
‘ಎದ್ದೇಳು ಮಂಜುನಾಥ’ (Eddelu Manjunatha) ಎಂದ ಕೂಡಲೇ ನೆನಪಾಗುವುದೇ ಮಠ ಗುರುಪ್ರಸಾದ್ (Mata Guruprasad) ಹಾಗೂ ಜಗ್ಗೇಶ್ (Jaggesh). ಈಗ ‘ಎದ್ದೇಳು ಮಂಜುನಾಥ 2’ (Eddelu Manjunatha 2) ಚಿತ್ರೀಕರಣ ಮುಗಿಸಿಕೊಂಡು ತೆರೆಗೆ ಬರಲು ಸಜ್ಜಾಗಿದೆ. ಆದರೆ ಪಾರ್ಟ್ 2ನಲ್ಲಿ ಜಗ್ಗೇಶ್ ಇರಲ್ಲ. ಇಲ್ಲಿ ಮಂಜುನಾಥನಾಗಿ ಗುರುಪ್ರಸಾದ್ ಅವರೇ ನಟಿಸುತ್ತಿದ್ದಾರೆ. ಅಥಾರ್ತ್ ಅವರೇ ಚಿತ್ರದ ಹೀರೋ. ರಚಿತಾ ಮಹಾಲಕ್ಷ್ಮೀ (Rachita Mahalakshmi) ಈ ಚಿತ್ರದ ನಾಯಕಿ. ಶರತ್ ಲೋಹಿತಾಶ್ವ, ಶಶಿಧರ್, ರವಿ ದೀಕ್ಷಿತ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಇದು ಸ್ನೇಹಿತರೇ ಸೇರಿ ನಿರ್ಮಿಸಿರುವ ಚಿತ್ರ. ಇದು ಮೊದಲನೇ ಭಾಗದ ಮುಂದುವರಿಕೆಯಲ್ಲ. ಯಾರೂ ಮಾತನಾಡದ ಸೂಕ್ಷ್ಮ ವಿಚಾರಗಳೂ ಕತೆಯಲ್ಲಿದ್ದಾವೆ. ಹೀಗಾಗಿ ವಿವಾದ ಆದರೂ ಅದನ್ನು ಎದುರಿಸಿ ನಿಲ್ಲಲು ಈಗಾಗಲೇ ವಕೀಲರ ತಂಡವನ್ನೂ ಸಿದ್ಧ ಮಾಡಿಕೊಂಡಿರುವುದಾಗಿ ಗುರುಪ್ರಸಾದ್ ಹೇಳುತ್ತಾರೆ.
‘ಎದ್ದೇಳು ಮಂಜುನಾಥ ಚಿತ್ರದ ಹೊತ್ತಿನಲ್ಲೇ ರೆಡಿಯಾದ ಕತೆ ಇದು. ಹತ್ತು ವರ್ಷ ಬೇಕಾಯಿತು ಈ ಚಿತ್ರ ಮಾಡಲು. ರವಿ ದೀಕ್ಷಿತ್, ಮೈಸೂರು ರಮೇಶ್ ಸೇರಿ ಐವತ್ತಕ್ಕೂ ಅಧಿಕ ಜನ ಶೇರ್ ಹೋಲ್ಡರ್‌ಗಳಾಗಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ನಿರ್ಮಾಪಕ ಶಶಿಧರ್ ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದಾರೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಲಿದ್ದೇವೆ. ಕಾಮಿಡಿ ಕ್ರೈಂ ಆಧಾರಿತ ಚಿತ್ರವಿದು. ಕ್ರೈಂ ಎಂದರೆ ಬರೀ ರಕ್ತದೋಕುಳಿ ಅಲ್ಲ. ಬೇರೊಂದು ರೀತಿಯಲ್ಲಿಯೂ ಹೇಳಬಹುದು ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ’ ಎಂದರು ಗುರುಪ್ರಸಾದ್.
James 2022: ಮಾ.17ರಂದು ಏಕಕಾಲಕ್ಕೆ 5 ಭಾಷೆಯಲ್ಲಿ ಪುನೀತ್ ಸಿನಿಮಾ ಬಿಡುಗಡೆ
ಚಿತ್ರದ ನಾಯಕಿ ರಚಿತಾ ಮಹಾಲಕ್ಷ್ಮೀ ಹತ್ತು ವರ್ಷಗಳಿಂದ ಕಿರುತೆರೆಯಲ್ಲಿದ್ದಾರೆ. ತಮಿಳಿನಲ್ಲಿ ಸಾಕಷ್ಟುಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುವ ಅವರು ಈ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಅನೂಪ್ ಸೀಳಿನ್ ಸಂಗೀತ ಇದೆ. ಮನೋಹರ್ ಜೋಶಿ, ಸಿನಿಟೆಕ್ ಸೂರಿ, ವೇಲ್ ಮುರುಗನ್, ಅಶೋಕ್ ಹೀಗೆ ನಾಲ್ಕು ಮಂದಿ ಚಿತ್ರಕ್ಕೆ ಕ್ಯಾಮೆರಾ ಹಿಡಿದ್ದಾರೆ. ಏಪ್ರಿಲ್ ಅಂತ್ಯದಲ್ಲಿ ಓಟಿಟಿ ಅಥವಾ ಥಿಯೇಟರ್‌ನಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ' ಎಂದು ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ಗುರುಪ್ರಸಾದ್.
ನಾನು ಹತ್ತುವರ್ಷಗಳಿಂದ ಕಿರುತೆರೆಯಲ್ಲಿದ್ದೀನಿ. ತಮಿಳಿನಲ್ಲಿ ಸಾಕಷ್ಟು ಕಾರ್ಯಕ್ರಮ ನಡೆಸಿಕೊಟ್ಟಿದ್ದೀನಿ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ‘ಎದ್ದೇಳು ಮಂಜುನಾಥ’ ನನ್ನ ಇಷ್ಟದ ಚಿತ್ರ. ಎಷ್ಟು ಸಾರಿ ನೋಡಿದ್ದೇನೊ ಲೆಕ್ಕ ಇಲ್ಲ. ಈಗ ಅದೇ ಚಿತ್ರದ ಎರಡನೇ ಭಾಗದಲ್ಲಿ ನಾನೇ ನಾಯಕಿಯಾಗಿರುವುದು ನನ್ನ ಪುಣ್ಯ ಎಂದರು ನಾಯಕಿ ರಚಿತಾ ಮಹಾಲಕ್ಷ್ಮಿ.
ಜಗ್ಗೇಶ್-ಗುರುಪ್ರಸಾದ್ ಕಾಂಬಿನೇಷನ್‌ನಲ್ಲಿ ಬರ್ತಿದೆ ರಂಗನಾಯಕ: 'ನವರಸ ನಾಯಕ' ಜಗ್ಗೇಶ್ ಮತ್ತು 'ಮಠ' ಸಿನಿಮಾ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರ ಜುಗಲ್‌ಬಂದಿಯಲ್ಲಿ ಬಂದಿದ್ದ 'ಮಠ', 'ಎದ್ದೇಳು ಮಂಜುನಾಥ' ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈಗ ಮತ್ತೆ ಇದೇ ಜೋಡಿ ಒಂದಾಗಿ 'ರಂಗನಾಯಕ' ಎಂಬ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರೆದುರು ಬರಲು ತಯಾರಿ ನಡೆಸುತ್ತಿದೆ. ಈ ಸಿನಿಮಾಗಾಗಿ ಅರಮನೆ ಮತ್ತು ಅರಮನೆ ಸುತ್ತಮುತ್ತಲಿನಲ್ಲಿ ಅದ್ಧೂರಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ.
‘ರಂಗನಾಯಕ ಐತಿಹಾಸಿಕ ಸಿನಿಮಾವಾಗಿದೆ. ಐತಿಹಾಸಿಕದ ಜತೆಗೆ ಪ್ರಸ್ತುತ ದಿನದ ಕಥೆಯೂ ಸಹ ಸಿನಿಮಾದಲ್ಲಿದೆ. ರಂಗಗೀತೆಗಳ ಬಗ್ಗೆ ಉತ್ಸಾಹ ಇರುವಂತಹ ಒಬ್ಬ ತುಂಟ ರಾಜನ ಕಥೆ ಬರೆದರೆ ಹೇಗೆ ಎಂದು ಯೋಚಿಸಿ ಇದನ್ನು ಬರೆದಿದ್ದೇನೆ. ನರಂಗನಾಯಕ' ದೊಡ್ಡ ಮಟ್ಟದಲ್ಲಿಆಗುತ್ತಿರುವ ನನ್ನ ಮೊದಲ ಸಿನಿಮಾ ಎಂದು ಗುರುಪ್ರಸಾದ್ ಹೇಳಿದ್ದರು.
Dear Sathya ಟ್ರೇಲರ್ ರಿಲೀಸ್ ಮಾಡಿ ಶುಭ ಹಾರೈಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ!
‘ಗುರುಪ್ರಸಾದ್’ ಅವರು ಬಂದು ಕಥೆ ಹೇಳಿದಾಗ ತುಂಬಾ ಚೆನ್ನಾಗಿದೆ ಎನ್ನಿಸಿತು. ಈಗಾಗಲೇ ಜಗ್ಗೇಶ್ ಹಾಗೂ ಗುರು ಅವರ ಕಾಂಬಿನೇಶನ್ ನಲ್ಲಿ ಬಂದ ಮಠ, ಎದ್ದೇಳು ಮಂಜುನಾಥ ಸಿನಿಮಾಗಳು ಗೆದ್ದಿವೆ. ಜಗ್ಗೇಶ್ ಅವರಿಗೆ ಸೂಕ್ತವಾದ ಕಥೆಯನ್ನೇ ಮಾಡಿಕೊಂಡಿದ್ದಾರೆ. ಬಹಳ ಮಜವಾಗಿರುವ ಸಿನಿಮಾ ಇದು ಎಂದು ವಿಖ್ಯಾತ್ ಹೇಳಿದ್ದಾರೆ. ರಂಗನಾಯಕ ಚಿತ್ರದ ಟೀಸರ್‌ಗಾಗಿ ಗುರುಪ್ರಸಾದ್ ಹಾಗೂ ಜಗ್ಗೇಶ್ ಬೆಳಗಿನ ಜಾವ 4 ಗಂಟೆವರೆಗೆ ಶೂಟಿಂಗ್ ಮಾಡಿರುವುದಾಗಿ ಈ ಹಿಂದೆ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.