ಅಮೆಜಾನ್ ಕಾಡಿನೊಳಗೆ ಗುರಿ ಇಟ್ಟ ರಾಜಮೌಳಿ; ಮಹೇಶ್‌ ಬಾಬುಗೋಸ್ಕರ್ 500 ರಿಂದ 750 ಕೋಟಿ ಖರ್ಚು ಮಾಡುತ್ತಿರುವುದು ನಿಜವೇ?

By Vaishnavi Chandrashekar  |  First Published Sep 19, 2024, 4:36 PM IST

ಹೊಸ ಪ್ರಾಜೆಕ್ಟ್‌ಗೆ ಕೈ ಹಾಕಿದ ರಾಜಮೌಳಿ. ಮಹೇಶ್ ಬಾಬು ಈ ಪಾತ್ರಕ್ಕೆ ಸೂಟ್ ಆಗ್ತಾರಾ ಅನ್ನೋದು ನೆಟ್ಟಿಗರ ಪ್ರಶ್ನೆ...
 


ಡೈರೆಕ್ಟರ್ ರಾಜಮೌಳಿ ಗುರಿ ಇಟ್ರೆ ಮುಗೀತು ಆ ಗುರಿ ಮುಟ್ಟದೇ ಹಿಂದೆ ಸರಿಯೋ ಧೀರ ರಾಜಮೌಳಿ ಅಲ್ಲವೇ ಅಲ್ಲ. ಈ ಮಾತನ್ನು ಪ್ರತಿಯೊಂದು ಸಿನಿಮಾಗಳಲ್ಲಿ ಪ್ರ್ಯೂ ಮಾಡಿಕೊಂಡು ಬಂದಿದ್ದಾರೆ ರಾಜಮೌಳಿ. ಈಗ ಜಕ್ಕಣ್ಣ ಮತ್ತೊಂದು ದೊಡ್ಡ ಗುರಿ ಇಟ್ಟಿದ್ದಾರೆ. ಆ ಗುರಿ ಈಗ ಅಮೆಜಾನ್ ಕಾಡಿನೊಳಗೆ ಹೋಗಿದೆ. ಹಾಗಾದ್ರೆ ಜಕ್ಕಣ್ಣದ ಅಮೆಜಾನ್ ಕಾಡಿನ ಗುರಿ ಏನು..? ಆ ಗುರಿಗೆ ಸಾತ್ ಕೊಡುತ್ತಿರೋ ಹೀರೋ ಯಾರು..? 

ರಾಜಮೌಳಿ ಸಿನಿಮಾಗಳ ಮೇಲೆ ಇಡೀ ದೇಶ ಕಣ್ಣಿಟ್ಟಿರುತ್ತೆ. ಅದರಲ್ಲೂ RRR​ ಸಿನಿಮಾಗೆ ಆಸ್ಕರ್ ಬಂದ ಮೇಲಂತೂ ರಾಜಮೌಳಿ ಬಗ್ಗೆ ಹಾಲಿವುಡ್​ ಜಗತ್ತು ತಲೆ ಕೆಡಿಸಿಕೊಂಡಿದೆ. ಮೌಳಿ ತೆರೆ ಮೇಲೆ ಮ್ಯಾಜಿಕ್ ಮಾಡ್ತಾರೆ ಅನ್ನೋ ನಂಬಿಕೆ ಅವರದ್ದು. ಆ ನಂಬಿಕೆ ಹುಟ್ಟಿಸಿದ ಸಿನಿಮಾಗಳು ಬಾಹುಬಲಿ ಹಾಗು ಆರ್​ಆರ್​ಆರ್​... ಈಗ ಈ ಜಕ್ಕಣ್ಣ ಹಾಗೂ ನಟ ಮಹೇಶ್​ ಬಾಬು ಸೇರಿ ಹೊಸ ಪ್ರಾಜೆಕ್ಟ್​ ಒಂದಕ್ಕೆ ಓಂಕಾರ ಹಾಡಿದ್ದಾರೆ. ಆ ಪ್ರಾಜೆಕ್ಟ್​ ಹೇಗಿರುತ್ತೆ ಅಂತ ಕೇಳಿದ್ರೆ ಅಮೇಜಾನ್ ಕಾಡನ್ನ ಒಂದು ರೌಂಡ್ ಹಾಕೋ ಹಾಗಿರುತ್ತೆ. ರಾಜಮೌಳಿ ಜನರ ನಾಡಿಮಿಡಿತವನ್ನು ಸ್ಪಷ್ಟವಾಗಿ ಅರಿತ ಕೆಲವೇ ನಿರ್ದೇಶಕರಲ್ಲಿ ಒಬ್ಬರು. RRR ಸಿನಿಮಾ ಬಂದು ಎರಡು ವರ್ಷಗಳ ನಂತರ ಮತ್ತೆ ಆ್ಯಕ್ಷನ್ ಕಟ್​ ಹೇಳಲು ಸಜ್ಜಾಗಿದ್ದಾರೆ ರಾಜಮೌಳಿ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುವಿಗೆ ಈ ಬಾರಿ ರಾಜಮೌಳಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಬಾರಿಯ ತಮ್ಮ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿರುವ ರಾಜಮೌಳಿ ಹಾಲಿವುಡ್​ನ ಬಾಂಡ್​ ಮಾದರಿ ಸಿನಿಮಾಕ್ಕೆ ಸಜ್ಜಾಗಿದ್ದಾರೆ. ವಿಶೇಷ ಅಂದ್ರೆ ಅಮೆಜಾನ್ ಕಾಡಲ್ಲಿ ಸಾಗುವ ಈ ಕಥೆ ಈ ಸಿನಿಮಾದಲ್ಲಿ ಇರಲಿದೆಯಂತೆ. ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು ಬಾಂಡ್​​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Tap to resize

Latest Videos

undefined

ಹಿಂದೆ ಮಾಡಿದ್ದೆಲ್ಲಾ ಬುದ್ಧಿವಂತರಿಗೆ ಆದರೆ ಇದು ಅತಿ ಬುದ್ಧಿವಂತರಿಗೆ ಮಾತ್ರ; UI ಸತ್ಯ ಬಿಚ್ಚಿಟ್ಟ ಉಪ್ಪಿ!

ಅಮೇಜಾನ್ ಕಾಡು ಅದ್ಭುತಗಳ ಆಗರ.. ಇಲ್ಲಿ ಪ್ರಪಂಚದ ವಿಸ್ಮಯಗಳೆಲ್ಲಾ ಕಾಣೋಕೆ ಸಿಗುತ್ತೆ. ಇದೇ ಅಮೆಜಾನ್​ನ ದಟ್ಟ ಕಾಡಿನಲ್ಲಿ ಸೆಟ್ ಹಾಕಿ ಸಿನಿಮಾ ಮಾಡುವ ಬಹುದೊಡ್ಡ ಕನಸಿನಲ್ಲಿ ಸದ್ಯ ರಾಜಮೌಳಿ ಟೀಮ್ ಇದೆ. ಇದೊಂದು ಅದ್ಭುತ ಹಾಗೂ ಥ್ರಿಲ್ಲರ್ ಸಿನಿಮಾವಾಗಿ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಸಿನಿಮಾಗೆ ದುರ್ಗಾ ಆರ್ಟ್ಸ್​ ಬ್ಯಾನರ್​​ನ ಕೆ.ಎಲ್​ ನಾರಾಯಣ ಬಂಡಾವಳ ಹೂಡಲಿದ್ದಾರೆ. 2027ರಲ್ಲಿ ಈ ಸಿನಿಮಾ ಬೆಳ್ಳೆ ತೆರೆಗೆ ಬಂದು ಅಪ್ಪಳಿಸಲಿದ್ದು ಈ ಸಿನಿಮಾ ಬಜೆಟ್​​ 500 ರಿಂದ 750 ಕೋಟಿ ದಾಟಲಿದೆ. ಈಗಾಗಲೇ ಸಿನಿಮಾಗೆ SSMB29 ಎಂದು ಟೈಟಲ್ ನೀಡಲಾಗಿದ್ದು ಡಿಸೆಂಬರ್​ನಿಂದ ಸಿನಿಮಾ ಶುರುವಾಗುವ ಸೂಚನೆ ಸಿಕ್ಕಿದೆ. ಹೀಗಾಗಿ ಈ ಬಾರಿ ಜಕ್ಕಣ್ಣ ಯಾವ ರೀತಿಯ ದೃಶ್ಯಕಾವ್ಯವನ್ನು ಪ್ರೇಕ್ಷಕರಿಗೆ ಕಟ್ಟಿಕೊಡಲಿದ್ದಾರೆ ಅನ್ನೋ ಕುತೂಹಲ ಸದ್ಯ ಚಿತ್ರಪ್ರೇಮಿಗಳಲ್ಲಿ ಮೂಡಿದೆ.

ಜೈಲಿನಲ್ಲಿ ಅಮೋಘ 100ನೇ ದಿನ; ನಟ ದರ್ಶನ್ ಲಿಸ್ಟ್‌ ಸೇರಿದ ಮತ್ತೊಂದು ರೆಕಾರ್ಡ್!

click me!