Yash: ಮಹಿಳಾ ದಿನಕ್ಕೆ ಕೆಜಿಎಫ್‌ 2 ಚಿತ್ರದ ವಿಶೇಷ ಪೋಸ್ಟರ್‌ ರಿಲೀಸ್!

Published : Mar 09, 2022, 08:53 AM ISTUpdated : Mar 09, 2022, 09:06 AM IST
Yash: ಮಹಿಳಾ ದಿನಕ್ಕೆ ಕೆಜಿಎಫ್‌ 2 ಚಿತ್ರದ ವಿಶೇಷ ಪೋಸ್ಟರ್‌ ರಿಲೀಸ್!

ಸಾರಾಂಶ

ಮಹಿಳಾ ದಿನಾಚರಣೆ ಪ್ರಯುಕ್ತ ಕೆಜಿಎಫ್‌ 2 ಚಿತ್ರದ ಪ್ರಮುಖ ಪೋಸ್ಟರ್‌ ಬಿಡುಗಡೆ ಆಗಿದೆ. ಯಶ್‌ ನಟನೆಯ, ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರದ ಪ್ರಮುಖ ಮಹಿಳಾ ಪಾತ್ರಧಾರಿಗಳನ್ನು ಒಟ್ಟು ಸೇರಿಸಿ ಈ ವಿಶೇಷ ಪೋಸ್ಟರ್‌ ವಿನ್ಯಾಸ ಮಾಡಲಾಗಿದೆ.

ಮಹಿಳಾ ದಿನಾಚರಣೆ ಪ್ರಯುಕ್ತ (International Womens Day) 'ಕೆಜಿಎಫ್‌ 2' (KGF 2) ಚಿತ್ರದ ಪ್ರಮುಖ ಪೋಸ್ಟರ್‌ ಬಿಡುಗಡೆ ಆಗಿದೆ. ಯಶ್‌ ನಟನೆಯ, ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಈ ಚಿತ್ರದ ಪ್ರಮುಖ ಮಹಿಳಾ ಪಾತ್ರಧಾರಿಗಳನ್ನು ಒಟ್ಟು ಸೇರಿಸಿ ಈ ವಿಶೇಷ ಪೋಸ್ಟರ್‌ (Special Poster) ವಿನ್ಯಾಸ ಮಾಡಲಾಗಿದೆ. ಈ ಪೋಸ್ಟರ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಬಿಡುಗಡೆ ಮಾಡಿರುವ ನಿರ್ದೇಶಕ ಪ್ರಶಾಂತ್‌ ನೀಲ್‌, ‘ನೀವೆಲ್ಲರೂ ಶಕ್ತಿಶಾಲಿಗಳು, ಮಹಿಳಾ ದಿನದ ಶುಭಾಶಯಗಳು’ ಎಂದು ಬರೆದಿದ್ದಾರೆ. ಈ ಪೋಸ್ಟರ್‌ನಲ್ಲಿ ರವೀನಾ ಟಂಡನ್‌, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಸ್‌, ಮಾಳವಿಕಾ ಅವಿನಾಶ್‌ ಇದ್ದಾರೆ. ವಿಜಯ್‌ ಕಿರಗಂದೂರು ನಿರ್ಮಾಣದ ಈ ಸಿನಿಮಾ ಏಪ್ರಿಲ್‌ 14ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

'ಕೆಜಿಎಫ್​ 2' (KGF 2) ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಏಪ್ರಿಲ್​ 14ರಂದು ಸಿನಿಮಾ ತೆರೆಗೆ ಬರುತ್ತಿದ್ದು, ಮಾರ್ಚ್​ 27ರಂದು ಸಿನಿಮಾದ ಟ್ರೇಲರ್ (Trailer) ರಿಲೀಸ್​ ಮಾಡುವ ಬಗ್ಗೆ ಇತ್ತೀಚೆಗೆ ಚಿತ್ರತಂಡ ಘೋಷಣೆ ಮಾಡಿತ್ತು. ಸದ್ಯ 'ಕೆಜಿಎಫ್' ಚಿತ್ರದ ಮೂಲಕ ನಿರ್ದೇಶಕ ಪ್ರಶಾಂತ್​ ನೀಲ್​ ತಮ್ಮ ಕೆಲಸ ಹೇಗಿರುತ್ತದೆ ಎನ್ನುವುದನ್ನು ಇಡೀ ಜಗತ್ತಿಗೆ ತೋರಿಸಿದ್ದರು. ಮುಖ್ಯವಾಗಿ 'ಕೆಜಿಎಫ್' ಚಿತ್ರದಲ್ಲಿ ಶೂಟಿಂಗ್ ಲೋಕೆಶನ್ (Shooting Spot) ನೋಡಿ ಅಭಿಮಾನಿಗಳು ದಂಗಾಗಿದ್ದರು. ಯಾವುದಾದರೂ ಸಿನಿಮಾ ಇಷ್ಟವಾದರೆ, ಆ ಜಾಗಕ್ಕೆ ನಾವು ಹೋಗಬೇಕು ಎಂದು ಅನಿಸುವುದು ಸಾಮಾನ್ಯ. ಅದರಂತೆ 'ಕೆಜಿಎಫ್' ಚಿತ್ರವನ್ನು ವೀಕ್ಷಿಸಿದವರು ಶೂಟಿಂಗ್ ಲೋಕೆಶನ್​ ನೋಡಿ ಸಖತ್ ಇಂಪ್ರೆಸ್ ಆಗಿದ್ದರು. ಇದೀಗ ಆ ಲೋಕೆಶನ್‍ನನ್ನು ಗೂಗಲ್ ಮ್ಯಾಪ್ (Google Map) ತೋರಿಸುತ್ತಿದೆ.

KGF Chapter 2: ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್: 'ಕೆಜಿಎಫ್ 2' ಟ್ರೇಲರ್ ರಿಲೀಸ್ ಡೇಟ್ ಅನೌನ್ಸ್!

ಹೌದು! 'ಕೆಜಿಎಫ್' ಸಿನಿಮಾ​ ಸೃಷ್ಟಿ ಮಾಡಿರುವ ಹೊಸ ದಾಖಲೆಗಳನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರಶಾಂತ್​ ನೀಲ್​ ಆ ರೀತಿಯ ಸಿನಿಮಾವನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದರು. ಇದೀಗ ಈ ದಾಖಲೆಗೆ ಮತ್ತೊಂದು ಹೊಸ ದಾಖಲೆ ಸೇರಿಕೊಂಡಿದ್ದು, ಅಚ್ಚರಿ ಮೂಡಿಸಿದೆ. ಸಿನಿಮಾದಲ್ಲಿ ಯಾವುದೇ ಸೆಟ್‍ಗಳನ್ನು ಹಾಕಿದರೂ ಅದು ತಾತ್ಕಾಲಿಕವಾಗಿರುತ್ತದೆ. ಸೆಟ್ ಹಾಕಿದ ಮೇಲೆ ಅದನ್ನು ನಿಗದಿತ ಸಮಯದ ಬಳಿಕ ತೆರವು ಮಾಡಲಾಗುತ್ತದೆ. ಆದರೆ 'ಕೆಜಿಎಫ್' ಸೆಟ್ ತೆರವಾದರೂ, ಆ ಜಾಗ ಮಾತ್ರ 'ಕೆಜಿಎಫ್' ಖ್ಯಾತಿಯಿಂದಲೇ ಪ್ರಸಿದ್ಧಿ ಹೊಂದಿದ್ದು, ಗೂಗಲ್​ ಮ್ಯಾಪ್​ನಲ್ಲಿ 'ಕೆಜಿಎಫ್ ಫಿಲ್ಮ್ ಸೆಟ್'​ (KGF Film Set) ಎಂದು ಮರುನಾಮಕರಣಗೊಂಡಿದೆ. 



ಇದನ್ನು ಕಂಡು ಅಭಿಮಾನಿಗಳು (Fans) ಸಖತ್​ ಥ್ರಿಲ್​ ಆಗಿದ್ದಾರೆ. ಇದು ನಮ್ಮ ಕನ್ನಡ ಸಿನಿಮಾಗಳಿಗೆ ಇರುವ ತಾಕತ್ತು ಎಂದು ಫ್ಯಾನ್ಸ್  ಕಮೆಂಟ್​ ಮಾಡುತ್ತಿದ್ದು, ಯಾರೂ ಮಾಡಿರದಂತಹ ಹೊಸ ದಾಖಲೆಯನ್ನು 'ಕೆಜಿಎಫ್'​ ಸಿನಿಮಾ ಮಾಡಿದೆ ಎಂಬುದಕ್ಕೆ ಇದೂ ಕೂಡ ಸಾಕ್ಷಿ ಎಂದು ಫ್ಯಾನ್ಸ್​ ಮಾತನಾಡಿಕೊಳ್ಳುತ್ತಿದ್ದಾರೆ. ಗೂಗಲ್‌ನಲ್ಲಿ (Google) 'ಕೆಜಿಎಫ್' ಸೆಟ್ ಎಂದು ಟೈಪ್ ಮಾಡಿದಾಗ 'ಕೆಜಿಎಫ್ ಫಿಲ್ಮ್ ಸೆಟ್' ಬರುತ್ತೆ. ಈ ಸಿನಿಮಾವನ್ನು ಕರ್ನಾಟಕದ (Karnataka) ಕೆಜಿಎಫ್ ಸೇರಿದಂತೆ ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಾತ್ರವಲ್ಲದೇ 'ಕೆಜಿಎಫ್'ನಿಂದ ಸ್ವಲ್ಪ ದೂರದಲ್ಲಿ ಚಿತ್ರದ ಸೆಟ್ಟನ್ನು ನಿರ್ಮಾಣ ಮಾಡಲಾಗಿತ್ತು. 

KGF Chapter 2 ವೀಕ್ಷಿಸಿ ರಿವ್ಯೂವ್ ನೀಡಿದ ಮಾಲಿವುಡ್ ನಟ ಪೃಥ್ವಿರಾಜ್ ಸುಕುಮಾರನ್!

ಆ ಸೆಟ್‍ನಲ್ಲಿ 'ಕೆಜಿಎಫ್' ಭಾಗ ಒಂದು ಮತ್ತು ಎರಡರ ಚಿತ್ರೀಕರಣ ಮಾಡಲಾಗಿದೆ. ಅಲ್ಲದೆ ಸಿನಿಮಾ ಸೆಟ್‌ಗಳನ್ನು ಹಲವು ವರ್ಷಗಳ ಕಾಲ ಚಿತ್ರತಂಡ ಅಲ್ಲೇ ಉಳಿಸಿಕೊಂಡಿತು. ಇದೀಗ ಆ ಜಾಗ 'ಕೆಜಿಎಫ್ ಫಿಲ್ಮ್ ಸೆಟ್' ಎಂದು ಗೂಗಲ್ ಮ್ಯಾಪ್‍ನಲ್ಲಿ ರಿಜಿಸ್ಟರ್ ಆಗಿದೆ. ಇನ್ನು 'ಚಂಡಮಾರುತದ ಮೊದಲು ಯಾವಾಗಲೂ ಗುಡುಗು ಬರುತ್ತದೆ! 'ಕೆಜಿಎಫ್​ ಚಾಪ್ಟರ್ 2' ಟ್ರೇಲರ್ ಮಾರ್ಚ್ 27 ರಂದು ಸಂಜೆ 6:40ಕ್ಕೆ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರಶಾಂತ್ ನೀಲ್ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಬರೆದುಕೊಂಡು ಯಶ್ (Yash) ರಾ ಲುಕ್‌ನಲ್ಲಿರುವ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ