ಅಣ್ಣಾವ್ರು ಮನೆಲ್ಲಿ 'ತತ್ತಯ್ಯಾ' ಅಂತಿದ್ರು..; ಅದ್ನ ಅಪ್ಪು ಬಾಯಲ್ಲಿ ಕೇಳಿ, ಎಂಥಾ ಸೊಗಸು!

Published : Jan 27, 2025, 08:08 PM ISTUpdated : Jan 27, 2025, 08:40 PM IST
ಅಣ್ಣಾವ್ರು ಮನೆಲ್ಲಿ 'ತತ್ತಯ್ಯಾ' ಅಂತಿದ್ರು..; ಅದ್ನ ಅಪ್ಪು ಬಾಯಲ್ಲಿ ಕೇಳಿ, ಎಂಥಾ ಸೊಗಸು!

ಸಾರಾಂಶ

ಡಾ. ರಾಜ್‌ಕುಮಾರ್ ತಮ್ಮ ಹುಟ್ಟೂರಾದ ಗಾಜನೂರಿನ ಗ್ರಾಮೀಣ ಭಾಷೆಯನ್ನೇ ಮನೆಯಲ್ಲೂ ಬಳಸುತ್ತಿದ್ದರು. ಮುತ್ತುರಾಜ್ ಎಂಬ ಮೂಲ ಹೆಸರಿನ ರಾಜ್, ತಮ್ಮ ಸರಳತೆಗೆ ಹೆಸರಾಗಿದ್ದರು. ಪುನೀತ್ ರಾಜ್‌ಕುಮಾರ್, ತಂದೆ 'ತತ್ತಯ್ಯಾ (ತಗೊಂಡು ಬನ್ನಿ), ದ್ವಾಸೆ (ದೋಸೆ)' ಎಂದು ಹೇಳುತ್ತಿದ್ದರೆಂದು ನೆನಪಿಸಿಕೊಂಡಿದ್ದಾರೆ. ಈ ಸರಳ ಭಾಷೆ ಅವರ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ.

ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರು ಎಂದೂ ತಮ್ಮತನವನ್ನು, ಸರಳ ಜೀವನವನ್ನು ಬದಿಗೊತ್ತಿದವರಲ್ಲ. ಸಿಂಪ್ಲಿಸಿಟಿ ಅನ್ನೋದು ಡಾ ರಾಜ್ ಹಾಗೂ ಅವರ ಕುಟುಂಬಕ್ಕೆ ಯಾವತ್ತೂ ಬಳುವಳಿ ಎಂಬಂತೆ ಇದೆ. ಮನೆಯಲ್ಲಿ ಡಾ ರಾಜ್‌ಕುಮಾರ್ ತಮ್ಮ ಹಳ್ಳಿಯ ಸೊಗಡಿನ ಭಾಷೆಯನ್ನೇ ಮಾತನಾಡುತ್ತಿದ್ದರಂತೆ. ಆ ಕಾಲದಲ್ಲಿ ಅಣ್ಣಾವ್ರ ಮನೆಗೆ ಯಾರೇ ಹೋಗಲಿ, ಅವರೆಲ್ಲರೂ ಡಾ ರಾಜ್‌ಕುಮಾರ್ ಅವರ ಬಾಯಲ್ಲಿ ಅವರ ಹುಟ್ಟಿದ ಊರು 'ಗಾಜನೂರು' ಭಾಷೆಯನ್ನು ಕೇಳಿಯೇ ಇದ್ದರಂತೆ. 

ಹೌದು, ಡಾ ರಾಜ್‌ಕುಮಾರ್ ಅವರು ಹುಟ್ಟಿದ್ದು ಚಾಮರಾಜನಗರ ಜಿಲ್ಲೆ ಸಮೀಪದ ತಮಿಳುನಾಡಿನ ಗಾಜನೂರಿನಲ್ಲಿ. ತಮಿಳುನಾಡಿನ ಈರೋಡ್ ಜಿಲ್ಲೆಯ ಒಂದು ಹಳ್ಳಿ ಗಾಜನೂರು. ಈ ಹಳ್ಳಿಯಲ್ಲಿ 1929ರಲ್ಲಿ (24 April 1929) ಡಾ ರಾಜ್‌ಕುಮಾರ್ ಜನನವಾಗಿದೆ. ಸಿನಿಮಾರಂಗಕ್ಕೆ ಬಂದ ಬಳಿಕ ಅವರು ಡಾ ರಾಜ್‌ಕುಮಾರ್ ಎಂಬ ಹೆಸರಿಂದ ಪ್ರಸಿದ್ದರಾದರು. ಅದರೆ ಅವರ ಮೂಲ ಹೆಸರು ಮುತ್ತುರಾಜ್. 

ರಜನಿಕಾಂತ್ ಜೊತೆಗೇ ಸಿನಿಮಾರಂಗಕ್ಕೆ ಬಂದವರು ಅಪ್ಪು; ಸೀಕ್ರೆಟ್ ಹೊರಹಾಕಿದ ರಮೇಶ್!

ಗಾಜನೂರು ಎಂಬುದು ತಮಿಳುನಾಡಿನಲ್ಲಿ ಇದ್ದರೂ ಕರ್ನಾಟಕದ ಚಾಮರಾಜನಗರದ ಜಿಲ್ಲೆಗೆ ಅತ್ಯಂತ ಸಮೀಪವಿದೆ. ಹೀಗಾಗಿ ಡಾ ರಾಜ್‌ಕುಮಾರ್ ಅವರು ಅಂದು ಮದ್ರಾಸ್ ಪ್ರಾಂತ್ಯದಲ್ಲಿ ಇದ್ದಿದ್ದರಿಂದ (ಕರ್ನಾಟಕ-ತಮಿಳುನಾಡು ಸೇರಿದ್ದವು) ಅವರಿಗೆ ಚಾಮರಾಜನಗರದ ಹಳ್ಳಿಯ ಕನ್ನಡ ಮಾತನಾಡುವ ಅಭ್ಯಾಸವಿತ್ತು. ಹೀಗಾಗಿ ಅವರು ಬೆಂಗಳೂರಿನ ತಮ್ಮ ಮನೆಯಲ್ಲಿ ಕೂಡ ಕನ್ನಡ ಮಾತನಾಡುವಾಗ ಅಲ್ಲಿಯ ಪಕ್ಕಾ ಹಳ್ಳಿಯ ಸೊಗಡಿನ ಭಾಷೆಯನ್ನೇ ಆಡುತ್ತಿದ್ದರು. 

ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಆಗುತ್ತಿರುವ ಒಂದು ವಿಡಿಯೋದಲ್ಲಿ ನಟ ಜಗ್ಗೇಶ್ (Actor Jaggesh) ಅವರು ಪುನೀತ್ ರಾಜ್‌ಕುಮಾರ್ (Puneeth Rajkumar) ಬಳಿ 'ನಿಮ್ಮ ತಂದೆ ಮನೆಯಲ್ಲಿ ಆಡುತ್ತಿದ್ದ ಗ್ರಾಮೀಣ ಸೊಗಡಿನ ಭಾಷೆ ಮಾತಾಡಿ' ಎನ್ನಲು ಪುನೀತ್ ಹೇಳಿದ್ದಾರೆ. ಅಪ್ಪಾಜಿ 'ತತ್ತಯ್ಯಾ' ಅಂತಾ ಇದ್ರು.. ದ್ವಾಸೆ ತತ್ತಯ್ಯಾ ಹೀಗೆ ಎಂದಿದ್ದಾರೆ ಪುನೀತ್ ರಾಜ್‌ಕುಮಾರ್. ತತ್ತಯ್ಯಾ ಅಂದ್ರೆ ತಗೊಂಡು ಬನ್ನಿ ಅಂತ. ದ್ವಾಸೆ ಅಂದ್ರೆ ದೋಸೆ. 

ಹನುಮಂತ ಬಿಗ್ ಬಾಸ್ ಗೆಲ್ಲಲು ಕಾರಣ 'ಇನ್ನೇನೋ ಬೇರೆ' ಇದೆ, ಆಟ ಮಾತ್ರವಲ್ಲ!

ಹಳ್ಳಿ ಕಡೆ ಈಗಲೂ ಹಾಗೆ, ಅಲ್ಲಿ ಭಾಷೆ ಉಚ್ಛರಿಸುವ ರೀತಿ ಬೇರೆಯದೇ ಆಗಿದೆ. ಆದರೆ, ಅಲ್ಲಿನವರಿಗೆ ಅಥವಾ ಅದು ಗೊತ್ತಿದ್ದವರಿಗೆ ಹಾಗೆ ಮಾತನಾಡಿದರೆ ಅರ್ಥವಾಗುತ್ತದೆ. ಹಾಗೇ ಮಾತನಾಡಿದರೆ ಮಾತ್ರ ಅರ್ಥವಾಗುತ್ತದೆ ಎಂಬುದೇ ಸರಿ. ಅದೇನೇ ಆಗಿರಲಿ, ಡಾ ರಾಜ್‌ ಅಂದರೆ ತಮ್ಮ ಅಪ್ಪಾಜಿ ಆಡುತ್ತಿದ್ದ ಮಾತನ್ನು ತಮ್ಮ ಎಂದಿನ ನಗುಮೊಗದಲ್ಲಿ ಹೇಳಿದ ಪುನೀತ್ ಮೆಚ್ಚಿ ಹಲವು ಕಾಮೆಂಟ್‌ಗಳು ಬಂದಿವೆ. 'ತತ್ತಯ್ಯಾ' ಹೇಳುವಾಗ ಅವರ ಮುಖದಲ್ಲಿ ಅರಳಿದ ನಗುವನ್ನೂ ಯಾರೂ ಮರೆಯಲು ಸಾಧ್ಯವಿಲ್ಲ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ