ಖ್ಯಾತ ರಂಗಭೂಮಿ ಕಲಾವಿದ ಗುಬ್ಬಿ ವೀರಣ್ಣ ಪುತ್ರಿ, ನಟಿ ಹೇಮಲತಾ ನಿಧನ

Published : Jul 03, 2022, 12:03 PM IST
ಖ್ಯಾತ ರಂಗಭೂಮಿ ಕಲಾವಿದ ಗುಬ್ಬಿ ವೀರಣ್ಣ ಪುತ್ರಿ, ನಟಿ ಹೇಮಲತಾ ನಿಧನ

ಸಾರಾಂಶ

ಖ್ಯಾತ ರಂಗಭೂಮಿ ಕಲಾವಿದ ಗುಬ್ಬಿ ವೀರಣ್ಣ (Famous Theatre Artist Gubbi Veeranna ) ಪುತ್ರಿ ಜಿ.ವಿ ಹೇಮಲತಾ (Hemalatha)ಹೃದಯಘಾತದಿಂದ (Heartattack) ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರದ ಸೋಮೇಶ್ವರ ಬಡವಾಣೆಯಲ್ಲಿ ಹೇಮಲತಾ ವಾಸಿಸುತ್ತಿದ್ದರು. 

ಖ್ಯಾತ ರಂಗಭೂಮಿ ಕಲಾವಿದ ಗುಬ್ಬಿ ವೀರಣ್ಣ (Famous Theatre Artist Gubbi Veeranna ) ಪುತ್ರಿ ಜಿ.ವಿ ಹೇಮಲತಾ (Hemalatha)ಹೃದಯಘಾತದಿಂದ (Heartattack) ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರದ ಸೋಮೇಶ್ವರ ಬಡವಾಣೆಯಲ್ಲಿ ಹೇಮಲತಾ ವಾಸಿಸುತ್ತಿದ್ದರು. ತನ್ನ ನಿವಾಸದಲ್ಲೇ ಹೇಮಲತಾ ಇಂದು (ಜುಲೈ 3) ಬೆಳಗ್ಗೆ ಇಹಲೋಕ ತ್ಯಾಜಿಸಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದು ಎಲ್ಲರೂ ಅಮೆರಿಕಾದಲ್ಲಿ ವಾಸವಿದ್ದಾರೆ. ಹೇಮಲತಾ ತನ್ನ ಸಹೋದರನ ಮಗಳು ಅಂದರೆ ಗುಬ್ಬಿ ವೀರಣ್ಣನವರ ಪುತ್ರ ಗುರುಸ್ವಾಮಿ ಅವರ ಪುತ್ರಿ ಜಯಭಾರತಿ ಅವರ ಮನೆಯಲ್ಲಿ ವಾಸವಾಗಿದ್ದರು.

ಜಿವಿ ಹೇಮಲತಾ ಅವರಿಗೆ ಕಳೆದ ಎರಡು ದಿನಗಳ ಹಿಂದೆಯೇ ಲಘು ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ. ಬಾಶೆಟ್ಟಿಹಳ್ಳಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಹೇಮಲತಾ ಕೊನೆಯುಸಿರೆಳೆದಿದ್ದಾರೆ. ಮೂಲತಃ ಭರತನಾಟ್ಯ ಕಲಾವಿದೆಯಾದ ಹೇಮಲತಾ ಅನೇಕ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಡಾ.ರಾಜ್ ಕುಮಾರ್ ಜೊತೆ ಎಮ್ಮೆ ತಮ್ಮಣ್ಣ ಸಿನಿಮಾದಲ್ಲಿ ಹೇಮಲತಾ ನಟಿಸಿದ್ದರು. ಇನ್ನು ನಟ ಕಲ್ಯಾಣ್ ಕುಮಾರ್ ಜೊತೆ ಕಲಾವತಿ ಸಿನಿಮಾದಲ್ಲೂ ನಾಯಕಿಯಾಗಿ ಮಿಂಚಿದ್ದರು. ನಟ ಉದಯ್ ಸಿನಿಮಾದಲ್ಲಿಯೂ ನಟಿಸಿದ್ದರು. 

ಪತಿಯನ್ನು ಕಳೆದುಕೊಂಡ ದುಃಖದಲ್ಲೇ ವಿಶೇಷ ಮನವಿ ಮಾಡಿದ ನಟಿ ಮೀನಾ

ಹೇಮಲತಾ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು ಮತ್ತು ರಂಗಭೂಮಿ ದಿಗ್ಗಜರು ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ಪ್ರೀತಂ ಗುಬ್ಬಿ, ಹಿರಿಯ ನಟಿ, ರಂಗಬೂಮಿ ಕಲಾವಿದೆ ಜಯಶ್ರಿ ಸೇರಿದಂತೆ ಅನೇಕರ ಸಂತಾಪ ಸೂಚಿಸಿದ್ದಾರೆ. ಹೇಮಲತಾ ಮೃತದೇಹವನ್ನು ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಮೆಡಿಕಲ್ ಆಸ್ಪತ್ರೆಗೆ ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?