ಮೀಟೂ ಹೆಸರಲ್ಲಿ ನಡಿತಿದ್ಯಾ ಬ್ಲಾಕ್‌ಮೇಲ್, ಕೇರಳದ ಕಥೆ ಬಗ್ಗೆ ಹೇಳಿದ್ರು ಓಂ ಪ್ರಕಾಶ್ ರಾವ್!

By Shriram BhatFirst Published Oct 19, 2024, 11:57 AM IST
Highlights

ಶೋಷಣೆ, ಲೈಂಗಿಕ ಕಿರುಕುಳ ಎಲ್ಲವೂ ಮಹಿಳಾ ಕಲಾವಿದರಿಗೆ ಮಾತ್ರ ಸೀಮಿತವಾದುದಲ್ಲ. ಅದನ್ನು ಸಮಾಜದಲ್ಲಿ ಎಲ್ಲ ಮಹಿಳೆಯರೂ ಅನುಭವಿಸುತ್ತಿದ್ದಾರೆ. ಯಾರಿಗೇ ಅನ್ಯಾಯವಾದರೂ ತಕ್ಷಣ ಪೊಲೀಸರಿಗೆ ದೂರು ನೀಡಬೇಕು. ಮುಂದಿನದನ್ನು ಕಾನೂನು, ಕೋರ್ಟು..

ಕನ್ನಡದ ಖ್ಯಾತ ನಿರ್ದೇಶಕರಾಗಿರುವ ಓಂ ಪ್ರಕಾಶ್ ರಾವ್ ಅವರು ಮೀಟೂ ಹಾಗೂ ಕೇರಳದ ಹೇಮಾ ಕಮಿಟಿ ವರದಿ ಬಗ್ಗೆ ಮಾತನಾಡಿದ್ದಾರೆ. ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಮಹಿಳಾ ಕಲಾವಿದರ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಆದರೆ, ಅವರಲ್ಲಿ ಕೆಲವರು ಈ ವಿಷಯ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಾರೆ ಎಂಬ ಸಂಗತಿ ತಮ್ಮ ಗಮನಕ್ಕೆ ಬಂದಿದೆ ಎಂಬುದನ್ನೂ ಸಹ ಹೇಳಿದ್ದಾರೆ. 

ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಯಾವುದೇ ಸಂಗತಿಯನ್ನು ನೇರಾನೇರವಾಗಿ ಮುಚ್ಚುಮರೆಯಿಲ್ಲದೇ ಹೇಳುತ್ತಾರೆ. ಸ್ವತಃ ಅವರೂ ಅವರೂ ಸಹ ಮೀಟೂ ಆರೋಪವನ್ನು ಒಮ್ಮೆ ಎದುರಿಸಿದ್ದರು. ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಓಂ ಪ್ರಕಾಶ್ ರಾವ್ ಅವರು 'ಮಹಿಳಾ ಕಲಾವಿದರು ಅಥವಾ ಯಾವುದೇ ಮಹಿಳೆ ತಮಗೆ ಅನ್ಯಾಯವಾದರೆ, ಲೈಂಗಿಕ ಕಿರುಕುಳಕ್ಕೆ ಒಳಗಾದರೆ, ಪೊಲೀಸ್ ಕಂಪ್ಲೇಂಟ್ ಕೊಡಬಹುದು. ನಮ್ಮ ದೇಶದಲ್ಲಿ ಪೊಲೀಸರು ಇನ್ನೂ ಬದುಕಿದ್ದಾರೆ. ಕಾನೂನು, ಕೋರ್ಟ್ ಎಲ್ಲವೂ ಇದೆ. 

Latest Videos

ದರ್ಶನ್ ಮೂವಿ 'ಕಲಾಸಿಪಾಳ್ಯ' ಡೈರೆಕ್ಟರ್ ಓಂ ಪ್ರಕಾಶ್ ರಾವ್ ಎಂಥವ್ರು? ಜಗತ್ತು ಕಾಣದ ಮತ್ತೊಂದು ಮುಖ ಬಯಲು..!

ಶೋಷಣೆ, ಲೈಂಗಿಕ ಕಿರುಕುಳ ಎಲ್ಲವೂ ಮಹಿಳಾ ಕಲಾವಿದರಿಗೆ ಮಾತ್ರ ಸೀಮಿತವಾದುದಲ್ಲ. ಅದನ್ನು ಸಮಾಜದಲ್ಲಿ ಎಲ್ಲ ಮಹಿಳೆಯರೂ ಅನುಭವಿಸುತ್ತಿದ್ದಾರೆ. ಯಾರಿಗೇ ಅನ್ಯಾಯವಾದರೂ ತಕ್ಷಣ ಪೊಲೀಸರಿಗೆ ದೂರು ನೀಡಬೇಕು. ಮುಂದಿನದನ್ನು ಕಾನೂನು, ಕೋರ್ಟು ನೋಡಿಕೊಳ್ಳುತ್ತದೆ. ಅದು ಬಿಟ್ಟು ಯಾವುದೋ ಸಂಸ್ಥೆ, ಯಾರಿಗೂ ಹೇಳಿಕೊಂಡು ಒದ್ದಾಡುವುದು ಯಾಕೆ? ನಮ್ಮ ದೇಶದ ಸಂವಿಧಾನದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಎಲ್ಲರಿಗೂ ಇದೆ' ಎಂದಿದ್ದಾರೆ. 

ಜೊತೆಗೆ, ಇನ್ನೊಂದು ಸೀಕ್ರೆಟ್ ಕೂಡ ಹೇಳಿದ್ದಾರೆ ಓಂ ಪ್ರಕಾಶ್ ರಾವ್. 'ನಾನು ಈ ಮೀಟೂ ಹಾಗೂ ಹೇಮಾ ಕಮಿಟಿ ವರದಿ ಹೊರಬಿದ್ದ ಬೆನ್ನಲ್ಲೇ ಕೇರಳದ ಪೊಲೀಸರ ಬಳಿ ಕೂಡ ಆ ಬಗ್ಗೆ ಮಾತನಾಡಿದ್ದೇನೆ. 'ಯಾರೂ ನಮ್ಮಲ್ಲಿ ದೂರು ಕೊಡಲು ಬರುತ್ತಿಲ್ಲ. ಆದರೆ, ಮೀಡಿಯಾಗಳಲ್ಲಿ ಈ ಬಗ್ಗೆ ಮಾತನಾಡುತ್ತಾರೆ. ಕೆಲವು ಮಹಿಳಾ ಕಲಾವಿದರು ಈ ಸಂಗತಿ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಪೊಲೀಸರೇ ಹೇಳಿದ್ದಾರೆ' ಎಂದಿದ್ದಾರೆ ಓಂ ಪ್ರಕಾಶ್ ರಾವ್.

ರಶ್ಮಿಕಾ-ಸುದೀಪ್ ಹುಶಾರ್, ಸೋಷಿಯಲ್ ಮೀಡಿಯಾದಲ್ಲಿ ಜೋರಾಯ್ತು ಫ್ಯಾನ್ಸ್ ಕೂಗು!

ನಿಜವಾದ ಸಂತ್ರಸ್ತೆಯರಿಗೆ ಪೊಲೀಸ್ ವ್ಯವಸ್ಥೆ ಹಾಗು ಕಾನೂನು ಸಹಾಯ ಮಾಡುತ್ತದೆ. ವ್ಕ್ತಿಗಳು ಸತ್ತರೂ ದೇಶದಲ್ಲಿ ಕಾನೂನು, ಸಂವಿಧಾನ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಸಮಾಜದಲ್ಲಿ ದಿನನಿತ್ಯ ನಡೆಯುವ ಅದೆಷ್ಟೂ ಅತ್ಯಾಚಾರ ಹಾಗೂ ಅನಾಚಾರಗಳಲ್ಲಿ ಬಹಳಷ್ಟು ಕೇಸ್‌ಗಳು ಸಮ್ಮತಿಯಿಂದಲೇ ನಡೆದಿರುತ್ತವೆ. ಆದರೆ, ಬಳಿಕ ಮದುವೆಯ ವಿಚಾರಕ್ಕೆ ಅಥವಾ ಹಣಕಾಸಿನ ವಿಚಾರಕ್ಕೆ ಅದನ್ನು ರೇಪ್, ಮೋಸ ಎನ್ನಲಾಗುತ್ತಿದೆ ಎಂದು ಪೊಲೀಸ್ ಮೂಲಗಳೇ ಹೇಳುತ್ತವೆ ಎಂಬ ಸಂಗತಿ ಗುಟ್ಟಾಗಿಯೇನೂ ಉಳಿದಿಲ್ಲ.

ಎಲ್ಲಿಯವರೆಗೆ ಸಮಾಜದಲ್ಲಿ ನೈತಿಕತೆ, ಪ್ರಾಮಾಣಿಕತೆ ಮತ್ತು ಮಾನವೀಯತೆಯ ಬಗ್ಗೆ ಜನರಿಗೆ ಅರ್ಥವಾಗುವುದಿಲ್ಲವೋ ಅಲ್ಲಿಯವರೆಗೆ ಇವೆಲ್ಲವೂ ಇದ್ದೇ ಇರುತ್ತವೆ. ಎಲ್ಲವನ್ನೂ ಕಾನೂನು ಸರಿಪಡಿಸಲು ಆಗುವುದಿಲ್ಲ. ಸಮಾಜದಲ್ಲಿ ಮಾನವೀಯತೆ, ಪ್ರಾಮಾಣಿಕತೆ ನೆಲೆಗೊಂಡ ತಕ್ಷಣವೇ ಈ ಲೈಂಗಿಕ ಕಿರುಕುಳ, ಅತ್ಯಾಚಾರ, ಕೊಲೆ, ದರೋಡೆ, ಲಂಚಕೋರತನ ಎಲ್ಲವೂ ತನ್ನಷ್ಟಕ್ಕೇ ಮಾಯವಾಗುತ್ತವೆ.

ಅಮೂಲ್ಯಾ ಅಣ್ಣ ದೀಪಕ್ ಅರಸ್ ಲೈಫ್ ಸ್ಟೋರಿ ಅಂತಿಂಥದ್ದಲ್ಲ, ಏನೇನೋ ಆಗಿಬಿಟ್ಟಿತ್ತು..!

ಇಲ್ಲದಿದ್ದರೆ ಸತ್ಯದ ಜೊತೆ ಸುಳ್ಳು ದೂರು, ಸುಳ್ಳು ವರದಿಗಳೂ ಆಟ ಆಡುತ್ತಲೇ ಇರುತ್ತವೆ ಎಂಬುದು ಅರ್ಥವಾಗದ ಕಬ್ಬಿಣದ ಕಡಲೆಯಂಥ ಸಂಗತಿಯೇನೂ ಅಲ್ಲ. ಒಟ್ಟಿನಲ್ಲಿ, ಸಮಾಜದಲ್ಲಿ ಕೆಲವರಿಂದ ಹಲವರ ಮಾನ ಹರಾಜು ಆಗುವುದು ತಪ್ಪಲೇಬೇಕಿದೆ ಎಂಬ ಅಭಿಪ್ರಾಯ ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ತೀವ್ರವಾಗುತ್ತಿದೆ. 

click me!