ಅಪ್ಪು ಅಲ್ಪಾಯುಷಿ ಅನ್ನೋದು ಅಣ್ಣಾವ್ರಿಗೆ ಮೊದಲೇ ಗೊತ್ತಿತ್ತಾ!

By Suvarna News  |  First Published Nov 1, 2021, 5:45 PM IST

ಪವರ್‌ಸ್ಟಾರ್ ಪುನೀತ್ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಸ್ಟಾರ್ ನಟನ ಅಕಾಲಿಕ ನಿಧನದ ಬಳಿಕ ಅವರ ಬಗೆಗಿನ ಅನೇಕ ಸುದ್ದಿಗಳು ಓಡಾಡುತ್ತಿವೆ. ಅದರಲ್ಲೊಂದು ಪುನೀತ್ ಅಲ್ಪಾಯುಷಿ ಅನ್ನೋದು ಅಣ್ಣಾವ್ರಿಗೆ ಮೊದಲೇ ಗೊತ್ತಿದ್ದಿರಬೇಕು ಅನ್ನೋದು.


ಮೊನ್ನೆ ಭಜರಂಗಿ 2 ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಅಣ್ಣ ಶಿವರಾಜ್ ಕುಮಾರ್ (Shivraj kumar) ಜತೆ ವೇದಿಕೆಯಲ್ಲಿ ಕುಣಿದು ನಗುತ್ತಲೇ 'ಭಜರಂಗಿ 2' ತಂಡಕ್ಕೆ ಶುಭಹಾರೈಸಿದವರು ಪುನೀತ್ (Puneeth Rajkumar). ದುರಾದೃಷ್ಟ ಅಂದರೆ ಭಜರಂಗಿ (Bhajarangi) ಸಿನಿಮಾದ (cinema) ಬಿಡುಗಡೆಯ ದಿನವೇ ಪವರ್‌ ಸ್ಟಾರ್ ಜಗತ್ತಿಗೇ ಗುಡ್ ಬೈ ಹೇಳಿದರು. ಶಿವಣ್ಣ ತನ್ನ ಅಭಿಮಾನಿಗಳು ಹಾಗೂ ಕುಟುಂಬದವರ ಜೊತೆಗೆ ಥಿಯೇಟರ್‌ನಲ್ಲಿ ಸಿನಿಮಾ ಅರ್ಧ ನೋಡುತ್ತಿರುವಾಗಲೇ ಕಹಿ ಸುದ್ದಿ ಶಿವಣ್ಣನಿಗೆ ತಲುಪಿತು. ನಂಬಲಾಗದರವಂತೆ ಅರ್ಧ ಶೋದಿಂದ ಹೊರನಡೆದು ಕಣ್ಣೀರನ್ನು ಸುರಿಸುತ್ತಾ ಆಸ್ಪತ್ರೆಗೆ ಧಾವಿಸಿದ ಶಿವಣ್ಣನಿಗೆ ಇಂದಿಗೂ ತಮ್ಮನ ಅಗಲಿಕೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಆತ ಹೊರಗೆಲ್ಲೋ ಹೋಗಿದ್ದಾನೆ, ವಾಪಾಸ್ ಬರುತ್ತಾನೆ ಅನ್ನುತ್ತಲೇ ಇರುವ ಮನಸ್ಸಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಶಿವಣ್ಣ ಹೆಣಗುವಂತಾಗಿದೆ. 

Tap to resize

Latest Videos

ಇಂಥ ಸಮಯದ ರಾಜ್ ಆಪ್ತವಲಯದಲ್ಲಿ ಮಾತೊಂದು ಹರಿದಾಡುತ್ತಿದೆ. ಪುನೀತ್ ಅವರ ಜಾತಕದಲ್ಲೇ ಅವರು ಅಲ್ಪಾಯುಷಿ ಅನ್ನುವ ಸಂಗತಿ ರಿವೀಲ್ ಆಗಿತ್ತು. ಅದನ್ನು ಸೂಚ್ಯವಾಗಿ ಜ್ಯೋತಿಷಿಗಳು ಅಣ್ಣಾವ್ರಿಗೆ ತಿಳಿಸಿದ್ದರು ಅಂತ. ಪುನೀತ್ ಅವರ ಮೂಲ ಹೆಸರು ಲೋಹಿತ. ಸತ್ಯ ಹರಿಶ್ಚಂದ್ರನ ಮಗ ಲೋಹಿತಾಶ್ಚನ ಹೆಸರನ್ನೇ ಡಾ. ರಾಜ್ ಕುಮಾರ್ ಅವರು ತಮ್ಮ ಮುದ್ದಿನ ಕಿರಿಯ ಪುತ್ರನಿಗೆ ಇಟ್ಟಿದ್ದರು. ಮಗ ಸತ್ಯವಂತನಾಗಿ, ಕೀರ್ತಿವಂತನಾಗಿ ಬಾಳಲಿ ಅನ್ನುವ ಬಯಕೆ ಅವರ ಎದೆಯೊಳಗಿತ್ತು. ಆದರೆ ಒಂದು ಸಂದರ್ಭದಲ್ಲಿ ಅವರಿಗೆ ಮಗನ ಆಯುಷ್ಯ ಕಡಿಮೆ ಇದೆ ಅಂತ ಆತನ ಜಾತಕದಲ್ಲಿರೋದು ತಿಳಿದಂತಿದೆ. ಅದಕ್ಕೆ ತಕ್ಕಂತೆ ತಾವು ಮಗನಿಗೆ ಲೋಹಿತ ಅನ್ನುವ ಹೆಸರನ್ನಿಟ್ಟಿರುವುದೂ ಅವರನ್ನು ಕೊಂಚ ಯೋಚಿಸುವಂತೆ ಮಾಡಿತ್ತು. ಹರಿಶ್ಚಂದ್ರನ ಮಗ ಲೋಹಿತ ಬಾಲ್ಯದಲ್ಲೇ ಸಾವನ್ನಪ್ಪುತ್ತಾನೆ. ಆದರೆ ಇದು ಸತ್ಯ ಹರಿಶ್ಚಂದ್ರನ ಸತ್ಯಸಂಧತೆಯನ್ನು ಪರೀಕ್ಷಿಸಲೋಸ್ಕರ ನಡೆದ ನಾಟಕ. ಹೀಗಾಗಿ ಕೊನೆಯಲ್ಲಿ ಲೋಹಿತನಿಗೆ ಮರುಜೀವ ಬರುತ್ತದೆ.

ಆದರೂ ಲೋಹಿತ ಅನ್ನುವ ಹೆಸರಿನ ಬದಲಾಗಿ ಪುನೀತ ಅನ್ನುವ ಹೆಸರು ಇಡೋದಕ್ಕೆ ಅಣ್ಣಾವ್ರು ಮುಂದಾಗುತ್ತಾರೆ. ತಾವು ಬಹುವಾಗಿ ನಂಬುವ ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥನೆ ಮಾಡಿ ಮಗನ ಹೆಸರನ್ನು ಬದಲಿಸಲು ರಾಜ್ ಮುಂದಾಗುತ್ತಾರೆ. ಮುಂದೆ ಲೋಹಿತ ಪುನೀತನಾಗಿ, ಎಲ್ಲ ಪ್ರೀತಿಯ ಅಪ್ಪುವಾಗಿ, ಪವರ್ ಸ್ಟಾರ್ ಆಗಿ ಮಿಂಚಿದ್ದು ಈಗ ಇತಿಹಾಸ. ಲೋಹಿತನ ಹೆಸರು ಪುನೀತನಾಗಿ ಏನೋ ಬದಲಾಯ್ತು. ಆದರೆ ಬದಲಾದ ಹೆಸರಿನಿಂದಲೂ ಆಯುಷ್ಯ ಹೆಚ್ಚಲಿಲ್ಲ ಅನ್ನೋದು ಬಹಳ ಬೇಸರದ ಸಂಗತಿ. ರಾಜ್ ಕುಮಾರ್ ಲೋಹಿತನ ಹೆಸರನ್ನು ಬದಲಾಯಿಸಿದ ಪೇಪರ್ ಕಟ್ಟಿಂಗ್ ಎಲ್ಲೆಡೆ ವೈರಲ್ ಆಗಿದೆ. 

ಯುವಜನತೆ ಕಾಡುತ್ತಿರುವ ಹೃದಯಾಘಾತಕ್ಕೆ 13 ಕಾರಣ.. ಇದರಿಂದ ದೂರ ಇರಿ

ಇನ್ನೊಂದು ಕಡೆ ಪುನೀತ್ ಜನಿಸಿದ ಹದಿನೇಳನೇ ತಾರೀಕಿನ ಮೇಲೆ ಕೆಲವರ ಗಮನ ಹೋಗಿದೆ. ಹದಿನೇಳನೇ ತಾರೀಕಿನಂದೇ ಚಿರು ಸರ್ಜಾ ಅವರೂ ಜನಿಸಿದ್ದರು. ಅವರೂ ಅಕಾಲಿಕವಾಗಿ ನಿಧನರಾದರು. ನ್ಯೂಮರಾಲಜಿ (Numerology) ಪ್ರಕಾರ 17ನೇ ತಾರೀಕಿನಂದು ಜನಿಸಿದವರು ಯುನೀಕ್ ಆಗಿ ಗುರುತಿಸಿಕೊಳ್ಳುತ್ತಾರೆ, ಬಹಳ ಲಕ್ಕಿ ನಂಬರ್ ಇದು. ಇವರು ಬದುಕಿನಲ್ಲಿ ಬಯಸಿದ್ದೆಲ್ಲ ಬಹಳ ಬೇಗ ಕೈಗೂಡುತ್ತದೆ. ವಿದ್ಯೆ, ವಿನಯ, ಜಾಣ್ಮೆ, ಪರಿಸ್ಥಿತಿಯನ್ನು ಜಡ್ಜ್ ಮಾಡುವ ಕೆಪಾಸಿಟಿ ಇವರಲ್ಲಿರುತ್ತದೆ. ಧೈರ್ಯಕ್ಕೆ ಇನ್ನೊಂದು ಹೆಸರಿನಂತಿರುವವರು ಈ 17ನೇ ತಾರೀಕು ಜನಿಸಿದವರು. ಅದೃಷ್ಟಶಾಲಿಗಳೂ ಹೌದು. ಆದರೆ ಇವರು ಲೈಫಿನ ಕೊನೆಯ ಹಂತದವರೆಗೂ ಇರುವುದು ಕಡಿಮೆ. ನಂಬರ್ 17 ಜರ್ನಿಗೆ ಸಂಬಂಧಿಸಿದ ನಂಬರೂ ಹೌದು, ಇದೊಂಥರ ಸ್ಪಿರಿಚ್ಯುವಲ್ ಡಿಸ್ಕವರಿ (Spiritual Discovery) ಮಾಡುವ ನಂಬರೂ ಹೌದು. ಬಹುಶಃ ನಮ್ಮ ಪುನೀತ್ ಸಹ ಯಾವುದೋ ಅದೃಶ್ಯ ಶಕ್ತಿಯ ಹುಡುಕಾಟ ನಡೆಸುತ್ತಾ ಕಣ್ಮರೆಯಾಗಿರಬೇಕು.

ಅಕಾಲಿಕ ಮರಣಕ್ಕೆ ತುತ್ತಾಗಿದ್ದ ಚಿರಂಜೀವಿ ಜಾತಕದಲ್ಲಿಯೂ ಇತ್ತು ದೋಷ

ಪುನೀತ್ ರಾಜ್ ಕುಮಾರ್ ಅವರಂಥಾ ನಟರು ಕೇವಲ 46ನೇ ವಯಸ್ಸಿನಲ್ಲಿ ಇಹಲೋಹ ತ್ಯಜಿಸಿದಾಗ ಅವರ ಸಾವನ್ನು ನಾನಾ ರೀತಿ ವಿಶ್ಲೇಷಿಸುವ ಸಹಜ. ಆರೋಗ್ಯ (Health), ಆಹಾರ (Food), ಮನಸ್ಸಿನ ಆರೋಗ್ಯ (Mental Health) ಎಲ್ಲವೂ ಸರಿಯಿದ್ದೂ ಇಷ್ಟು ಚಿಕ್ಕ ವಯಸ್ಸಲ್ಲಿ ಹಠಾತ್ ನಿಧನರಾದಾಗ ಸಾವಿಗೆ ಬೇರೇನಾದರೂ ಕಾರಣ ಇರಬಹುದಾ ಅಂತ ಹುಡುಕೋದು ಸಹಜ. ಆದರೆ ಇದೆಲ್ಲ ನಮ್ಮ ಸಮಾಧಾನಕ್ಕಷ್ಟೇ. ಪುನೀತ್ ಇನ್ನು ನೆನಪು ಮಾತ್ರ ಅನ್ನುವುದು ಕಠೋರ ಸತ್ಯ. 

ಮರೆಯಾದ 'ಪವರ್' ಜೇಮ್ಸ್‌ ಸೇರಿ ಹಲವು ಸಿನಿಮಾ ಅತಂತ್ರ

click me!