ಲೆಫ್ಟ್‌ ಇಂಡಿಕೇಟರ್ ಹಾಕಿ ರೈಟ್‌ಗೆ ಹೋಗುವವಳು ಅನ್ಕೊಂಡಿದ್ದಾರೆ; ದೀಪಿಕಾ ದಾಸ್‌ ಸ್ಪೀಡ್‌ಗೆ ಪತಿ ಹೆದರಿ ಬಿಟ್ರಾ?

Published : Feb 25, 2025, 08:56 AM ISTUpdated : Feb 25, 2025, 09:30 AM IST
ಲೆಫ್ಟ್‌ ಇಂಡಿಕೇಟರ್ ಹಾಕಿ ರೈಟ್‌ಗೆ ಹೋಗುವವಳು ಅನ್ಕೊಂಡಿದ್ದಾರೆ; ದೀಪಿಕಾ ದಾಸ್‌ ಸ್ಪೀಡ್‌ಗೆ ಪತಿ ಹೆದರಿ ಬಿಟ್ರಾ?

ಸಾರಾಂಶ

ನಟಿ ದೀಪಿಕಾ ದಾಸ್ ಅವರು ಕಾರು, ಬೈಕ್ ಓಡಿಸುವುದು ಹಾಗೂ ಪ್ರಯಾಣಿಸುವುದು ಅಂದ್ರೆ ತುಂಬಾ ಇಷ್ಟ ಪಡುತ್ತಾರೆ. ಮದುವೆಯ ನಂತರ ಗಂಡನ ಜೊತೆ ವಿದೇಶ ಪ್ರವಾಸಕ್ಕೆ ಸಿದ್ಧರಾಗಿದ್ದಾರೆ. ಗಂಡನಿಗೆ ಬೈಕ್ ಓಡಿಸುವುದು ಅಷ್ಟಾಗಿ ಇಷ್ಟವಿಲ್ಲ. ಆದರೆ, ದೀಪಿಕಾ ಅವರಿಗೆ ಆಟಿಟ್ಯೂಡ್ ಇಲ್ಲ, ಸ್ನೇಹಪರ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಕನ್ನಡ ಕಿರುತೆರೆ ನಾಗಿಣಿ, ಬಿಗ್ ಬಾಸ್ ಸ್ಪರ್ಧಿ ಹಾಗೂ ಚಂದನವನದ ಸುಂದರಿ ದೀಪಿಕಾ ದಾಸ್ ಕಾರು ಮತ್ತು ಬೈಕ್ ಓಡಿಸುವುದನ್ನು ಸಖತ್ ಎಂಜಾಯ್ ಮಾಡುತ್ತಾರೆ. ಮದುವೆಗೂ ಮುನ್ನ ಸಿಕ್ಕಾಪಟ್ಟೆ ಟ್ರಿಪ್ ಮಾಡುತ್ತಿದ್ದ ದೀಪಿಕಾ ಮದುವೆ ಆದ್ಮೇಲೆ ಗಂಡ ಸಪೋರ್ಟ್‌ ಜೊತೆ ಮತ್ತಷ್ಟು ವಿದೇಶ ಟ್ರಿಪ್ ಮಾಡಲು ಸಜ್ಜಾಗಿದ್ದಾರೆ. 'ಒಂಟಿಯಾಗಿ ಪ್ರಯಾಣ ಮಾಡಲು ನನಗೆ ತುಂಬಾ ಇಷ್ಟವಾಗುತ್ತದೆ ಆದರೆ ಮದುವೆ ಆದ್ಮೇಲೆ ನನ್ನ ಗಂಡ ಜೊತೆಗಿದ್ದಾರೆ. ಅವರಿಗೂ ಟ್ರಾವಲ್ ಮಾಡುವುದು ಅಂದ್ರೆ ತುಂಬಾನೇ ಇಷ್ಟ. ಇಬ್ಬರ ಅಲೋಚನೆಗಳು ತುಂಬಾನೇ ಡಿಫರೆಂಟ್ ಆಗಿದೆ ಆದರೆ ಟ್ರಾವಲಿಂಗ್‌ ಇಬ್ಬರಲ್ಲೂ ತುಂಬಾ ಕಾಮನ್ ಆಗಿದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ದೀಪಿಕಾ ಮಾತನಾಡಿದ್ದಾರೆ. 

'ಒಂದು ಸಲ ಗಂಡನನ್ನು ಕೂರಿಸಿಕೊಂಡು ಬೈಕ್ ಓಡಿಸುವ ಪ್ರಯತ್ನ ಮಾಡಿದ್ದೀನಿ ಆದರೆ ಅವರು ಕುಳಿತುಕೊಳ್ಳಲಿಲ್ಲ. ನಾನು ಬೈಕ್ ಓಡಿಸುವುದು ನನ್ನ ಅಡ್ವೆಂಚರ್‌ಗಳ ಬಗ್ಗೆ ಅವರಿಗೆ ಅಷ್ಟು ಗೊತ್ತಿಲ್ಲ ಅನ್ಸುತ್ತೆ. ಸ್ವಲ್ಪ ಟಿಪಿಕಲ್ ಹುಡುಗಿಯರನ್ನು ನೋಡಿರಬೇಕು ಅನ್ಸುತ್ತೆ ಅವರು. ಅವತ್ತು ನನಗೆ ಫುಲ್ ಕೋಪ ಬಂದು ಏನ್ ಹೇಳಿದೆ ಗೊತ್ತಾ......ನನ್ನ ಬಗ್ಗೆ ಡೌಟ್‌ ಪಡುತ್ತಿದ್ದೀರಾ? ನಾನು ಇಡೀ ಸಿನಿಮಾದಲ್ಲಿ ಬೈಕ್ ಓಡಿಸಿದ್ದೀನಿ ಗೊತ್ತಾ...ಅಂದು ಒಳಗೆ ಫುಲ್ ಉರ್ಕೊಂಡಿದ್ದೆ. ನನ್ನ ಪಾರು ಪಾರ್ವತಿ ಸಿನಿಮಾ ನೋಡಿ ಬಾ ನಿನ್ನ ಜೊತೆ ಗಾಡಿಯಲ್ಲಿ ಕುಳಿತುಕೊಳ್ಳೋಣ ಅನ್ನಬೇಕು' ಎಂದು ಪಾರು ಪಾರ್ವತಿ ಸಿನಿಮಾ ಪ್ರಚಾರದ ವೇಳೆ ದೀಪಿಕಾ ಮಾತನಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ. 

ಬೀಚ್‌ನಲ್ಲಿ ಕುಣಿದು ಕುಪ್ಪಳಿಸಿದ ಸ್ಟಾರ್ ನಟಿ; ಮೈ ಕೈ ತೋರಿಸೋ ವಯಸ್ಸು ನಿಮ್ದಲ್ಲ ಎಂದು ಕಾಲೆಳೆದ ನೆಟ್ಟಿಗರು

'ನನಗೆ ಯಾವುದೇ ರೀತಿಯಲ್ಲಿ ಆಟಿಟ್ಯೂಡ್‌ ಇಲ್ಲ. attitudeನಲ್ಲಿ ಎರಡು ರೀತಿ ಇರುತ್ತದೆ ಆದರೆ ನನಗೆ ಒಳ್ಳೆ ಆಟಿಟ್ಯೂಡ್‌ ಇದೆ ಅಂದುಕೊಂಡಿದ್ದೀನಿ. ನನ್ನೊಟ್ಟಿಗೆ ಮೊದಲ ಸಲ ಮಾತನಾಡುವವರಿಗೆ ಈ ಅನಿಸಿಕೆ ಬರಬಹುದು ಆದರೆ ಬಹುತೇಕರು ನೀಡಿರುವ ಅಭಿಪ್ರಾಯದ ಪ್ರಕಾರ ನಾನು ಕ್ಲೋಸ್ ಆಗಿದ್ದೀನಿ ಅಂದ್ರೆ ಅವರೊಟ್ಟಿಗೆ ಚೆನ್ನಾಗಿರುತ್ತೀನಿ. ಯಾರನ್ನು ಮಾತನಾಡಿಸಬಾರದು ಅನ್ನೋ ಲೋಚನೆಯಲ್ಲಿ ನಾನು ಇರುವುದಿಲ್ಲ. ಇದ್ದಕ್ಕಿದ್ದಂತೆ ಹೋಗಿ ಹಾಯ್ ಬೈ ಎಂದು ಮಾತನಾಡಿಸಲು ನನಗೆ ಆಗದೇ ಇರಬಹುದು...ನಾನು ಸಮಯ ತೆಗೆದುಕೊಂಡು ಸ್ನೇಹ ಮಾಡುತ್ತೀನಿ. ಅವರಿಗೆ ಸಮಯ ಇದ್ದರೆ ಖಂಡಿತ ನಾನು ಸಮಯ ಕೊಡುತ್ತೀನಿ. ನನ್ನ ಸರ್ಕಲ್‌ ಈ ಕಾರಣಕ್ಕೆ ತುಂಬಾ ಸಣ್ಣದಿದೆ' ಎಂದಿದ್ದಾರೆ ದೀಪಿಕಾ. 

ಮೆಹೆಂದಿ ಹಾಕಿಸಿಕೊಳ್ಳಲು ಐಷಾರಾಮಿ ಲೆಹೆಂಗಾ ಧರಿಸಿದ ಯೂಟ್ಯೂಬರ್; ಬಿ-ಟೌನ್‌ ನಟಿಮಣಿಯರೇ ಶಾಕ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್