ಕನಸಿನ ರಾಣಿ ಮಾಲಾಶ್ರೀ ನಟನೆಯ ಹೊಸ ಸಿನಿಮಾ ತಾಯಿನೇ ದೇವರ?

By Kannadaprabha NewsFirst Published Sep 19, 2024, 4:20 PM IST
Highlights

‘ತಾಯಿನೇ ದೇವರ?’ ಚಿತ್ರಕ್ಕೆ ಇತ್ತೀಚಿಗೆ ಮುಹೂರ್ತ ನಡೆದಿದೆ. ಡಾ ಸಾಯಿ ಸತೀಶ್ ತೋಟಯ್ಯ ಈ ಸಿನಿಮಾ ಬರೆದು, ನಿರ್ಮಾಣ ಮಾಡುತ್ತಿದ್ದಾರೆ. ಅಭಿಮಾನ್‌ ಎಚ್‌ ಕಾಗಿನಲ್ಲಿ ನಿರ್ದೇಶಿಸುತ್ತಿದ್ದಾರೆ.

‘ತಾಯಿನೇ ದೇವರ?’ ಚಿತ್ರಕ್ಕೆ ಇತ್ತೀಚಿಗೆ ಮುಹೂರ್ತ ನಡೆದಿದೆ. ಡಾ ಸಾಯಿ ಸತೀಶ್ ತೋಟಯ್ಯ ಈ ಸಿನಿಮಾ ಬರೆದು, ನಿರ್ಮಾಣ ಮಾಡುತ್ತಿದ್ದಾರೆ. ಅಭಿಮಾನ್‌ ಎಚ್‌ ಕಾಗಿನಲ್ಲಿ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಮಾಲಾಶ್ರೀ, ‘ಇಷ್ಟು ವರ್ಷ ಪೋಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡು ವಿಲನ್‌ಗಳ ಜತೆಗೆ ಫೈಟ್‌ ಮಾಡುತ್ತಿದ್ದೆ. ಈಗ ಹೊಸ ರೀತಿಯ ಚಿತ್ರದಲ್ಲಿ ನಟಿಸುತ್ತಿದ್ದೇನೆ. 

ಸಿನಿಮಾದಲ್ಲಿ ಭವ್ಯ ಅವರೊಂದಿಗೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ’ ಎಂದರು. ಮಾಜಿ ಸಚಿವ ಹೆಚ್‌ ಎಂ ರೇವಣ್ಣ ಅವರ ತಮ್ಮನ ಮಗಳು ಅನ್ವಿತಾ ಮೂರ್ತಿ ಚಿತ್ರದ ನಾಯಕಿಯರಲ್ಲೊಬ್ಬರು. ದೊಡ್ಡಣ್ಣ, ಡಿಂಗ್ರಿ ನಾಗರಾಜ್‌, ಹೊನ್ನವಳ್ಳಿ ಕೃಷ್ಣ, ಬಾಲರಾಜ್‌, ಸ್ವಾತಿ ಗುರುದತ್‌, ರೇಖಾ ದಾಸ್‌, ಅಪೂರ್ವ, ಜೀವಿತಾ ಪ್ರಕಾಶ್‌ ತಾರಾಬಳಗದಲ್ಲಿದ್ದಾರೆ.

Latest Videos

ದೇವರು, ದೆವ್ವ ಜಿಜ್ಞಾಸೆಯ ಕತೆ ರಣಾಕ್ಷ: ದೇವರು ಹಾಗೂ ದೆವ್ವದ ನಡುವಿನ ಸಂಘರ್ಷದ ಕತೆಯನ್ನು ಹೇಳುವ ‘ರಣಾಕ್ಷ’ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ನಾಯಕನಾಗಿ ನಟಿಸಿದ್ದು, ಕೆ ರಾಘವ ನಿರ್ದೇಶಿಸಿದ್ದಾರೆ. ರಾಮು ನಿರ್ಮಿಸಿದ್ದಾರೆ. ರಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ರಾಘವ, ‘ಕಲಾವಿದನಾಗಿ ಬಂದವನು ನಿರ್ದೇಶಕನಾಗಿದ್ದೇನೆ. ‘ರಣಾಕ್ಷ’ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ. ಫ್ಯಾಮಿಲಿ ಹಿನ್ನೆಲೆಯಲ್ಲಿ ನಡೆಯುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ’ ಎಂದರು.

ಬೇಕಿದ್ರೆ ಐದಾರು ಮದುವೆ ಆಗ್ತೀನಿ, ನಿರ್ದೇಶನ ಅದಕ್ಕಿಂತ ಕಷ್ಟ: ತಲೆಗೆ ಹುಳ ಬಿಟ್ಟ ಉಪೇಂದ್ರ

ರಾಮು, ‘ಹಳ್ಳಿ ಸೊಗಡಿನ ಕೌಟುಂಬಿಕ ಕತೆ ಇರೋ ಚಿತ್ರ. ವರ್ಷಕ್ಕೆ ಒಂದೆರಡು ಸಿನಿಮಾ ಮಾಡುವ ಆಸೆಯಿಂದ ಚಿತ್ರರಂಗಕ್ಕೆ ಬಂದಿದ್ದೇನೆ’ ಎಂದರು. ಸೀರುಂಡೆ ರಘು, ‘20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ, ಮೊದಲಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು. ರಾಘವ ಮಾತನಾಡಿ, ‘ರಣಾಕ್ಷ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ. ಮೊದಲ ಬಾರಿಗೆ ರಘು ಕಾಮಿಡಿ ಬಿಟ್ಟು ಕ್ಲಾಸ್, ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ರಕ್ಷಾ ಪಾತ್ರ ವಿಶೇಷವಾಗಿದೆ. ಇಡೀ ಕತೆ ಹುಡುಗಿಯೊಬ್ಬಳ ಮೇಲೆ ನಿಂತಿರುತ್ತೆ’ ಎಂದರು. ವಿಶಾಲ್‌ ಆಲಾಪ್‌ ಮ್ಯೂಸಿಕ್‌, ದೀಪಕ್‌ ಕುಮಾರ್‌ ಕ್ಯಾಮೆರಾ ಚಿತ್ರಕ್ಕಿದೆ.

click me!