ಬೇಕಿದ್ರೆ ಐದಾರು ಮದುವೆ ಆಗ್ತೀನಿ, ನಿರ್ದೇಶನ ಅದಕ್ಕಿಂತ ಕಷ್ಟ: ತಲೆಗೆ ಹುಳ ಬಿಟ್ಟ ಉಪೇಂದ್ರ

By Kannadaprabha News  |  First Published Sep 19, 2024, 4:09 PM IST

‘ಎ’ ಸಿನಿಮಾವನ್ನು ಮಾಡಿದಾಗ ‘ಬುದ್ಧಿವಂತರಿಗೆ ಮಾತ್ರ’ ಅಂತ ಹೇಳಿದ್ದೆ. ಆ ಲೆಕ್ಕದಲ್ಲಿ ‘ಯುಐ’ ಸಿನಿಮಾ ಅತಿ ಬುದ್ಧಿವಂತರಿಗೆ ಮಾಡಿರುವ ಸಿನಿಮಾ. ಏಕೆಂದರೆ ಪ್ರೇಕ್ಷಕರ ಬುದ್ಧಿಮಟ್ಟ ಸಿನಿಮಾ ಮಾಡುವವರ ಬುದ್ಧಿಮತ್ತೆಗಿಂತ ಯಾವತ್ತೂ ಮೇಲ್ಮಟ್ಟದಲ್ಲೇ ಇರುತ್ತೆ.


‘ನೀವು ಬರೀ ನಟನೆಗೇ ಒತ್ತು ಕೊಡುತ್ತಿದ್ದೀರಿ, ಡೈರೆಕ್ಷನ್ ಯಾಕೆ ಮಾಡ್ತಿಲ್ಲ ಅಂತ ತುಂಬಾ ಜನ ಕೇಳ್ತಾರೆ. ಆದರೆ ಅದರ ಕಷ್ಟ ನನಗೇ ಗೊತ್ತು, ಬೇಕಿದ್ರೆ ಐದಾರು ಮದುವೆ ಆಗ್ತೀನಿ, ನಿರ್ದೇಶನ ಅದಕ್ಕಿಂತ ಕಷ್ಟ’ ಎಂದು ಉಪೇಂದ್ರ ಹೇಳಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯ ನಿವಾಸದಲ್ಲಿ ನಡೆದ ಹುಟ್ಟುಹಬ್ಬ ಸಂಭ್ರಮಾಚರಣೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ, ‘ಯುಐ ತಲೆಗೆ ಹುಳ ಬಿಡುವ ಸಿನಿಮಾ ಅಲ್ಲ, ತಲೆಯಲ್ಲಿರುವ ಹುಳ ತೆಗೆಯೋ ಸಿನಿಮಾ. 

‘ಎ’ ಸಿನಿಮಾವನ್ನು ಮಾಡಿದಾಗ ‘ಬುದ್ಧಿವಂತರಿಗೆ ಮಾತ್ರ’ ಅಂತ ಹೇಳಿದ್ದೆ. ಆ ಲೆಕ್ಕದಲ್ಲಿ ‘ಯುಐ’ ಸಿನಿಮಾ ಅತಿ ಬುದ್ಧಿವಂತರಿಗೆ ಮಾಡಿರುವ ಸಿನಿಮಾ. ಏಕೆಂದರೆ ಪ್ರೇಕ್ಷಕರ ಬುದ್ಧಿಮಟ್ಟ ಸಿನಿಮಾ ಮಾಡುವವರ ಬುದ್ಧಿಮತ್ತೆಗಿಂತ ಯಾವತ್ತೂ ಮೇಲ್ಮಟ್ಟದಲ್ಲೇ ಇರುತ್ತೆ. ಸಿನಿಮಾ ಪೋಸ್ಟರ್‌ನ ಡಿಸೈನ್‌ ನೋಡಿಯೇ ಅವ್ರು ಡಿಸೈಡ್ ಮಾಡ್ತಾರೆ ಈ ಸಿನಿಮಾಕ್ಕೆ ಹೋಗಬೇಕಾ ಬೇಡವಾ ಅಂತ. ಹೀಗಿರುವಾಗ ನಾವು ಮೇಕಿಂಗ್ ಬಗ್ಗೆ ತಲೆ ಕೆಡಿಸಿಕೊಳ್ಳಲೇ ಬೇಕಾಗುತ್ತದೆ. ಹೀಗಾಗಿ ಬದಲಾದ ಬುದ್ಧಿವಂತ ಪ್ರೇಕ್ಷಕರಿಗೆ ತಕ್ಕುದಾದ, ಪ್ಯಾನ್ ಇಂಡಿಯಾ ಸಿನಿಮಾ ರೆಡಿ ಮಾಡಲು ಹೆಚ್ಚು ಸಮಯ ಹಿಡಿಯುತ್ತದೆ’ ಎಂದೂ ಉಪೇಂದ್ರ ಹೇಳಿದ್ದಾರೆ. 

Tap to resize

Latest Videos

undefined

‘ಮುಂದಿನ ದಿನಗಳಲ್ಲಿ ವರ್ಷಕ್ಕೆ ಎರಡಾದರೂ ಸಿನಿಮಾ ಮಾಡುತ್ತೇನೆ’ ಎಂದೂ ಉಪೇಂದ್ರ ತಿಳಿಸಿದ್ದಾರೆ. ನಿರ್ಮಾಪಕ ಜಿ ಮನೋಹರನ್, ‘ಯುಐ ಸಿನಿಮಾ ಅಕ್ಟೋಬರ್‌ನಲ್ಲಿ ರಿಲೀಸ್ ಆಗ್ತಿರೋದು 200 ಪರ್ಸೆಂಟ್ ನಿಜ’ ಎಂದರು. ನಾಯಕಿ ರೀಷ್ಮಾ ನಾಣಯ್ಯ, ಲಹರಿ ವೇಲು, ನವೀನ್ ಮನೋಹರನ್‌, ಕಲಾ ನಿರ್ದೇಶಕ ಶಿವಕುಮಾರ್, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಇದ್ದರು.

ನಾನು ಏಕಲವ್ಯ, ರಜನಿಕಾಂತ್ ದ್ರೋಣಾಚಾರ್ಯ: ಯೋಗಿಯಂತಹ ವ್ಯಕ್ತಿ ಜತೆ ನಟಿಸೋ ಭಾಗ್ಯ ಸಿಕ್ಕಿದೆ ಎಂದ ಉಪೇಂದ್ರ

45 ಪೋಸ್ಟರ್ ಬಿಡುಗಡೆ: ಉಪೇಂದ್ರ ಜನ್ಮದಿನದ ಪ್ರಯುಕ್ತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ನಿರ್ದೇಶನದ ‘45’ ಸಿನಿಮಾದ ಹೊಸ ಪೋಸ್ಟರ್‌ ಬಿಡುಗಡೆಯಾಗಿದೆ. ಉಪೇಂದ್ರ ನಿವಾಸಕ್ಕೆ ಈ ಸಿನಿಮಾದ ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಅರ್ಜುನ್‌ ಜನ್ಯ ತೆರಳಿ ಜನ್ಮದಿನಕ್ಕೆ ಶುಭ ಕೋರಿದರು.

click me!