3 ದಿನಗಳಲ್ಲಿ 30ಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡಿದ ಮಾರ್ಟಿನ್; ಮಿಕ್ಸ್‌ ಅಭಿಪ್ರಾಯದ ನಡುವೆಯೂ ಅಬ್ಬರಿಸುತ್ತಿದೆ!

By Vaishnavi ChandrashekarFirst Published Oct 15, 2024, 6:19 PM IST
Highlights

ಮೂರು ದಿನಗಳಲ್ಲಿ 30 ಪ್ಲಸ್ ಕೋಟಿ ಗಳಿಸಿದ ಮಾರ್ಟಿನ್.4 ದಿನಗಳಲ್ಲಿ 200 ಕೋಟಿ ಕ್ಲಬ್ ಸೇರಿದ ವೆಟ್ಟೈಯನ್. ದಸರಾ ರಜೆಯಲ್ಲಿ ಭರ್ಜರಿ ಗಳಿಕೆ ಮಾಡಿದ ಚಿತ್ರಗಳು.
 

ದಸರಾ ಹಬ್ಬ ಅಂದರೆ ಫಿಲ್ಮ್ ಮೇಕರ್ಸ್ ಪಾಲಿಗೆ ಸಖತ್ ಸ್ಪೆಷಲ್. ದಸರಾ ರಜೆಯಲ್ಲಿ ಪ್ರೇಕ್ಷಕರನ್ನು ಥಿಯೇಟರ್ ಅಂಗಳಕ್ಕೆ ಕರೆತರೋಕೆ ಹಲವು ಸ್ಟಾರ್ಸ್ ಸಿನಿಮಾ ತೆರೆಗೆ ಬರುತ್ತದೆ. ನಿಮಗೆಲ್ಲಾ ಗೊತ್ತಿರೋ ಹಾಗೆ ಈ ಬಾರಿ ದಸರಾಗೆ ತೆರೆಗೆ ಬಂದ ಬಿಗ್ ಸಿನಿಮಾಗಳಂದ್ರೆ ನಮ್ಮ ಕನ್ನಡದ ಮಾರ್ಟಿನ್ ಮತ್ತು ತಮಿಳಿನ ವೆಟ್ಟೈಯನ್. ಇವುಗಳ ಜೊತೆಗೆ ಬಾಲಿವುಡ್ , ಟಾಲಿವುಡ್​​ನಲ್ಲೂ ಹಲವು ಸಿನಿಮಾ ರಿಲೀಸ್ ಆಗಿತ್ತು. ಹಾಗಾದ್ರೆ ಈ ಬಾರಿಯ ದಸರಾ ರೇಸ್​​ನಲ್ಲಿ ಗೆದ್ದವರು ಯಾರು ಅನ್ನೋದನ್ನು ನೋಡೋಣ ಬನ್ನಿ.

ಯೆಸ್! ದಸರಾ ಪ್ರಯುಕ್ತ ಎಲ್ಲಾ ಭಾಷೆಗಳಲ್ಲಿ ಬಿಗ್ ಸಿನಿಮಾಗಳು ತೆರೆಗೆ ಬಂದಿವೆ. ಬಾಕ್ಸಾಫೀಸ್​​ನಲ್ಲಿ ಮೊದಲ ವಾರಾಂತ್ಯದ ವರ್ಡಿಕ್ಟ್ ಕೂಡ ಬಂದಾಗಿದೆ. ಹಾಗಾದ್ರೆ ದಸರಾ ರೇಸ್​​ನಲ್ಲಿ ಗೆದ್ದವಾರ್ಯಾರು ಅನ್ನೋದನ್ನು ನೋಡ ಹೋದ್ರೆ ಸ್ಯಾಂಡಲ್​ವುಡ್​ನಲ್ಲಿ ಮಾರ್ಟಿನ್ ಸೌಂಡ್ ಜೋರಾಗಿದೆ. ಮೊದಲ ದಿನ 9.1 ಕೋಟಿ ಗಳಿಸಿದ್ದ ಸಿನಿಮಾ ಎರಡನೇ ದಿನ 13.4 ಕೋಟಿ ಗಳಿಕೆ ಮಾಡಿದೆ. ಇನ್ನೂ ಭಾನುವಾರ ಅಂದಾಜು 10 ಕೋಟಿ ಗಳಿಸಿ ಕಮಾಲ್ ಮಾಡಿದೆ ಧ್ರುವ ಸಿನಿಮಾ. ಮಿಕ್ಸ್ ರಿವ್ಯೂಸ್ ನಡುವೆಯೂ ಕರ್ನಾಟಕದಲ್ಲಿ ಭರ್ಜರಿ ಬಾಕ್ಸಾಫೀಸ್ ಗಳಿಕೆ ಮಾಡಿರೋ ಮಾರ್ಟಿನ್ ಸಿನಿಮಾ , ತೆಲುಗಿನಲ್ಲೂ ಕಮಾಲ್ ಮಾಡ್ತಾ ಇದೆ. ದಸರಾ ರಜೆ ಇರೋದ್ರಿಂದ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗೋ ನಿರೀಕ್ಷೆ ಇದೆ.

Latest Videos

ಅಕ್ಟೋಬರ್​​ ಸಹವಾಸ ಬೇಡ ಎಂದು ಡಿಸೆಂಬರ್‌ನಲ್ಲಿ UI ರಿಲೀಸ್‌ಗೆ ಮುಂದಾದ ಉಪೇಂದ್ರ; ಕಾರಣವೇನು?

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ವೆಟ್ಟೈಯನ್ ಕೂಡ ಬಾಕ್ಸಾಫೀಸ್​ನಲ್ಲಿ ಕಮಾಲ್ ಮಾಡ್ತಾ ಇದೆ. ಮೊದಲ ದಿನವೇ 70 ಕೋಟಿ ಗಳಿಸಿದ್ದ ಈ ಸಿನಿಮಾ ನಾಲ್ಕು ದಿನಗಳಲ್ಲಿ 200ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿದೆ. ಜೈಲರ್​ನಷ್ಟು ಸ್ಪೀಡ್ ಇಲ್ಲದೇ ಹೋದ್ರೂ ವೆಟ್ಟೈಯನ್ ಹವಾ ಕಡಿಮೆ ಏನೂ ಇಲ್ಲ. ಇನ್ನೂ ಬಾಲಿವುಡ್‌ನಲ್ಲಿ ಆಲಿಯಾ ಭಟ್ ನಟನೆಯ ಜಿಗ್ರಾ ಸಿನಿಮಾ ತೆರೆಗೆ ಬಂದಿದ್ದು ಈ ಚಿತ್ರಕ್ಕೆ ಹಿಂದಿ ರಾಜ್ಯಗಳಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ವಾರಾಂತ್ಯಕ್ಕೆ ಜಿಗ್ರಾ 20 ಪ್ಲಸ್ ಕೋಟಿ ಗಳಿಕೆ ಮಾಡಿದೆ.

ಬಾಬಾ ಸಿದ್ದಿಕಿ ಶೂಟೌಟ್‌ನಿಂದ ಹೆಚ್ಚಾಯ್ತು ಸಲ್ಮಾನ್ ಹಾರ್ಟ್​ಬೀಟ್; ಫ್ರೆಂಡ್‌ಶಿಪ್‌ನಿಂದ ಇಷ್ಟೆಲ್ಲಾ ಆಯ್ತಾ?

ರಾಜ್​ಕುಮಾರ್ ರಾವ್ ತೃಪ್ತಿ ದಿಮ್ರಿ ವಿಕ್ಕಿ ಔರ್ ವಿದ್ಯಾಕಿ ವೋ ವಾಲಾ ವಿಡಿಯೋ ಸಿನಿಮಾ ಕೂಡ ರಿಲೀಸ್ ಆಗಿದ್ದು,  ಇದಕ್ಕೂ ಒಳ್ಳೆಯ ರಿವ್ಯೂಸ್ ಬಂದಿವೆ. ಈ ಸಿನಿಮಾ ಮೊದಲ ಮೂರು ದಿನಗಳಲ್ಲಿ 16 ಕೋಟಿ ಗಳಿಕೆ ಮಾಡಿದೆ. ಒಟ್ನಲ್ಲಿ ದಸರಾ ಹಬ್ಬದ ಹೊತ್ತಲ್ಲಿ ಬಂದ ಸಿನಿಮಾಗಳೆಲ್ಲಾ ಭರ್ಜರಿ ಹಣ ಗಳಿಸಿಕೊಂಡಿವೆ. ಸದ್ಯದ ಪ್ರಕಾರ ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ರಜನಿಯ ವೆಟ್ಟೈಯನ್ ನಂಬರ್.1 ಸ್ಥಾನದಲ್ಲಿದ್ರೆ, ಕನ್ನಡ ಮಾರ್ಟಿನ್ ಎರಡನೇ ಸ್ಥಾನದಲ್ಲಿದೆ. ದಸರಾ ರಜೆ ಇರೋದ್ರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಬಾಕ್ಸ್ ಆಫೀಸ್ ಗಳಿಕೆಯ ನಿರೀಕ್ಷೆಯಲ್ಲಿ ಈ ಎಲ್ಲಾ ಸಿನಿಮಾಗಳಿವೆ.

click me!