
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಗ್ಗೆ ವ್ಯಕ್ತಿಯೊಬ್ಬ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನಿರ್ದೇಶಕ ನಂದಕಿಶೋರ್ ಅವರ ಗಮನಕ್ಕೆ ಬಂದಿದ್ದು ಫುಲ್ ಗರಂ ಆಗಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡಿದವನ ವಿರುದ್ಧ ನಂದಕಿಶೋರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಂದಕಿಶೋರ್ ವಿಡಿಯೋ ಮಾಡಿದ್ದು, ಕನ್ನಡ ಚಿತ್ರರಂಗದ ಯಾವುದೇ ಕಲಾವಿದರ ಬಗ್ಗೆ ಮಾತನಾಡುವುದಕ್ಕೂ ಮುನ್ನ ಎಚ್ಚರಿಕೆ ಇರಲಿ ಎಂದು ಖಡಕ್ ಎಚ್ಚರಿಗೆ ನೀಡಿದ್ದಾರೆ.
'ಇವಾಗ ಒಂದು ವಿಡಿಯೋ ನೋಡಿದೆ ಕನ್ನಡ ಚಿತ್ರರಂಗದ ಮೇರು ನಟ ಕಿಚ್ಚ ಸುದೀಪ್ ಅವರ ಬಗ್ಗೆ ವ್ಯಕ್ತಿಯೊಬ್ಬ ತುಂಬಾ ತುಚ್ಛವಾಗಿ ಮಾತನಾಡಿದ ಒಂದು ವಿಡಿಯೋ ನೋಡಿದೆ. ಕನ್ನಡದ ಕಲಾಭಿಮಾನಿಗಳೇ ನಮ್ಮ ತಂದೆ-ತಾಯಿ ಇದ್ದಂತೆ. ಕನ್ನಡದ ನಟರು ಅವರದೇ ಚೌಕಟ್ಟಿನಲ್ಲಿ ಅನೇಕ ಸಹಾಯಗಳನ್ನು ಮಾಡಿದ್ದಾರೆ. ಕಲಾಭಿಮಾನಿಗಳನ್ನು ತಲೆಮೇಲೆ ಎತ್ತಿಕೊಂಡು ತಿರುಗಾಡಿದ ಉದಾಹರಣೆ ಇದೆ. ಚಿತ್ರರಂಗ ಒಂದು ಕುಟುಂಬ ಆದ್ದರಿಂದ ನಾನು ಈಗ ಮಾತನಾಡುತ್ತಿದ್ದೇನೆ' ಎಂದು ನಂದ ಕಿಶೋರ್ ಮಾತು ಶುರುಮಾಡಿದ್ದಾರೆ.
'ಸುದೀಪ್ ಅವರ ಸಾಧನೆ ದೊಡ್ಡದು. ಕನ್ನಡ ಚಿತ್ರರಂಗದ ಕಡೆಗೆ ಇಡೀ ಭಾರತ ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ಇಂಥ ನಾಯಕರು ಕಾರಣ. ಅಂಥವರ ಬಗ್ಗೆ ದಾರಿಯಲ್ಲಿ ಹೋಗುವವರೆಲ್ಲ ಏನೋ ಒಂದು ಮಾತನಾಡುತ್ತಾರೆ ಎಂದರೆ ಬಹಳ ತಪ್ಪಾಗುತ್ತದೆ. ಕನ್ನಡದ ನಟರಿಗೆ ಸುದೀಪ್ ಅವರಿಗಾಗಲಿ ನಪುಂಸಕರು ಎಂದು ಹೇಳುವ ನಿನ್ನ ಭಾಷೆಯಲ್ಲಿಯೇ ಗೊತ್ತಾಗುತ್ತದೆ ನೀನು ಎಂಥ ಸಂಸ್ಕಾರದಿಂದ ಬಂದಿದ್ದೀಯ ಎಂಬುದು. ನಿನ್ನ ಪ್ರಚಾರಕ್ಕಾಗಿ ಕನ್ನಡದ ಧೀಮಂತ ನಟರ ಹೆಸರನ್ನು ಉಪಯೋಗಿಸಿಕೊಂಡು, ಅವರಿಗೆ ಅವಹೇಳನಕಾರಿಯಾದ ಮಾತುಗಳನ್ನು ಹೇಳಿದ್ದೀಯ. ನೀನು ನಪುಂಸಕನಾಗಿಲ್ಲದೇ ಇದ್ದರೆ, ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿದ್ದೀಯಾ?' ಎಂದು ಎಂದು ನಂದಕಿಶೋರ್ ಗರಂ ಆಗಿದ್ದಾರೆ.
Dance Karnataka Dance: ಕೈಯಿಲ್ಲದ ಅದ್ಭುತ ಡ್ಯಾನ್ಸರ್‌ನ ಬಾಚಿ ತಬ್ಬಿದ್ರು ಕಿಚ್ಚ ಸುದೀಪ್
'ಕನ್ನಡ ಚಿತ್ರರಂಗದವರ ಬಗ್ಗೆ ಮಾತನಾಡಬೇಕಾದರೆ ನಿನಗೊಂದು ಯೋಗ್ಯತೆ ಇರಬೇಕು. ಇಲ್ಲದಿದ್ದರೆ ನಿನ್ನಂಥವರಿಗೆ ಬೀದಿಯಲ್ಲಿ ನಿಲ್ಲಿಸಿ ಮೆಟ್ಟಲ್ಲಿ ಹೊಡಿತಾರೆ. ಮೊಬೈಲ್ ಇದೆ ಎಂಬ ಕಾರಣಕ್ಕೆ ಎಲ್ಲಿ ಬೇಕಾದರೂ ಅಪ್ಲೋಡ್ ಮಾಡಬಹುದು ಅಂತ ಈ ರೀತಿ ಮಾತನಾಡಬಾರದು. ಯಾರಿಂದಲಾದರೂ ತಪ್ಪಾಗಿದ್ದರೆ ವಾಣಿಜ್ಯ ಮಂಡಳಿಗೆ ದೂರು ನೀಡು' ಎಂದು ನಂದಕಿಶೋರ್ ಹೇಳಿದ್ದಾರೆ.
ಸುದೀಪ್ ಅಭಿಮಾನಿಗಳು ಇದೀಗ ಆ ವ್ಯಕ್ತಿಯನ್ನ ಹುಡುಕುತ್ತಿದ್ದಾರೆ. ಆದರೆ ಆ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಪೋಸ್ಟ್ ಮಾಡಿ ಅಡಗಿಕೊಂಡಿದ್ದಾನೆ. ಆದರೆ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಸುದೀಪ್‌ರಿಂದ ಮತ್ತೊಂದು ಮಹತ್ತರ ಕಾರ್ಯ; ಅನಾಥ ಮಹಿಳೆಗೆ ಮನೆ ನಿರ್ಮಾಣ
ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಹುನಿರೀಕ್ಷೆಯ ವಿಕ್ರಾಂತ್ ರೋಣ ಜುಲೈ 28ಕ್ಕೆ ರಿಲೀಸ್ ಆಗುತ್ತಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.