'ನವಗ್ರಹ'ದ ಕ್ಲೈಮ್ಯಾಕ್ಸ್‌ನಲ್ಲಿ ದರ್ಶನ್ ಕಣ್ಣು ಬಿಟ್ಟಿದ್ಯಾಕೆ, ಸೀಕ್ರೆಟ್ ಗೊತ್ತಾದ್ರೆ ಶಾಕ್ ಗ್ಯಾರಂಟಿ!

By Shriram Bhat  |  First Published Oct 19, 2024, 1:20 PM IST

ಸಿನಿಮಾ ಪ್ರೇಕ್ಷಕರು ಈ ಬಗ್ಗೆ ತುಂಬಾ ಸಾರಿ ಸ್ವತಃ ದಿನಕರ್ ಅವರನ್ನೇ ಕೇಳಿದ್ದಾರಂತೆ. ಆಗ ಅವರು 'ಇಲ್ಲ, ಪಾರ್ಟ್-2 ತೆರೆಗೆ ತರುವ ಯಾವುದೇ ಉದ್ದೇಶವಿಲ್ಲ ಎಂದಿದ್ದರಂತೆ. ಆದರೆ, ಬರಬರುತ್ತಾ ಪದೇಪದೇ ಕೇಳಲಾಗಿ ಅವರ ಮನಸ್ಸನಲ್ಲಿ ಕೂಡ ಯಾಕೆ ನಾನು ..


ನವಗ್ರಹ ಸಿನಿಮಾದ ಕ್ಲೈಮ್ಯಾಕ್ಸ್ ನೆನಪಿಸಿಕೊಳ್ಳಿ. ಅದ್ರಲ್ಲಿ ಜಗ್ಗು ಪಾತ್ರಧಾರಿ ನಟ ದರ್ಶನ್ (Darshna) ಅವರು ಕಣ್ಣು ಬಿಡ್ತಾರೆ. ಆ ಶಾಟ್ ತೆಗೆದಿದ್ದಕ್ಕೇ ಬೇರೆಯದೇ ಕಾರ ಇದ್ಯಾ? ಈ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ. ಅದಕ್ಕೆ ಸಂಬಂಧಿಸಿ ನಡೆಯುತ್ತಿರುವ ಚರ್ಚೆ ಏನೆಂದರೆ, 'ನವಗ್ರಹ' ಚಿತ್ರದ (Navagraha) ಕೊನೆಯಲ್ಲಿ, ಅಂದರೆ ಕ್ಲೈಮ್ಯಾಕ್ಸ್‌ನಲ್ಲಿ ಜಗ್ಗು ಅಂದರೆ ದರ್ಶನ್ ಕಣ್ಣು ಬಿಟ್ಟಿದ್ದಾರೆ. ಅಂದರೆ, ಮುಂದೇನೋ ಇದೆ. ಅದನ್ನು 'ಪಾರ್ಟ್‌-2' ದಲ್ಲಿ ಮಾಡುವ ಸಲುವಾಗಿಯೇ ಹಾಗೆ ಕ್ಲೈಮ್ಯಾಕ್ಸ್ ನೀಡಲಾಗಿದೆ ಎಂಬ ಸುದ್ದಿ ಹರಡುತ್ತಿದೆ. 

ಆದರೆ, ಆ ಬಗ್ಗೆ ನವಗ್ರಹ ನಿರ್ದೇಶಕರಾಗಿರುವ ದಿನಕರ್ ತೂಗುದೀಪ (Dinakar Thoogudeepa) ಅವ್ರು ಹೇಳೋದೇ ಬೇರೆ. ನವಗ್ರಹ ಚಿತ್ರದ ಕಥೆಯ ಪ್ರಕಾರ, 'ಎಲ್ಲಿಯವರೆಗೆ ಪ್ರಪಂಚದಲ್ಲಿ ಒಳ್ಳೆಯದು ಇರುತ್ತೋ, ಅಲ್ಲಿಯವರೆಗೂ ಕೆಟ್ಟದ್ದು ಇದ್ದೇ ಇರುತ್ತೆ.. ನವಗ್ರಹದಲ್ಲಿ ಕೆಟ್ಟ ಕ್ಯಾರೆಕ್ಟರ್‌ಗಳು ಎಲ್ಲವೂ ಸತ್ತರೂ ಜಗ್ಗು ಎಂಬ ಒಂದು ಕೆಟ್ಟ ಹುಳ ಮಾತ್ರ ಇನ್ನೂ ಸತ್ತಿಲ್ಲ, ಜೀವಂತವಾಗಿದೆ ಎಂಬುದನ್ನು ನಿರೂಪಿಸಲು ದಿನಕರ್ ಅವರು ಚಿತ್ರದ ಕೊನೆಯಲ್ಲಿ ಜಗ್ಗು ಪಾತ್ರಧಾರಿಯು ಕಣ್ಣು ಬಿಡುವಂತೆ ಮಾಡಿದ್ದಾರಂತೆ. 

Tap to resize

Latest Videos

undefined

ವಿಜಯಲಕ್ಷ್ಮೀ ಜೊತೆ ಬಳ್ಳಾರಿ ಜೈಲಿನಲ್ಲಿ ಮಾತುಕತೆ ಬಳಿಕ ದರ್ಶನ್ ಮುಖ ಏನ್ ಹೇಳ್ತಿತ್ತು..!?

ನವಗ್ರಹ ಸಿನಿಮಾ ಕಾನ್ಸೆಪ್ಟ್ ಮೂಲಕ ಕೆಟ್ಟದ್ದು ಹಾಗೂ ಒಳ್ಳೆಯದರ ಮಧ್ಯೆ ಜಗತ್ತಿನಲ್ಲಿ ಹೇಗೆಲ್ಲಾ ಯುದ್ಧಗಳು, ತಿಕ್ಕಾಟಗಳು ನಡೆಯುತ್ತಲೇ ಇರುತ್ತವೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಚಿತ್ರದ ಕ್ಲೈಮ್ಯಾಕ್ಸ್ ಹೊತ್ತಿಗೆ ಒಳ್ಳೆಯ ಮನುಷ್ಯರ ಮೂಲಕ ಕೆಟ್ಟ ಮನುಷ್ಯರ ನಿರ್ನಾಮ ಆಗುತ್ತದೆ. ಆದರೆ, ಜಗ್ಗು ಎಂಬ ಒಂದು ಪಾತ್ರ ಸತ್ತವರ ನಡುವೆ ಕಣ್ಣು ಬಿಡುತ್ತದೆ. ಇದು, ಕೆಟ್ಟದ್ದೂ ಸತ್ತಿಲ್ಲ ಎಂಬುದನ್ನು ನೆನಪಿಸಲು ಅಷ್ಟೇ ನಾನು ಹಾಗೆ ಮಾಡಿದ್ದು ಎಂದು ನವಗ್ರಹ ನಿರ್ದೇಶಕ ದಿನಕರ್ ತೂಗುದೀಪ ಅವರು ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ. 

ಸಿನಿಮಾ ಪ್ರೇಕ್ಷಕರು ಈ ಬಗ್ಗೆ ತುಂಬಾ ಸಾರಿ ಸ್ವತಃ ದಿನಕರ್ ಅವರನ್ನೇ ಕೇಳಿದ್ದಾರಂತೆ. ಆಗ ಅವರು 'ಇಲ್ಲ, ಪಾರ್ಟ್-2 ತೆರೆಗೆ ತರುವ ಯಾವುದೇ ಉದ್ದೇಶವಿಲ್ಲ ಎಂದಿದ್ದರಂತೆ. ಆದರೆ, ಬರಬರುತ್ತಾ ಪದೇಪದೇ ಕೇಳಲಾಗಿ ಅವರ ಮನಸ್ಸನಲ್ಲಿ ಕೂಡ ಯಾಕೆ ನಾನು 'ನವಗ್ರಹ ಪಾರ್ಟ್-2' ಚಿತ್ರ ಮಾಡಬಾರದು ಎಂಬ ಯೋಚನೆ ತಲೆಗೆ ಬಂದಿತ್ತು ಎಂದಿದ್ದಾರೆ. ಆದರೆ, ಅದಕ್ಕೆ ಕಾಲ ಕೂಡಿ ಬರಬೇಕು. ಕುಳಿತು ಕಥೆ, ಚಿತ್ರಕಥೆ ರೆಡಿ ಮಾಡಿಕೊಳ್ಳಬೇಕು, ಕಲಾವಿದರ ಕಾಲ್‌ಶೀಟ್ ಕೂಡ ಸಿಗಬೇಕು' ಎಂದಿದ್ದಾರೆ ದಿನಕರ್ ತೂಗುದೀಪ. 

ಮೀಟೂ ಹೆಸರಲ್ಲಿ ನಡಿತಿದ್ಯಾ ಬ್ಲಾಕ್‌ಮೇಲ್, ಕೇರಳದ ಕಥೆ ಬಗ್ಗೆ ಹೇಳಿದ್ರು ಓಂ ಪ್ರಕಾಶ್ ರಾವ್!

ಸದ್ಯಕ್ಕೆ ಬಹುತೇಕರಿಗೆ ಗೊತ್ತಿರುವಂತೆ, ನವಗ್ರಹ ಚಿತ್ರದಲ್ಲಿ ಕೊನೆಯಲ್ಲಿ ಕಣ್ಣುಬಿಟ್ಟಿದ್ದ ಜಗ್ಗು ಪಾತ್ರಧಾರಿ ನಟ ದರ್ಶನ್ ಅವರು ಈಗ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಆರೋಪಿಯಾಗಿ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಅವರ ತಮ್ಮ ನವಗ್ರಹ ನಿರ್ದೇಶಕರಾದ ದಿನಕರ್ ಅವರು ಅಣ್ಣ ದರ್ಶನ್ ಅವರನ್ನು ಆಗಾಗ ಹೋಗಿ ಭೇಟಿಯಾಗುತ್ತಿದ್ದಾರೆ. ದರ್ಶನ್ ಅವರು ಬೇಲ್ ಮೇಲೆ ಅಥವಾ ನಿರಪರಾಧಿ ಎಂದು ಸಾಬೀತಾಗಿ ಅದ್ಯಾವಾಗ ಜೈಲಿನಿಂದ ಹೊರಗೆ ಬರುತ್ತಾರೆ ಎಂಬುದನ್ನು ಹೇಳಲು ಅಸಾಧ್ಯ. ಆದ್ದರಿಂದ ಸದ್ಯಕ್ಕೆ 'ನವಗ್ರಹ-2' ಸಿನಿಮಾ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದಿದ್ದರೇ ಒಳ್ಳೆಯದು ಎನ್ನಬಹುದು!

click me!