ಅಕ್ಟೋಬರ್​​ ಸಹವಾಸ ಬೇಡ ಎಂದು ಡಿಸೆಂಬರ್‌ನಲ್ಲಿ UI ರಿಲೀಸ್‌ಗೆ ಮುಂದಾದ ಉಪೇಂದ್ರ; ಕಾರಣವೇನು?

By Vaishnavi Chandrashekar  |  First Published Oct 15, 2024, 5:46 PM IST

ಉಪ್ಪಿಯ 'UI' ಹೊಸ ರಿಲೀಸ್​ ಡೇಟ್​ ಅನೌನ್ಸ್​.ಡಿಸೆಂಬರ್​ನಲ್ಲೇ ತೆರೆಗೆ ಬರುತ್ತೆ ಕಿಚ್ಚ ಸುದೀಪ್​ರ ಮ್ಯಾಕ್ಸ್ ಸಿನಿಮಾ.


ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಷನ್ ಕ್ಯಾಪ್ ಹಾಕಿದ್ರೆ ಬೆಳ್ಳಿತೆರೆ ಮೇಲೆ ಮ್ಯಾಜಿಕ್​ ಸೃಷ್ಟಿ ಆಗೋದು ಪಕ್ಕಾ. ಹೀಗಾಗಿ ಉಪೇಂದ್ರ ಡೈರೆಕ್ಷನ್​ ಸಿನಿಮಾಗಳಿಗಾಗಿ ಅವರ ಫ್ಯಾನ್ಸ್ ಹೆಚ್ಚಿನ ಡಿಮ್ಯಾಂಡ್ ಮಾಡೋದು. ಆ ಬೇಡಿಕೆ ಈಡೇರಿಸೋಕೆ ಉಪೇಂದ್ರ ಯುಐ ಸಿನಿಮಾ ಅನೌನ್ಸ್ ಮಾಡಿ ಶೂಟಿಂಗ್ ಮುಗಿಸಿ. ಸಾಂಗ್, ಟೀಸರ್​ ಕೊಟ್ಟಿದ್ದು ಆಗಿದೆ. ಆದ್ರೆ ಯುಐ ರಿಲೀಸ್ ಯಾವಾಗ ಅನ್ನೋದು ಮಾತ್ರ ನಿಕ್ಕಿ ಆಗಿರಲಿಲ್ಲ. 

ಈಗ ಯುಐ ಹೊಸ ರಿಲೀಸ್ ಡೇಟ್ ಪಕ್ಕಾ ಆಗಿದೆ. ಟ್ರೋಲಾಗುತ್ತೆ ಅಂತ ಟ್ರೋಲರ್ಸ್​ಗೆ ಕೌಂಟರ್​​ ಕೊಟ್ಟಿದ್ದ ಉಪೇಂದ್ರ ಯುಐ ಸಿನಿಮಾವನ್ನು ಅಕ್ಟೋಬರ್​​​ನಲ್ಲಿ ರಿಲೀಸ್ ಮಾಡೋದಾಗಿ ಹೇಳಿದ್ದರು. ಆದರೆ ಡೇಟ್​ ಮಾತ್ರ ಫಿಕ್ಸ್ ಮಾಡಿರಲಿಲ್ಲ. ಅಕ್ಟೋಬರ್​​ ಮಿಡ್​ನಲ್ಲಿರೋ ಉಪ್ಪಿ ಈಗ ಯುಐ ರಿಲೀಸ್ ಡೇಟ್​ ಅನ್ನೇ ಬದಲಾಯಿಸಿದ್ದಾರೆ. ಅಕ್ಟೋಬರ್ ಸಹವಾಸ ಬೇಡ. ಡಿಸೆಂಬರ್​ 20ಕ್ಕೆ ಬರುತ್ತೇನೆ ಎಂದಿದ್ದಾರೆ. ಅಲ್ಲಿಗೆ ಡಿಸೆಂಬರ್ 20ಕ್ಕೆ ಯುಐ ಮೂವಿ ವರ್ಲ್ಡ್​ ವೈಡ್​​ ರಿಲೀಸ್​ ಆಗಲಿದೆ. 

Tap to resize

Latest Videos

undefined

ಬಾಬಾ ಸಿದ್ದಿಕಿ ಶೂಟೌಟ್‌ನಿಂದ ಹೆಚ್ಚಾಯ್ತು ಸಲ್ಮಾನ್ ಹಾರ್ಟ್​ಬೀಟ್; ಫ್ರೆಂಡ್‌ಶಿಪ್‌ನಿಂದ ಇಷ್ಟೆಲ್ಲಾ ಆಯ್ತಾ?

ಸ್ಯಾಂಡಲ್​ವುಡ್​ನ ಮುಕುಂದ ಮುರಾರಿ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ. ಆದ್ರೆ ಯುಐ ಸಿನಿಮಾ ಡಿಸೆಂಬರ್​ 20ಕ್ಕೆ ರಿಲೀಸ್ ಅಂತ ಅನೌನ್ಸ್ ಆಗ್ತಿದ್ದಂತೆ ಉಪ್ಪಿ ಕಿಚ್ಚನ ಮಧ್ಯೆ ಬಾಕ್ಸಾಫೀಸ್ ವಾರ್ ಆಗೋ ಸೂಚನೆ ಸಿಗುತ್ತಿದೆ. ಯಾಕಂದ್ರೆ ಡಿಸೆಂಬರ್​ನಲ್ಲೇ ಬಾದ್​ ಷಾ ಸುದೀಪ್​ ನಟನೆಯ ಮ್ಯಾಕ್ಸ್ ಕೂಡ ರಿಲೀಸ್ ಆಗಲಿದೆ.  ಡಿಸೆಂಬರ್​ ಸ್ಯಾಂಡಲ್​ವುಡ್​​ ಮಂದಿಗೆ ಲಕ್ಕಿ ತಿಂಗಳು. ಈ ಮಂತ್​ ಅಲ್ಲಿ ಬಂದ ಸಿನಿಮಾಗಳು ಹಿಟ್ ಲೀಸ್ಟ್ ಸೇರಿದ್ದೇ ಹೆಚ್ಚು. ಕಿಚ್ಚ ಸುದೀಪ್​ ಕೂಡ ಮ್ಯಾಕ್ಸ್​ ಅನ್ನ ಡಿಸೆಂಬರ್​​ನಲ್ಲೇ ತೆರೆ ಮೇಲೆ ತರೋ ಬಗ್ಗೆ ಚಿಂತನೆ ನಡೆಸಿದ್ದಾರೆ. ಅಷ್ಟರಲ್ಲಾಗಲೇ ರಿಯಲ್ ಸ್ಟಾರ್ ಉಪೇಂದ್ರ ಡಿಸೆಂಬರ್​ 20ಕ್ಕೆ ಯುಐ ನೋಡಿ ಎಂತ ಹೇಳಿರೋದು ಈಗ ಬಾಕ್ಸಾಫೀಸ್ ಪಂಡಿತರ ಕುತೂಹಕ್ಕೆ ಕಾರಣ ಆಗಿದೆ.

click me!