ಅಪ್ಪು ಅಗಲಿದಾಗ 2 ದಿನ ನಿದ್ರೆ ಮಾಡಿಲ್ಲ, ಯಜಮಾನ್ರು ಊಟ ಬಿಟ್ಟಿದ್ದರು; ಯಶ್ ತಾಯಿ ಪುಷ್ಪ ಭಾವುಕ

Published : Feb 25, 2025, 12:02 PM ISTUpdated : Feb 25, 2025, 12:32 PM IST
 ಅಪ್ಪು ಅಗಲಿದಾಗ 2 ದಿನ ನಿದ್ರೆ ಮಾಡಿಲ್ಲ, ಯಜಮಾನ್ರು ಊಟ ಬಿಟ್ಟಿದ್ದರು; ಯಶ್ ತಾಯಿ ಪುಷ್ಪ ಭಾವುಕ

ಸಾರಾಂಶ

ಕೆಜಿಎಫ್‌ನಿಂದ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಡಾ.ರಾಜ್‌ಕುಮಾರ್ ಕುಟುಂಬದ ಬಗ್ಗೆ ಯಶ್ ಕುಟುಂಬಕ್ಕೆ ಅಪಾರ ಗೌರವವಿದೆ. ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣದಿಂದ ಯಶ್ ತಾಯಿ ಪುಷ್ಪಾ ದುಃಖಿತರಾಗಿದ್ದಾರೆ. ಪುನೀತ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಡಾ.ರಾಜ್‌ಕುಮಾರ್ ಅವರ ಪ್ರತಿಮೆ ಯಶ್‌ಗೆ ಆಶೀರ್ವಾದದಂತೆ ಎಂದು ಅವರು ಹೇಳಿದ್ದಾರೆ.

ಕೆಜಿಎಫ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯ ಎತ್ತರಕ್ಕೆ ತೆಗೆದುಕೊಂಡು ಹೋಗಿರುವುದು ನಟ ಯಶ್. ಮಿಡಲ್ ಕ್ಲಾಸ್ ಕುಟುಂಬದ ಹುಡುಗ ಮೆಜೆಸ್ಟಿಕ್‌ ಬಸ್‌ ಸ್ಟ್ಯಾಂಡ್‌ನಲ್ಲಿ ಮಲಗಿಕೊಂಡು ಕಟೌಟ್‌ ಕನಸು ಕಂಡಿದ್ದ. ಈಗ ಭಾರತೀಯ ಸಿನಿಮಾರಂಗವನ್ನು ರೂಲ್‌ ಮಾಡುವ ಎತ್ತರಕ್ಕೆ ಬೆಳೆದಿದ್ದಾರೆ. ಯಶ್ ಕುಟುಂಬದ ಪ್ರತಿಯೊಬ್ಬರಿಗೂ ಡಾ.ರಾಜ್‌ಕುಮಾರ್ ಕುಟುಂಬದ ಮೇಲೆ ಅಪಾರವಾದ ಗೌರವ. ಮಗನಂತೆ ಇದ್ದ ಪುನೀತ್ ಅಗಲಿದಾ ಎಷ್ಟು ಕಷ್ಟ ಆಯ್ತು ಎಂದು ನಟ ಯಶ್ ತಾಯಿ ಪುಷ್ಪ ಹಂಚಿಕೊಂಡಿದ್ದಾರೆ. 

'ಪುನೀತ್ ರಾಜ್‌ಕುಮಾರ್ ಅಗಲಿದಾಗ ನಾವು ಹಾಸನ್‌ನ ತೋಟದ ಮನೆಯಲ್ಲಿ ಇದ್ವಿ. ಆ ಸುದ್ದಿ ಕೇಳಿದ ಮೇಲೆ ನಮಗೆ ಬೆಡ್‌ ಕಾಫಿ ಕುಡಿಯಲು ಕೂಡ ಇಷ್ಟವಿರಲಿಲ್ಲ. ರಾತ್ರಿ ಮೂರು ಬೆಳಗ್ಗೆ ಎರಡು ಇತ್ತು....ಇದನ್ನು ಹೇಗಪ್ಪಾ ನೋಡುವುದು ಎಂಥಾ ಕರ್ಮ ಎದುರಿಸುತ್ತಿದ್ದೀವಿ. ಪುನೀತ್ ಎದ್ದು ಬರಬಾರದಾ ಅನಿಸುತ್ತಿತ್ತು. ಪುನೀತ್ ಹೋದ್ಮೇಲೆ ಎರಡು ರಾತ್ರಿ ನಿದ್ರೆ ಮಾಡಿಲ್ಲ ನಾವಿಬ್ಬರು. ನಮ್ಮನೆಯವರು ಊಟ ಮಾಡುವುದನ್ನು ಬಿಟ್ಟರು. ಇವತ್ತು ಪುನೀತ್ ರಾಜ್‌ಕುಮಾರ್‌ನ ನೆನಪಿಸಿಕೊಂಡರೂ ಬೇಸರ ಆಗುತ್ತದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಯಶ್ ತಾಯಿ ಪುಷ್ಪ ಮಾತನಾಡಿದ್ದಾರೆ. 

ಆ ಪಾರ್ಟಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಮನೆಯಿಂದ ಹೊರ ಬರಲು ಭಯ ಆಗುತ್ತಿತ್ತು: ನಿಶ್ವಿಕಾ ನಾಯ್ಡು

'ಪುನೀತ್‌ ಅವರನ್ನು ಎಷ್ಟು ಚಿಕ್ಕ ವಯಸ್ಸಿನಿಂದ ನೋಡಿದ್ದೀವಿ ಅಂದ್ರೆ ಚಲಿಸುವ ಮೋಡಗಳು ಸಿನಿಮಾದಲ್ಲಿ ಅಪ್ಪಾಜಿ ಜೊತೆ ಪುನೀತ್ ಹಾಡು ಹೇಳುವಾಗ ನಮ್ಮ ಮನೆಯವರು ಆ ಲಾರಿಯಲ್ಲಿ ಇದ್ದರು. ಓಡಿಸುತ್ತಿದ್ದ ಲಾರಿಯನ್ನು ನಿಲ್ಲಿಸಿ ಸಿನಿಮಾ ಶೂಟಿಂಗ್ ನೋಡುತ್ತಿದ್ದರಂತೆ. ಪುನೀತ್ ರಾಜ್‌ಕುಮಾರ್ ಒಮ್ಮೆ ನಮ್ಮ ಮನೆಗೆ ಬಂದಿದ್ದರು, ಆಗ ನಾವು ಮಾಡಿದ್ದ ಅಡುಗೆ ಏನೋ ಕೊಟ್ಟಾಗ ಅದನ್ನು ತಿಂದು ನಮ್ಮೊಟ್ಟಿಗೆ ಮಾತನಾಡಿಕೊಂಡು ಹೋದರು. ಅವರೊಟ್ಟಿಗೆ ನಮ್ಮ ಮನೆಯಲ್ಲಿ ಕ್ಲಿಕ್ ಮಾಡಿರುವ ಫೋಟೋಗಳಿದೆ' ಎಂದು ಯಶ್ ತಾಯಿ ಪುಷ್ಪ ಹೇಳಿದ್ದಾರೆ.

ನೀಲಿ ಸೀರೆಗೆ ವಜ್ರದ ಡಾಬು ಮತ್ತು ಸರ ಧರಿಸಿದ 'ಪುಟ್ಟ ಗೌರಿ' ಸಾನ್ಯಾ ಅಯ್ಯರ್

'ನಮ್ಮ ಹೊಸಕೆರೆಹಳ್ಳಿ ಮನೆಯ ಪಕ್ಕ ಡಾ.ರಾಜ್‌ಕುಮಾರ್ ಅವರ ಪುತ್ಥಳಿ ಇದೆ. ಇವತ್ತಿಗೂ ಅಣ್ಣಾವ್ರ ಆಶೀರ್ವಾದ ನಮ್ಮ ಮೇಲೆ ಇದೆ. ಒಮ್ಮೆ ಸಂದರ್ಶನದಲ್ಲಿ ಯಶ್ ಹೇಳಿದ್ದ...ಕೈ ಮುಗಿದು ತಿರುಗಿ ನೋಡಿದೆ ಅಲ್ಲಿ ಅಣ್ಣಾವ್ರ ಪುತ್ಥಳಿ ಇತ್ತು ನನಗೆ ಆಶೀರ್ವಾದ ಮಾಡಿದಂತೆ ಇತ್ತು ಅಂದಿದ್ದ. ನಮ್ಮ ಹೊಸಕೆರೆಹಳ್ಳಿ ಮನೆಯ ಈಶಾನ್ಯ ದಿಕ್ಕಿನಲ್ಲಿ ಅಣ್ಣಾವ್ರ ಪುತ್ಥಳಿಯನ್ನು ಅಭಿಮಾನಿಗಳು ಇಟ್ಟಿದ್ದಾರೆ.  ನಾವು ಕೇಳಿ ಬಂದಿದ್ದು ಅಲ್ಲ ಅಭಿಮಾನಿಗಳು ಇಟ್ಟಿದ್ದು ಏನೋ ದೇವರಂತೆ ಬಂದು ನಮ್ಮ ಯಶ್‌ಗೆ ಆಶೀರ್ವಾದ ಮಾಡಿದ್ದಾರೆ' ಎಂದಿದ್ದಾರೆ ಪುಷ್ಪ. 

ಬೇರೆ ಭಾಷೆಗೆ ಹೋಗುತ್ತಿದ್ದಂತೆ ಬ್ಲೌಸ್‌ ಸೈಜ್‌ ಚಿಕ್ಕದಾಗುತ್ತಿದೆ; ನಭಾ ನಟೇಶ್‌ ಕಾಲೆಳೆದ ಫ್ಯಾನ್ಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೊಡ್ಮನೆ ಮೂಲ ನಿಯಮ ಉಲ್ಲಂಘಿಸಿದ ಕ್ಯಾಪ್ಟನ್‌ ಕಾವ್ಯಾ ಕುಟುಂಬ, ಎಚ್ಚರಿಕೆ ನೀಡಿ ಹೊರಕಳಿಸಿದ್ರಾ ಬಿಗ್‌ಬಾಸ್‌ ?
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್ ಕೇಸ್, ಅಶ್ಲೀಲ ಮೇಸಜ್‌ ಖಾತೆಗೆ ಬಿಸಿ ಮುಟ್ಟಿಸಲು ಮಂದಾದ ಸಿಸಿಬಿ