26 ವರ್ಷಗಳ ಹಿಂದೆ ನಟ ಸಲ್ಮಾನ್ ಖಾನ್ ಸಿನಿಮಾ ತಂಡ ರಾಜಸ್ಥಾನದಲ್ಲಿ ಶೂಟಿಂಗ್ ನಡೆಸುತ್ತಿತ್ತು. ಅವರು ಅಲ್ಲಿ ಕೃಷ್ಣಮೃಗವನ್ನು ಭೇಟೆಯಾಡಿ ಕೊಂದಿದ್ದಾರೆ. ಬಿಷ್ಣೋಯಿ ಜನಾಂಗವು ಕೃಷ್ಣಮೃಗವನ್ನು ದೇವರೆಂದು ಪೂಜಿಸುತ್ತದೆ. ಆದ್ದರಿಂದ ತಮ್ಮ ದೇವರನ್ನು ಕೊಂದಿರುವ ನಿನ್ನನು ಸುಮ್ಮನೇ ಬಿಡುವುದಿಲ್ಲ ಎಂದೀಗ ಕೊಲೆ ಬೆದರಿಕೆ ಹಾಕುತ್ತಿದೆ.
ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕಿ ಹತ್ಯೆಯ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್ ಮುಖದಲ್ಲಿ ನಗು ಮಾಯವಾಗಿದ್ದು ಗೊತ್ತೇ ಇದೆ. ಸಲ್ಲುಗೆ ಈಗ ವೈ ಪ್ಲಸ್ ಭದ್ರತೆ ನೀಡಲಾಗಿದೆ. ಆದರೆ ಅದೇ ಭದ್ರತೆಯಲ್ಲಿದ್ದ ಬಾಬಾ ಸಿದ್ಧಿಕಿ ಹತ್ಯೆಯಾಗಿದೆ ಅಂದ್ಮೇಲೆ ನಟ ಸಲ್ಮಾನ್ ಖಾನ್ ನೆಮ್ಮದಿಯಾಗಿ ನಿದ್ದೆ ಮಾಡಲು ಹೇಗೆ ಸಾಧ್ಯ? ವಿಷಯ ಇಷ್ಟಕ್ಕೇ ನಿಂತಿಲ್ಲ! ಸಲ್ಮಾನ್ ಖಾನ್‌ಗೆ ಯಾರೆಲ್ಲಾ ಸಹಾಯ ಮಾಡ್ತಾರೋ ಅವರಿಗೆಲ್ಲರಿಗೂ ಇದೇ ಗತಿ ಅಗಲಿದೆ ಎಂದು ಬಿಷ್ಣೋಯಿ ಗ್ಯಾಂಗ್ ಹೇಳಿದೆ ಎಂದು ವರದಿಯಾಗಿದೆ.
ಬಹುತೇಕರಿಗೆ ಗೊತ್ತಿರುವಂತೆ, ಬಾಬಾ ಸಿದ್ಧಿಕಿ ಅವರು ಸಲ್ಲುಗೆ ಆಪ್ತರಾಗಿದ್ದರು, ಈ ಕಾರಣಕ್ಕೇ ಕೊಲೆಯಾಗಿದ್ದಾರೆ. ಅವರ ಕೊಲೆಯ ಬಳಿಕ ಆರೋಪಹೊತ್ತು ಅರೆಸ್ಟ್ ಆಗಿರುವ ಮಂದಿಯಿಂದ ತಿಳಿದುಬಂದ ಸಂಗತಿ ಏನೆಂದರೆ, ಸಲ್ಲೂ ಆಪ್ತರಿಗೆ ಎಲ್ಲರಿಗೂ ಇದೇ ಗತಿ ಆಗಲಿದೆ ಎಂದು ಅವರು ಹೇಳಿರುವುದು. ಈ ಮಾತನ್ನು ತಿಳಿದು ನಟ ಸಲ್ಮಾನ್ ಖಾನ್ ಆಪ್ತರಿಗೆ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ. ಸಲ್ಮಾನ್ ಖಾನ್ ಆಪ್ತರ ಲಿಸ್ಟ್‌ನಲ್ಲಿ ಕನ್ನಡದ ನಟ ಕಿಚ್ಚ ಸುದೀಪ್ ಇದ್ದಾರೆ.
undefined
ಸಲ್ಲು ಸೆಕ್ಯುರಿಟಿಗೆ ಅದೆಷ್ಟು ಸಿಬ್ಬಂದಿ, ಏನೆಲ್ಲಾ ಸೇಫ್ಟಿ ಇರುತ್ತೆ? ಎಷ್ಟು ಕೋಟಿ ಹಣ ವೆಚ್ಚವಾಗ್ತಿದೆ..!?
ಜೊತೆಗೆ, ಶೂಟಿಂಗ್ ಹಂತದಲ್ಲಿರುವ ಸಲ್ಮಾನ್ ಖಾನ್ ಅವರ ಮುಂಬರುವ ಸಿನಿಮಾ 'ಸಿಕಂದರ್' ಚಿತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಹೀಗಾಗಿ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಅವರಿಬ್ಬರ ಫ್ಯಾನ್ಸ್‌ಗಳು ಚಿಂತಾಕ್ರಾಂತರಾಗಿದ್ದು, 'ಸುದೀಪ್ ಸರ್, ಹುಶಾರು.., ರಶ್ಮಿಕಾ ಮೇಡಂ, ಬಿ ಕೇರ್‌ಫುಲ್ ಪ್ಲೀಸ್.. ' ಅಂತಿದ್ದಾರೆ. ಅಷ್ಟೇ ಅಲ್ಲ, ನಟಿ ರಶ್ಮಿಕಾ ಮಂದಣ್ಣ ಕುಟುಂಬಸ್ಥರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ರಶ್ಮಿಕಾ ಮಂದಣ್ಣ ಕುಟುಂಬಸ್ಥರು ಲಾರೆನ್ಸ್ ಬಿಷ್ಣೋಯಿ ತಂಡದ ಬೆದರಿಕೆಯಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದು, ಶೂಟಿಂಗ್ ಸ್ಥಳದಲ್ಲಿ ತುಂಬಾ ಎಚ್ಚರಿಕೆಯಿಂದ ಇರುವಂತೆ ನಟಿ ರಶ್ಮಿಕಾಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಜೊತೆಗೆ, 'ಸಾಧ್ಯವಾದರೆ ಈ ಚಿತ್ರದ ಅಗ್ರಿಮೆಂಟ್ ಕ್ಯಾನ್ಸಲ್ ಮಾಡಿಕೊಂಡು ಚಿತ್ರದಿಂದ ಹೊರಗೆ ಬಂದುಬಿಡು..' ಎಂದಿದ್ದಾರೆ ಎಂದು ವರದಿಯಾಗಿದೆ. ಇನ್ನು ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಹಲವು ವರ್ಷಗಳಿಂದ ಆಪ್ತರಾಗಿರುವ ಕಾರಣಕ್ಕೆ, ಸುದೀಪ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಜೊತೆಗೆ ಇಷ್ಟೆಲ್ಲ ಆತಂಕ ಪಡುವುದೂ ಅನಗತ್ಯ ಎಂದೂ ಹೇಳಲಾಗುತ್ತಿದೆ. ಹಾಗೆಲ್ಲ ಆಗದಿರಲಿ ಎನ್ನುವುದೇ ಎಲ್ಲರ ಪ್ರಾರ್ಥನೆಯೂ ಹೌದು.
ಸುದೀಪ್ ಬಳಿಕ 'ಬಿಗ್ ಬಾಸ್ ಕನ್ನಡ-12' ಹೋಸ್ಟ್ ಯಾರು? ಕೇಳಿ ಬಂದ ಹೆಸರು ಇದು ನೋಡ್ರೀ..!
ಆದರೆ, ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಅವರಾಗಲೀ, ಅಥವಾ ನಟ ಕಿಚ್ಚ ಸುದೀಪ್ ಅವರಾಗಲೀ ಯಾವುದೇ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಪೋಸ್ಟ್‌ಗಳು, ಕಾಮೆಂಟ್ಸ್‌ಗಳು ಹರಿದಾಡುತ್ತಿವೆ. ಬಾಬಾ ಸಿದ್ಧಿಕಿ ಹತ್ಯೆಯ ಬಳಿಕ ನಟ ಸಲ್ಮಾನ್ ಖಾನ್ ತೀವ್ರ ಆತಂಕಕ್ಕೆ ಒಳಗಾಗಿರುವುದು ಮಾತ್ರ ಸುಳ್ಳಲ್ಲ ಅಂತಿದ್ದಾರಂತೆ ಸಲ್ಲೂ ಆಪ್ತರು. ಅಷ್ಟಕ್ಕೂ, ಬಿಷ್ಣೋಯಿ ಗ್ಯಾಂಗ್‌ಗೆ ನಟ ಸಲ್ಮಾನ್ ಖಾನ್ ಮೇಲೆ ಯಾಕಿಷ್ಟು ದ್ವೇಷ ಗೊತ್ತಾ?
ಇಪ್ಪತ್ತಾರು ವರ್ಷಗಳ ಹಿಂದೆ ನಟ ಸಲ್ಮಾನ್ ಖಾನ್ ಸಿನಿಮಾ ತಂಡ ರಾಜಸ್ಥಾನದಲ್ಲಿ ಶೂಟಿಂಗ್ ನಡೆಸುತ್ತಿತ್ತು. ಆಗ ಅವರು ಅಲ್ಲಿ ಕೃಷ್ಣಮೃಗವನ್ನು ಭೇಟೆಯಾಡಿ ಕೊಂದಿದ್ದಾರೆ. ಬಿಷ್ಣೋಯಿ ಜನಾಂಗವು ಕೃಷ್ಣಮೃಗವನ್ನು ದೇವರೆಂದು ಪೂಜಿಸುತ್ತದೆ. ಆದ್ದರಿಂದ ತಮ್ಮ ದೇವರನ್ನು ಕೊಂದಿರುವ ನಿನ್ನನು ಸುಮ್ಮನೇ ಬಿಡುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯಿ ನಟ ಸಲ್ಮಾನ್ ಖಾನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಅಮೂಲ್ಯಾ ಅಣ್ಣ ದೀಪಕ್ ಅರಸ್ ಲೈಫ್ ಸ್ಟೋರಿ ಅಂತಿಂಥದ್ದಲ್ಲ, ಏನೇನೋ ಆಗಿಬಿಟ್ಟಿತ್ತು..!
'ಕೃಷ್ಣಮೃಗ' ಹತ್ಯೆ ಮಾಡಿದ ಬಳಿಕ ನಟ ಸಲ್ಮಾನ್ ಖಾನ್ ಅವರು ಬಿಷ್ಣೋಯಿ ಜನಾಂಗಕ್ಕೆ ಮನವಿ ಮಾಡಿಕೊಂಡು, ಮನಃಪೂರ್ವಕವಾಗಿ ಕ್ಷಮೆ ಕೇಳಿದ್ದರೆ ಇವೆಲ್ಲಾ ಅವಾಂತರಗಳು ಆಗುತ್ತಿರಲಿಲ್ಲ. ಸಲ್ಲು ನಿದ್ದೆಯಿಲ್ಲದ ರಾತ್ರಿ ಕಳೆಯುವುದು, ಈ ದೇಶದ ತೆರಿಗೆ ದುಡ್ಡು ಒಬ್ಬ ನಟ ಹಾಗೂ ಅವರ ಆಪ್ತರ ವೈ ಪ್ಲಸ್ ಭದ್ರತೆಗೆ ಅನಾವಶ್ಕ ಎಂಬಂತೆ ಖರ್ಚಾಗುತ್ತಿರಲಿಲ್ಲ ಅಂತೆಲ್ಲ ಟೀಕೆಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಉತ್ತರಿಸುವವರು ಯಾರು..?