ್ನಡ ಪೋಸ್ಟ್, ಅಲ್ಲಿ ಬರೆದಿದ್ದೇನು?

ಸಾಕು, ನಾನು ದುಡ್ಡು ಮಾಡ್ಬಿಟ್ಟೆ ಅಂತಾದ್ರೆ, ದುಡ್ಡೇ ಅವ್ರ ಜೀವನ ಆಗಿದ್ದರೆ ಅವರು ಯಾವತ್ತೋ ಸಿನಿಮಾ ಮಾಡೋದನ್ನಿ ನಿಲ್ಲಿಸಬೇಕಿತ್ತು. ಅವ್ರಿಗೆ ಸಿನಿಮಾ ಜೀವನ, ಅದಕ್ಕೇ ಮಾಡ್ತಾ ಇದಾರೆ. ಹಾಗೇ ತಾನೇ, ಎಲ್ಲರೂ.. ಸಿನಿಮಾನ ಪ್ರೀತಿಸೋರು ಯಾರೂ ಸಿನಿಮಾದಿಂದ ದೂರ ಇರೋಕಾಗಲ್ಲ! ಸಿನಿಮಾನ ಅಂಥವ್ರು ಮಾಡ್ತಾನೇ ಇರ್ತಾರೆ. ದುಡ್ಡು ಮುಖ್ಯ ಅಲ್ಲ ಅಲ್ಲಿ.. 

ಹಾಗಂತ ಅವ್ರು ಆಸೆ ಪಟ್ಟ ತಕ್ಷಣ ಅವ್ರು ಮೇಕಪ್ ಹಾಕ್ಕೊಳ್ಳೋಕೆ ಆಗಲ್ಲ. ಕೆಲವರಿಗೆ ಮಾತ್ರ ಎಷ್ಟೇ ವಯಸ್ಸು ಆದ್ರೂ ಸಿನಿಮಾ ಸಿಗ್ತಾ ಇರುತ್ತೆ.. ಅದೊಂದು ವರ, ತುಂಬಾ ಕಮ್ಮಿ ಜನ್ರಿಗೆ ಅಂಥ ಅನುಗ್ರಹ ಇರುತ್ತೆ.. ರಜನಿ ಸರ್‌ಗೆ ಅಷ್ಟು ವಯಸ್ಸಾದ್ರೂ ಅಷ್ಟೊಂದು ಸ್ಟಾರ್‌ಡಮ್ ಇದೆ  ಅಂದ್ರೆ, ಇನ್ನೂ ಯಂಗ್ ಫ್ಯಾನ್ಸ್ ಇದಾರೆ ಅಂದ್ರೆ ಅದು ಗ್ರೇಟ್...!

ವಿನ್ನರ್ ಹನುಮಂತ ಬಗ್ಗೆ ರನ್ನರ್ ಅಪ್‌ ತ್ರಿವಿಕ್ರಮ್ ಹೇಳಿದ ಮೊದಲ ಮಾತೇನು?

ಈ ಸಂಗತಿ ಸ್ವತಃ ರಜನಿಕಾಂತ್ ಅವ್ರಿಗೆ ತಿಳಿದಿದೆ. ಅದಕ್ಕೇ ಅವ್ರು ಇನ್ನೂ ಸಿನಿಮಾ ಮಾಡ್ತಾ ಇದಾರೆ. ಸಿನಿಮಾ ಅವ್ರಿಗೆ ವೃತ್ತಿ ಆಗಿದ್ದಿದ್ರೆ ಅವ್ರು ಯಾವತ್ತೋ ನಿವೃತ್ತಿ ತಗೋತಾ ಇದ್ರು.. ಆದ್ರೆ ಅವ್ರಿಗೆ ಅದು ಪ್ರವೃತ್ತಿನೂ ಅಲ್ಲ, ಜೀವನ.. ಅಂದ್ರೆ ಅದೇ ಅವ್ರ ಲೈಫ್.. ಆ ಕಾರಣಕ್ಕೇ ಅವ್ರು ಇನ್ನೂ ಸಿನಿಮಾ ಮಾಡ್ತಾ ಇದಾರೆ, ಕನ್ರು ಅವ್ರನ್ನ ಇನ್ನೂ ಸೂಪರ್ ಸ್ಟಾರ್ ಸ್ಥಾನದಲ್ಲೇ ಇಟ್ಟಿದಾರೆ' ಎಂದಿದ್ದಾರೆ ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನೀನೇ ನನ್ನ ಚಾಟ್‌ಜಿಪಿಟಿ, ಬಾಡಿಗಾರ್ಡ್:‌ Rocking Star Yash ಬಗ್ಗೆ ಹೀಗಂದಿದ್ದೇಕೆ ರಾಧಿಕಾ?
ಇದು ಟಾಕ್ಸಿಕ್‌ ಅಲ್ಲ, ಸ್ವೀಟ್‌ ಸುದ್ದಿ.. ಯಶ್‌ಗಾಗಿ ರಾಧಿಕಾ ಪಂಡಿತ್‌ ಬರೆದ ಮನಮೋಹಕ ಸಂದೇಶ ವೈರಲ್!